Bhagyalakshmi: ಭಾಗ್ಯಾಗೆ ಸಂಬಳ ಎಷ್ಟು? ಗಂಡ ಸರಿ ಹೋದ್ರೆ ಕೆಲಸ ಬಿಡ್ತಾಳಾ?

By ಎಸ್ ಸುಮಂತ್

ಕೆಲಸ ಗೊತ್ತಿದ್ದರೆ ಖಂಡಿತ ಸೋಲಾಗುವುದಿಲ್ಲ. ಪರ್ಫೆಕ್ಟ್ ಆಗಿ ಬರುವ ಕೆಲಸಕ್ಕೆ ಪ್ರಾಶಸ್ತ್ಯ ಸಿಗಬೇಕು ಅಷ್ಟೇ. ಈಗ ಭಾಗ್ಯಾಳಿಗೂ ಅದೃಷ್ಟದ ಬಾಗಿಲು ತೆಗೆದಿದೆ. ತನಗೆ ಅದ್ಭುತವಾಗಿ ಬರುವ ಅಡುಗೆ ಕೆಲಸವೇ ಕೈಹಿಡಿದಿದೆ. ಅದು ಅಂತಿಂಥ ಹೊಟೇಲ್ ಅಲ್ಲ, ಫೈವ್ ಸ್ಟಾರ್ ಹೊಟೇಲ್‌ನಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದಾಳೆ.

ಸಿಕ್ಕರೆ ಕುಸುಮಾಳಂತ ಅತ್ತೆ ಸಿಗಬೇಕು ಅಂತ ಅದೆಷ್ಡು ಮಹಿಳೆಯರು ಪ್ರತಿದಿನ ದೇವರ ಹತ್ತಿರ ಬೇಡಿಕೊಳ್ಳುತ್ತಾರೋ ಏನೋ. ಕೇವಲ ಓದುವಿನ ವಿಚಾರದಲ್ಲಷ್ಟೇ ಭಾಗ್ಯಾಳ ಜೊತೆಗೆ ನಿಂತಿರುವುದಲ್ಲ. ಭಾಗ್ಯಾಳಿಗೆ ರುಚಿಕಟ್ಟಾಗಿ ಅಡುಗೆ ಮಾಡುವುದನ್ನು ಹೇಳಿಕೊಟ್ಟಿದ್ದಾರೆ. ಅತ್ತೆಯಿಂದ ಕಲಿತ ಅಡುಗೆ ಈಗ ಎಲ್ಲರ ನಾಲಿಗೆ ರುಚಿಯನ್ನು ಹೆಚ್ಚಿಸಿದೆ. ಭಾಗ್ಯಾಗೆ ಹೊಗಳಿಕೆಯ ಸುರಿಮಳೆ ಸಿಕ್ಕಿದೆ.

colors kannada serial Bhagyalakshmi Written Update on June 12th episode

ಭಾಗ್ಯಾಳಿಗಾಗಿ ರೂಲ್ಸ್ ಚೇಂಜ್

ಭಾಗ್ಯಾ ಮಾಡಿದ್ದ ಒತ್ತು ಶಾವಿಗೆಯನ್ನು ಅದ್ಯಾವಾಗ ರಿವ್ಯೂವರ್ ಹೊಗಳಿದರೋ ಆಗಲೇ ಹೊಟೇಲ್ ಮ್ಯಾನೇಜರ್ ಖುಷಿಯಾಗಿಬಿಟ್ಟರು. ಭಾಗ್ಯಾಳನ್ನು ತಮ್ಮ ಹೊಟೇಲ್‌ನಲ್ಲೇ ಅಧಿಕೃತ ಶೆಫ್ ಆಗಿ ನೇಮಕ ಮಾಡಿಕೊಂಡರು. ಜೊತೆಗೆ ಭಾಗ್ಯಾಳಿಗಾಗಿ ಹೊಟೇಲ್ ಭಾಷೆಯ ನಿಯಮವನ್ನೇ ಬದಲಾಯಿಸಿಬಿಟ್ಟರು. ಎಲ್ಲರೂ ಭಾಗ್ಯಾಳ ಬಳಿ ಕನ್ನಡದಲ್ಲಿಯೇ ಮಾತನಾಡಬೇಕು ಎಂದರು. ಎಲ್ಲಾ ತಿಂಡಿಯ ಹೆಸರನ್ನು ಭಾಗ್ಯಾಳಿಗೆ ಅರ್ಥವಾಗುವಂತೆ ಹೇಳಬೇಕೆಂದು ಆರ್ಡರ್ ಮಾಡಿದರು. ಅತ್ತೆಯಿಂದ ಕಲಿತಾ ವಿದ್ಯೆಯಿಂದ ಎಷ್ಟೆಲ್ಲಾ ಲಾಭವಾಯ್ತು ಎಂದು ಭಾಗ್ಯಾ ಸಂತೋಷ ಪಟ್ಟಳು.

