Bhagyalakshmi: ಧಾರಾವಾಹಿ ಅಂದ್ರೆ ಹಿಂಗಿರಬೇಕು; ಭಾಗ್ಯಾ ಮಗನ ಜೊತೆ ಶಿಳ್ಳೆ ಹಾಕಿದ ವೀಕ್ಷಕರು

By ಎಸ್ ಸುಮಂತ್

ಹೆಣ್ಣು ತಾಳ್ಮೆಯಿಂದ ಇದ್ದರೆ ಅದು ಅವರ ವೀಕ್ನೆಸ್ ಅಲ್ಲ. ಮನೆಯವರಿಗಾಗಿ ತಾಳ್ಮೆಯಿಂದ ಇದ್ದರೆ ಅದನ್ನ ನೋಡಿ ಖುಷಿ ಪಡಬೇಕು. ಅದನ್ನು ಬಿಟ್ಟು ಅವಳ ತಾಳ್ಮೆಯನ್ನು ಕೆಣಕಿದರೆ ಕಾಳಿ ಕೂಡ ಆಗುತ್ತಾಳೆ ಎಂಬುದನ್ನು ಭಾಗ್ಯಾ ಮತ್ತೆ ಸಾಬೀತು ಮಾಡಿದ್ದಾಳೆ. ಗಂಡ ಎಂಬ ಅರ್ಥಕ್ಕೆ ಗೌರವ ಕೊಡುತ್ತಿದ್ದ ಭಾಗ್ಯಾಳಿಂದ ನೀವ್ಯಾರು ಎನ್ನಿಸಿಕೊಂಡಿದ್ದು ತಾಂಡವದ ನಡವಳಿಕೆ.

ನಿಜ ಜೀವನಕ್ಕೂ ಹಾಗೂ ಧಾರಾವಾಹಿಗೂ ಬಹಳ ವ್ಯತ್ಯಾಸವೇನು ಇಲ್ಲ. ಧಾರಾವಾಹಿಯ ಕಥೆಗಳು ಎಷ್ಟೋ ಜನರ ನಿಜ ಜೀವನದಲ್ಲಿ ನಡೆದಿರುತ್ತದೆ. ಅದೆಷ್ಟೋ ಸೊಸೆಯಂದಿರಿಗೆ ಒಳ್ಳೆಯ ಅತ್ತೆ ಸಿಕ್ಕಿರುವುದಿಲ್ಲ. ಕುಸುಮಾಳ ತಂಗಿ ಕಾವೇರಿಯಂತ ಅತ್ತೆ ಸಿಕ್ಕಿರುತ್ತಾಳೆ‌. ಹೀಗಾಗಿ ಕುಸುಮಾರನ್ನು ಕಂಡ ಹೆಣ್ಣು ಮಕ್ಕಳು ನಮಗೂ ಇಂಥ ಅತ್ತೆ ಸಿಗಬಾರದಾ ಎಂದು ಹೊಗಳಿದ್ದಾರೆ. ಈಗ ಮತ್ತೆ ಕುಸುಮಾ ನಡೆದುಕೊಂಡ ರೀತಿ ಎಲ್ಲಾ ಸೊಸೆಯಂದಿರಿಗೆ ಮೆಚ್ಚುಗೆಯಾಗಿದೆ.

colors kannada serial Bhagyalakshmi Written Update on June 22th episode

ಮೋಸಕ್ಕೆ ಇದೇ ಪಾಠ ಎಂದ ಭಾಗ್ಯಾ

ಶ್ರೇಷ್ಠಾ ಖುಷಿಯಾಗಿ ಪ್ರಿವೆಡ್ಡಿಂಗ್ ಫೋಟೋಶೂಟ್ ಮಾಡಿಸುತ್ತಿದ್ದಳು. ಆದರೆ ಅಲ್ಲಿಗೆ ಹೋದ ಭಾಗ್ಯಾ ಸಾಕು ಸಾಕು ಎನ್ನುವಷ್ಟು ಕಪಾಳಕ್ಕೆ ಹೊಡೆದಳು. ಶ್ರೇಷ್ಠಾ ನಾನು ಕದ್ದಿಲ್ಲ ಎಂದರೂ ನಂಬದ ಭಾಗ್ಯಾ, ಬ್ಯಾಂಕ್‌ವರೆಗೂ ಅದೇ ಬಟ್ಟೆಯಲ್ಲಿ ಕರೆದುಕೊಂಡು ಹೋಗಿ ಹಣ ವಾಪಾಸ್ ತೆಗೆದುಕೊಳ್ಳುವ ತನಕ ಬಿಡಲಿಲ್ಲ. ನಾಳೆ ತೆಗೆದುಕೊಳ್ಳಬಹುದಿತ್ತು. ಈ ಬಟ್ಟೆಯಲ್ಲಿ ಇದು ಬೇಕಿತ್ತಾ ಭಾಗ್ಯಾ ಎಂದು ಶ್ರೇಷ್ಠಾ ಕೇಳಿದಾಗ, ನಂಬಿಕೆ ದ್ರೋಹ ಮಾಡಿದರೆ ಹೀಗೆ ಮಾಡೋದು ಎಂದೇ ಉತ್ತರ ಕೊಟ್ಟಿದ್ದಾಳೆ.

