Bhagyalakshmi: ಶ್ರೇಷ್ಠಾ ಕಳ್ಳಾಟ ಕುಸುಮಾ ಮುಂದೆ ಬಯಲು: ಹಬ್ಬ.. ಹಬ್ಬ ಮಾಡೋದೆ!
ಭಾಗ್ಯಾಳ ತಲೆ ಮೇಲೆ ಇರುವ ಹಣದ ಜವಾಬ್ದಾರಿ ಅಷ್ಟಿಷ್ಟಲ್ಲ. ಶ್ರೇಷ್ಠಾ ಸಾಲ, ಮನೆ ಇಎಂಐ, ಮಕ್ಕಳ ಶಾಲಾ ಶುಲ್ಕ,ಮನೆ ನಿಭಾಯಿಸುವುದು ಇದೆಲ್ಲವನ್ನು ನಿಭಾಯಿಸಬೇಕಾಗಿದೆ. ಆದರೆ ಭಾಗ್ಯಾಗೆ ಈಗ ಆ ಟೆನ್ಶನ್ ಇಲ್ಲ. ಗಂಡ ಡಿವೋರ್ಸ್ ಕೊಡ್ತೀನಿ ಎಂದಾಗ, ಮನೆಯ ಅರ್ಧ ಖರ್ಚು ಕೊಡಬೇಕು ಎಂದಾಗ ಏನು ಮಾಡಬೇಕು ಎಂಬುದೇ ಅರ್ಥವಾಗಲಿಲ್ಲ. ಎಲ್ಲಾ ಕಡೆ ಕೆಲಸಕ್ಕೆ ಅಲೆದಳು. ಸಿಕ್ಕ ಕೆಲಸವೂ ಕಳೆದುಕೊಳ್ಳುವ ಸ್ಥಿತಿಗೆ ಬಂದಳು. ಆದರೆ ಅತ್ತೆ ಕಲಿಸಿದ ಅಡುಗೆ ಇವತ್ತು ಕೈ ಹಿಡಿದಿದೆ. ಲಕ್ಷ ಲಕ್ಷ ಸಂಬಳ ಸಿಗುವಂತೆ ಆಗಿದೆ.
ಈ ಭಾಗ್ಯಾಳ ಸಂಭ್ರಮ ನೋಡುವುದಕ್ಕೇನೆ ಖುಷಿ. ಅದೆಷ್ಟು ಜನ ಮಹಿಳೆಯರು ಈ ದಿನಕ್ಕಾಗಿ ಕಾದಿದ್ದರೋ ಏನೋ. ತನ್ನ ಸ್ವಂತ ಹಣದಿಂದ ಇಷ್ಟವಾದ ತಿಂಡಿ ತಿಂದ್ಲು, ಮಕ್ಕಳಿಗೆ ಸ್ವೀಟ್ಸ್ ತೆಗೆದುಕೊಂಡ್ಲು. ಅದಕ್ಕಿಂತ ಮುಖ್ಯವಾಗಿ ಭಾಗ್ಯಾಳ ಮುಖದ ಮೇಲಿತ್ತಲ್ಲ ನಗು ಅದು ಅದು ತುಂಬಾನೇ ಚೆನ್ನಾಗಿ ಇದ್ದದ್ದು.

