Bhagyalakshmi: ಅತ್ತೆಗೆ ಹೇಳದೇ ಸಾಲ, ಅತ್ತೆಗೆ ಹೇಳದೇ ಸಾಲ ತೀರಿಸಿ ಭಾಗ್ಯಾ ಪಶ್ಚಾತ್ತಾಪ!
ಲಕ್ಷ್ಮೀ ಕಂಡರೆ ಭಾಗ್ಯಾಗೆ ತುಂಬಾ ಪ್ರೀತಿ. ತನ್ನ ಅಮ್ಮ ಅವಳನ್ನು ನಡೆಸಿಕೊಳ್ಳುತ್ತಿದ್ದ ರೀತಿಗೆ ಭಾಗ್ಯಾಳ ವಿರೋಧವಿತ್ತು. ಲಕ್ಷ್ಮೀ ಇಡೀ ಮನೆಯನ್ನು ಒಂದು ಅಂಗಡಿ ನಡೆಸುವ ಮೂಲಕ ನಿಭಾಯಿಸುತ್ತಿದ್ದಳು. ಅವಳನ್ನು ಒಂದೊಳ್ಳೆ ಮನೆಗೆ ಮದುವೆ ಮಾಡಿ ಕಳುಹಿಸುವುದೇ ಭಾಗ್ಯಾಳ ಗುರಿಯಾಗಿತ್ತು. ಅದರಂತೆ ವೈಷ್ಣವ್ ಗೆ ಸಂಬಂಧ ಕೇಳಿದರು. ಅದಕ್ಕಿಂತ ಖುಷಿಯ ವಿಚಾರ ಭಾಗ್ಯಾಗೆ ಇರಲಿಲ್ಲ. ಯಾಕಂದ್ರೆ ತನ್ನ ಮೈದುನಾ ಏನು ಅಂತ ಚೆನ್ನಾಗಿಯೇ ಭಾಗ್ಯಾ ತಿಳಿದಿದ್ದಳು.
ಮದುವೆಯನ್ನು ಭಾಗ್ಯಾಳೇ ಮುಂದೆ ನಿಂತು ಮಾಡಿದಳು. ತನ್ನಲ್ಲಿರುವ ಒಡವೆಯನ್ನು ಅಡವಿಟ್ಟು, ಕೂಡಿಟ್ಟ ಹಣವನ್ನು ತಂದು ಮದುವೆ ಮಾಡಿದಳು. ಆದರೆ ಅಂದು ಪೂಜಾ ಮಾಡಿದ ಕೆಟ್ಟ ಕೆಲಸದಿಂದ ಎರಡು ಲಕ್ಷವನ್ನ ಕಳೆದುಕೊಂಡಳು ಭಾಗ್ಯಾ. ಅದೇ ಹಣವನ್ನು ಕದ್ದು ಶ್ರೇಷ್ಠಾ ಸಾಲವಾಗಿ ಭಾಗ್ಯಾಳಿಗೆ ನೀಡಿದಳು. ಆ ಸಮಯದಲ್ಲಿ ಅತ್ತೆಗೆ ಹೇಳದೆ ತಪ್ಪು ಮಾಡಿದ್ದ ಭಾಗ್ಯಾ, ಈಗ ಸಾಲ ವಾಪಾಸ್ ಕೊಡುವಾಗಲೂ ಸತ್ಯ ಹೇಳದೆ ಯಡವಟ್ಟು ಮಾಡಿಕೊಂಡಿದ್ದಾಳೆ.

ಶ್ರೇಷ್ಠಾ ಸಾಲ ತೀರಿಸಿದ ಭಾಗ್ಯಾ
ಭಾಗ್ಯಾಗೆ ಫೈವ್ ಸ್ಟಾರ್ ಹೊಟೇಲ್‌ನಲ್ಲಿ ಕೆಲಸವೇನೋ ಸಿಕ್ಕಿದೆ. ಈ ಕೆಲಸದಿಂದ ಭಾಗ್ಯಾಗೆ ಸಿಗುತ್ತಿರುವ ಸಂಬಳ ಒಂದು ಲಕ್ಷ. ಅಡ್ವಾನ್ಸ್ ಅಂತ ತೆಗೆದುಕೊಂಡ ಸ್ಯಾಲರಿಯಲ್ಲಿ ಭಾಗ್ಯಾ ಖುಷಿ ಖುಷಿಯಾಗಿ ಓಡಾಡಿದ್ದಾಳೆ. ಶ್ರೇಷ್ಠಾಳ ಅರ್ಧ ಸಾಲ ತೀರಿಸಿ ಬಂದಿದ್ದಾಳೆ. ಶ್ರೇಷ್ಠಾ ಮಾತ್ರ ಭಾಗ್ಯಾಳ ಮನೆಯವರನ್ನು ಮೂರ್ಖರನ್ನಾಗಿ ಮಾಡಿದ್ದಾಳೆ.
ಈಗಲೂ ಅತ್ತೆಗೆ ಸತ್ಯ ಹೇಳದ ಭಾಗ್ಯಾ
ಮದುವೆ ಸಮಯದಲ್ಲಿ ಎರಡು ಲಕ್ಷ ಹಣವನ್ನು ಶ್ರೇಷ್ಠಾ ಕೊಟ್ಟಿದ್ದು ಅಂತ ಭಾಗ್ಯಾ ಮನೆಯಲ್ಲಿ ಹೇಳಿಯೇ ಇರಲಿಲ್ಲ. ಶ್ರೇಷ್ಠಾ ಬಂದು ಮನೆಯಲ್ಲಿ ರಾದ್ಧಾಂತ ಮಾಡಿದಾಗಲೇ ಸತ್ಯ ಹೊರ ಬಂದಿದೆ. ಆಗಲೂ ಅತ್ತೆ ಯಾರ ಮುಂದೆಯೂ ಸೊಸೆಯನ್ನು ಬಿಟ್ಟು ಕೊಡಲಿಲ್ಲ. ಆದರೆ ಭಾಗ್ಯಾ ಇಷ್ಟಾದರೂ ಬುದ್ದಿ ಕಲಿಯದೆ, ಈಗ ಕೆಲಸ ಸಿಕ್ಕಿರುವುದನ್ನು ಹೇಳದೆ, ಶ್ರೇಷ್ಠಾಳ ಅರ್ಧ ಸಾಲ ತೀರಿಸಿರುವುದನ್ನು ಹೇಳದೆ, ಇಕ್ಕಟ್ಟಿನಲ್ಲಿ ಸಿಲುಕುತ್ತಾಳೆ ಎನಿಸುತ್ತಿದೆ.

