Bhagyalakshmi: ಎಮ್ಮೆ, ದಡ್ಡಿ ಅಂತ ಬೈಯ್ಯುವ ತಾಂಡವ್‌ಗೆ ಭಾಗ್ಯಾ ಎದುರು ಬಂದ್ರೆ ಮೀಟ್ರೇ ಆಫ್!
ತಾಂಡವ್‌ಗೆ ಭಾಗ್ಯಾ ಕಂಡರೆ ಆಗುತ್ತಿಲ್ಲ. ಭಾಗ್ಯಾ ಅಂದ್ರೆ ಶತ ದಡ್ಡಿ, ಎಮ್ಮೆ ಅಬ್ಬಬ್ಬಾ ಭಾಗ್ಯಳ ವಿಚಾರ ಬಂದಾಗ ತಾಂಡವ್ ಆಡುವ ಮಾತು ಒಂದೊಂದಲ್ಲ. ಭಾಗ್ಯಾಳ ಮುಂದೆಯೇ ಇಂತವೇ ಮಾತುಗಳನ್ನು ಆಡಿ ಅದೆಷ್ಟು ಮನಸ್ಸು ನೋಯಿಸಿದ್ದಾನೋ ಗೊತ್ತಿಲ್ಲ. ಭಾಗ್ಯಾಳಿಗೆ ಹಾಕಿಸಿದ ಕಣ್ಣೀರಿಗೆ ಲೆಕ್ಕವೇ ಇಲ್ಲ. ಆದರೂ ಭಾಗ್ಯಾ ಶಾಪ ಹಾಕಲಿಲ್ಲ. ಗಂಡನಿಗೆ ಒಳ್ಳೆಯದ್ದನ್ನೇ ಬಯಸಿದ್ದಳು.
ಈಗ ತಾಂಡವ್ ಆಟ ಮಿತಿಮೀರಿದೆ. ಅಪ್ಪ-ಅಮ್ಮನ ಕಣ್ಣೀರಿಗೂ ಕರಗದಂತ ಕಲ್ಲು ಬಂಡೆಯಾಗಿದ್ದಾನೆ. ಅಮ್ಮ ಸೆರಗೊಡ್ಡಿ ಕೇಳಿದರೂ ತಾಂಡವ್ ಮನಸ್ಸು ಬದಲಾಗಲಿಲ್ಲ. ಭಾಗ್ಯಾಳನ್ನು ಮನೆಯಿಂದ ಹೊರಗೆ ಕಳುಹಿಸಬೇಕು ಎಂದು ಈಗ ಹಣದ ಭೂತವಾಗಿದ್ದಾನೆ. ಆದರೆ ಗಟ್ಟಿಗಿತ್ತಿ ಭಾಗ್ಯಾ ಅದ್ಯಾವುದಕ್ಕೂ ಬಗ್ಗದೆ ಕೆಲಸಕ್ಕೆ ಸೇರಿ ಆಗಿದೆ. ಇದೇ ದಡ್ಡಿ, ಎಮ್ಮೆಯೇ ಗಂಡನ ನೇರಕ್ಕೆ ಸಂಬಳ ತೆಗೆದುಕೊಳ್ಳುತ್ತಿದ್ದಾಳೆ.

ಭಯಕ್ಕೆ ಅಡ್ರೆಸ್ ಹೇಳಿದ ಸುಂದ್ರಿ
ಪೂಜಾ ಹೇಳಿದ ಮಾತನ್ನು ಮನೆಯವರು ನಂಬದೆ ಹೋದರೂ ತಂಗಿ ಮೇಲೆ ಭಾಗ್ಯಾಗೆ ನಂಬಿಕೆ ಇದೆ. ಹೀಗಾಗಿ ಪೂಜಾ ಹೇಳಿದ ಮಾತು ಆಲಿಸಿದ ಭಾಗ್ಯಾಗೆ ಶ್ರೇಷ್ಠಾ ಮೇಲೆ ಕೋಪ ಬಂತು. ಅಷ್ಟೇ ಅಲ್ಲ, ತಾನು ಕಷ್ಟಪಟ್ಟು ದುಡಿದ ಹಣವನ್ನು ಅವಳ ಕೈಗಿತ್ತು ಬಂದಿದ್ದ ಕೋಪವಿತ್ತು. ಮನೆಗೆ ಹೋದ ಭಾಗ್ಯಾಗೆ ಶ್ರೇಷ್ಠಾ ಸಿಗಲಿಲ್ಲ. ಬಾಗಿಲು ಹಾಕಿಕೊಂಡಿದ್ದ ಸುಂದ್ರಿಗೆ ಒಂದೇ ಅವಾಜ್ ಹೆದರಿ, ಅಡ್ರೆಸ್ ಹೇಳಿ ಬಿಟ್ಟಳು.
ಫೋಟೋಶೂಟ್‌ನಲ್ಲಿ ಶ್ರೇಷ್ಠಾ ಕನಸು
ತಾಂಡವ್ ಜೊತೆಗೆ ಮದುವೆಗೆ ತಯಾರಿ ನಡೆಸಿರುವ ಶ್ರೇಷ್ಠಾ, ಫೋಟೋಶೂಟ್‌ನಲ್ಲೂ ಜೋರಾಗಿ ಮಿಂಚುತ್ತಿದ್ದಾಳೆ. ರೊಮ್ಯಾಂಟಿಕ್ ಆಗಿ ಬರುವ ಸೀನ್ ಬಗ್ಗೆ ಫೋಟೋಗ್ರಾಫರ್ ಹೇಳಿದ ಕೂಡಲೇ ಶ್ರೇಷ್ಠಾ ಕನಸಿನ ಲೋಕಕ್ಕೆ ಜಾರಿದ್ದಳು. ಇನ್ನೊಂದು ಐದು ನಿಮಿಷ ಅಲ್ಲಿಯೇ ನಿಂತಿದ್ದರೆ ಶ್ರೇಷ್ಠಾಳ ಜೊತೆಗೆ ತಾಂಡವ್ ಗ್ರಹಚಾರವೂ ಬಿಡುತ್ತಿತ್ತು. ಆದರೆ ಮೇಕಪ್ ಕಡೆಗೆ ಗಮನ ಕೊಟ್ಟ ಶ್ರೇಷ್ಠಾ ಅಲ್ಲಿಂದ ಕಾಲ್ಕಿತ್ತಿದ್ದಳು.