ಅಕ್ಕನಿಗೆ ಪೂಜಾ ಸಹಾಯ
ಇಷ್ಟು ದಿನ ಪೂಜಾ ಬೇಸರ ಮಾಡಿಕೊಳ್ಳುತ್ತಿದ್ದಳು. ತಾನೇ ಅಕ್ಕನ ಹಣ ಕದ್ದಿರುವುದು ಎಂದು ಗಿಲ್ಟ್ ಫೀಲ್‌ನಲ್ಲಿ ಇದ್ದಳು. ಆದರೆ ಶ್ರೇಷ್ಠಾನೆ ಈ ಕೆಲಸ ಮಾಡಿರುವುದು ಎಂದು ಗೊತ್ತಾದ ಮೇಲೆ ಪೂಜಾಗೆ ಆ ಸಾಲ ತೀರಿಸುವುದು ಸುಲಭವಾಯ್ತು. ಶ್ರೇಷ್ಠಾಳ ಒಡವೆಯನ್ನೆ ಅಡವಿಟ್ಟು ಎರಡು ಲಕ್ಷ ತಂದಿದ್ದಾಳೆ.
ಪೂಜಾ ಕಂಡು ಕುಸುಮಾ ಕ್ಲಾಸ್
ಪೂಜಾ ಕೈನಲ್ಲಿ ಈಗ ಹಣವೇನೋ ಇದೆ. ಆದರೆ ಅದನ್ನ ಭಾಗ್ಯಾಗೆ ತಲುಪಿಸುವುದು ಹೇಗೆ ಎಂಬುದೇ ದಾರಿ ಸಿಕ್ಕಿರಲಿಲ್ಲ. ನೇರವಾಗಿ ಕೊಟ್ಟರೆ ತೆಗೆದುಕೊಳ್ಳುವುದಿಲ್ಲ. ಹೀಗಾಗಿ ಪೂಜಾ ನಾಟಕ ಮಾಡಿದಳು. ಲಾಟರಿ ಹೊಡೆದಿದೆ ಎಂದು ಹೇಳು ಸುನಂದಾಳನ್ನು ಕರೆಸಿಕೊಂಡಿದ್ದಾಳೆ. ಸುನಂದಾ ಜೊತೆಗೆ ಕುಸುಮಾ ಕೂಡ ಬಂದಿದ್ದಾಳೆ. ಕುಸುಮಾಳನ್ನು ಕಂಡು ಆರಂಭದಲ್ಲಿ ಪೂಜಾ ಕೂಡ ಭಯ ಪಟ್ಟಳು. ಆದರೆ ಅಕ್ಕನಿಗೆ ಸಹಾಯ ಮಾಡಲೆಂದು ಮುಂದೆ ಹೋಗೆ ಬಿಟ್ಟಳು.
ಕುಸುಮಾ ಬಳಿ ಸತ್ಯ ಹೇಳಿದ ಪೂಜಾ
ಹೋಗಿ ಹೋಗಿ ಕುಸುಮಾ ಕೈಗೆ ಸಿಕ್ಕರೆ ಕೇಳಬೇಕಾ? ಯಾವುದೇ ಅವತಾರದಲ್ಲಿ ಬಂದರೂ ಕುಸುಮಾ ಕಂಡು ಹಿಡಿಯದೇ ಬಿಡಲ್ಲ. ಈಗ ಪೂಜಾಳನ್ನು ಕಂಡು ಹಿಡಿದಿದ್ದಾಳೆ. ಸಿಕ್ಕಿ ಬಿದ್ದಾಗ ಪೂಜಾಗೂ ಶಾಕ್ ಆಗಿತ್ತು. ಆದರೆ ಪೂಜಾ ಈ ರೀತಿಯ ವೇಷ ಹಾಕಿದ್ದು ಯಾಕೆ, ಸುಳ್ಳು ಹೇಳಿದ್ದು ಯಾಕೆ ಎಂಬುದನ್ನು ಹೇಳಿದ್ದಾಳೆ. ಅಂದು ಹಣ ಕದ್ದಿದ್ದು ಶ್ರೇಷ್ಠಾ. ಆ ಹಣವನ್ನೇ ಭಾಗ್ಯಾಗೆ ಕೊಟ್ಟಿದ್ದು ಎಂಬುದನ್ನು ಹೇಳಿದ್ದಾಳೆ.

ಕುಸುಮಾ ಬೈಗುಳಕ್ಕೆ ಫ್ಯಾನ್ಸ್ ಕಾತರ
ಮೊದಲೇ ಶ್ರೇಷ್ಠಾಳನ್ನು ಕಂಡರೆ ಆಗುವುದಿಲ್ಲ. ಮಗನ ಜೊತೆಗೆ ಕ್ಲೋಸ್ ಆಗಿದ್ದಾಗಲೇ ಬೈದು ಬುದ್ದಿ ಹೇಳಿದ್ದಾಳೆ. ಈಗ ಮದುವೆ ಫಿಕ್ಸ್ ಆಗಿದೆ ಎಂಬ ಕಾರಣಕ್ಕೆ ಸುಮ್ಮನೆ ಆಗಿದ್ದಾಳೆ. ಆದರೆ ಈಗ ಸೊಸೆಗೆ ಕಷ್ಟ ತಂದಿದ್ದಾಳೆ ಎಂದು ಗೊತ್ತಾಗಿದೆ. ಈಗ ಕುಸುಮಾ ಬಿಡ್ತಾಳಾ. ಪೂಜಾಳನ್ನು ಕರೆದುಕೊಂಡು ಆ ಮಿಟಕಲಾಡಿಗೆ ಗ್ರಹಚಾರ ಬಿಡಿಸುತ್ತೀನಿ ಅಂತ ಹೊರಟಿದ್ದಾಳೆ. ಕುಸುಮಾ ಕೈನಲ್ಲಿ ತಗಲಾಕಿಕೊಂಡರೆ ಕೇಳಬೇಕಾ. ಕುಸುಮಾ ಮುಂದೆ ನಿಂತು ಮಾತನಾಡುವುದಕ್ಕೇನೆ ಶ್ರೇಷ್ಠಾ ಹೆದರುತ್ತಾಳೆ.


Click it and Unblock the Notifications











