Bhagyalakshmi: ಪೂಜಾ ಆಯ್ತು.. ಈಗ ಹಿತ ಕಾಟ; ತಾಂಡವ್ ಗಢಗಢ!

By ಎಸ್ ಸುಮಂತ್

ಭಾಗ್ಯಾಳನ್ನ ಶತ ದಡ್ಡಿ, ಎಮ್ಮೆ, ಏನು ಬರಲ್ಲ ಅಂತೆಲ್ಲಾ‌ತಾಂಡವ್ ಬೈಯ್ಯುತ್ತಿದ್ದ. ಭಾಗ್ಯಾ ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡುತ್ತಾಳೆ ಎಂಬುದನ್ನು ತೋರೊಸಿದಳು. ಎಸ್ಎಸ್ಎಲ್‌ಸಿ ಎಕ್ಸಾಂ ಬರೆದಳು, ದೊಡ್ಡ ಫೈವ್ ಸ್ಟಾರ್ ಹೊಟೇಲ್‌ನಲ್ಲಿ ಹೆಡ್ ಶೆಫ್ ಆದಳು. ಆದರೂ ತಾಂಡವ್‌ಗೆ ಭಾಗ್ಯಾ ಬೇಡ. ನಿರ್ಧಾರ ಅಂದ್ರೆ ನಿರ್ಧಾರ. ಭಾಗ್ಯಾ ನನಗೆ ಇಷ್ಟ ಇಲ್ಲ. ಡಿವೋರ್ಸ್ ಕೊಡ್ತೀನಿ ಅಂತ ಮತ್ತೆ ಅದೇ ಉಚ್ಛಾರ ಮಾಡಿದ. ಅಪ್ಪ-ಅಮ್ಮ ಮತ್ತದೇ ಬುದ್ದಿ ಹೇಳುವ ಕೆಲಸಕ್ಕೆ ಕೈ ಹಾಕಿದರು. ಪ್ರಯೋಜನವೇ ಆಗಲಿಲ್ಲ.

ಯಾರೂ ಏನೇ ಹೇಳಿದರೂ ಪ್ರಯೋಜನವಾಗದೆ ಇರುವುದಕ್ಕೆ ಕಾರಣವೂ ಒಂದಿದೆ. ತಾಂಡವ್ ತಾನೂ ಗಂಡ್ಸು, ತನ್ನ ಮಾತೇ ಎಲ್ಲಾ ಕಡೆ ನಡೆಯಬೇಕು ಎಂಬ ಗುಣ ಹೊಂದಿರುವವನು. ಅದಕ್ಕೆ ಭಾಗ್ಯಾ ಏನೇ ಸಾಧನೆ ಮಾಡಿದರು ಅದನ್ನು ಒಪ್ಪದೇ ವ್ಯಂಗ್ಯ ಮಾಡುತ್ತಲೇ ಇರುತ್ತಾನೆ.

Colors kannada serial Bhagyalakshmi Written Update on July 8th episode

ಸಂತೋಷ ಕರುಣಿಸು ಎಂದು ಕೇಳಿದ ಭಾಗ್ಯಾ

ಭಾಗ್ಯಾಳಿಗೆ ತನ್ನ ಸಂಸಾರ ಉಳಿಸಿಕೊಳ್ಳಬೇಕೆಂಬ ಹಂಬಲ ಜಾಸ್ತಿ ಇದೆ. ತನಗಾಗಿ ಅಲ್ಲದೇ ಹೋದರೂ ತನ್ನ ಮಕ್ಕಳಿಗಾಗಿಯಾದರೂ ಸಂಸಾರ ಉಳಿಸಿಕೊಳ್ಳಬೇಕೆಂದು ಒದ್ದಾಡುತ್ತಿದ್ದಾಳೆ. ತಾಂಡವ್ ಬಳಿಯೂ ಅದನ್ನೇ ಬೇಡಿಕೊಂಡರು ಕೇಳಲಿಲ್ಲ. ಅದಕ್ಕೆ ಈಗ ದೇವರ ಬಳಿ ಹೋಗಿದ್ದಾಳೆ. ಮನೆಯಲ್ಲಿ ನೆಮ್ಮದಿ ಇರುವಂತೆ ಮಾಡು, ಅವರ ಮನಸ್ಸು ಬದಲಾಯಿಸು ಎಂದು ಕೇಳುತ್ತಿದ್ದಾಳೆ.

