Bhagyalakshmi: ಒಬ್ರೇ ಮಂತ್ರವಾದಿ ಬಳಿ ಭಾಗ್ಯಾ-ಶ್ರೇಷ್ಠಾ; ತಾಂಡವ್ ವಿಚಾರ ಬಯಲಾಗಲ್ವಾ?
ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಮುಖ್ಯವಾಗಿ ಎಲ್ಲರ ಗಮನ ಇರುವುದು ತಾಂಡವ್ ಹಾಗೂ ಶ್ರೇಷ್ಠಾ ಮದುವೆ ವಿಚಾರದಲ್ಲಿ. ಶ್ರೇಷ್ಠಾಳನ್ನು ಮದುವೆ ಆಗುತ್ತಾನಾ, ಭಾಗ್ಯಾಗೆ ಈ ವಿಚಾರ ಗೊತ್ತಾಗೋದು ಹೇಗೆ ಎಂಬ ಕಾತುರ ನೋಡುಗರಿಗೆ ಇರುವುದರಿಂದ ಆ ದಿನಕ್ಕಾಗಿ ಕಾಯುತ್ತಿದ್ದಾರೆ.
ಶ್ರೇಷ್ಠಾ ಬೇರೆ ಭಾಗ್ಯಾಳ ಕೈಗೆ ಆಗಾಗ ತಗಲಾಕಿಕೊಳ್ಳುತ್ತಾ ಇರುತ್ತಾಳೆ. ಸೀರೆ ತರುವುದಕ್ಕೆ ಹೋಗಿ, ಫೋನ್ ಮಾಡಿ ಸಿಕ್ಕಿಬಿದ್ದಿದ್ದಳು. ಹಣ ಕದ್ದು ಸಿಕ್ಕಿಬಿದ್ದಿದ್ದ ಶ್ರೇಷ್ಠಾಳ ಮೇಲೆ ಈಗ ಭಾಗ್ಯಾಳಿಗೆ ಕೆಂಡದಷ್ಟು ಕೋಪ ಇದೆ. ತಾಂಡವ್ ಗೂ ಶ್ರೇಷ್ಠಾ ಬಗ್ಗೆ ಎಚ್ಚರಿಕೆಯನ್ನ ನೀಡುತ್ತಲೇ ಬರುತ್ತಿದ್ದಾಳೆ. ಈಗ ಮದುವೆ ವಿಚಾರವೂ ತಿಳಿಯುವ ಹಂತ ತಲುಪಿದೆ.

ಪೂಜಾಗೆ ಕೈ ಜೋಡಿಸಿದ ಸುಂದ್ರಿ-ಹಿತ
ಶ್ರೇಷ್ಠಾಗೆ ಈಗಾಗಲೇ ಪೂಜಾ ಹಲವು ಬಾರಿ ಎಚ್ಚರಿಕೆಯನ್ನು ನೀಡಿದ್ದಾಳೆ. ಆದರೂ ಶ್ರೇಷ್ಠಾ ಡೋಂಟ್ ಕೇರ್ ತರಾನೇ ಇದಾಳೆ. ನಾನು ತಾಂಡವ್ ಮದುವೆ ಆಗಿನೇ ಆಗ್ತೀವಿ ಅಂತ ಸವಾಲು ಹಾಕಿದ್ದಾಳೆ. ಈ ವಿಚಾರವನ್ನು ನೇರವಾಗಿ ಭಾಗ್ಯಾಳ ಬಳಿ ಹೇಳುವುದಕ್ಕೆ ಸಾಧ್ಯವಿಲ್ಲ. ಭಾಗ್ಯಾಳಿಗೆ ಅನ್ಯಾಯವಾಗುವುದನ್ನು ಸಹಿಸುವುದಕ್ಕೆ ಸಾಧ್ಯವಿಲ್ಲ. ಹೀಗಾಗಿ ಪೂಜಾಳ ಜೊತೆಗರ ಸುಂದ್ರಿ, ಹಿತ ಕೂಡ ಕೈಜೋಡಿಸಿದ್ದಾರೆ.
ಮಂತ್ರವಾದಿ ಪ್ಲ್ಯಾನ್ ಮಾಡಿದ ಟೀಂ
ಭಾಗ್ಯಾಳಿಗೆ ನೇರವಾಗಿ ವಿಷಯ ಹೇಳಿದರೆ ತಡೆದುಕೊಳ್ಳುವ ಶಕ್ತಿ ಇಲ್ಲ ಎಂಬುದು ಎಲ್ಲರಿಗೂ ಗೊತ್ತು. ಹೀಗಾಗಿಯೇ ಅವಳಿಗೆ ನೇರವಾಗಿ ಹೇಳುವುದಕ್ಕಿಂತ ಹೇಗಾದರೂ ಮಾಡಿ ವಿಚಾರ ತಿಳಿಸಬೇಕು ಎಂಬುದು. ಅದಕ್ಕೆಸುಂದ್ರಿ ಕೊಟ್ಟ ಪ್ಲ್ಯಾನ್ ವರ್ಕೌಟ್ ಆಗಿದೆ. ಮಂತ್ರವಾದಿ ವೇಷದಲ್ಲಿ ಹೋಗಿ ಯಾರಾದರೂ ವಿಚಾರ ಮುಟ್ಟಿಸಬೇಕು ಎಂಬುದು ಪ್ಲ್ಯಾನ್ ಆಗಿದೆ. ಪೂಜಾ ಭಾಗ್ಯಾಳನ್ನ ಅಲ್ಲಿಗೆ ಕರೆಸಿದ್ದಾಳೆ. ಸುಂದ್ರಿ ಶ್ರೇಷ್ಠಾಳನ್ನ ಅಲ್ಲಿಗೆ ಕರೆಸಿದ್ದಾಳೆ.

