Bhagyalakshmi: ಸೊಸೆಯಿಂದ ಹೋಯ್ತು ಅತ್ತೆ ಕೆಲಸ; ಭಾಗ್ಯಾಳದ್ದು ಸರೀನಾ? ತಪ್ಪಾ? ನೀವೇ ಹೇಳಿ
ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಎಲ್ಲಾ ಹೆಣ್ಣುಮಕ್ಕಳಿಗೂ ಸ್ಪೂರ್ತಿ ನೀಡುವಂತೆ ಕಥೆಗೆ ಟ್ವಿಸ್ಟ್ ಸಿಕ್ಕಿದೆ. ಗಂಡ ಎಂಬ ಅಧಿಕಾರದಿಂದ ಹೇಳಿದ್ದೆಲ್ಲವನ್ನು ಕೇಳಿಸಿಕೊಂಡಿ, ಅಂದಿದ್ದೆಲ್ಲವನ್ನು ಅನ್ನಿಸಿಕೊಂಡು ಇದ್ದ ಹೆಣ್ಣು ಮಗಳು, ಇಂದು ಧೈರ್ಯವಾಗಿ ಮಾತನಾಡುವಂತೆ ಆಗಿದೆ. ತನ್ನೊಳಗಿನ ಶಕ್ತಿ ಹೊರಗೆ ಬಂದಿದೆ. ಗಂಡನ ಹಣವಿಲ್ಲದೆ ಇದ್ದರು, ತಾನೇ ಸಂಪಾದನೆ ಮಾಡಬಹುದು ಎಂಬುದನ್ನು ಅರಿತಿದ್ದಾಳೆ. ಸ್ವಾಭಿಮಾನದಿಂದ ಬದುಕುವುದನ್ನು ಕಲಿತಿದ್ದಾಳೆ. ಮಕ್ಕಳಿಗೆ ತನ್ನದೇ ದುಡಿಮೆಯಲ್ಲಿ ಇಷ್ಟವಾದದ್ದನ್ನು ಕೊಡಿಸಿದ್ದಾಳೆ.
ಇಷ್ಟು ಕಾಲ ಬದಲಾದರೂ ಅದೆಷ್ಟೋ ಹೆಣ್ಣು ಮಕ್ಕಳು ಮನೆಯಿಂದ ಹೊರಗೆ ಬರುವುದಕ್ಕೆ ಭಯ ಪಡುತ್ತಾರೆ. ಓದಿಲ್ಲ, ಬರೆದಿಲ್ಲ, ಮಕ್ಕಳು ಬೇರೆ ಇದಾರೆ, ಗಂಡನ ಅಹಂಕಾರವನ್ನು ಧಿಕ್ಕರಿಸಿ ನಿಂತರೆ ನನ್ನನ್ನು ನೋಡಿಕೊಳ್ಳುವವರು ಯಾರು ಎಂಬ ಆತಂಕದಲ್ಲಿಯೇ, ಗಂಡ ಎಷ್ಟೇ ಹಿಂಸೆ ಕೊಟ್ಟರು ಅಲ್ಲಿಯೇ ಇದ್ದು ಬದುಕು ನಡೆಸುತ್ತಿದ್ದಾರೆ. ಆದರೆ ಅಂತ ಹೆಣ್ಣು ಮಕ್ಕಳಿಗೆಲ್ಲಾ ಭಾಗ್ಯಾ ಸ್ಪೂರ್ತಿಯಾಗಿ ನಿಂತಿದ್ದಾಳೆ. ಇದಕ್ಕೆ ಎಲ್ಲರೂ ಜೈಕಾರ ಹಾಕಿದ್ದಾರೆ.

