Bhagyalakshmi: ಗಂಡನ ಸುದ್ದಿಗೆ ಬಂದ ಶ್ರೇಷ್ಠಾಳ ಕುತ್ತಿಗೆ ಕತ್ತರಿಸಿದ ಭಾಗ್ಯಾ!: ಖುಷಿಗಿಂತ ಭಯದಲ್ಲಿರುವ ವೀಕ್ಷಕರು!

By ಎಸ್ ಸುಮಂತ್

ಶ್ರೇಷ್ಠಾ ಹಾಗೂ ತಾಂಡವ್ ಪ್ರೀತಿಯಲ್ಲಿ ಬಿದ್ದಿದ್ದಾರೆ. ಭಾಗ್ಯಾಳನ್ನು ಹೊರಗೆ ಹಾಕಿ ಶ್ರೇಷ್ಠಾಳನ್ನು ಮತ್ತೆ ಮನೆ ತುಂಬಿಸಿಕೊಳ್ಳಬೇಕೆಂಬ ಆಸೆ ತಾಂಡವ್ ಸೂರ್ಯವಂಶಿಯದ್ದು. ಮನೆಯಲ್ಲಿ ವಯಸ್ಸಾದ ಅಪ್ಪ ಅಮ್ಮ ಇದ್ದಾರೆ, ಶಾಲೆಗೆ ಓದುವ ಮಕ್ಕಳಿದ್ದಾರೆ. ಅಪ್ಪ ಅಮ್ಮನಿಗೆ ಸರಿಯಾದ ಸಮಯಕ್ಕೆ ಊಟ, ತಿಂಡಿ, ಮಾತ್ರೆಯನ್ಮ ಶ್ರೇಷ್ಠಾ ಕೊಡುತ್ತಾಳಾ..? ಮಕ್ಕಳು ಶಾಲೆಗೆ ಹೋಗುವಷ್ಟರಲ್ಲಿ ಬಾಕ್ಸ್ ರೆಡಿ ಮಾಡಿ, ಕಳುಹಿಸುತ್ತಾಳಾ..? ಇದ್ಯಾವ ಲಕ್ಷಣಗಳು ಶ್ರೇಷ್ಠಾಳಲ್ಲಿ ಇಲ್ಲ.

ಶ್ರೇಷ್ಠಾ ಒಬ್ಬಳೇ ಆರಾಮಾವಾಗಿ ಲೈಫ್ ಲೀಡ್ ಮಾಡಿ ಅನುಭವವಾಗಿದೆ. ಈಗ ಮನೆ, ಸಂಸಾರದಲ್ಲಿ ಸುತ್ತಿಕೊಳ್ಳುವುದು ಇಷ್ಟವಿಲ್ಲ. ತಾಂಡವ್ ಒಬ್ಬ ಜೊತೆಗಿದ್ದರೆ ಸಾಕು. ಆದರೆ ತಾಂಡವ್‌ಗೆ ಅದು ಅರ್ಥವಾಗದೆ ಭಾಗ್ಯಾಳನ್ನು ಹೊರಗೆ ಹಾಕುವುದಕ್ಕೆ ಕಾಯುತ್ತಿದ್ದಾನೆ. ಈಗ ಶ್ರೇಷ್ಠಾಳ ಹುಸಿ ಮುನಿಸು ಕಂಡು ಭಾಗ್ಯಾಳಿಗೆ ಬೈಯ್ಯುವುದಕ್ಕೆ ಹೋಗಿ ತಗಲಾಕಿಕೊಂಡಿದ್ದ.

Colors kannada serial Bhagyalakshmi Written Update on June 25th episode

ಶ್ರೇಷ್ಠಾಗೆ ಭಾಗ್ಯಾಳಿಂದ ನಿದ್ದೆಯೇ ಇಲ್ಲ

ಶ್ರೇಷ್ಠಾಗೆ ಭಾಗ್ಯಾ ಕೊಟ್ಟಿರುವ ಗಿಫ್ಟ್ ಕಡಿಮೆಯದ್ದೇನು ಅಲ್ಲ. ಪಟೀರ್ ಪಟೀರ್ ಅಂತ ಕನಸು ಮನಸ್ಸಲ್ಲೂ ಸೌಂಡ್ ಕೇಳಬೇಕು ಹಂಗೆ ಕೊಟ್ಟಿದ್ದಾಳೆ. ಈಗ ಶ್ರೇಷ್ಠಾಳ ಸ್ಥಿತಿಯೂ ಹಾಗೇ ಆಗಿದೆ. ಮಲಗಿಕೊಂಡರು ನಿದ್ದೆ ಬರುತ್ತಿಲ್ಲ. ಭಾಗ್ಯಾ ಹೊಡೆದ ಸೌಂಡು ಹಾಗೆ ಕಿವಿಯಲ್ಲಿ ಗುಯ್ ಎನ್ನುತ್ತಿದೆ. ಅದರ ಜೊತೆಗೆ ಭಾಗ್ಯಾ ಮಚ್ಚು ಹಿಡಿದುಕೊಂಡು ಬಂದು ಕತ್ತನ್ನೇ ಕತ್ತರಿಸಿದ್ದಾಳೆ. ಮದುವೆಯಾದ ಗಂಡಸೇ ಬೇಕಾ ಎಂದು ಪ್ರಾಣ ತೆಗೆದಿದ್ದಾಳೆ. ಇದು ಶ್ರೇಷ್ಠಾಳಿಗೆ ಬಿದ್ದ ಕನಸು.