ಸಾಕ್ಷಿ ಸಮೇತ ಬಂದ ಹಿತ

ಹಿತ ಇಂದು ನೇರವಾಗಿ ತಾಂಡವ್ ಮನೆಗೆ ಬಂದಿದ್ದಾಳೆ. ಶ್ರೇಷ್ಠಾ ಮದುವೆಯಾಗುತ್ತಿರುವುದು ಭಾಗ್ಯಾಳ ಮನೆಯಲ್ಲಿ ಎಲ್ಲರಿಗೂ ಗೊತ್ತು. ಆದರೆ ಯಾರನ್ನು ಮದುವೆಯಾಗುತ್ತಿದ್ದಾಳೆ ಎಂಬುದು ಮಾತ್ರ ಗೊತ್ತಿಲ್ಲ. ಶ್ರೇಷ್ಠಾಳ ತಾಯಿ ಯಶೋಧ ಹಾಗೂ ಕುಸುಮಾ ನಡುವೆ ಆತ್ಮೀಯತೆ ಇದೆ. ಎಂಗೇಜ್ಮೆಂಟ್ ಹೋಗಲು ಆಗಿರಲಿಲ್ಲ. ಅದಕ್ಕೆ ಫೋಟೋ ಕಳುಹಿಸಿ ಎಂದು ಕಳುಹಿಸಿಕೊಂಡಳು. ಅಂದು ಫೋಟೋ ಡೌನ್ ಲೋಡ್ ಆಗಿದ್ದರೆ, ತಾಂಡವ್ ಗ್ರಹಾಚಾರ ಬಿಟ್ಟಿರೋದು. ಈಗ ಆ ಕೆಲಸವನ್ನ ಮಾಡುವುದಕ್ಕೆ ಹಿತ ಸಾಕ್ಷಿ ಸಮೇತ ಬಂದಿದ್ದಾಳೆ.

ಫೋಟೋ ನೋಡಿ ಹಿತ ಬೇಸರ

ಭಾಗ್ಯಾಳ ಕಷ್ಟ, ಅವಳ ನಿಷ್ಠೆ ಎಲ್ಲದನ್ನು ಹಿತ ಬಹಳ ಹತ್ತಿರದಿಂದ ನೋಡಿದ್ದಾಳೆ. ಅದಕ್ಕೆ ಹೊಟೇಲ್ ಕೆಲಸದಲ್ಲೂ ಭಾಗ್ಯಾಳ ಜೊತೆಯಾಗಿ ನಿಂತಿದ್ದಾಳೆ. ಭಾಗ್ಯಾಳಿಗೆ ಏನೇ ಬೆಂಬಲ ಬೇಕು ಎಂದರೂ ಕೊಡುತ್ತಿದ್ದಾಳೆ. ಈಗ ಅವಳ ವೈಯಕ್ತಿಕ ಜೀವನಕ್ಕೆ ಅನ್ಯಾಯವಾಗುತ್ತದೆ ಎಂದರೆ ಸಹಿಸುವುದಾದರೂ ಹೇಗೆ ಹೇಳಿ. ಮದುವೆ ಇವೆಂಟ್ ತನ್ನದೇ ಜವಾಬ್ದಾರಿ ಎಂದು ಖುಷಿ ಪಡುತ್ತಿದ್ದ ಹಿತ ಫೋಟೋ ನೋಡಿ ಬೇಸರ ಮಾಡಿಕೊಂಡಿದ್ದಳು.

Colors kannada serial Bhagyalakshmi Written Update on July 8th episode

ಮದುವೆ ಅಂತು ನಡೆದೇ ನಡೆಯುತ್ತೆ!

ಶ್ರೇಷ್ಠಾ ತನ್ನ ಬಾವನನ್ನೇ ಮದುವೆಯಾಗುತ್ತಿದ್ದಾಳೆಂದು ಗೊತ್ತಾದ ಮೇಲೆ ಪೂಜಾ ಇಬ್ಬರಿಗೂ ಎಚ್ಚರಿಕೆ ನೀಡಿದ್ದಳು. ಆದರೆ ಇಬ್ಬರು ಕೇಳಲಿಲ್ಲ. ಈಗ ಶ್ರೇಷ್ಠಾ ಮನೆಯಲ್ಲಿಯೇ ಪೂಜಾ ಜಾಂಡಾ ಹೂರಿದ್ದಾಳೆ. ಅವಳಿಗೆ ಮತ್ತು ಬಾವನಿಗೆ ಕಾಟ ಕೊಡುತ್ತಲೇ ಇದ್ದಾಳೆ. ಈಗ ತಾಂಡವ್‌ಗೆ ಟೆನ್ಶನ್ ಕೊಡಲು ಹಿತ ಕೂಡ ಬಂದಿದ್ದಾಳೆ. ಎಲ್ಲಾ ಸತ್ಯವನ್ನು ಭಾಗ್ಯಾಗೆ ಹೇಳುತ್ತೇನೆ. ನಿಮ್ಮ ಬಂಡವಾಳ ಬಯಲು ಮಾಡುತ್ತೇನೆ. ಸಾಕ್ಷಿ ಸಮೇತ ಬಂದಿದ್ದೇನೆ. ಭಾಗ್ಯಾಳಿಗೆ ಎಲ್ಲವನ್ನು ಹೇಳುತ್ತೇನೆ ಎಂದೇ ಹಠ ತೊಟ್ಟಿದ್ದಾಳೆ. ಹಿತ ಮಾತು ಕೇಳಿ ತಾಂಡವ್ ಶಾಕ್ ಆಗಿದ್ದಾನೆ.

More from Filmibeat

English summary
colors kannada serial Bhagyalakshmi Written Update on July 8th episode. Here is the details about Hita came home to Tandav;
Read more about: filmbeat original tv sumanth
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X