ಅಮ್ಮನ ಕಿವಿ ಚುಚ್ಚಿದ ತಾಂಡವ್
ತಾಂಡವ್‌ಗೆ ಈ ಜನ್ಮದಲ್ಲಿ ಬುದ್ದಿ ಬರಲ್ಲ ಅನ್ನೋದಂತು ಅರ್ಥವಾಯಿತು. ಭಾಗ್ಯಾ ಅಷ್ಟು ಗಟ್ಟಿಯಾಗಿ ಹೇಳಿ ಹೋದರು, ಸ್ವಲ್ಪವೂ ಸ್ವಾಭಿಮಾನಕ್ಕೆ ಪೆಟ್ಟಾಗಲೇ ಇಲ್ಲ. ಈಗ ಮತ್ತೆ ಅಮ್ಮನನ್ನು ಕರೆದುಕೊಂಡು ದೇವಸ್ಥಾನಕ್ಕೆ ಬಂದಿದ್ದಾನೆ. ಭಾಗ್ಯಾ ಯಾವ ಭಜನೆಗೂ ಹೋಗುತ್ತಿಲ್ಲ ಎಂಬುದನ್ನು ಪ್ರೂವ್ ಮಾಡಿಸಿದ್ದಾನೆ. ಅಲ್ಲಿನ ಅರ್ಚಕರ ಬಳಿಯಿಂದಾನೇ ಸತ್ಯ ಹೇಳಿಸಿದ್ದಾನೆ.
ಕೆಲಸ ಕಳೆದುಕೊಂಡ ಕುಸುಮಾ
ತಾಂಡವ್ ರಾದ್ಧಾಂತ ಮುಗಿಸಿಕೊಂಡು ಕುಸುಮಾ ನೇರವಾಗಿ ಹೊಟೇಲ್‌ಗೆ ಕೆಲಸಕ್ಕೆ ಬಂದಿದ್ದಾಳೆ. ಆದರೆ ಅಲ್ಲಿಯೂ ಶಾಕ್ ಆಗಿದೆ. ಕುಸುಮಾಳನ್ನು ತೆಗೆದುಕೊಂಡಿದ್ದೆ ಒತ್ತು ಶಾವಿಗೆ ರಸಾಯನದ ರುಚಿಗೆ. ಈಗ ಅದೇ ಬೇಡವಾಗಿದೆ. ಪೈವ್ ಸ್ಟಾರ್ ಹೊಟೇಲ್‌ನವರು ಆರ್ಡರ್ ಕೊಡುತ್ತಿದ್ದದ್ದನ್ನು ನಿಲ್ಲಿಸಿದ್ದಾರೆ. ಹೀಗಾಗಿ ಕುಸುಮಾಗೆ ದರ್ಶಿನಿ ಹೊಟೇಲ್‌ನಲ್ಲಿ ಕೆಲಸವೇ ಇಲ್ಲದಂತೆ ಆಗಿದೆ. ಇದು ಕುಸುಮಾಗೆ ತಡೆದುಕೊಳ್ಳಲಾಗದಷ್ಟು ನೋವಾಗಿದೆ.
ಅತ್ತೆಯಿಂದಾನೆ ಕಲಿತ ಅಡುಗೆ
ಫೈವ್ ಸ್ಟಾರ್ ಹೊಟೇಲ್‌ಗೆ ಪ್ರತಿದಿನ ಒತ್ತು ಶಾವಿಗೆ ಹಾಗೂ ರಸಾಯನ ದೊಡ್ಡಮಟ್ಟದ ಆರ್ಡರ್ ಹೋಗುತ್ತಿತ್ತು. ಇದೀಗ ಕುಸುಮಾಳ ಕೈರುಚಿಯೇ ಹೋಲುವಂತ ಒತ್ತು ಶಾವಿಗೆ ಅಲ್ಲಿಯೇ ರೆಡಿಯಾಗುವಾಗ ದರ್ಶಿನಿಯಿಂದ ಆರ್ಡರ್ ಯಾಕೆ ತರಿಸುತ್ತಾರೆ. ಕುಸುಮಾ ಸೊಸೆ ಭಾಗ್ಯಾ ಕೈರುಚಿ ಕೂಡ ಅದೇ ಆಗಿದೆ. ಈಗ ಸೊಸೆಯಿಂದಾನೇ ಅಲ್ಲಿ ಅತ್ತೆಯ ಕೆಲಸ ಹೋಗಿದೆ. ಮೊದಲೇ ನನ್ನಿಂದ ಸೊಸೆ ಎಲ್ಲವನ್ನು ಕಲಿತಿದ್ದು ಅಂತ ಸದಾ ತನ್ನನ್ನು ತಾನೂ ಹೊಗಳಿಕೊಳ್ಳುವ ಕುಸುಮಾಗೆ ಈ ಸತ್ಯ ಗೊತ್ತಾದರೆ ಅಷ್ಟೇ.

ಸೊಸೆ ಮಾತು ಕೇಳುತ್ತಾಳಾ ಅತ್ತೆ?
ಮನೆಯ ಇಎಂಐಗೆ ಹಣ ಕೊಟ್ಟಾಗಲೇ ಭಾಗ್ಯಾ ಎಲ್ಲಾ ಸತ್ಯವನ್ನು ಹೇಳಿ ಬಿಡುವುದಕ್ಕೆ ಪ್ರಯತ್ನ ಪಟ್ಟಳು. ಆದರೆ ಕುಸುಮಾ ಅದನ್ನು ತಡೆದೆ ಬಿಟ್ಟರು. ಅತ್ತೆ ಕೆಲಸಕ್ಕೆ ಹೋಗ್ತಿದ್ದಾರೆ ಅಂತ ನೀನು ಸೇರಿಕೊಂಡು ಬಿಡಬೇಡ. ನೀನು ನಮ್ಮ ಮನೆ ಮಹಾಲಕ್ಷ್ಮೀ. ನೀನು ಚೆನ್ನಾಗಿರಬೇಕು ಅಂತ ಹೇಳಿ ಸತ್ಯ ಹೇಳುವ ಬಾಯನ್ನೇ ಮುಚ್ಚಿಸಿದ್ದಾಳೆ. ಈಗ ಭಾಗ್ಯಾ ಸತ್ಯ ಹೇಳಿ ಕೆಲಸ ಉಳಿಸಿಕೊಳ್ಳಲೇಬೇಕಾಗಿದೆ. ಭಾಗ್ಯಾ ಕೆಲಸಕ್ಕೆ ಹೋಗುವುದನ್ನು ಕುಸುಮಾ ಒಪ್ಪಲಿ ಎನ್ನುವುದೇ ಅಭಿಮಾನಿಗಳ ಆಸೆ. ಇಷ್ಟು ದಿನ ಎಲ್ಲದರಲ್ಲೂ ಸಪೋರ್ಟ್ ಮಾಡಿಕೊಂಡು ಬಂದ ಅತ್ತೆ ಇದರಲ್ಲೂ ಸಪೋರ್ಟ್ ಮಾಡಲಿ ಎನ್ನುತ್ತಿದ್ದಾರೆ.


Click it and Unblock the Notifications











