Bhagyalakshmi: ಭಾಗ್ಯಾಗೆ ಬಸ್ ಫ್ರೀ ಇಲ್ವಾ? ಹಣ ಕೊಟ್ಟು ಟಿಕೆಟ್ ತಗೊಂಡಿದ್ದೇಕೆ?
ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ರಾಜ್ಯದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕಲ್ಪಿಸಿಕೊಟ್ಟಿದೆ. ಈ ಮೂಲಕ ರಾಜ್ಯದ ಮಹಿಳೆಯರು ಆಧಾರ್ ಕಾರ್ಡ್ ತೋರಿಸಿ, ಉಚಿತವಾಗಿ ಓಡಾಡುತ್ತಿದ್ದಾರೆ. ಪ್ರತಿದಿನ ಮಹಿಳೆಯರು ಫ್ರೀಯಾಗಿ ಓಡಾಡುತ್ತಾರೆ. ಆದರೆ ಭಾಗ್ಯಾಗೆ ಈ ಸೌಲಭ್ಯ ಯಾಕಿಲ್ಲ ಎಂಬುದೇ ವೀಕ್ಷಕರ ಪ್ರಶ್ನೆಯಾಗಿದೆ.
ಭಾಗ್ಯಾಗೆ ಕೆಲಸದ ಅಗತ್ಯ ತುಂಬಾನೇ ಇದೆ. ಭಾಗ್ಯಾಳ ಅದೃಷ್ಟದಿಂದ ಭಗಾಯ ಕೆಲಸ ಸಿಕ್ಕಿತ್ತು. ಆದರೆ ಸತ್ಯ ಒಪ್ಪಿಕೊಂಡು, ಆರ್ಡರ್ ತೆಗೆದುಕೊಳ್ಳುವ ಕೆಲಸಕ್ಕಿಂತ ಅಡುಗೆ ಮಾಡುವ ಕೆಲಸ ಕೊಡಿ ಎಂದು ಕೇಳಿದ್ದಳು. ಅದಕ್ಕೆ ಆಸ್ಪದ ಕೊಡದೆ ಮ್ಯಾನೇಜರ್ ಭಾಗ್ಯಾಳಾ ಮೇಲೆ ಕೂಗಾಡಿದ್ದ. ಈಗ ಅದೇ ಮ್ಯಾನೇಜರ್‌ಗೆ ಇದೀಗ ಭಾಗ್ಯಾಳೇ ಬೇಕಾಗಿದೆ. ಹುಡುಕಿಕೊಂಡು ಓಡಿ ಬಂದಿದ್ದಾನೆ.

ಒತ್ತು ಶಾವಿಗೆಗೆ ಶಬ್ಬಾಶ್ ಗಿರಿ
ಕೆಲಸ ಕಳೆದುಕೊಳ್ಳುವ ಸಮಯ ಬಂದಾಗ ಭಾಗ್ಯಾ ಧ್ವನಿ ಎತ್ತಿದ್ದಳು. ನನಗೆ ಆ ಒತ್ತು ಶಾವಿಗೆ ಮಾಡುವುದಕ್ಕೆ ಬರುತ್ತದೆ, ಅವಕಾಶ ಕೊಡಿ ಎಂದು ಕೇಳಿದ್ದಳು. ವಿಮರ್ಶಕರ ಮುಂದೆಯೇ ಕೇಳಿದ್ದರಿಂದ ಭಾಗ್ಯಾಗೆ ಅಡುಗೆ ಮಾಡುವುದಕ್ಕೆ ಅವಕಾಶ ಸಿಕ್ಕಿತ್ತು. ಶ್ರದ್ದೆಯಿಂದ ಒತ್ತು ಶಾವಿಗೆ, ರಸಾಯನ ಮಾಡಿದಳು. ತಂದು ಟೇಬಲ್ ಮೇಲೆ ಸರ್ವ್ ಮಾಡುವುದರೊಳಗೆ ವಿಮರ್ಶಕ ಅಲ್ಲಿ ಇರಲಿಲ್ಲ. ಆದರೂ ಚಂದವಾಗಿ ಸರ್ವ್ ಮಾಡಿದಳು. ಅಲ್ಲಿಗೆ ಬಂದ ಸೀನಿಯರ್ ಇಲ್ಲಿಂದ ಬೇಗ ಹೊರಡು, ಇಲ್ಲಂದ್ರೆ ಪೊಲೀಸರಿಗೆ ಹೇಳುವಂತೆ ಕಳುಹಿಸಿ ಬಿಟ್ಟ.
ಭಾಗ್ಯಾಳನ್ನು ಹುಡುಕಿ ಬಂದ ಸಿಬ್ಬಂದಿ
ವಿಮರ್ಶಕನಿಗೆ ಭಾಗ್ಯಾ ಮಾಡಿದ ತಿಂಡಿ ತುಂಬಾನೇ ಹಿಡಿಸಿತ್ತು. ಅವಳಿಗೆ ಹೊಗಳಿಯೆ ಮಾತುಗಳನ್ನು ಹೇಳಲೇಬೇಕು. ಮೊದಲು ಕರೆಸಿ ಎಂದು ಹೇಳಿದ್ದಾನೆ. ವಿಮರ್ಶಕ ಗೌರೀಶ್ ಅಕ್ಕಿಯ ಮಾತಿಗೆ ಸಿಬ್ಬಂದಿ ಹಾಗೂ ಮ್ಯಾನೇಜರ್ ಹೆದರಿದ್ದಾರೆ. ಹೊರಗೆ ಬಂದು, ಹಿತ ಹಾಗೂ ನವೀನ್‌ಗೆ ಎಚ್ಚರಿಕೆಯನ್ನು ಕೊಟ್ಟಿದ್ದಾರೆ. ಆದಷ್ಟು ಬೇಗ ಭಾಗ್ಯಾ ಇಲ್ಲಿರಬೇಕು. ಅವರು ತಿಂದು ಮುಗಿಸುವುದರೊಳಗೆ ಭಾಗ್ಯಾ ಕಣ್ಣ ಮುಂದೆ ಇರಬೇಕು ಎಂದು ಹೇಳಿದ್ದಾನೆ.

