Bhagyalakshmi: ಅತ್ತೆ ಕಂಡು ಓಡಿ ಬಂದ ಭಾಗ್ಯಾ; ತಾಂಡವ್‌ಗೆ ಸಿಹಿ ಸಿಗುತ್ತಾ, ಕಹಿಯಾಗುತ್ತಾ?

By ಎಸ್ ಸುಮಂತ್

ಭಾಗ್ಯಾಳ ಧೈರ್ಯ, ಮನೆಯವರ ಮೇಲಿನ ಪ್ರೀತಿ, ಕಾಳಜಿಯಿಂದಾಗಿ, ಅವಳ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ. ಮನೆಯನ್ನು ನಡೆಸಬೇಕಿರುವ ಭಾಗ್ಯಾಳ ಪಾಲಿಗೆ ಫೈವ್ ಸ್ಟಾರ್ ಹೊಟೇಲ್ ನಲ್ಲಿಯೇ ಕೆಲಸ ಅರಸಿ ಬಂದಿದೆ. ಭಾಗ್ಯಾಳನ್ನು ಇಂಗ್ಲಿಷ್ ಬರಲ್ಲ, ಇಲ್ಲಿಂದ ಹೋಗು ಎಂದವರೇ ಇಂದು ಭಾಗ್ಯಾಳನ್ನು ಮೇಡಂ ಎನ್ನುತ್ತಿದ್ದಾರೆ. ಅದು ಭಾಗ್ಯಾಳಿಗೆ ಸಿಕ್ಕ ಗೌರವವೇ ಸರಿ.

ಭಾಗ್ಯಾಗೆ ಈ ಗೌರವವಾಗಲೀ, ಸನ್ಮಾನವಾಗಲಿ ಸುಮ್ಮನೆ ಏನು ಬರಲಿಲ್ಲ. ಬದಲಿಗೆ ಕಷ್ಟಪಟ್ಟಿದ್ದಾಳೆ. ಅವಮಾನ ಎದುರಿಸಿದ್ದಾಳೆ. ಆಟೀದಲ್ಲಿ ಹೋದರೆ ಹಣ ಖರ್ಚಾಗುತ್ತೆ ಅಂತ ಬೆವರು ಸುರಿಸಿ ನಡೆದಿದ್ದಾಳೆ. ಎಲ್ಲಾ ಅವಮಾನಗಳ ಬಳಿಕವೇ ಭಾಗ್ಯಾಳಿಗೆ ಸನ್ಮಾನ ಸಿಗುತ್ತಿರುವುದು.

colors kannada serial Bhagyalakshmi Written Update on July 2nd episode

ಪ್ರಣಯ ರಾಜನಿಂದ ಸನ್ಮಾನ

ಭಾಗ್ಯಲಕ್ಷ್ಮೀ ಬಳಗಕ್ಕೆ ವಿಶೇಷ ಅತಿಥಿಯಾಗಿ ಪ್ರಣಯ ರಾಜ ಶ್ರೀನಾಥ್ ಬಂದಿದ್ದಾರೆ. ಭಾಗ್ಯಾಳಿಗೆ ಸನ್ಮಾನ ಮಾಡುವುದಕ್ಕೆಂದು ಕರೆಸಿದ್ದಾರೆ. ವೇದಿಕೆ ಮೇಲೆ ಶ್ರೀನಾಥ್, ಭಾಗ್ಯಾಳನ್ನು ಹಾಡಿ ಹೊಗಳಿದ್ದಾರೆ. ಭಾಗ್ಯಾಳ ಸಾಧನೆಯನ್ನು ಕೊಂಡಾಡಿದ್ದಾರೆ. ಭಾಗ್ಯಾ ಅದೆಷ್ಟು ಕಷ್ಟಪಟ್ಟು ಓದಿದ್ದಾಳೆ, ಅದೆಷ್ಟು ಕಷ್ಟಪಟ್ಟು ಕೆಲಸಕ್ಕೆ ಬಂದಿದ್ದಾಳೆಂದು ಗುಣಗಾನ ಮಾಡಿ, ವೇದಿಕೆ ಮೇಲೆ ಕರೆದು ಮೊಮೆಂಟೋ ಕೊಡುತ್ತಿದ್ದಾರೆ.