ತಾಂಡವ್‌ನದ್ದು ಮತ್ತದೇ ಸ್ಟೈಲ್

ಭಾಗ್ಯಾ ಆವೇಶ ಕಂಡು ಫೋಟೋಶೂಟ್ ಜಾಗದಿಂದ ಓಡಿ ಬಂದ ತಾಂಡವ್ ಮನೆ ಸೇರಿಕೊಂಡ. ಮದುವೆ ವಿಚಾರ ಗೊತ್ತಾದರೆ ಇನ್ನೇನು ಮಾಡುತ್ತಾಳೋ ಎಂದೇ ಆತಂಕಗೊಂಡ. ಆದರೂ ಅಪ್ಪ-ಅಮ್ಮನ ಬಳಿ ಭಾಗ್ಯಾ ಎಲ್ಲಿ ಹೋಗಿದ್ದಾಳೆ ಅಂತ ಅವಾಜ್ ಹಾಕಿದ. ಹಣ ಡ್ರಾ ಮಾಡಿಸಿಕೊಂಡು ಮನೆಗೆ ಬಂದ ಭಾಗ್ಯಾಳನ್ನ ಅದೇ ಸ್ಟೈಲ್‌ನಲ್ಲಿ ಕರೆದ. ಹೇಯ್ ಎಲ್ಲಿ ಹೋಗಿದ್ದೆ ಅಂತ ಕೇಳುವವರಿಗೇನೆ ಕೋಪ ಬರಬೇಕು ಆ ರೀತಿ ಕೇಳಿದ.

colors kannada serial Bhagyalakshmi Written Update on June 22th episode

ಭಾಗ್ಯಾಳ ಮಾತಿಗೆ ಮಕ್ಕಳ ಹೊಗಳಿಕೆ

ತಾಳ್ಮೆಯಿಂದಾನೇ ಬಂದ ಭಾಗ್ಯಾ ಇದನ್ನೆಲ್ಲಾ ಕೇಳುವುದಕ್ಕೆ ನೀವ್ಯಾರು. ನಂಗೆ ಮಕ್ಕಳ ಸ್ಕೂಲ್ ಫೀಸ್ ಕಟ್ಟಬೇಕು, ಮನೆ ಸಂಸಾರದ ಜವಾಬ್ದಾರಿ ಇದೆ, ಎಲ್ಲಾದರೂ ಹೋಗ್ತೀನಿ ಎಷ್ಟೊತ್ತಿಗಾದರೂ ಬರ್ತೀನಿ. ಅದನ್ನೆಲ್ಲ ಕೇಳೋಕೆ ನೀವ್ಯಾರು ಎಂದಾಕ್ಷಣ ಮಗ ಶಿಳ್ಳೆ ಹೊಡೆದಿದ್ದಾನೆ, ಮಗಳು ವಾವ್ ಎಂದಿದ್ದಾಳೆ‌. ಅತ್ತೆ ಮಾವ ಹೆಮ್ಮೆ ಪಟ್ಟಿದ್ದಾರೆ. ಗಂಡನಿಗೆ ಕೊಡೋ ಮರ್ಯಾದೆನಾ ಇದು ಎಂದು ಕೇಳಿದಾಗ,‌ ಕುಸುಮಾ, ನೀನು ಮೊದಲು ಗಂಡನಾ? ಅಲ್ವಾ ಎಂಬ ಕ್ಲಾರಿಟಿ ತಗೋ ಎಂದಿದ್ದಾಳೆ.

ಹಣ ಕೈಗಿಟ್ಟಾಕ್ಷಣ ತಾಂಡವ್ ದಂಗು

ನೆಲಕ್ಕೆ ಬಿದ್ದರು ಮೀಸೆ ಮಣ್ಣಗಲಿಲ್ಲ ಎಂಬ ನಡವಳಿಕೆ ತಾಂಡವ್‌ದು. ಅಷ್ಟೆಲ್ಲಾ ಮರ್ಯಾದೆ ಹೋದ ಮೇಲೂ ಮೇಡಂ ಇಎಂಐ ಕಟ್ಟೋಕೆ ಹಣ ಇದ್ಯಾ‌? ನಿನ್ ಹತ್ರ ಎಲ್ಲಿ ಬರಬೇಕು ಅಷ್ಟೊಂದು ಹಣ. ಸುಮ್ಮನೆ ಲಗೇಜ್ ಎತ್ತಿಕೊಂಡು ಹೋಗ್ತಾ ಇರು ಎಂದು ವ್ಯಂಗ್ಯ ಮಾಡಿದಾಗಲೇ ಭಾಗ್ಯಾ, ಬ್ಯಾಗ್‌ನಿಂದ ಹಣ ತೆಗೆದಿದ್ದಾಳೆ. ಎರಡು ತಿಂಗಳ ಇಎಂಐ ಇದೆ. ಇನ್ಮೇಲೆ ಇದು ನಿಮ್ಮೊಬ್ಬರ ಮನೆ ಅಲ್ಲ ನಮ್ಮ‌ಮನೆ ಕೂಡ ಎಂದು ಹಣವಿಟ್ಟು ಹೊರಟಿದ್ದಾಳೆ. ತಾಂಡವ್ ಹಣ ನೋಡಿ ದಂಗಾಗಿ ನಿಂತಿದ್ದಾನೆ. ಬ್ಯಾಗ್ರೌಂಡ್‌ನಲ್ಲಿ ಜಾಗೋರೆ ಜಾಗೋ ಸ್ವಲ್ಪ ಬದಲಾಗೋ ಹಾಡು ಹಾಕಿದ್ದು ಅಭಿಮಾನಿಗಳಿಗಂತು ಫುಲ್ ಖುಷಿ ಕೊಟ್ಟಿದೆ.

More from Filmibeat

English summary
colors kannada serial Bhagyalakshmi Written Update on June 22th episode. Here is the details about Children and audience applaud Bhagya's words;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X