Bhagyalakshmi: ಭಾಗ್ಯಾ ಹೊಟೇಲ್‌ಗೆ ಮದುವೆ ಕಾಂಟ್ರಾಕ್ಟ್; ತಾಂಡವ್ - ಶ್ರೇಷ್ಠಾ ಒತ್ತು ಶಾವಿಗೆ ಆಗೋದು ಗ್ಯಾರಂಟಿ!

By ಎಸ್ ಸುಮಂತ್

ಭಾಗ್ಯಾಳ ಯಶಸ್ಸನ್ನು ಶ್ರೇಷ್ಠಾಗೆ ಸಹಿಸುವುದಕ್ಕೆ ಸಾಧ್ಯವೇ ಆಗುತ್ತಿಲ್ಲ. ಭಾಗ್ಯಾಳ ಸನ್ಮಾನ ಕಾರ್ಯಕ್ರಮಕ್ಕೆ ತಾಂಡವ್ ಕೂಡ ಬಂದಿದ್ದ. ಅಲ್ಲಿ ಅತ್ತೆ ಸೊಸೆ ಜಗಳ ಆಗುತ್ತೆ ಎಂದುಕೊಂಡು ಬಂದಿದ್ದ ತಾಂಡವ್‌ಗೆ ಸಿಕ್ಕಿದ್ದು ಕಹಿ ಸುದ್ದಿ. ಸೊಸೆ, ಅತ್ತೆಯನ್ನು ಹೊಗಳುವುದು, ಅತ್ತೆ ಸೊಸೆಯನ್ನು ಹೊಗಳುವುದೇ ನಡೆದಿತ್ತು. ಅಲ್ಲಿ ತಾಂಡವ್ ಚಪ್ಪಾಳೆ ತಟ್ಟಿದ್ದ. ಆದರೆ ಆತನ ಮನಸ್ಸಲ್ಲಿದ್ದ ಕೋಪ ಮಾತ್ರ ಕಡಿಮೆಯಾಗಿರಲಿಲ್ಲ. ಇನ್ನು ಜಾಸ್ತಿಯೇ ಆಗಿತ್ತು.

ಅಪ್ಪ ಅಮ್ಮ ಹೊಟೇಲ್‌ನಲ್ಲಿಯೇ ಕ್ಲಾಸ್ ತೆಗೆದುಕೊಂಡಿದ್ದರು. ಅದೇ ಸಮಯಕ್ಕೆ ಶ್ರೇಷ್ಠಾ ಕಾಲ್ ಕೂಡ ಬಂದಿತ್ತು. ಕಟ್ ಮಾಡದೇ ಹಾಗೆಯೇ ಇಟ್ಟುಕೊಂಡಿದ್ದ. ಕುಸುಮಾ ಈಗ ಇನ್ನಷ್ಟು ಸ್ಟ್ರಾಂಗ್ ಆಗಿದ್ದಾಳೆ. ಯಾವುದೇ ಕಾರಣಕ್ಕೂ ಸೊಸೆಯನ್ನು ಬಿಟ್ಟುಕೊಡುವ ಮಾತೇ ಇಲ್ಲ ಎಂದಿದ್ದಾಳೆ. ನೀನು ಬಯಸಿದಂತೆ ಸೊಸೆ ಎಲ್ಲಾ ಸಾಧನೆಯನ್ನು ಮಾಡಿದ್ದಾಳೆ. ಇನ್ಯಾಕೆ ಬಿಟ್ಟು ಹೋಗಬೇಕು. ಡಿವೋರ್ಸ್‌ನಿಂದ ವಾಪಾಸ್ ಬಾ ಎಂದಿದ್ದಾಳೆ. ಇದು ಶ್ರೇಷ್ಠಾಗೆ ಕೇಳಿಸಿ ತಲೆ ಕೆಡಿಸಿಕೊಂಡಿದ್ದಾಳೆ.

colors kannada serial Bhagyalakshmi Written Update on July 7th episode

ಚಿಂತೆಯಲ್ಲಿರುವ ಶ್ರೇಷ್ಠಾಗೆ ಪೂಜಾ ಕಾಟ

ಶ್ರೇಷ್ಠಾ ಅದ್ಯಾವಾಗ ತಾನೂ ತಾಂಡವ್‌ನೇ ಮದುವೆ ಆಗುವುದು ಏನೇ ಮಾಡಿಕೊಳ್ತಿಯಾ ಎಂದು ಕೇಳಿದಾಕ್ಷಣವೇ ಶ್ರೇಷ್ಠಾ ಮನೆಯಲ್ಲಿ ಪೂಜಾ ಜಾಂಡಾ ಹೂರಿದ್ದಾಳೆ. ಮದುವೆ ನಿರ್ಧಾರದಿಂದ ವಾಪಾಸ್ ಬರಲಿ ಅಂತ ಎಷ್ಟೆಷ್ಟೋ ಪ್ರಯತ್ನ ಮಾಡ್ತಾ ಇದ್ರು ಅದು ಸಾಧ್ಯವಾಗುತ್ತಿಲ್ಲ. ಈಗ ಕುಸುಮಾಳ ಮಾತು ಕೇಳಿಸಿಕೊಂಡ ಶ್ರೇಷ್ಠಾ ಚಿಂತೆಯಲ್ಲಿ ಮುಳುಗಿದ್ದಾಳೆ. ಪೂಜಾ ಕಾಟ ಕೊಟ್ಟು ಇನ್ನಷ್ಟು ಕೋಪ ತರಿಸುತ್ತಿದ್ದಾಳೆ.