ಬ್ಯಾಚುಲರ್ ಪಾರ್ಟಿಗೆ ಶ್ರೇಷ್ಠಾ ಸಜ್ಜು
ಇತ್ತ ಶ್ರೇಷ್ಠಾಗೆ ಡಬ್ಬಲ್ ಧಮಾಕ. ಅಡವಿಟ್ಟಿದ್ದ ಒಡವೆಗಳ ಹಣವೂ ಬಂತು, ಭಾಗ್ಯಾ ಕಡೆಯಿಂದ ಬಿಟ್ಟಿ ದುಡ್ಡು ಬಂತು. ಅದಕ್ಕೆಂದೆ ಇವತ್ತೆ ಪಾರ್ಟಿ ಇಟ್ಟುಕೊಂಡು ಬಿಟ್ಟಿದ್ದಾಳೆ. ಅದರಲ್ಲೂ ಇನ್ನು ಸ್ವಲ್ಪ ದಿನದಲ್ಲೇ ಮದುವೆ ಬೇರೆ ಆಗ್ತಾ ಇದಾಳೆ ಅಲ್ವಾ. ಹೀಗಾಗಿ ಬ್ಯಾಚುಲರ್ ಪಾರ್ಟಿಯನ್ನ ಮನೆಯಲ್ಲಿಯೇ ಅರೆಂಜ್ ಮಾಡಿದ್ದಾಳೆ. ಹಣ ಬಂದ ಖುಷಿಯಲ್ಲಿ ತೇಳುತ್ತಿದ್ದಾಳೆ. ಸುಂದ್ರಿಗೂ ಅದನ್ನೇ ಹೇಳಿ ಹೊಟ್ಟೆ ಉರಿಸಿದ್ದಾಳೆ.
ಪೂಜಾಳ ಕೆಂಗಣ್ಣಿಗೆ ಗುರಿ
ಮನೆಯಲ್ಲಿ ಪೂಜಾಳನ್ನು ಯಾರು ನಂಬದೇ ಇದ್ದ ಕಾರಣಕ್ಕೆ ಮನನೊಂದಿದ್ದಾಳೆ. ಸುಂದ್ರಿ ಜೊತೆಗೆ ಕೂತು ಆ ಬೇಸರವನ್ನು ಹೊರ ಹಾಕುತ್ತಿದ್ದಾಳೆ. ಅಷ್ಟರಲ್ಲಿ ಒಳಗಿನಿಂದ ಪಾರ್ಟಿ ಸೌಂಡ್ ಬಂದಿದ್ದು, ಪೂಜಾಳಿಗೆ ಇನ್ನು ಪಿತ್ತ ನೆತ್ತಿಗೇರಿಸಿದೆ. ಒಳಗೆ ಹೋಗಿ ನೋಡಿದರೆ ಎಲ್ಲರೂ ಬ್ಯಾಚುಲರ್ ಪಾರ್ಟಿ ಮಾಡುತ್ತಿದ್ದರು. ಅಕ್ಕನ ಜೀವನ ಹಾಳಾಗುತ್ತಿದ್ದರೆ ಇಲ್ಲಿ ಪಾರ್ಟಿ ಮಾಡುವುದನ್ನು ಪೂಜಾ ಸಹಿಸುತ್ತಾಳಾ..? ಪಾರ್ಟಿ ನಡೆಯುತ್ತಿದ್ದ ಜಾಗಕ್ಕೆ ಹೋಗಿ ಕಿರುಚಾಡಿದ್ದಾಳೆ. ಬಾವನನ್ನು ಇಟ್ಟುಕೊಂಡವಳು ಅಂತೆಲ್ಲಾ ಫ್ರೆಂಡ್ಸ್ ಮುಂದೇನೆ ಹೇಳಿ ಮರ್ಯಾದೆ ಕಳೆದಿದ್ದಾಳೆ.


Click it and Unblock the Notifications











