Bhagyalakshmi: ಭಾಗ್ಯಾಳಿಗೆ ಸತ್ಯ ಹೇಳಿದ್ರೆ ಖುಷಿ ಬರಲ್ವಾ? ಹೊಟೇಲ್ ಮ್ಯಾನೇಜರ್‌ಗೆ ಅಷ್ಟು ತಲೆ ಓಡಲ್ವಾ..?

By ಎಸ್ ಸುಮಂತ್

ಯಾವುದೇ ಕಾರಣಕ್ಕೂ ಸಂಸಾರ ಹಾಳಾಗಬಾರದು, ಮಕ್ಕಳಿಗೆ ತಂದೆ-ತಾಯಿ ಇಬ್ಬರ ಪ್ರೀತಿಯೂ ಸಿಗಬೇಕು ಎಂಬುದೇ ಅತ್ತೆ ಮಾವನ ಆದೆ. ತಾಂಡವ್ ಎಷ್ಟೇ ದಾರಿ ತಪ್ಪಿದರೂನು ಆತನನ್ನು ಬದಲಾಯಿಸುವುದಕ್ಕೆ ಪ್ರಯತ್ನ ಪಡುತ್ತಿದ್ದಾರೆ. ಆದರೆ ತಾಂಡವ್ ಯಾವುದಕ್ಕೂ ಬದಲಾಗುವಂತೆ ಕಾಣಿಸುತ್ತಿಲ್ಲ. ಯಾರೂ ಏನಾದರೇನು ನನಗೆ ನನ್ನ ಸಂತೋಷವೇ‌ ಮುಖ್ಯ ಎನ್ನುತ್ತಿದ್ದಾನೆ.

ಮನೆಯಲ್ಲಿ ಇಷ್ಟೆಲ್ಲಾ ರಾದ್ಧಾಂತಗಳು ನಡೆದರು ಕೂಡ ಶ್ರೇಷ್ಠಾ ಜೊತೆಗೆ ಮಾಂಗಲ್ಯ ನೋಡಲು ಹೋದವನು ತಾಂಡವ್. ಅಮ್ಮ ಎಂದರೆ ಪ್ರಾಣ ಬಿಡುವ ತಾಂಡವ್, ಅಮ್ಮ ಹೊಟೇಲ್ ಕೆಲಸಕ್ಕೆ ಹೋದರೂನು ತಲೆ ಕೆಡಿಸಿಕೊಂಡಿಲ್ಲ. ಅಮ್ಮ ಕೆಲಸಕ್ಕೆ ಹೋಗಿದ್ದು ಕೂಡ ಈ ಭಾಗ್ಯಾಳ ಸಹವಾಸವೇ ಅಂತ ಮತ್ತೆ ಬೈಕೊಂಡಿದ್ದಾನೆ. ಅಮ್ಮನ ಬಳಿ ಬಂದು ಕ್ಷಮೆಯನ್ನು ಕೇಳದೆ, ಮತ್ತೆ ರೇಗಾಡಿದ್ದಾನೆ.

colors kannada serial Bhagyalakshmi Written Update on June 11th episode

ಕಡೆಗೂ ಭಾಗ್ಯಾಳನ್ನು ತಡೆಹಿಡಿದ ಸಿಬ್ಬಂದಿ

ಭಾಗ್ಯಾಳ ತಿಂಡಿಯನ್ನು ತಿಂದ ರಿವ್ಯೂವರ್ ಸಿಕ್ಕಾಪಟ್ಟೆ ಹೊಗಳಿದ್ದಾರೆ. ಈ ಅಡುಗೆಯನ್ನು ಮಾಡಿದವರನ್ನು ನಾನು ನೋಡಲೇಬೇಕೆಂದು ಒತ್ತಿ ಹೇಳಿದ್ದಾರೆ. ಹೀಗಾಗಿ ಮನೆಗೆ ಕಳುಹಿಸಿದ್ದ ಭಾಗ್ಯಾಳನ್ನು ಹುಡುಕಿಕೊಂಡು ಫೈವ್ ಸ್ಟಾರ್ ಸಿಬ್ಬಂದಿಯೆಲ್ಲಾ ಓಡಿ‌ ಬಂದಿದ್ದಾರೆ. ಬಸ್‌ನಲ್ಲಿ ಮಿಸ್ ಆದ ಭಾಗ್ಯಾ ಆಟೋದಲ್ಲಿ ಕಾಣಿಸಿಕೊಂಡಿದ್ದಾಳೆ. ಸದ್ಯ ಆಟೋ ಮುಂದೆಯೂ ಬಂದು ನಿಂತಿದ್ದಾರೆ.