ಮನೆ ದೇವರಿಗೆ ಹೊರಟ ಮನೆಯವರು

ಇತ್ತ ಕೆಲಸ ಸಿಕ್ಕಿದ್ದಕ್ಕೆ, ಎಲ್ಲವೂ ಒಳ್ಳೆಯದಾಗುತ್ತಿರುವುದಕ್ಕೆ ಕುಸುಮಾ ಮನೆಯಲ್ಲಿ ದೇವಸ್ಥಾನಕ್ಕೆ ಹೊರಟಿದ್ದಾರೆ. ಮನೆದೇವರಿಗೆ ಪೂಜೆ ಕೊಟ್ಟಿದ್ದಾರೆ. ಮನೆಯವರೆಲ್ಲಾ ಖುಷಿಯಾಗಿ ಹೊರಟಿರುವಾಗ ತಾಂಡವ್ ಮಾತ್ರ ಮನೆಯವರಲ್ಲದ ವರ್ಗಕ್ಕೆ ಸೇರಿದ್ದಾನೆ. ಕುಸುಮಾ ಕೂಡ ಮಗನನ್ನು ಕರೆಯುವುದಕ್ಕೆ ಹೋಗಿಲ್ಲ. ಇದೆಲ್ಲವನ್ನು ನೋಡಿ ತಾಂಡವ್ ಮತ್ತೆ ದುರಂಕಾರದ ಮಾತುಗಳನ್ನ ಆಡಿದ್ದಾನೆ. ದುಡಿತಿದ್ದೀನಿ ಅಂತ ಕೊಬ್ಬಾ ಅಂತ ಭಾಗ್ಯಾಳ ಬಳಿ ಕೇಳಿದ್ದಾನೆ.

colors kannada serial Bhagyalakshmi Written Update on July 7th episode

ಹಿತಾಗೆ ತಿಳಿದ ಸತ್ಯ ಭಾಗ್ಯಾಗೆ ತಿಳಿಯುತ್ತಾ?

ಭಾಗ್ಯಾ ಕೆಲಸ ಮಾಡುತ್ತಿರುವ ಫೈವ್ ಸ್ಟಾರ್ ಹೊಟೇಲ್‌ಗೇನೆ ಮದುವೆ ಕಾಂಟ್ರಾಕ್ಟ್ ಒಂದು ಬಂದಿದೆ. ಅದಕ್ಕಾಗಿ ಹಿತಾ ಜೋರಾಗಿ ಓಡಾಟ ನಡೆಸುತ್ತಿದ್ದಾಳೆ. ಹೆಚ್ಚಿನ ಜವಾಬ್ದಾರಿ ಇರುವುದು ಹಿತಾ ಮೇಲೆನೆ. ಖುಷಿ ಖುಷಿಯಲ್ಲಿಯೇ ಎಲ್ಲಾ ಪ್ಲ್ಯಾನ್ ಮಾಡಿಕೊಂಡ ಹಿತಾಗೆ ಆಮೇಲೆ ಶಾಕ್ ಆಗಿದೆ. ಪ್ರಪೋಸಲ್‌ನಲ್ಲಿ ಹುಡುಗ - ಹುಡುಗಿಯ ಫೋಟೋ ಬಂದಿದೆ. ಅದರಲ್ಲಿ ತಾಂಡವ್ ಫೋಟೋ ಇದ್ದದ್ದನ್ನು ಕಂಡು ಶಾಕ್ ಆಗಿದ್ದಾಳೆ.

ದುಡ್ಡು ಕದ್ದಿದ್ದಕ್ಕೆ ಆ ಗತಿ!

ಶ್ರೇಷ್ಠಾಗೆ ಅದಾಗಲೇ ಭಾಗ್ಯಾಳ ಕೈರುಚಿ ಹೇಗಿರುತ್ತೆ ಎಂಬುದರ ಅರ್ಥವಾಗಿದೆ. ಬರೀ ಹಣ ಕದ್ದಿದ್ದಾಳೆ ಎಂಬುದಕ್ಕೆ ಓಡಾಡಿಸಿಕೊಂಡು ಹೊಡೆದಿದ್ದಾಳೆ. ಆಗಲೇ ತನ್ನ ಗಂಡನಿಂದ ದೂರ ಇರು ಅಂತಾನು ಎಚ್ಚರಿಕೆ ಕೊಟ್ಟಿದ್ದಾಳೆ. ಹೀಗಿರುವಾಗ ತನ್ನ ಗಂಡನನ್ನೇ ಕಿತ್ತುಕೊಳ್ಳುತ್ತಾಳೆ ಎಂದರೆ ಅವಳಿಗೆ ಇನ್ನೆಷ್ಟು ಹೊಡೆಯಬೇಡ. ಆ ಭಯವೇ ಇಲ್ಲದೆ ಭಾಗ್ಯಾ ಶೆಫ್ ಆಗಿರುವ ಹೊಟೇಲ್‌ನಲ್ಲಿಯೇ ಮದುವೆಯನ್ನು ಅರೆಂಜ್ ಮಾಡಿಕೊಂಡಿದ್ದಾಳೆ. ತಾಂಡವ್ ಮೊದಲೇ ಹೇಳಿದ್ದ. ಇಲ್ಲೆಲ್ಲಾ ಆಗಬೇಕಾ? ದೇವಸ್ಥಾನದಲ್ಲಿ ಮದುವೆಯಾದರೆ ಆಗಲ್ವಾ ಅಂತ. ಅವನ ಮಾತನ್ನು ಕೇಳದೇ ತನ್ನ ಗುಂಡಿಯನ್ನು ತಾನೇ ತೋಡಿಕೊಳ್ಳುತ್ತಿದ್ದಾಳೆ.

More from Filmibeat

English summary
colors kannada serial Bhagyalakshmi Written Update on July 7th episode. Here is the details about Tandav Shrestha's wedding will be held at the hotel where Bhagya is working
Read more about: filmbeat original tv sumanth
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X