Bhagyalakshmi: ಹಿತ ಬೇಗ ಮ್ಯಾಟರ್ ಹೇಳಮ್ಮ; ವೀಕ್ಷಕರಿಗೆ ಟೆನ್ಷನ್ ತಡೆಯೋಕ್ ಆಗ್ತಿಲ್ಲ!

By ಎಸ್ ಸುಮಂತ್

ತಾಂಡವ್ ಕಳ್ಳಾಟ ಈಗ ಹಿತ ಕೈಯಲ್ಲಿ ಇದೆ. ಭಾಗ್ಯಾಳ ಕಷ್ಟವನ್ನು ಹತ್ತಿರದಿಂದ ನೋಡಿದವಳು ಹಿತ. ಹಾಗೇ ಭಾಗ್ಯಾಳ ಮುಗ್ಧತೆಯನ್ನು ಬಲ್ಲವಳು. ಹೊಟೇಲ್‌ನಲ್ಲಿಯೇ ಭಾಗ್ಯಾಳ ಪರವಾಗಿ ನಿಲ್ಲುತ್ತಾಳೆ. ಇನ್ನು ಗಂಡನಿಂದ ಅನ್ಯಾಯವಾದರೆ ಸುಮ್ಮನೆ ಇರುತ್ತಾಳಾ? ಚಾನ್ಸೆ ಇಲ್ಲ. ಅದಕ್ಕೆ ನೇರವಾಗಿಯೇ ಮನೆಗೆ ಬಂದಿದ್ದಾಳೆ.

ಮನೆಯಲ್ಲಿ ಭಾಗ್ಯಾ ಬದಲಿಗೆ ತಾಂಡವ್ ಎದುರಾಗಿದ್ದಾನೆ. ಮೊದ ಮೊದಲಿಗೆ ಎಗರಾಡುತ್ತಿದ್ದ ತಾಂಡವ್ ಫೋಟೋ ತೋರಿಸಿದ ತಕ್ಷಣ ತಣ್ಣಗಾಗಿದ್ದಾನೆ. ಅಷ್ಟರಲ್ಲಿ ಅಲ್ಲಿಗೆ ಬಂದ ಸುನಂದಾಳನ್ನು ಸತ್ಯ ತಿಳಿಯದಂತೆ ತಡೆದಿದ್ದಾನೆ. ಮಗಳ ಭವಿಷ್ಯ ಎಂದಾಗ ತಾಯಿಗೂ ಆತಂಕ ಇರುತ್ತೆ. ಆದ್ರೆ ತಾಂಡವ್ ಯಾಮಾರಿಸುವ ಕುತಂತ್ರದ ಮುಂದೆ ಯಾವ ಬುದ್ದಿವಂತಿಕೆಯೂ ಇಲ್ಲ. ಭಾಗ್ಯಾ ಮನೆಯಲ್ಲಿ ಇಲ್ಲದ್ದನ್ನು ಕಂಡು, ಹಿತ ಅವಳಿರುವ ಜಾಗ ತಿಳಿದು ಹುಡುಕಿಕೊಂಡು ಹೋಗಿದ್ದಾಳೆ.

Colors kannada serial Bhagyalakshmi Written Update on July 9th episode

ಹಿತ ಹಿಂದೆಯೇ ಬಂದ ತಾಂಡವ್

ಭಾಗ್ಯಾ, ಅತ್ತೆ, ಮಾವ, ಮಕ್ಕಳೆಲ್ಲಾ ಮನೆದೇವರ ದೇವಸ್ಥಾನಕ್ಕೆ ಹೋಗಿದ್ದಾರೆಂದು ತಿಳಿದ ಹಿತ, ಅಲ್ಲಿಗೆ ಹೋಗಿದ್ದಾಳೆ. ದೇವಸ್ಥಾನ ತಲುಪಿ ಭಾಗ್ಯಾಳಿಗೆ ಫೋನ್ ಮಾಡಿದ್ದಾಳೆ. ನಾನು ಇಲ್ಲೆ ಇದ್ದೀನಿ ಗರ್ಭ ಗುಡಿಯ ಹಿಂದೆನೇ ಇರು, ನಾನು ಬರ್ತೀನಿ ಎಂದಿದ್ದಾಳೆ. ಹಿತ ದೇವಸ್ಥಾನದ ಒಳಗೆ ಹೋಗುತ್ತಿದ್ದಂತೆ, ತಾಂಡವ್ ಕೂಡ ಅದೇ ದೇವಸ್ಥಾನಕ್ಕೆ ಬಂದಿದ್ದಾನೆ. ಹಿತ ಹೋದಲ್ಲೆಲ್ಲಾ ಹುಡುಕಿಕೊಂಡು ಅವಳ ಹಿಂದೆಯೇ ಓಡಿ ಹೋಗಿದ್ದಾನೆ.