ಮುಂದೆ ಹೋಗುವುದಕ್ಕೆ ಗಢಗಢ
ಶ್ರೇಷ್ಠಾ ರೆಡಿಯಾಗಿ ಬರುವುದಕ್ಕೂ ಮುನ್ನ ತಾಂಡವ್ ಪ್ರಾಕ್ಟೀಸ್ ಮಾಡುತ್ತಿದ್ದ. ಬೊಕ್ಕೆ ಹಿಡಿದು ಬರುವುದು ಹೇಗೆ, ಪ್ರಪೋಸ್ ಮಾಡುವುದು ಹೇಗೆ ಎಂಬುದನ್ನು ಪ್ರಾಕ್ಟೀಸ್ ಮಾಡುತ್ತಿದ್ದ. ಹೂಗಳ ಸುರಿಮಳೆ ಸುರಿಯುತ್ತಿದ್ದಂತೆ ಶ್ರೇಷ್ಠಾ ಜಾಗದಲ್ಲಿ ಭಾಗ್ಯಾ ಹೆಜ್ಜೆ ಹಾಕಿದ್ದಳು. ತಲೆ ಎತ್ತಿ ನೋಡಿದ ತಾಂಡವ್ ಗೆ ಎದೆ ಬಡಿತ ಜೋರಾಗಿತ್ತು, ಏನು ಮಾಡಬೇಕೆಂಬುದು ಕಾಣದೆ ಕಂಗಲಾಗಿದ್ದ. ತಕ್ಷಣ ಭಾಗ್ಯಾಳ ಕಣ್ಣಿಗೆ ಕಾಣದೇ ಮರೆಮಾಚಿ ಕೂತಿದ್ದಾನೆ. ಭಾಗ್ಯಾಳನ್ನು ಬಾಯಿಗೆ ಬಂದಂತೆ ಬೈಯ್ಯುವ ತಾಂಡವ್ ಭಾಗ್ಯಾ ಎದುರು ಸತ್ಯ ಒಪ್ಪಿಕೊಳ್ಳುವಷ್ಟು ಧಮ್ ಇಲ್ಲ.
ಇದೇ ಜಾಗದಲ್ಲಿ ತಾಂಡವ್ ಸಿಕ್ಕರೆ?
ಭಾಗ್ಯಾಳ ಟಾರ್ಗೆಟ್ ಇದ್ದದ್ದು ಶ್ರೇಷ್ಠಾ. ಹೀಗಾಗಿ ಆ ಕಡೆ ಈ ಕಡೆ ನೋಡದೆ ನೇರ ಶ್ರೇಷ್ಠಾಳ ಬಳಿ ಹೋದಳು. ಶ್ರೇಷ್ಠಾ ಕೂಡ ಭಾಗ್ಯಾಳನ್ನು ಕಂಡು ಅಕ್ಷರಶಃ ನಿಬ್ವೆರಗಾದಳು. ಶ್ರೇಷ್ಠಾಳಿಗೆ ಮಾತು ಆಡುವುದಕ್ಕೆ ಬಿಡದಂತೆ ಪಟ್ ಪಟ್ ಅಂತ ಬಾರಿಸಿಯೇ ಬಿಟ್ಟಳು. ಜೋರು ಧ್ವನಿ ಎತ್ತಿದಾಗಲೂ ಮತ್ತೊಂದು ಬಿತ್ತು. ಹಣದ ವಿಚಾರಕ್ಕೆ ಹಿಂಗೆ ಬಾರಿಸಿದ್ದಾಳೆ. ಇನ್ನು ಗಂಡನ ಜೊತೆಗೆ ಫೋಟೋಶೂಟ್ ನೋಡಿದರೆ ಇನ್ನೇಗೆ ಬಾರಿಸುತ್ತಾಳೋ ಏನೋ.


Click it and Unblock the Notifications











