Bhagyalakshmi: ಈ ದಿನಕ್ಕೋಸ್ಕರ ಎಷ್ಟು ಕಾದಿದ್ದು ; ಭಾಗ್ಯ ಈ ಸಲ ಯಾಮಾರಬೇಡ!
ಶ್ರೇಷ್ಠಾ ಆಟ ದಿನದಿಂದ ದಿನಕ್ಕೆ ಮಿತಿಮೀರುತ್ತಿದೆ. ಕೋತಿ ತಾನು ಕೆಡುವುದಲ್ಲದೆ ವನವನ್ನೆಲ್ಲ ಕೆಡಿಸಿತು ಎಂಬ ಗಾದೆ ಮಾತಿದೆ. ಅದೇ ಥರ ಶ್ರೇಷ್ಠಾ ಕೂಡ. ತಾಂಡವ್ ಮೊದಲಾದರೆ ಪೂಜಾಗಾದ್ರೂ ಹೆದರುತ್ತಾ ಇದ್ದ. ಮನೆಯಲ್ಲಿ ವಿಚಾರ ಗೊತ್ತಾದ್ರೆ ಏನು ಮಾಡೋದು ಎಂಬ ಭಯದಲ್ಲಿ ಇದ್ದ. ಆದರೆ ಶ್ರೇಷ್ಠಾ ಅದ್ಯಾವಾಗ ಅವಳಿಗ್ಯಾಕೆ ಹೆದರುತ್ತೀಯ ಅಂತ ಹೇಳಿದ್ದೇ ತಡ, ಪೂಜಾ ಮಾತಿಗೂ ತಾಂಡವ್ ಸೊಪ್ಪು ಹಾಕುತ್ತಿಲ್ಲ.
ಡೈವರ್ಸ್ ಸಿಗದೇನೆ ಮದುವೆ ಆಗಲು ಎಲ್ಲಾ ತಯಾರಿಯನ್ನು ಮಾಡಿಕೊಂಡಿದ್ದಾನೆ. ಧೈರ್ಯವಾಗಿ ಲಗ್ನ ಪತ್ರಿಕೆಯನ್ನೇ ರೆಡಿ ಮಾಡಿದ್ದಾನೆ. ಜೊತೆಗೆ ತಾಳಿಯನ್ನು ಕೊಂಡುಕೊಂಡಿದ್ದಾನೆ. ಪೂಜಾಗೆ ಈಗ ಎಲ್ಲಾ ದಾರಿಗಳು ಮುಚ್ಚಿವೆ. ಭಾಗ್ಯಾಳೆ ಮುಂದೆ ಬರಬೇಕಾಗಿದೆ. ಮದುವೆ ನಡೆಯುವುದಕ್ಕಂತೂ ಭಾಗ್ಯಾ ಬಿಡಲ್ಲ. ಆದರೆ ಆ ಮದುವೆ ನಿಲ್ಲಿಸುವ ದೃಶ್ಯ ನೋಡುವುದಕ್ಕೆ ಎಲ್ಲರೂ ಕಾಯ್ತಾ ಇದ್ದಾರೆ.

ಭಾಗ್ಯಾಳ ಹಣದಲ್ಲಿ ಬ್ಯಾಚುಲರ್ ಪಾರ್ಟಿ
ಭಾಗ್ಯಾ ಪಾಪ ತಾನು ಕಷ್ಟಪಟ್ಟು ದುಡಿದ ಹಣವನ್ನೆಲ್ಲಾ ತಂದು ಶ್ರೇಷ್ಠಾಳಿಗೆ ಸುರಿದಿದ್ದಾಳೆ. ಅಂದು ಏನೋ ನಿಜವಾಗಲೂ ಸಹಾಯ ಮಾಡಿದಳು ಎಂದೇ ಭಾವಿಸಿದ್ದಾಳೆ. ಹೀಗಾಗಿ ಇನ್ನೊಂದು ಲಕ್ಷವನ್ನು ಆದಷ್ಟು ಬೇಗ ಕೊಡ್ತೀನಿ ಅಂತ ಹೇಳಿ ಹೋಗಿದ್ದಾಳೆ. ಭಾಗ್ಯ ಕೊಟ್ಟ ಹಣದಲ್ಲಿ ಭರ್ಜರಿಯಾಗಿ ಬ್ಯಾಚುಲರ್ ಪಾರ್ಟಿ ಮಾಡುತ್ತಿದ್ದಾಳೆ. ಇದನ್ನ ಕಂಡು ಉರಿದು ಬಿದ್ದ ಪೂಜಾಗೆ ಟಾಂಗ್ ರೀತಿಯೇ ಶ್ರೇಷ್ಠಾ ಉತ್ತರ ಕೊಟ್ಟಿದ್ದಾಳೆ.
ಸತ್ಯ ಒಪ್ಪಿಕೊಂಡ ಪೂಜಾ
ಇದನ್ನೆಲ್ಲಾ ನೋಡಿದ ಪೂಜಾ, ನೇರ ಮನೆಗೆ ಬಂದು ಭಾಗ್ಯಾಳ ಬಳಿ ಕ್ಷಮೆ ಕೇಳಿದ್ದಾಳೆ. ಆ ಹಣ ಕದ್ದಿದ್ದು ನಾನೇ ಎಂದು ಒಪ್ಪಿಕೊಂಡಿದ್ದಾಳೆ. ಕುಸುಮಾಳಿಗೆ ಅದಾಗಲೇ ಗೊತ್ತಿದ್ದ ಕಾರಣ ಸುಮ್ಮನೆ ಆಗಿದ್ದಾಳೆ. ಆದರೆ ಮಕ್ಕಳಿಗೆ ಕೋಪ ಬಂದಿದೆ. ಅಮ್ಮನಿಗೆ ಕಷ್ಟ ಆಗಬಾರದು ಅಂತ ಶಾಲೆಯ ಫೀಸ್ ಅನ್ನೇ ಕೇಳಿಲ್ಲ. ಈಗ ಪೂಜಾ ಚಿಕ್ಕಿ ಈ ರೀತಿ ಮಾಡಿದರೆ ಮಕ್ಕಳು ಸಹಿಸುತ್ತಾರಾ. ಆದರೆ ಪೂಜಾ ಅಕ್ಕನ ಕಾಲಿಗೆ ಬಿದ್ದು, ನಾನು ತೆಗೆದುಕೊಂಡ ಹಣವನ್ನು ಶ್ರೇಷ್ಠಾ ನಿಂಗೆ ಕೊಟ್ಟಿದ್ದಾಳೆ ಎಂದಿದ್ದಾಳೆ.

