Bhagyalakshmi: ತಾಂಡವ್‌ಗೆ ಅನಿಷ್ಟಕ್ಕೆಲ್ಲಾ ಶನೇಶ್ವರನೇ ಕಾರಣ: ಹಿತಗೆ ಅರ್ಥವಾಗಿದ್ದು ನಿಂಗೆ ಆಗ್ಲಿಲ್ವಾ ರಾಜ?
ಭಾಗ್ಯಾಗೆ ಬುದ್ದಿ ಕಲಿಸಬೇಕು, ಮನೆ ನಡೆಸಬೇಕು ಎಂಬ ಕಾರಣಕ್ಕೆ ತಾಂಡವ್ ಹಣದ ವಿಚಾರದಲ್ಲಿ ಭಾಗ್ಯಾಳಿಗೆ ಒತ್ತಡ ಹಾಕುತ್ತಿದ್ದಾನೆ. ತಾಂಡವ್ ಲೈಫ್‌ನಿಂದ ಭಾಗ್ಯಾ ಹೊರಗೆ ಹೋಗಲಿ, ನಾನು ತಾಂಡವ್ ಮನೆಗೆ ಸುಲಭವಾಗಿ ಬರಬಹುದು ಎಂದೇ ಭಾವಿಸಿದ್ದಾಳೆ ಶ್ರೇಷ್ಠಾ. ಅದಕ್ಕೆಂದೆ ಈಗ ಭಾಗ್ಯಾಳಿಂದಾನೇ ಕದ್ದು ಕೊಟ್ಟ ಹಣಕ್ಕೆ ಟೈಮ್ ಲಿಮಿಟ್ ಕೊಟ್ಟಿದ್ದಾಳೆ. ಇದೇ ಸಮಯವನ್ನು ಬಂಡವಾಳ ಮಾಡಿಕೊಂಡ ತಾಂಡವ್ ಕೂಡ ಇಎಂಐ ಕಟ್ಟುವುದಕ್ಕೆ ಬಲವಂತ ಮಾಡಿದ್ದಾನೆ.
ಸೊಸೆಯನ್ನು ಮಗಳಂತೆ ನೋಡಿಕೊಂಡು, ಅವಳ ಓದು ಬರಹಕ್ಕೆ ಜೊತೆಯಾಗಿ ನಿಂತವಳು ಕುಸುಮಾ. ಈಗ ಮನೆಯ ಜವಾಬ್ದಾರಿಯನ್ನು ಭಾಗ್ಯಾ ಒಬ್ಬಳ ಕೈಗೆ ಕೊಡುವವಳಲ್ಲ. ಅದರಲ್ಲೂ ಸೊಸೆಯನ್ನು ಮಹಾಲಕ್ಷ್ಮಿ ಎಂದುಕೊಂಡಿರುವಾಗ ಅವಳನ್ನು ಹೊರಗೆ ಕಳುಹಿಸಲು ಇಷ್ಟವಿಲ್ಲ. ಅದಕ್ಕೆ ದುಡಿಯುವುದಕ್ಕೆ ಕುಸುಮಾಳೇ ಹೊರಟಿದ್ದಾಳೆ. ತಾಯಿ ಎಂದರೆ ಪ್ರಾಣವನ್ನೇ ಇಟ್ಟುಕೊಂಡಿರುವ ತಾಂಡವ್ ಕಣ್ಣಿಗೆ ಇದು ಬಿದ್ದಿದೆ.

