Bhagyalakshmi: ನನ್ನ ಸೊಸೆ ಎನ್ನುತ್ತಿದ್ದ ಕುಸುಮಾಗೆ ಭಾಗ್ಯಾ ಯಶಸ್ಸು ಸಹಿಸೋದಕ್ಕೆ ಆಗ್ತಿಲ್ವಾ?

By ಎಸ್ ಸುಮಂತ್

ಭಾಗ್ಯಾ ತನ್ನ ಮನೆ ನಡೆಸುವುದಕ್ಕೆಂದು ಕೆಲಸದ ಹುಡುಕಾಟದಲ್ಲಿದ್ದಾಗ ಭಗಾಯ ಎಂಬ ಹೆಸರು ಒಳ್ಳೆಯದ್ದನ್ನು ಮಾಡಿತ್ತು. ಆ ಹೆಸರಿನಿಂದ ಕೆಲಸ ಸಿಕ್ಕಿತು. ತನ್ನ ಅತ್ತೆಯಿಂದ ಕಲಿತ ಅಡುಗೆ ಕಲೆಯಿಂದ ಈಗ ಹೆಡ್ ಶೆಫ್ ಆಗಿದ್ದಾಳೆ. ಮೊದಲ ಸಂಬಳದಲ್ಲಿಯೇ ಗಂಡನಿಗೆ ಸ್ವಾಭಿಮಾನದಿಂದ ಹಣವನ್ನು ಕೊಟ್ಟಳು. ಮಕ್ಕಳ ಶಾಲೆಯ ಫೀಸ್ ಅನ್ನು ಕೊಟ್ಟಳು. ಆದರೆ ಕೆಲಸದ ವಿಚಾರವನ್ನು ಅತ್ತೆ ಮಾವನ ಬಳಿ ಹೇಳುವುದಕ್ಕೆ ಆಗಲಿಲ್ಲ.

ಅತ್ತೆ ಮಾವನ ಬಳಿ ಕೆಲಸದ ಬಗ್ಗೆ ಹೇಳುವುದಕ್ಕೆ ಹೋದಾಗಲೇ ಅದನ್ನು ಕುಸುಮಾ ತಡೆದಿದ್ದಾಳೆ. ಸಂಬಳವನ್ನು ಸಾಲ ಎಂದು ಹೇಳಿದ್ದಾಳೆ. ಸೊಸೆಯನ್ನು ಕೆಲಸಕ್ಕೆ ಕಳುಹಿಸಬಾರದು ಎಂಬುದೇ ಅತ್ತೆಯ ಆಸೆ. ಹೀಗಾಗಿಯೇ ನಾನು ಕೆಲಸಕ್ಕೆ ಹೋಗ್ತಾ ಇದ್ದೀನಿ ಅಂತ ನೀನು ಹೋಗಿ ಬಿಡಬೇಡ ಎಂದು ಹೇಳಿ ಮಾತಲ್ಲೇ ಕಟ್ಟಿ ಹಾಕಿದ್ದಾಳೆ. ಹೀಗಾಗಿ ಭಾಗ್ಯಾಳಿಗೆ ಸತ್ಯ ಹೇಳುವ ಅವಕಾಶವೇ ಸಿಗಲಿಲ್ಲ.

colors kannada serial Bhagyalakshmi Written Update on June 29th episode

ಒತ್ತು ಶಾವಿಗೆ ತರಿಸಿಕೊಂಡ ಕುಸುಮಾ

ಫೈವ್ ಸ್ಟಾರ್ ಹೊಟೇಲ್‌ಗೆ ದರ್ಶಿನಿ ಹೊಟೇಲ್‌ನಿಂದಾನೇ ಒತ್ತು ಶಾವಿಗೆ ಬರ್ತಾ ಇತ್ತು. ಆದರೆ ಭಾಗ್ಯಾ ಸೇರಿಕೊಂಡಾಗಿನಿಂದ ದರ್ಶಿನಿ ಹೊಟೇಲ್ ಆರ್ಡರ್ ಕ್ಯಾನ್ಸಲ್ ಆಗಿತ್ತು. ಒತ್ತು ಶಾವಿಗೆಗೆ ಡಿಮ್ಯಾಂಡ್ ಇಲ್ಲ ಅಂದ್ರೆ ಕುಸುಮಾಗೆ ಕೆಲಸ ತಾನೇ ಎಲ್ಲಿ ಇರುತ್ತೆ. ಕೆಲಸ ಕಳೆದುಕೊಂಡ ಕುಸುಮಾ ನೇರವಾಗಿ ಫೈವ್ ಸ್ಟಾರ್ ಹೊಟೇಲ್‌ಗೆ ಬಂದಿದ್ದಾಳೆ.