ಶ್ರೇಷ್ಠಾಗೆ ಬುದ್ದಿ ಕಲಿಸಲು ಸಿದ್ಧ
ಭಾಗ್ಯಾಳಿಗೆ ಕೊಂಚ ಕೋಪ ಬಂದಿದೆ. ಪೂಜಾಳ ಮಾತನ್ನು ನಂಬಿದ್ದಾಳೆ. ಕಷ್ಟಪಟ್ಟು ದುಡಿದ ಹಣವನ್ನು ಬೇರೆ ಕೊಟ್ಟು ಬಂದಿದ್ದಾಳೆ. ಇದೆಲ್ಲವನ್ನು ಮತ್ತಷ್ಟು ಕೋಪ ತರಿಸಿದೆ. ಶ್ರೇಷ್ಠಾ ಏನಾದರೂ ಈ ರೀತಿ ನಾಟಕವಾಡುತ್ತಿದ್ದರೆ ಖಂಡಿತ ಅವಳನ್ನು ಬಿಡುವುದಿಲ್ಲ ಎಂದೇ ತೀರ್ಮಾನ ಮಾಡಿದ್ದಾಳೆ. ಅಂಥ ಘಾಟಿ ಅತ್ತೆಯನ್ನೇ ಯಾಮಾರಿಸಿದ ಶ್ರೇಷ್ಠಾಗೆ, ಸಾಫ್ಟ್ ಸೊಸೆಯನ್ನು ಯಾಮಾರಿಸುವುದು ಕಷ್ಟನಾ. ನೋ ವೇ.. ಚಾನ್ಸೇ ಇಲ್ಲ.
ಭಾಗ್ಯಾ ಕಂಡು ದಂಗಾದ ತಾಂಡವ್
ಭಾಗ್ಯಾ ಅದೇ ಕೋಪದಲ್ಲಿ ಶ್ರೇಷ್ಠಾಳನ್ನು ಹುಡುಕಿಕೊಂಡು ಹೊರಟಿದ್ದಾಳೆ. ಶ್ರೇಷ್ಠಾ ಹಾಗೂ ತಾಂಡವ್ ಪ್ರಿವೆಡ್ಡಿಂಗ್ ಫೋಟೋಶೂಟ್ ನಡೆಯುವ ಜಾಗಕ್ಕೆ ಭಾಗ್ಯಾ ಎಂಟ್ರಿ ಕೊಟ್ಟಿದ್ದಾಳೆ. ನಿಮ್ಮ ಮನೆಯವರಿಗೆ ಗೊತ್ತೆ ಆಗದ ಜಾಗಕ್ಕೆ ಕರೆದುಕೊಂಡು ಹೋಗ್ತೀನಿ. ದೂರ ಇರುತ್ತೆ ಫೋಟೋಶೂಟ್ ಅಂತ ಹೇಳಿದ್ದ ಶ್ರೇಷ್ಠಾ, ಈಗ ತಾಂಡವ್ ನ ತಗಲಾಕಿಸುವ ಕಾರ್ಯಕ್ರಮ ಫಿಕ್ಸ್ ಮಾಡಿಕೊಂಡಿದ್ದಾಳೆ. ಅದರಲ್ಲೂ ಹೂವೆಲ್ಲಾ ಚೆಲ್ಲಿ, ರೊಮ್ಯಾಂಟಿಕ್ ಫೋಟೋಶೂಟ್ ಮಾಡಿಸಿಕೊಳ್ಳುತ್ತಿದ್ದರು. ಆ ಹೂ ಈಗ ಭಾಗ್ಯಾಳ ಮೇಲೆ ಬಿದ್ದಿದೆ. ಅಷ್ಟು ಸುಲಭದಲ್ಲಿ ಭಾಗ್ಯಾ ಕಣ್ಣಿಗೆ ಇಬ್ಬರು ಬೀಳಲ್ಲ ಬಿಡಿ.


Click it and Unblock the Notifications