ಬಿಎಂಟಿಸಿ ಬಸ್ ಹತ್ತಿದ ಭಾಗ್ಯಾ
ಭಾಗ್ಯಾಗೆ ಪೊಲೀಸರನ್ನು ಕರೆಸುತ್ತೇವೆ ಎಂದಿದ್ದು ಬಹಳ ಭಯವಾಗಿದೆ. ಅದಕ್ಕೆ ಅಲ್ಲಿಂದ ಬಂದು ಬಿಟ್ಟಿದ್ದಾಳೆ. ಹಿತ ಓಡೋಡಿ ಬಂದು ರಿವ್ಯೂ ಆದರೂ ಕೇಳಿಕೊಂಡು ಹೋಗಿ. ನಿಮ್ಮನ್ನ ಧೈರ್ಯವಂತೆ ಅಂದುಕೊಂಡಿದ್ದೆ. ಇದನ್ನ ಎದುರಿಸುವಷ್ಟು ಧೈರ್ಯವಿಲ್ವಾ ಅಂತೆಲ್ಲಾ ಹೇಳಿ ಸ್ಪೂರ್ತಿ ತುಂಬುವುದಕ್ಕೆ ಪ್ರಯತ್ನ ಪಟ್ಟರು, ಕೇಳದೆ ಭಾಗ್ಯಾ ಅಲ್ಲಿಂದ ಹೊರಟೆ ಬಿಟ್ಟಳು. ಬಸ್ ಸ್ಟಾಪ್‌ನಲ್ಲಿ ನಿಂತು ಮಕ್ಕಳ ಶುಲ್ಕ, ಮನೆ ಇಎಂಐ, ಶ್ರೇಷ್ಠಾಗೆ ಕೊಡಬೇಕಾದ ಹಣದ ಬಗ್ಗೆ ಎಲ್ಲಾ ಯೋಚನೆ ಮಾಡುತ್ತಾ ನಿಂತಿದ್ದಳು. ಅಷ್ಟರಲ್ಲಿ ಬಸ್ ಕೂಡ ಬಂತು.
ಶಕ್ತಿ ಯೋಜನೆಯ ಲಾಭವಿಲ್ವಾ
ಭಾಗ್ಯಾ ಬಸ್ ಹತ್ತಿ ಹಣ ಕೊಟ್ಟು ಟಿಕೆಟ್ ಖರೀದಿಸಿದ್ದಾಳೆ. ಭಾಗ್ಯಾ ಬಸ್ ಹತ್ತಿದ್ದನ್ನು ಹಿತ ನೋಡಿದ್ದಾಳೆ. ಎಲ್ಲರಿಗೂ ಭಾಗ್ಯಾಳನ್ನು ತೋರಿಸಿದ್ದಾಳೆ. ತಕ್ಷಣ ಎಲ್ಲರೂ ಬಸ್ ಹಿಂದೆ ಓಡಿ ಬರುತ್ತಿದ್ದಾರೆ. ಆದರೆ ಇಲ್ಲಿ ಬರುವ ಪ್ರಶ್ನೆ ಭಾಗ್ಯಾ ಹಣ ಕೊಟ್ಟು ಟಿಕೆಟ್ ತೆಗೆದುಕೊಂಡಿದ್ದು. ಯಾಕೆ ಭಾಗ್ಯಾಗೆ ಶಕ್ತಿ ಯೋಜನೆ ವರ್ಕ್ ಆಗಿಲ್ವಾ..? ಅಥವಾ ಡೈರೆಕ್ಟರ್‌ಗೆ ಶಕ್ತಿ ಯೋಜನೆ ಮರೆತೋಯ್ತಾ ಎಂಬುದೇ ನೋಡುಗರ ಪ್ರಶ್ನೆಯಾಗಿದೆ.


Click it and Unblock the Notifications