ಸತ್ಯ ಹೇಳದೇ ಹದೆರಿಸಿದ ಸಿಬ್ಬಂದಿ

ಭಾಗ್ಯಾಳಿಗೆ ಭಯ ಇದ್ದದ್ದು ಇನ್ನೆಲ್ಲಿ ಪೊಲೀಸರುಗೆ ಹಿಡಿದುಕೊಟ್ಟು ಬಿಡುತ್ತಾರೋ ಎಂದು. ಅದಕ್ಕೆ ಸಿಬ್ಬಂದಿಗಳು ಹಿಂದೆ ಹಿಂದೆ ಬಂದರೆ ಓಡಿ ಓಡಿ ಹೋಗುತ್ತಿದ್ದಳು. ಈಗಲೂ ಆಟೋ ಮುಂದೆ ನಿಂತಾಗಲೂ ನೀವೂ ಬರಲೇಬೇಕು ಎಂದಾಗ ಕೈ ಮುಗಿದು ಬೇಡಿಕೊಂಡಿದ್ದಾರೆ ಸಿಭಂದಿಗಳು. ನೀವೂ ಬರದೇ ಹೋದರೆ ನಮ್ಮ ಕೆಲಸ ಹೋಗಿ ಬಿಡುತ್ತದೆ. ದಯವಿಟ್ಟು ಬನ್ನಿ ಎಂದು ಅಂಗಲಾಚಿದ್ದಾರೆ. ಆಗ ಭಾಗ್ಯಾ ಇಲ್ಲ ನಂದು ತಪ್ಪಾಗಿದೆ ಕ್ಷಮಿಸಿ ಎಂದಷ್ಟೇ ಕೈಮುಗಿದಿದ್ದಾಳೆ. ಭಾಗ್ಯಾಳಿಗೆ ನಿಮ್ಮ ಅಡುಗೆ ಇಷ್ಟವಾಗಿದೆ ಬನ್ನಿ ಎಂದಿದ್ದಾರೆ, ಖುಚಿಯಾಗಿಯೇ ಬರುತ್ತಿದ್ದಳಪ್ಪ.

colors kannada serial Bhagyalakshmi Written Update on June 11th episode

ಭಾಗ್ಯಾ ವಾಪಸ್ ಬಂದಾಗ ಕಾದಿತ್ತು ಶಾಕ್

ಬಳಿಕ ಭಾಗ್ಯಾ ಹೊಟೇಲ್‌ಗೆ ಹಿಂತಿರುಗಿದ್ದಾಳೆ. ಆಗ ಅಲ್ಲಿಯೇ ಇದ್ದ ರಿವ್ಯೂವರ್ ತುಂಬಾ ಹೊಗಳಿದ್ದಾರೆ. ಇದನ್ನ ನಿಮ್ಮ ಅಮ್ಮನಿಂದ ಕಲಿತದ್ದ ಎಂದು ಕೇಳಿದಾಗ ಭಾಗ್ಯಾ, ಹೌದು ಅಮ್ಮನಂತ ಅತ್ತೆಯ ಬಳಿ ಕಲಿತದ್ದು ಎಂದೇ ಹೇಳಿದ್ದಾಳೆ. ಎಲ್ಲರಿಂದ ಚಪ್ಪಾಳೆ ಸಿಕ್ಕಿದೆ. ಇನ್ಮೇಲೆ ಫೈವ್ ಸ್ಟಾರ್ ಹೊಟೇಲ್‌ನಲ್ಲಿ ಭಾಗ್ಯಾಳೆ ಚೆಫ್. ಎಲ್ಲರೂ ಕನ್ನಡದಲ್ಲಿಯೇ ಅಡುಗೆಯ ಹೆಸರನ್ನು ಹೇಳಬೇಕಿದೆ. ಭಾಗ್ಯಾಗೆ ಇದನ್ನ ಕೇಳಿ ಫುಲ್ ಖುಷಿಯಾಗಿದೆ.

ಕುಸುಮಾ ವಿಚಾರ ಕೇಳಿ ಮನೆಯಲ್ಲೆಲ್ಲಾ ಶಾಕ್

ಅತ್ತ ಮನೆಯಲ್ಲಿ ಸುಸ್ತಾಗಿ ಕುಳಿತಿದ್ದ ಅಮ್ಮನನ್ನು ವಿಚಾರಿಸಿಕೊಳ್ಳಲು ತಾಂಡವ್ ಓಡೋಡಿ ಬಂದಿದ್ದಾನೆ. ಆದರೆ ಕುಸುಮಾ ಅವನ ಮಾತಿಗೆ ಸೊಪ್ಪು ಹಾಕಲಿಲ್ಲ. ಇದೇ ಆತುರದಲ್ಲಿ ತಾಂಡವ್ ಸತ್ಯ ಬಾಯ್ಬಿಟ್ಟಿದ್ದಾನೆ. ಅಮ್ಮ ಹೊಟೇಲ್‌ನಲ್ಲಿ ಕೆಲಸ‌ ಮಾಡುತ್ತಿದ್ದಾಳೆ. ಆ ಬಿಸಿಯಲ್ಲಿ ನಿಂತೆ ಈ ರೀತಿಯಾಗಿದೆ. ಎಲ್ಲಾ ಆ ಭಾಗ್ಯಾಳಿಗಾಗಿಯೇ ಎಂದಿದ್ದಾನೆ. ಇದನ್ನು ಕೇಳಿ ನಿಜಕ್ಕೂ ಮಕ್ಕಳು ಕೂಡ ಶಾಕ್ ಆಗಿದ್ದಾರೆ. ಅಲ್ಲಿಂದ ಎಲ್ಲರೂ ಹೋದ ಮೇಲೆ ಗಂಡನ ಬಳಿ ಕ್ಷಮೆ ಕೇಳಿದ್ದಾಳೆ. ಗಂಡನಿಗೆ ಬೇಜಾರು ಆದರೂ ಸಹ ಹೆಮ್ಮೆಯಿಂದ ಹೆಂಡತಿಯನ್ನು ಹೊಗಳಿದ್ದಾನೆ.

More from Filmibeat

English summary
Bhagyalakshmi kannada serial today episode. Here is the details about Bhagya is now a Five Star Hotel Chef;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X