ಭಟ್ಟರನ್ನು ನೋಡಬೇಕೆಂದು ಹಠ

ಫೈವ್ ಸ್ಟಾರ್ ಹೊಟೇಲ್‌ಗೆ ಬಂದು ಒತ್ತು ಶಾವಿಗೆಯನ್ನು ಆರ್ಡರ್ ಮಾಡಿದ್ದಾಳೆ. ಆರಂಭದಲ್ಲಿ ಆ ಹೆಸರು ಯಾರಿಗೂ ಅರ್ಥವಾಗಲಿಲ್ಲ. ಆದರೆ ಭಾಗ್ಯಾಳ ಜೊತೆಗೆ ಇರುವ ಹಿತಾಳಿಗೆ ಅರ್ಥವಾಗಿದೆ. ಒತ್ತು ಶಾವಿಗೆ ತಿಂದ ಬಳಿಕ ಕುಸುಮಾಳದ್ದು ಜೋರು ಗಲಾಟೆ. ಇದು ನನ್ನದೇ ಕೈರುಚಿ ಇದ್ದ ಆಗಿದೆ. ಯಾರೂ ಮಾಡಿದ್ದು. ನಾನು ನೋಡಲೇಬೇಕೆಂದು ಹಠ ಹಿಡಿದಿದ್ದಾಳೆ‌. ಸೀನಿಯರ್ ಒಬ್ಬ ರೇಗಿದಾಗ ಕುಸುಮಾ ಹಣವನ್ನು ಕೊಡದೆ ಹೊರಟಿದ್ದಳು. ಆದರೆ ಹಿತ ಮನವಿ ಮಾಡಿದಾಗ ಹಣ ಕೊಟ್ಟು ಹೋಗಿದ್ದಾಳೆ.

colors kannada serial Bhagyalakshmi Written Update on June 29th episode

ಕೆಂಡಕಾರಿದ ತಾಂಡವ್

ಕುಸುಮಾ ಮನೆಗೆ ಹೋಗುವಷ್ಟರಲ್ಲಿ ಭಾಗ್ಯಾಳ ಬಗ್ಗೆ ಟಿವಿಯಲ್ಲಿ ಗುಣಗಾನ ಶುರುವಾಗಿತ್ತು. ಹೊಟೇಲ್‌ಗೆ ರಿವ್ಯೂವರ್ ಆಗಿ ಬಂದಿದ್ದ ಗೌರೀಶ್ ಅಕ್ಕಿ ಭಾಗ್ಯಾಳ ಬಗ್ಗೆ ಹೊಗಳಿ ಬರೆದಿದ್ದ. ಅದು ದೊಡ್ಡ ನ್ಯೂಸ್ ಆಗಿತ್ತು. ಎಸ್ಎಸ್ಎಲ್‌ಸಿ ಓದಿ ಇಷ್ಟೊಳ್ಳೆ ಕೆಲಸ ಮಾಡುತ್ತಿದ್ದಾಳೆ ಎಂದು ಹೊಗಳುತ್ತಿದ್ದರು. ಮನೆಯವರೆಲ್ಲ ಈ ನ್ಯೂಸ್ ನೋಡಿ ಖುಷಿಯಾದರೆ ತಾಂಡವ್ ಹೆಗರಿ ಹೆಗರಿ ಬೀಳುತ್ತಿದ್ದ. ಕುಸುಮಾಗೂ ಎತ್ತಿಟ್ಟು ಕೊಡುತ್ತಿದ್ದ.

ಕುಸುಮಾ ಸೈಲೆಂಟ್?

ಭಾಗ್ಯಾಳ ಎಲ್ಲಾ ಯಶಸ್ವಿ ಹಾದಿಗೂ ಕುಸುಮಾ ಜೊತೆಯಾಗಿ ನಿಂತಿದ್ದಾಳೆ. ಓದುವುದಕ್ಕೆ, ಬರೆಯುವುದಕ್ಕೆ ಅಷ್ಟೇ ಯಾಕೆ ಭಾಗ್ಯಾಳಿಗೋಸ್ಕರ ಮಗನನ್ನೇ ಎದುರು ಹಾಕಿಕೊಂಡಿದ್ದಾಳೆ. ಹೀಗಿರುವಾಗ ಭಾಗ್ಯಾಳ ಈ ಯಶಸ್ಸನ್ನು ಸಹಿಸದೇ ಇರದವಳೇನು ಅಲ್ಲ. ಕೆಲಸಕ್ಕೆ ಹೋಗುವಾಗ ಎಲ್ಲಿಗೆ ಎಂದು ತಾಂಡವ್ ಕೇಳಿದಾಗಲೂ ಮಗನ ಬಾಯಿ ಮುಚ್ಚಿಸಿ, ಹೋಗುವಂತೆ ಕಳುಹಿಸಿದ್ದಾಳೆ. ಈಗ ಆ ಸುದ್ದಿ ನೋಡಿ ಸಂತಸವೂ ಪಡಲಿಲ್ಲ, ಪ್ರತಿಕ್ರಿಯೆಯನ್ನು ನೀಡಲಿಲ್ಲ. ಹಾಗೇ ಹೋಗಿಯೇ ಬಿಟ್ಟ ಕುಸುಮಾಳನ್ನು ಕಂಡು ತಾಂಡವ್ ಖುಷಿ ಪಟ್ಟರೆ ಮನೆಯವರಿಗೆಲ್ಲಾ ಶಾಕ್ ಆಗಿದೆ.

More from Filmibeat

English summary
colors kannada serial Bhagyalakshmi today episode. Here is the details about Kusuma was silent after seeing Bhagya's success
Read more about: filmbeat original tv sumanth
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X