Bhagyalakshmi: ಕುಸುಮಾ ಕೆಲಸ ಮಾಡುವುದು ತಾಂಡವ್ ಮುಂದೆ ಬಯಲು; ವೀಕ್ಷಕರು ಗರಂ!

By ಎಸ್ ಸುಮಂತ್

'ಭಾಗ್ಯಲಕ್ಷ್ಮೀ' ಧಾರಾವಾಹಿಯಲ್ಲಿ ತಾಂಡವ್ ಅದೆಷ್ಟು ಮೊಂಡ ಆಗಿದ್ದಾನೆ ಎಂದರೆ ಈಗ ತಾಯಿಯ ಕಣ್ಣೀರಿಗೂ ಕರಗಲ್ಲ, ಮಕ್ಕಳ ನೋವಿಗೂ ತಲೆಕೆಡಿಸಿಕೊಳ್ಳುತ್ತಿಲ್ಲ. ಮಕ್ಕಳು ಪರಿಪರಿಯಾಗಿ ಬೇಡಿಕೊಂಡಿದ್ದಾರೆ. ನಮಗೆ ಇಬ್ಬರು ಬೇಕು ಎಂದಿದ್ದಾರೆ. ಆದರೂ ಭಾಗ್ಯಾ ಬೇಡ, ನಾನೇ ನಿಮಗೆಲ್ಲಾ ಅಂತ ಹೇಳುತ್ತಲೇ ಬರುತ್ತಿದ್ದಾನೆ. ಒಟ್ನಲ್ಲಿ ಭಾಗ್ಯಳಿಗೆ ಡಿವೋರ್ಸ್ ಕೊಡಬೇಕು, ಶ್ರೇಷ್ಠಾಳನ್ನು ಮದುವೆಯಾಗಬೇಕು.

ಕುಸುಮಾಗೆ ಮಗ-ಸೊಸೆ ಸರಿ ಹೋಗಬೇಕು ಎಂಬುದೇ ಆಸೆ. ಅದಕ್ಕಾಗಿಯೇ ಇಷ್ಟು ದಿನ ಸೊಸೆಯ ಪರವಾಗಿ ನಿಂತಿದ್ದಳು. ಆದರೆ ಈಗಲೂ ತಾಂಡವ್ ತನ್ನ ನಿರ್ಧಾರವನ್ನು ಬದಲು ಮಾಡಿಲ್ಲ. ಈಗಲೂ ಡಿವೋರ್ಸ್ ಕೊಡುವುದೇ ತನ್ನ ನಿರ್ಧಾರ ಎಂದಿದ್ದಾನೆ. ಡಿವೋರ್ಸ್ ನೋಟೀಸ್ ಮತ್ತೊಮ್ಮೆ‌ಕಳುಹಿಸಿ ಮನೆಯವರ ಮನಸ್ಸಿಗೆ ನೋವುಂಟು ಮಾಡಿದ್ದಾನೆ. ಇದೀಗ ಕುಸುಮಾ ತನ್ನ ಸ್ವಾಭಿಮಾನವನ್ನೆಲ್ಲಾ ಪಣಕ್ಕಿಟ್ಟು ಸೆರಗೊಡ್ಡಿ ಕೇಳಿದರೂ ತಾಂಡವ್ ಬದಲಾಗಿಲ್ಲ.

colors kannada serial Bhagyalakshmi Written Update on June 1st episode

ನಾಳೆಯೇ ಹಣ ಬೇಕೆಂದ ಶ್ರೇಷ್ಠಾ

ಮಗನ ಬಳಿ ಸೆರಗೊಡ್ಡಿ ಕೇಳಿದಾಗಲೂ ಮಗನ ನಿರ್ಧಾರ ಬದಲಾಗಲಿಲ್ಲ. ಡಿವೋರ್ಸ್ ಕೊಡುವುದು ಒಂದೇ ಕೊನೆಯ ನಿರ್ಧಾರ ಎಂದು ಹೇಳಿದ್ದಾನೆ. ಬೆಳಗ್ಗೆ ಎದ್ದು ಅದನ್ನೇ ಯೋಚನೆ ಮಾಡುವಾಗಲೇ ಭಾಗ್ಯಾಳ ನಂಬರ್ ಗೆ ಶ್ರೇಷ್ಠಾ ಕಾಲ್ ಬರುತ್ತೆ. ಹಣದ ವಿಚಾರ ಏನಾಯ್ತು. ನಾಳೆಯೇ ಹಣ ಬೇಕು ಭಾಗ್ಯಾ ಅಂತ ಹೇಳಿ ಫೋನ್ ಇಡುತ್ತಾಳೆ‌.