ಮತ್ತೆ ಕೆಲಸ ಅರಸಿ ಬಂದ ಭಾಗ್ಯಾ
ಭಗಾಯ ಜಾಗಕ್ಕೆ ಭಾಗ್ಯಾ ಬಂದಿದ್ದಾಳೆ ಅಂತ ಅದ್ಯಾವಾಗ ಗೊತ್ತಾಯ್ತೋ ಏನೋ ಹಿತ ಅಂದಿನಿಂದ ಕೆಂಡಕಾರಿದಂತೆ ಆಗಿಬಿಟ್ಟಳು. ಮೋಸ ಮಾಡಿ, ಇನ್ನೊಬ್ಬರ ಕೆಲಸವನ್ನು ಕಿತ್ತುಕೊಂಡಿದ್ದೀಯಾ. ಇಲ್ಲಿಂದ ನೀನು ಹೊರಟು ಹೋಗು ಎಂದು ಕಳುಹಿಸಿದ್ದಳು. ಆದರೆ ಭಾಗ್ಯಾಗೆ ಮಕ್ಕಳ ಶಾಲಾ ಶುಲ್ಕದ ಜವಾಬ್ದಾರಿ ಕೂಡ ಇದೆ. ಹೀಗಾಗಿ ಮತ್ತೆ ಕೆಲಸ ಅರಸಿ ಬಂದಿದ್ದಾಳೆ. ಅಡುಗೆ ಅಲ್ಲದೇ ಹೋದರೆ ಕ್ಲೀನಿಂಗ್ ಕೆಲಸವಾದರೂ ಕೊಡಿ ಅಂತಿದ್ದಾಳೆ.
ಭಾಗ್ಯಾಳಿಗೆ ಧೈರ್ಯ ತುಂಬಿದ ಹಿತ
ಹಿತ ಯಾವ ಮಾತಿಗೂ ಜಗ್ಗಲಿಲ್ಲ. ಸರಿ ಮ್ಯಾನೇಜರ್ ಬಳಿಯೇ ಎಲ್ಲವನ್ನು ಹೇಳಿ, ಬೇರೆ ಕೆಲಸ ಕೇಳುತ್ತೇನೆಂದು ಬಂದಳು. ಅಷ್ಟರಲ್ಲಿ ಪೇಪರ್ ನೋಡಿದ ಹಿತಾಗೆ ಭಾಗ್ಯಾಳ ಶ್ರಮ, ಎಸ್ಎಸ್ಎಲ್‌ಸಿ ಪಾಸ್ ವಿಚಾರ ತಿಳಿಯಿತು. ತಕ್ಷಣ ಅಲ್ಲಿಗೆ ಓಡಿ ಬಂದ ಹಿತ, ಮ್ಯಾನೇಜರ್ ಬಳಿ ಏನನ್ನು ಹೇಳುವುದಕ್ಕೆ ಬಿಡಲಿಲ್ಲ. ಇಲ್ಲೇ ಕೆಲಸ ಮಾಡಿಕೊಂಡು ಹೋಗು. ನಿನ್ನ ಬಗ್ಗೆ ಗೊತ್ತಾಯ್ತು ಎಂದು ಹೇಳಿದಳು.
ಅಮ್ಮನನ್ನು ಫಾಲೋ ಮಾಡಿದ ತಾಂಡವ್
ತಾಂಡವ್‌ಗೆ ಅಮ್ಮ ದೇವಸ್ಥಾನ ಅಂತ ಹೇಳಿ ಅರ್ಜೆಂಟ್ ಮಾಡಿದ್ದು ಅನುಮಾನ ಬರಿಸಿತ್ತು. ಫಾಲೋ ಮಾಡಿಕೊಂಡು ಹೋದ. ಅಲ್ಲಿ ಅಮ್ಮ ಹೊಟೇಲ್ ಮ್ಯಾನೇಜರ್ ಬಳಿ ಬೈಸಿಕೊಂಡರೂ ಸುಮ್ಮನೆ ನಿಂತಿದ್ದಳು, ಆಮೇಲೆ ಒಳಗೆ ಹೋದಳು. ಏನಾಯ್ತು ಎಂದು ಬಂದು ನೋಡಿದಾಗ ಅಮ್ಮ ಕೆಲಸ ಮಾಡುತ್ತಿದ್ದಳು. ತಾಂಡವ್‌ಗೆ ಅಮ್ಮನೆಂದರೆ ಪ್ರಾಣ. ಭಾಗ್ಯಾಳಿಂದ ದೂರವಾಗಲೂ ಅಮ್ಮನ ಮಾತನ್ನು ಕೇಳುತ್ತಿಲ್ಲ. ಹಾಗಂತ ಅಮ್ಮ ಕೆಲಸ ಮಾಡಿದರೆ ಸಹಿಸುವುದಿಲ್ಲ. ಇದೆಲ್ಲ ಆಗಿದ್ದು ಆ ಎಮ್ಮೆಯಿಂದ ಅಂತ ಮತ್ತೆ ಬೈಕೊಂಡು, ಅಮ್ಮನ ಎದುರು ಬಂದು ನಿಂತಿದ್ದಾನೆ. ನೀವಿಲ್ಲಿ ಕೆಲಸ ಮಾಡುತ್ತಿದ್ದೀರಾ ಎಂದರೆ ಕುಸುಮಾಗೆ ಮಾತೇ ಬರುತ್ತಿಲ್ಲ.

ಹಿತ ಬದಲಾಗಿದ್ದಾಯ್ತು ತಾಂಡವ್..?
ಅತ್ತ ಭಾಗ್ಯಾಳ ಕೆಲಸಕ್ಕೆ ಬಂದಿದ್ದ ಕುತ್ತು ದೂರವಾಗಿದೆ. ಹಿತ ಬದಲಾಗಿದ್ದಾಳೆ. ಭಾಗ್ಯಾಳ ಶ್ರಮ, ಶ್ರದ್ದೆ ಅರ್ಥ ಮಾಡಿಕೊಂಡು ಈಗ ಅವಳಿಗೆ ಕೆಲಸದಲ್ಲಿ ಸಹಾಯ ಮಾಡುವುದಕ್ಕೆ ಹೊರಟಿದ್ದಾಳೆ. ಆದರೆ ತಾಂಡವ್ ಬದಲಾಗುತ್ತಾನಾ ಎಂಬುದೇ ವೀಕ್ಷಕರ ಅನುಮಾನ. ಅಮ್ಮನನ್ನು ಆ ಸ್ಥಿತಿಯಲ್ಲಿ ನೋಡಿದಾತ ಈಗಲಾದರೂ ತನ್ನ ಅಹಂ ಬಿಟ್ಟು, ಅಮ್ಮನಿಗಾಗಿ ಸಂಸಾರ ಒಪ್ಪಿಕೊಳ್ಳುತ್ತಾನಾ? ನೋಡಬೇಕಿದೆ.


Click it and Unblock the Notifications