ಅತ್ತೆಯನ್ನು ಕಂಡು ಓಡಿದ ಭಾಗ್ಯಾ

ಅತ್ತ ಭಾಗ್ಯಾಳನ್ನು ಮಾತನಾಡಿಸಬೇಕೆಂದೇ ಕುಸುಮಾ ಫೈವ್ ಸ್ಟಾರ್ ಹೊಟೇಲ್‌ಗೆ ಬಂದಿದ್ದಾಳೆ. ಮೊದಲಿಗೆ ಬಂದಿದ್ದ ಕುಸುಮಾ ಆ ಕುಕ್‌ನ ನೋಡಬೇಕು ಎಂದಿದ್ದಳು. ಆದರೆ ಈಗ ಹೆಸರು ಗೊತ್ತಾದ ಮೇಲೆ ಸೊಸೆಯನ್ನು ಹುಡುಕಿಕೊಂಡು ಬಂದಳು. ಒಮ್ಮೆ ಭಾಗ್ಯಾಳನ್ನು ನೋಡಬೇಕು ಎಂದರೆ ಇನ್ನೊಮ್ಮೆ ಅವಳು ನನ್ನ ಸೊಸೆ ಎಂದಳು. ಇದನ್ನು ಕೇಳಿದ ಸೀನಿಯರ್ ಸಿಬ್ಬಂದಿ, ಓ ಅತ್ತೆ ನಾನು ಭಾಗ್ಯಾಳ ಅಣ್ಣ ಎಂದು ರೇಗಿಸಿದ. ಮೊದಲು ಇವರನ್ನು ಹೊರಗೆ ಕಳುಹಿಸಿ ಎಂದು ಆರ್ಡರ್ ಮಾಡಿದ. ಅಲ್ಲಿಗೆ ಬೇರೆ ಮಹಿಳಾ ಸಿಬ್ಬಂದಿಗಳು ಕೂಡ ಬಂದರು. ಕುಸುಮಾಳನ್ನು ಎಳೆದುಕೊಂಡು ಹೋಗುವುದಕ್ಕೆ ಪ್ರಯತ್ನ ಪಟ್ಟರು. ಆಗ, ಕುಸುಮಾ ಜೋರಾಗಿ ಕೂಗಿದಳು. ಭಾಗ್ಯಾ ನಿಜಕ್ಕೂ ನನ್ನ ಸೊಸೆ ಎಂದಳು. ಅದು ಭಾಗ್ಯಾಳಿಗೆ ಕೇಳಿಸಿತ್ತು. ಅವಾರ್ಡ್ ತೆಗೆದುಕೊಳ್ಳದೇ ಓಡಿ‌ ಬಂದಿದ್ದಾಳೆ.

colors kannada serial Bhagyalakshmi Written Update on July 2nd episode

ತಾಂಡವ್ ಕನಸು ನನಸಾಗುತ್ತಾ..?

ಭಾಗ್ಯಾ ಸುಳ್ಳು ಹೇಳಿ ಕೆಲಸಕ್ಕೆ ಸೇರಿದ್ದಾಳೆ ಎಂಬುದು ತಿಳಿದು ಮೌನಿಯಾದಳು ಕುಸುಮಾ. ಜೊತೆಗೆ ಭಾಗ್ಯಾಳನ್ನು ಹುಡುಕಿಕೊಂಡು ಸೀದಾ ಹೊಟೇಲ್ ಗೆ ಬಂದಳು. ಇದನ್ನು ಕಂಡ ತಾಂಡವ್, ಖಂಡಿತ ಇವತ್ತು ಅತ್ತೆ ಸೊಸೆ ನಡುವೆ ಜಗಳ ಆಗುತ್ತೆ ಅಂತ ನಿರೀಕ್ಷೆ ಇಟ್ಟುಕೊಂಡಿದ್ದಾನೆ. ಎಲ್ಲರ ಮುಂದೆ ಮರ್ಯಾದೆ ಹೋಗುತ್ತೆ ಎಂದು ನಿರೀಕ್ಷೆ ಇಟ್ಟುಕೊಂಡು ನೇರವಾಗಿ ಹೊಟೇಲ್‌ಗೆ ಬಂದಿದ್ದಾನೆ. ಕುಟುಂಬಸ್ಥರೆಲ್ಲರು ಸಂತಸದಿಂದ ಬಂದರೆ, ತಾಂಡವ್ ಸಂತಸ ಹುಡುಕಿ ಬಂದಿದ್ದಾನೆ.

ಭಾಗ್ಯಾ ಸನ್ಮಾನ ಅತ್ತೆಗೆ?

ಭಾಗ್ಯಾ ಯಾವತ್ತಿಗೂ ತನ್ನ ಅತ್ತೆಯ ಮಾತು ಮೀರಲ್ಲ. ಸತ್ಯ ಹೇಳಲು ಹೋದಾಗೆಲ್ಲ ಅತ್ತೆಯೆ ತಡೆದಿರುವುದು. ಈಗ ಅತ್ತೆಗೆ ಅವಮಾನವಾಗುತ್ತಿದ್ದರೆ ನೋಡಿಕೊಂಡು ಸುಮ್ಮನೆ ಇರುವವಳಲ್ಲ ಭಾಗ್ಯಾ. ಈಗ ಅತ್ತೆ ನೋಡಿ ಓಡಿಬಂದಿರುವ ಭಾಗ್ಯ, ತನ್ನ ಸನ್ಮಾನವನ್ನು ಅತ್ತೆಗೆ ಸಲ್ಲುವಂತೆ ಮಾಡುತ್ತಾಳೆ. ಕುಸುಮಾ ತನ್ನ ಸೊಸೆ ಎಂದು ಮತ್ತೆ ಹಿರಿಹಿರಿ ಹಿಗ್ಗುತ್ತಾಳೆ. ಭಾಗ್ಯಾ ದೊಡ್ಡ ಹೆಸರು ಮಾಡುತ್ತಾಳೆ. ದೊಡ್ಡ ಮಟ್ಟಕ್ಕೆ ಬೆಳೆಯುತ್ತಾಳೆ. ಇದೆ ನೋಡುಗರ ಆಸೆಯಾಗಿದೆ. ನೋಡೋಣ‌ ನಿರ್ದೇಶಕರ ಯೋಚನೆ ಯಾವ ರೀತಿ ಇದೆ‌ ಎಂಬುದನ್ನು.

More from Filmibeat

English summary
colors kannada serial Bhagyalakshmi Written Update on July 2nd episode. Here is the details about Kusuma gets the honor of Bhagya;
Read more about: filmbeat original tv sumanth
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X