ಇಎಂಐ ಹಣ ಕೇಳಿದ ತಾಂಡವ್

ಶ್ರೇಷ್ಠಾ ಕಾಲ್ ಮಾಡಿದ್ದು ತಾಂಡವ್‌ಗೂ ಕೇಳಿಸುತ್ತೆ. ಎಂಥ ಸಮಯದಲ್ಲಿ ಕಾಲ್ ಮಾಡಿದೆ ಶ್ರೇಷ್ಠಾ, ಹೀಗೆ ದುಡ್ಡಿನ ವಿಚಾರಕ್ಕೆ ಭಾಗ್ಯಾ ಒದ್ದಾಡಬೇಕು ಅಂತಾನೇ ಹೇಳುತ್ತಾನೆ. ಅದೇ ಸಮಯಕ್ಕೆ ಮನೆಯವರ ಎದುರು ಬಂದು ಬ್ರೇಕಿಂಗ್ ನ್ಯೂಸ್ ಇದೆ ನಿಮಗೆಲ್ಲಾ ಎಂದಿದ್ದಾನೆ. ಪ್ರತಿ ತಿಂಗಳು ಇಎಂಐ ಕಟ್ಟುತ್ತೀನಿ ಅಂತ ಹೇಳುತ್ತಿದ್ದಲ್ಲ ಭಾಗ್ಯಾ ಮೇಡಂ, ನಾಳೆಯೇ ಇಎಂಐ ಕಟ್ಟಬೇಕಾದ ದಿನ ಅಂತ ಹೇಳಿ ಮತ್ತೆ ಹೆದರಿಸಿದ್ದಾನೆ.

colors kannada serial Bhagyalakshmi Written Update on June 1st episode

ಅಮ್ಮನ ಫಾಲೋ ಮಾಡಿದ ಮಗ

ಎಲ್ಲವೂ ಮುಗಿದು, ಕುಸುಮಾ ಮತ್ತು ಭಾಗ್ಯಾ ಕೆಲಸಕ್ಕೆ ತಯಾರಾಗುತ್ತಾರೆ. ಕುಸುಮಾ ಆಟೋದಲ್ಲಿ ಹೋಗುತ್ತಿದ್ದನ್ನು ನೋಡಿದ್ದಾನೆ. ಅಮ್ಮ ಯಾಕೆ ಆಟೋದಲ್ಲಿ ಹೋಗುತ್ತಿದ್ದಾರೆಂದು ಫಾಲೋ ಮಾಡಿಕೊಂಡು ಬಂದಾಗ ಸತ್ಯ ಬಯಲಾಗಿದೆ. ಅಮ್ಮ ಹೊಟೇಲ್ ಒಳಗೆ ಹೋಗಿ, ಕೆಲಸಕ್ಕೆ ತಯಾರಾಗಿ ಹೊರಗೆ ಬಂದಿದ್ದಾರೆ. ಹಾಲು ಕಾಯಿಸುವುದನ್ನು ನೋಡಿ ದಂಗಾಗಿದ್ದಾನೆ. ಅಮ್ಮ ಸೆರಗೊಡ್ಡಿ ಬೇಡಿಕೊಂಡರೂ ಬದಲಾಗದ ತಾಂಡವ್ ಈಗ ಅಮ್ಮ ಕೆಲಸಕ್ಕೆ ಹೋದರೆ ಸಹಿಸಿಕೊಳ್ಳುತ್ತಾನಾ ಎಂಬ ಪ್ರಶ್ನೆ ಬಂದರೂ, ತಾಂಡವ್ ಇನ್ನು ಬದಲಾಗುವುದು ಅನುಮಾನ ಎಂದೇ ವೀಕ್ಷಕರು ನಿರ್ಧಾರಕ್ಕೆ ಬಂದಿದ್ದಾರೆ.

ತಾಂಡವ್ ಬೈಗುಳದ ಸುರಿಮಳೆ

ತಾಂಡವ್ ನಡವಳಿಕೆಗೆ, ಕುಸುಮಾ ಸ್ಥಿತಿಗೆ ಧಾರಾವಾಹಿ ನೋಡುವ ತಾಯಂದಿರು ಮರುಗುತ್ತಿದ್ದಾರೆ. ತಾಂಡವ್‌ಗೆ ಮನಸ್ಸಿಗೆ ಬಂದಂತೆ ಬೈಯ್ಯುತ್ತಿದ್ದಾರೆ. 'ಇಂತ ದರಿದ್ರ ಮಗ ಇದ್ರು ಒಂದೇ ಸತ್ರು ಒಂದೇ, ಅಯ್ಯೋ ನಿನ್ ಮಗ ಮುಚ್ಚ, ಹೆತ್ತ ತಾಯಿಗೆ ಅಷ್ಟೊಂದು ಹೊಟ್ಟೆ ಉರಿಸಬೇಡ. ಒಳ್ಳೆಯದು ಅಲ್ಲ ಮಂಗಣ್ಣ, ಈಗಲಾದರೂ ಬುದ್ದಿ ಕಲಿ. ಅವರು ಒಳ್ಳೆಯವರಾಗಿರುವುದಕ್ಕೆ ಇಂಥ ಮಗ ಹುಟ್ಟಿದ್ದಾನೆ.. ಅಥವಾ ಇಂಥ ಮಗ ಹುಟ್ಟಿರೋದಕ್ಕೆ ಒಳ್ಳೆಯವರಾಗಿರೋದಾ' ಎಂದೆಲ್ಲಾ ಕಮೆಂಟ್ ಗಳನ್ನು ಹಾಕುತ್ತಿದ್ದಾರೆ. ಅದರಲ್ಲೂ ತಾಂಡವ್‌ಗೆ ಕಮೆಂಟ್ ಗಳ ಮೂಲಕವೇ ಶಾಪದ ಸುರಿಮಳೆ ಬರುತ್ತಿದೆ.

More from Filmibeat

English summary
Colors kannada serial Bhagyalakshmi today episode. Here is the details about Tandav was cursed by the audience;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X