ಶ್ರೇಷ್ಠಾಳ ಮಾತಿಗೆ ರೊಚ್ಚಿಗೆದ್ದ ತಾಂಡವ್

ಕನಸಿಂದ ಎದ್ದವಳಿಗೆ ತಾಂಡವ್ ಕಡೆಯಿಂದ ಕಾಲ್ ಬಂದಿದೆ. ಹಿಗ್ಗಾಮುಗ್ಗಾ ಬೈದಿದ್ದಾಳೆ. ನೀನೊಬ್ಬ ಬಾಯ್ ಫ್ರೆಂಡ್ ಹ. ಅಲ್ಲಿ ಅವಳು ಅಷ್ಟು ಹೊಡೆಯುತ್ತಿದ್ದರೆ ಬಂದು ಕೇಳುವುದು ಬಿಟ್ಟು, ಇಲ್ಲಿ ಕಾಲ್ ಮಾಡಿ ಪೂಸಿ ಹೊಡೆಯುತ್ತಾ ಇದ್ದೀಯಾ ಅಂತ ಕೋಪದಲ್ಲಿಯೇ ಫೋನ್ ಇಟ್ಟಿದ್ದಾಳೆ.

ಶ್ರೇಷ್ಠಾಳಿಗೆ ಹೊಡೆದ ವಿಚಾರ ಹೇಳಿದ ತಾಂಡವ್

ತಾಂಡವ್‌ಗೆ ಪಾಪ ತನ್ನ ಲವರ್ ಕೋಪ ಮಾಡಿಕೊಂಡಿದ್ದು ಸಹಿಸುವುದಕ್ಕೆ ಆಗಿಲ್ಲ. ಅದೇ ರೋಷದಿಂದ ಮನೆಯಿಂದ ಕೆಲಸಕ್ಕೆ ಹೊರಟಿದ್ದ ಭಾಗ್ಯಾಳನ್ನು ತಡೆದು ಎಲ್ಲರಿಂದ ಬೈಸಿಕೊಂಡಿದ್ದಾನೆ. ಅದ್ರೂ ಮಾತು ಮುಂದುವರೆಸಿದ ತಾಂಡವ್, ಶ್ರೇಷ್ಠಾಗೆ ಇವಳು ಹೊಡೆದಿದ್ದು ನೋಡಿದರೆ ಮನುಷ್ಯತ್ವವೇ ಇಲ್ಲ ಎಂಬುದು ಕಾಣಿಸುತ್ತಾ ಇತ್ತು ಎಂದು ಹೇಳಿ ಲಾಕ್ ಆಗಿದ್ದಾನೆ. ನೀನ್ಯಾಕೆ ಅಲ್ಲಿಗೆ ಹೋಗಿದ್ದೆ ಅಂತ ಅಮ್ಮ ಕೇಳಿದ್ರೆ, ಅಲ್ಲಿಯೇ ಇದ್ದರು ಯಾಕೆ ಬರಲಿಲ್ಲ ಅಂತ ಭಾಗ್ಯಾ ಕೇಳಿದ್ದಾಳೆ. ಇಬ್ಬರು ರೋಸ್ಟ್ ಮಾಡಿದಾಗ ತಾಂಡವ್, ಸುಳ್ಳು ಹೇಳಿ ಬಚಾವ್ ಆಗಿದ್ದಾನೆ. ಶ್ರೇಷ್ಠಾಳ ಹುಡುಗನನ್ನು ನೋಡಲು ಹೋಗಿದ್ದೆ ಎಂದಿದ್ದಾನೆ.

ತಾಂಡವ್‌ಗೆ ಭಾಗ್ಯಾ ಕಿವಿ ಮಾತು

ಮತ್ತೆ ಜೋರಾಗಿ ಗದರಿದ ತಾಂಡವ್, ಬ್ಯಾಗ್ ಹಾಕಿಕೊಂಡು ಎಲ್ಲಿಗೆ ಹೋಗ್ತಾ ಇದ್ದೀಯ ಎಂಬುದನ್ನು ಹೇಳು ಎಂದಿದ್ದಾನೆ. ನನ್ನ ಕಷ್ಟ ಸುಖ ನೋಡುವ ನಮ್ಮ ಅತ್ತೆ ಮಾವನಿಗೆ ನನ್ನ ಬಗ್ಗೆ ಗೊತ್ತಿದ್ದರೆ ಸಾಕು. ನಿಮಗೆ ಹೇಳುವ ಅಗತ್ಯವಿಲ್ಲ. ಒಂದು ಕಿವಿ ಮಾತು ಹೇಳ್ತೀ‌ನಿ ಕೇಳಿಸಿಕೊಳ್ಳಿ. ನನ್ನಂಥ ಗತಿ ಇಲ್ಲದವಳ ಹತ್ತಿರಾನೇ ಎರಡು ಲಕ್ಷ ಕದ್ದಿದ್ದಾಳೆ ಆ ನಿಮ್ಮ ಕಳ್ಳಿ ಫ್ರೆಂಡ್. ಇನ್ನು ನಿಮ್ಮತ್ರ ಎಷ್ಟೆಲ್ಲ ಕದಿಯಬಹುದು ಎಂಬುದು ಅರಿವಿರಲಿ. ಅವಳಿಂದ ಆದಷ್ಟು ದೂರವಿರಿ ಎಂದು ಹೇಳಿ ಹೊರಟಿದ್ದಾಳೆ.

More from Filmibeat

English summary
colors kannada serial Bhagyalakshmi Written Update on June 25th episode. Here is the details about Bhagya, who murdered shresta;
Read more about: filmbeat original tv sumanth
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X