ಭಾಗ್ಯಾಳನ್ನು ಭೇಟಿ ಮಾಡಿದ ಹಿತ

ಭಾಗ್ಯಾಳನ್ನು ಗರ್ಭ ಗುಡಿಯ ಬಳಿಯೇ ಇರುವುದಕ್ಕೆ ಹೇಳಿ ಹಿತ ಬೇಗ ಬೇಗನೇ ಹೋದಳು. ಭಾಗ್ಯಾಗೆ ಅನ್ಯಾಯವಾಗುತ್ತಿದೆ ಎಂದು ಹಿತಾಗೆ ಮನಸ್ಸಿಗೆ ಸಾಕಷ್ಟು ನೋವಾಗಿತ್ತು. ಕುಟುಂಬಕೋಸ್ಕರ ಎಷ್ಟೆಲ್ಲಾ ಕಷ್ಟ ಪಡುತ್ತಾಳೆ. ಆದರೆ ತಾಂಡವ್ ಅವಳಿಗೇನೆ ಮೋಸ ಮಾಡುತ್ತಾನಲ್ಲ. ಎಂಬ ಬೇಸರ ಇತ್ತು. ಅದಕ್ಕೆ ಎಲ್ಲಾ ಸತ್ಯವನ್ನು ಭಾಗ್ಯಾಳಿಗೆ ತಿಳಿಸಿ, ಈ ಸಂಕಷ್ಟದಿಂದ ಪಾರು ಮಾಡಬೇಕು ಎಂಬುದು ಹಿತ ಆದೆಯಾಗಿತ್ತು. ಭಾಗ್ಯಾಳಿಗೆ ಈ ಸತ್ಯ ಗೊತ್ತಿಲ್ಲ ಅನ್ನೋದಂತು ಹಿತಾಗೆ ಅರ್ಥವಾಗಿತ್ತು.

ಪೀಠಿಕೆ ಹಾಕಿದ ಹಿತ

ಭಾಗ್ಯಾ ಇರುವ ಜಾಗಕ್ಕೆ ಹಿತ ಬಂದಳು. ಕೈಯ್ಯಲ್ಲಿ ಫೋಟೋ ಇರುವ ಫೈಲ್ ಇದೆ. ತಾಂಡವ್ ಕೈಯಿಂದ ಇದನ್ನು ತಡೆಯುವುದಕ್ಕೆ ಆಗಲಿಲ್ಲ. ಆ ಫೋಟೋಯಿಂದಾನೇ ತಾಂಡವ್‌ಗೆ ಆತಂಕ ಜಾಸ್ತಿ. ಪದೇ ಪದೇ ಆ ಫೋಟೋ ಮನೆಯವರಿಗೆ ಹತ್ತರವೇ ಹೋಗುತ್ತದೆ. ಲಗ್ನ ಪತ್ರಿಕೆಯೊಂದು ಅಮ್ಮನ ಸೀರೆಯಲ್ಲಿಯೇ ಅಡಗಿದೆ. ಅದು ಯಾವಾಗ ಸಿಗುತ್ತದೆ ಎಂಬುದು ಗೊತ್ತಿಲ್ಲ. ಆದರೆ ಈಗ ಹಿತ ನಿಮ್ಮಂಥವರಿಗೆ ಹೀಗೆ ಅನ್ಯಾಯವಾಗಬಾರದು ಭಾಗ್ಯಾ ಅಂತ ಪೀಠಿಕೆ ಹಾಕುತ್ತಿದ್ದರೆ, ಬೆಳ್ ಬೆಳಗ್ಗೇನೆ ಪ್ರೇಕ್ಷಕರುಗೆ ಕೋಪ ಬರುತ್ತಿದೆ. ನಾನೇ ಆ ಸ್ಥಾನದಲ್ಲಿ ಇದ್ದಿದ್ರೆ ಇಷ್ಟೊತ್ತಿಗೆ ನಿನ್ ಗಂಡ ಶ್ರೇಷ್ಠಾಳನ್ನ ಲವ್ ಮಾಡ್ತಾ ಇದಾನೆ, ಮದುವೆ ಆಗೋದಕ್ಕೆ ನಿಮ್ಮ ಹೊಟೇಲ್ ಬುಕ್ ಮಾಡಿದ್ದಾನೆ ಅಂತ ಹೇಳಿ ಬಿಡ್ತಾ ಇದ್ದೆ ಎಂದು ಕಮೆಂಟ್ ಹಾಕಿದ್ದಾರೆ.

Colors kannada serial Bhagyalakshmi Written Update on July 9th episode

ಸತ್ಯ ತಿಳಿಯುವುದು ಅನುಮಾನ

ತಾಂಡವ್‌ ಬಣ್ಣ ಇಷ್ಟು ಬೇಗ ಬಯಲಾಗುವುದು ಅನುಮಾನ. ಯಾಕಂದ್ರೆ ಭಾಗ್ಯಾ ಅಂದು ಒಂದು ವಿಡಿಯೋ ಹಂಚಿಕೊಂಡಿದ್ದರು. ಅದರಲ್ಲಿ ಶ್ರೇಷ್ಠಾ ಹಾಗೂ ತಾಂಡವ್ ಫೋಟೋಶೂಟ್ ನಲ್ಲಿ ಭಾಗ್ಯಾ ಕೂಡ ಇದ್ದದ್ದು. ಅದು ರಿಸೆಪ್ಷನ್‌ ಅನ್ಸುತ್ತೆ. ಹೀಗಾಗಿ ಸತ್ಯ ಹೇಳಲು ಹೋದಾಗ ಮನೆಯವರಿಗೇನಾದರೂ ಸಮಸ್ಯೆಯಾಗಿ ಸತ್ಯ ಹೇಳದೇ ಉಳಿಯಬಹುದು.

More from Filmibeat

English summary
colors kannada serial Bhagyalakshmi Written Update on July 9th episode. Here is the details about Viewers say that hitha should tell the truth soon;
Read more about: filmbeat original tv sumanth
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X