ಮಂತ್ರವಾದಿಯಿಂದ ಟ್ವಿಸ್ಟ್
ಸುಂದ್ರಿಯ ಮಾತನ್ನು ಕೇಳಿ ಶ್ರೇಷ್ಠಾ ಆ ಮಂತ್ರವಾದಿ ಬಳಿ ಬಂದಿದ್ದಾಳೆ. ಹಿತ ಮಂತ್ರವಾದಿ ವೇಷ ಹಾಕಿದ್ರೆ ಪೂಜಾ ಅಸಿಸ್ಟೆಂಟ್ ವೇಷ ಹಾಕಿದ್ಲು. ಶ್ರೇಷ್ಠಾ ಇರುವಾಗಲೇ ಭಾಗ್ಯಾ ಕೂಡ ಅಲ್ಲಿಗೆ ಬಂದಿದ್ದಾಳೆ. ಈಗ ಶ್ರೇಷ್ಠಾಳಿಗೆ ಭಾಗ್ಯಾಳ ಮುಂದೆ ನಿಲ್ಲುವಷ್ಟು ಧೈರ್ಯವಿಲ್ಲ. ಹೀಗಾಗಿಯೇ ಭಾಗ್ಯಾಳನ್ನು ನೋಡಿದ ಕೂಡಲೇ ಅಲ್ಲಿಂದ ಕಾಲ್ಕಿಳಲು ಪ್ರಯತ್ನ ಪಟ್ಟಿದ್ದಾಳೆ. ಭಾಗ್ಯಾ ಕೂಡ ಅವಳನ್ನ ಮಾತನಾಡಿಸುವುದಕ್ಕೆ ಹೋಗಲಿಲ್ಲ. ಆದರೆ ಪೂಜಾ ಯಾಕೆ ಇಲ್ಲಿಗೆ ಬರುವುದಕ್ಕೆ ಹೇಳಿದಳು ಎಂಬ ಅನುಮಾನ ಕಾಡಿದೆ. ಯೋಚನೆ ಮಾಡುವಾಗಲೇ ಮಂತ್ರವಾದಿ ಶ್ರೇಷ್ಠಾ ಮದುವೆ ಬಗ್ಗೆ ಮಾತನಾಡಿದ್ದಾಳೆ. ನಿನ್ನ ಮದುವೆ ಬಗ್ಗೆ ಎಲ್ಲಾ ಸತ್ಯ ಗೊತ್ತು ಎಂದಿದ್ದಾಳೆ. ಅದನ್ನು ಕೇಳಿ ಶ್ರೇಷ್ಠಾ ಶಾಕ್ ಆಗಿ ನಿಂತಿದ್ದಾಳೆ.
ವೀಕ್ಷಕರಿಗೆ ಗೊತ್ತು ಸತ್ಯ ಗೊತ್ತಾಗಲ್ಲ
ಪೂಜಾ ಹಾಗೂ ಸುಂದ್ರಿ ಪ್ಲ್ಯಾನ್ ವರ್ಕೌಟ್ ಆಗುತ್ತಾ ಎಂಬ ನಿರೀಕ್ಷೆ ಇದ್ದರು, ಅದು ಆಗಲ್ಲ ಅನ್ನೋದು ವೀಕ್ಷಕರಿಗೆ ಗೊತ್ತು. ಶ್ರೇಷ್ಠಾಳ ಮದುವೆ ಬಗ್ಗೆ ಸೂಕ್ಷ್ಮವಾಗಿ ಹೇಳುವ ಪ್ರಯತ್ನ ಮಾಡಿದ್ದಾಳೆ. ಆದರೆ ಅದು ಭಾಗ್ಯಾಗೆ ಸಂಪೂರ್ಣವಾಗಿ ತಿಳಿಯುವುದಕ್ಕೆ ಕಷ್ಟವಿದೆ. ಈ ರೀತಿಯೆಲ್ಲಾ ಕಷ್ಟಪಟ್ಟು ವಿಚಾರ ಗೊತ್ತು ಮಾಡುವುದಕ್ಕಿಂತ ಕುಸುಮಾಳ ಮೊಬೈಲ್‌ಗೆ ಬಂದ ಫೋಟೋ, ಕುಸುಮಾಳ ಸೀರೆ ಜೊತೆಗೆ ಸೇರಿಕೊಂಡ ಇನ್ವಿಟೇಷನ್ ಮೊದಲು ಹುಡುಕಿಕೊಡಿ ಎನ್ನುತ್ತಿದ್ದಾರೆ.


Click it and Unblock the Notifications