ಗ್ರಹಚಾರ ಬಿಡಿಸುತ್ತೀನಿ ಎಂದ ತಾಂಡವ್

ಅಮ್ಮ ಹೊಟೇಲ್ ಒಂದರಲ್ಲಿ ಕೆಲಸಕ್ಕೆ ಸೇರಿದ್ದು ರಾಜನ ಮುಂದೆ ಅದ್ಯಾವಾಗ ಬಟಾಬಯಲಾಯಿತೋ, ಅಂದು ಭಾಗ್ಯಾಳ ಮೇಲೆ ಕೋಪ ಜಾಸ್ತಿ ಆಯ್ತು. ಅಮ್ಮ ಅಂತು ಮಾತು ಕೇಳಲಿಲ್ಲ. ಅದಕ್ಕೆ ಭಾಗ್ಯಾಳನ್ನು ಹುಡುಕಿಕೊಂಡು ಹೊರಟ. ಯಾವುದೋ ದೇವಸ್ಥಾನದಲ್ಲಿ ಭಜನೆ ಕಾರ್ಯಕ್ರಮದಲ್ಲಿ ಇರುತ್ತಾಳೆ ಎಂದು ಹುಡುಕಿಕೊಂಡ ಹೋದ ತಾಂಡವ್ ಗೆ ನಿರಾಸೆಯಾಗಿತ್ತು. ಸತ್ಯವೇ ಗೊತ್ತಿಲ್ಲದ ತಾಂಡವ್ ಊರುರು ಸುತ್ತುತ್ತಾ ಇದ್ದಾಳೆ ಎಂದೇ ಭಾವಿಸಿದ್ದಾನೆ. ಈಗ ಅಪ್ಪ-ಅಮ್ಮನಿಗೂ ಏನೋ ಮಹಾ ಸತ್ಯ ಹೇಳುತ್ತೀನಿ ಅಂತ ಹೇಳಿ ಶಾಕಿಂಗ್ ನ್ಯೂಸ್ ನೀಡಿ ಹೋಗಿದ್ದಾನೆ.

colors kannada serial Bhagyalakshmi Written Update on June 12th episode

ಹಣ ತಲುಪಿಸಲು ಇನ್ನಿಲ್ಲದ ಪ್ಲ್ಯಾನ್

ಇತ್ತ ಪೂಜಾಳಿಗೆ ಅಂದು ಹಣ ಕದ್ದಿದ್ದ ಪಶ್ಚಾತ್ತಾಪ ಕಾಡುತ್ತಿದೆ. ಅಕ್ಕನ ಸಂಸಾರ ಉಳಿಸಬೇಕು ಎಂದು ಓಡಾಡುತ್ತಿರುವ ಪೂಜಾಗೆ, ಆ ಎರಡು ಲಕ್ಷ ಶ್ರೇಷ್ಠಾ ಕೈಗೆ ಸಿಕ್ಕಿರುವುದು ಗೊತ್ತಾಗಿದೆ. ಈಗ ಅದೇ ಶ್ರೇಷ್ಠಾಳ ಒಡವೆಯನ್ನೆಲ್ಲ ಅಡವಿಟ್ಟು ಎರಡು ಲಕ್ಷ ಹಣ ತಂದಿದ್ದಾಳೆ. ಆ ಎರಡು ಲಕ್ಷವನ್ನ ಹೇಗಾದರೂ ಮಾಡಿ ತಲುಪಿಸಬೇಕೆಂದಿದ್ದಾಳೆ.

ಭಾಗ್ಯಾಗೆ ಸಂಬಳ ಎಷ್ಟಿರಬಹುದು?

ಇನ್ನು ಭಾಗ್ಯಾಗೆ ಆಕೆಯ ಅತ್ತೆ ಎಷ್ಟು ಸಪೋರ್ಟಿವ್ ಆಗಿ ನಿಂತಿದ್ದಾಳೋ, ಅಷ್ಟೇ ಸಪೋರ್ಟಿವ್ ಆಗಿ ನಿಂತಿರುವುದು ವೀಕ್ಷಕರು. ಅವಳ ಪ್ರತಿಯೊಂದು ಕೆಲಸಕ್ಕೂ ಮುನ್ನುಗ್ಗು ಭಾಗ್ಯಾ ಅಂತಾನೇ ಧೈರ್ಯ ತುಂಬಿದ್ದಾರೆ. ವೀಕ್ಷಕರ ಆಶೀರ್ವಾದವೂ ಸೇರಿ ಭಾಗ್ಯಾಗೆ ಶೆಫ್ ಆಗಿ ಕೆಲಸ ಉಳಿದುಕೊಂಡಿದೆ. ಆದರೆ ಫೈವ್ ಸ್ಟಾರ್ ಹೊಟೇಲ್ ನಲ್ಲಿ ಸಂಬಳ ಎಷ್ಟು ಎಂಬುದೇ ಎಲ್ಲರಿಗೂ ಕಾಡುತ್ತಿರುವ ಪ್ರಶ್ನೆಯಾಗಿದೆ. ಅದರ ಜೊತೆಗೆ ಭಾಗ್ಯಾ ಗಂಡ ಮತ್ತೆ ಸರಿ ಹೋದರೆ, ಈಗಿರುವ ಕೆಲಸವನ್ನು ಬಿಟ್ಟು ಬಿಡುತ್ತಾಳಾ ಎಂಬ ಪ್ರಶ್ನೆಯೂ ಕಾಡುತ್ತಿದೆ. ಇಷ್ಟು ಕಷ್ಟಪಟ್ಟು ತೆಗೆದುಕೊಂಡ ಕೆಲಸವನ್ನು ಭಾಗ್ಯಾ ಬಿಟ್ಟು ಬಿಟ್ಟರೆ ಎಲ್ಲಾ ಶ್ರಮವೂ ನೀರಿನಲ್ಲಿ ಹುಣಸೇಹಣ್ಣು ತೊಳೆದಂತೆ ಆಗಿ ಬಿಡುತ್ತದೆ.

More from Filmibeat

English summary
Bhagyalakshmi kannada serial today episode. Here is the details about What is the salary of Bhagya who works in a five star hotel?;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X