Bhagyalakshmi: ತಲೆ ತಿರುಗಿ ಬಿದ್ರು ಕುಸುಮಾ; ಯಾರನ್ನು ಮೆಚ್ಚಿಸಲೇಬೇಕಿದೆ ಭಾಗ್ಯಾ?
ಆಗುವುದೆಲ್ಲ ಒಳ್ಳೆಯದಕ್ಕೆ ಎಂಬ ಮಾತಿದೆ. ಅದು ಅಕ್ಷರಶಃ ಹೊಂದಾಣಿಕೆಯಾಗುತ್ತಿರುವುದು ಭಾಗ್ಯಾ ಮತ್ತು ಕುಸುಮಾಗೆ. ತಾಂಡವ್ ಬಗ್ಗೆ ಕುಸುಮಾ ದೊಡ್ಡ ಕನಸು ಇಟ್ಟುಕೊಂಡಿದ್ದಳು. ಕಷ್ಟ ಕಾಲದಲ್ಲಿ ನಮ್ಮ ಮಗ ನಮ್ಮನ್ನು ಕೈ ಬಿಡುವುದಕ್ಕೆ ಸಾಧ್ಯವೇ ಇಲ್ಲ ಎನ್ನಿತ್ತಿದ್ದರು. ಆದರೆ ತಾಂಡವ್ ಬದಲಾಗಿದ್ದಾನೆ. ತಂದೆ ತಾಯಿಯನ್ನು ಸಾಕಷ್ಟು ಕಟುಕನಾಗಿದ್ದಾನೆ. ಅಮ್ಮ ನೋಡಿದ ಹೆಂಡತಿ ಈಗ ಬೇಡವಾಗಿದ್ದಾಳೆ. ಭಾಗ್ಯಾಳ ಮೇಲಿನ ಕೋಪಕ್ಕೆ ತಂದೆ-ತಾಯಿಯನ್ನು ದೂರ ಮಾಡಿಕೊಂಡಿದ್ದಾನೆ.
ಸೊಸೆಯನ್ನು ಉಳಿಸಿಕೊಳ್ಳಬೇಕು, ಮನೆಗೆ ಸಹಾಯವು ಆಗಬೇಕೆಂದು ಕುಸುಮಾ ಕೆಲಸಕ್ಕೆ ಸೇರಿದ್ದಾಳೆ. ಇದನ್ನು ಕಂಡ ತಾಂಡವ್ ಮತ್ತೆ ಭಾಗ್ಯಾಳ ಮೇಲೆಯೇ ಕೆಂಡಾಮಂಡಲನಾಗಿದ್ದಾನೆ. ಅವಳನ್ನು ಬಿಡುವ ಪ್ರಶ್ನೆಯೇ ಇಲ್ಲ ಅಂತ ದೇವಸ್ಥಾನಕ್ಕೆ ಬಂದಿದ್ದಾನೆ. ಅವನ ಕಲ್ಪನಾ ಲೋಕದಲ್ಲಿ ಭಾಗ್ಯಾ ಭಜನೆ ಮಾಡುತ್ತಿದ್ದಾಳೆ. ಹೀಗಾಗಿ ದೇವಸ್ಥಾನವನ್ನೆಲ್ಲಾ ಹುಡುಕಿ ತಡಕಾಡಲು ಹೋಗಿದ್ದಾನೆ.

ಟೆನ್ಷನ್‌ಗೆ ತಲೆ ಸುತ್ತಿಬಿದ್ದ ಕುಸುಮಾ
ಕುಸುಮಾಗೆ ಮೊದಲೇ ಕೆಲಸ ಮಾಡಿ ಅಭ್ಯಾಸ ಕಳೆದು ಹೋಗಿದೆ. ಈಗ ತಾಂಡವ್ ಬೇರೆ ಬಂದು ಬಾಯಿಗೆ ಬಂದಂತೆ ