Bhagyalakshmi: ಶ್ರೇಷ್ಠಾ ಹುಡುಗನಿಗೆ 2 ಮಕ್ಳಿದಾವೆ; ಭಾಗ್ಯಾ ಮುಂದೆ ಸತ್ಯ ಬಯಲಾದರೂ ಏನು ಮಾಡಲು ಸಾಧ್ಯ?

By ಎಸ್ ಸುಮಂತ್

'ಭಾಗ್ಯಲಕ್ಷ್ಮೀ' ಧಾರಾವಾಹಿಯಲ್ಲಿ ಶ್ರೇಷ್ಠಾ ಹಾಗೂ ತಾಂಡವ್ ಮದುವೆ ಹತ್ತಿರ ಬರುತ್ತಿದೆ. ಆದರೆ ಈ ಮದುವೆಯನ್ನು ತಡೆಯಲು ಪೂಜಾ ಟೀಂ ದೊಡ್ಡದಾಗಿದೆ. ಭಾಗ್ಯಾಳಿಗೆ ಅನ್ಯಾಯವಾಗುವುದು ಪೂಜಾ, ಸುಂದ್ರಿ, ಹಿತಾಗೆ ಇಷ್ಟವಿಲ್ಲ. ಹೀಗಾಗಿ ಮದುವೆ ನಿಲ್ಲಿಸುವ ಪ್ಲ್ಯಾನ್ ಮಾಡಿದ್ದಾರೆ.

ನೇರವಾಗಿ ಹೇಳುವುದಕ್ಕೆ ಅದು ಅಸಾಧ್ಯವಾಗಿರುವ ಕಾರಣ ಮಂತ್ರವಾದಿ ಎಂಬ ಪ್ಲ್ಯಾನ್ ಮಾಡಿ, ಶ್ರೇಷ್ಠಾ ಬಂಡವಾಳ ಬಯಲು ಮಾಡುವುದಕ್ಕೆ ನೋಡುತ್ತಿದ್ದಾರೆ.

colors kannada serial Bhagyalakshmi Written Update on July 29th episode

ಶ್ರೇಷ್ಠಾಳ ಜಾತಕದಲ್ಲಿ ದೋಷ ಇರುವುದು ಮನೆಯವರಿಗೆ ಗೊತ್ತಾಗಿದೆ. ಹೀಗಾಗಿ ಅವಳಿಗೆ ಬಾಳೆ ಕಂಬದ ಜೊತೆಗೆ ಮೊದಲು ಮದುವೆ ಮಾಡಬೇಕು. ಆದರೆ ಶ್ರೇಷ್ಠಾಗೆ ಇದೆಲ್ಲ ಇಷ್ಟವಾಗುವುದಿಲ್ಲ. ಈ ವಿಚಾರದ ಬಗ್ಗೆ ಈಗಾಗಲೇ ತಾಂಡವ್ ಜೊತೆಗೂ ಕೂಗಾಡಿ ಕಿರುಚಾಡಿದ್ದಾಳೆ. ಇದನ್ನೇ ಕ್ಯಾಚ್ ಮಾಡಿಕೊಂಡ ಸುಂದ್ರಿ ಪರಿಹಾರಕ್ಕಾಗಿ ಮಂತ್ರವಾದಿ ಬಳಿ ಕರೆದುಕೊಂಡು ಹೋಗಿದ್ದಾಳೆ.

ಸುಂದ್ರಿಗೆ ಸಿಕ್ಕಿದ್ದೇ ಚಾನ್ಸ್

ಜಾತಕದ ದೋಷಕ್ಕೆ ಪರಿಹಾರ ಕೊಡಿಸುತ್ತೀನಿ ಅಂತ ಸುಂದ್ರಿ, ಶ್ರೇಷ್ಠಾಳನ್ನು ಕರೆದುಕೊಂಡು ಬಂದಿದ್ದಾಳೆ. ಆದರೆ ಅಲ್ಲಿ ಶ್ರೇಷ್ಠಾಗೆ ಬೇಕು ಅಂತಾನೇ ಹಿಂಸೆ ನೀಡಿದ್ದಾರೆ. ಪೂಜಾ, ಹಿತ, ಸುಂದ್ರಿ ಸೇರಿಕೊಂಡು ಭಕ್ತಿಯಿಲ್ಲ, ಗೌರವ ಇಲ್ಲ ಅಂತೆಲ್ಲ ಹೇಳಿ ಶ್ರೇಷ್ಠಾಗೆ ಬೇಕು ಅಂತಾನೇ ಹಿಂಸೆ ಕೊಟ್ಟಿದ್ದಾರೆ. ವಿಭೂತಿಯನ್ನೆಲ್ಲಾ ಹಾಕಿ ವಿಕಾರಗೊಳಿಸಿದ್ದಾರೆ.

colors kannada serial Bhagyalakshmi Written Update on July 29th episode

ಮಂತ್ರವಾದಿ ಬಳಿ ಬಂದ್ಲು ಭಾಗ್ಯಾ

ಶ್ರೇಷ್ಠಾ ಹಾಗೂ ಭಾಗ್ಯಾಳನ್ನು ಒಂದೇ ಕಡೆ ಸೇರಿಸುವ ಪ್ಲ್ಯಾನ್ ಪೂಜಾ ಗ್ಯಾಂಗ್‌ದು. ಅಲ್ಲಿ ಶ್ರೇಷ್ಠಾಳ ಬಗ್ಗೆ ಸತ್ಯ ಹೇಳಬೇಕು ಎಂಬುದು. ಭಾಗ್ಯಾಳಿಗೂ ಅದೇ ಜಾಗಕ್ಕೆ ಬರುವುದಕ್ಕೆ ಹೇಳಿದ್ದರು. ಅಷ್ಟರಲ್ಲಿ ಶ್ರೇಷ್ಠಾಗೆ ಪೂಜೆ ಮಾಡಿ‌ ಮುಗಿಸಿದ್ದರು. ಭಾಗ್ಯಾ ಅಲ್ಲಿಗೆ ಬಂದೊಡನೆ ಸುಂದ್ರಿ ಎಸ್ಕೇಪ್ ಆಗಿದ್ದಳು. ಅಲ್ಲಿ ಶ್ರೇಷ್ಠಾಳನ್ನು ಕಂಡು ಭಾಗ್ಯಾಗೂ ಶಾಕ್ ಆಗಿತ್ತು. ಭಾಗ್ಯಾಳ ಎದುರು ನಿಲ್ಲುವ ಧೈರ್ಯ ಈಗ ಶ್ರೇಷ್ಠಾಗೆ ಖಂಡಿತ ಇಲ್ಲ‌. ಭಾಗ್ಯಾ ಬಂದೊಡನೆ ತನ್ನ ದಾರಿ ಹಿಡಿದು ಹೊರಡಲು ಯತ್ನಿಸಿದಳು.

ಮಕ್ಳಿದಾವೆ ಎಂದ ಮಂತ್ರವಾದಿ

ಭಾಗ್ಯಾ ಬಂದಿದ್ದಕ್ಕ ಶ್ರೇಷ್ಠಾ ಹೊರಡುವುದಕ್ಕೆ ಅಣಿಯಾದಳು. ಆದರೆ ಪೂಜಾ ಗ್ಯಾಂಗ್ ಪ್ಲ್ಯಾನ್ ಅಲ್ಲಿಯೇ ಇದ್ದದ್ದು. ಭಾಗ್ಯಾ ಮುಂದೆ ಪರೋಕ್ಷವಾಗಿ ಶ್ರೇಷ್ಠಾ ಮದುವೆಯಾಗುತ್ತಿರುವ ಹುಡುಗನ ಬಗ್ಗೆ ಹೇಳಬೇಕು ಎಂಬುದು. ಹಾಗೇ ಮಾಡಿದರು. 'ನಿನ್ನ ಮದುವೆಯ ಬಗ್ಗೆ ಎಲ್ಲಾ ಸತ್ಯ ಗೊತ್ತು. ಶ್ರೇಷ್ಠಾ ಮದುವೆಯಾಗುತ್ತಿರುವ ಹುಡುಗನಿಗೆ ಈಗಾಗಲೇ ಮದುವೆಯಾಗಿದೆ. ಎರಡು ಮಕ್ಕಳು ಇದಾವೆ' ಎಂದೇ ಹೇಳಿದ್ದಳು. ಇದನ್ನು ಕೇಳಿದ ಶ್ರೇಷ್ಠಾಗೆ ಶಾಕ್ ಆಗಿತ್ತು. ಅದರಲ್ಲೂ ಭಾಗ್ಯಾ ಮುಂದೆ ಹೇಳಿಬಿಟ್ಟಳಲ್ಲ ಎಂಬ ಆತಂಕವೂ ಇದೆ.

ತಾಂಡವ್ ಎಂಬುದು ಗೊತ್ತಿಲ್ವಲ್ಲ!

ಈ ಮಾತು ಭಾಗ್ಯಾಗೆ ಅಷ್ಟೊಂದು ಎಫೆಕ್ಟೀವ್ ಆಗಿ ಕೇಳಿಸಲ್ಲ ಅನ್ನಿಸುತ್ತೆ. ಭಾಗ್ಯಾಳ ಕ್ಯಾರೆಕ್ಟರ್ ಆದರೂ ತಿಳಿದು ಪೂಜಾ ಗ್ಯಾಂಗ್ ಪ್ಲ್ಯಾನ್ ಮಾಡಬೇಕಿತ್ತು. ಯಾಕಂದ್ರೆ ಭಾಗ್ಯಾ ಯಾರ ವೈಯಕ್ತಿಕ ವಿಚಾರಕ್ಕೂ ಅಷ್ಟೊಂದು ಕುತೂಹಲ ಬೆಳೆಸಿಕೊಳ್ಳುವುದಿಲ್ಲ. ಜೊತೆಗೆ ಕೆಟ್ಟದ್ದನ್ನು ಮಾಡುವುದಿಲ್ಲ. ಶ್ರೇಷ್ಠಾ ತನ್ನ ಹಣ ಕದ್ದಿದ್ದಾಳೆ ಎಂಬ ಕಾರಣಕ್ಕೆ ದ್ವೇಷ ಮಾಡುತ್ತಿದ್ದಾಳೆ, ತಾಂಡವ್‌ನ ನ ದೂರ ಇರುವುದಕ್ಕೆ ಹೇಳುತ್ತಿದ್ದಾಳೆ.

ಪ್ಲ್ಯಾನ್ ವರ್ಕ್ ಆಗಲ್ವಾ?

ಈಗ ಶ್ರೇಷ್ಠಾ ಒಂದಲ್ಲ ಎರಡು ಮದುವೆ ಆಗಿರುವ ವ್ಯಕ್ತಿಯನ್ನು ಮದುವೆಯಾದರು, ಮಕ್ಕಳಲ್ಲ ಮೊಮ್ಮಕ್ಕಳಿರುವ ವ್ಯಕ್ತಿಯನ್ನೇ ಮದುವೆಯಾದರೂ ಅಷ್ಟೊಂದು ತಲೆ ಕೆಡಿಸಿಕೊಳ್ಳಲ್ಲ. ಆದರೆ ಆ ವ್ಯಕ್ತಿ ತನ್ನ ಗಂಡನಾಗಿರಬಾರದು. ಆ ವ್ಯಕ್ತಿಯೇ ತನ್ನ ಗಂಡ ಎಂದು ಪ್ರೂವ್ ಮಾಡುವಲ್ಲಿ ಪೂಜಾ ಗ್ಯಾಂಗ್ ವಿಫಲವಾಗುತ್ತಿದೆ. ಅದಕ್ಕೆ ಪ್ಲ್ಯಾನ್ ಅಷ್ಟೊಂದು ವರ್ಕ್ ಆಗಲ್ಲ.

More from Filmibeat

English summary
Bhagyalakshmi kannada serial today episode. Here is the details about Will Shrestha get to know the truth about Bhagya doesn't think about Shrestha, so Pooja's gang plan will fail;
Read more about: filmbeat original tv sumanth
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X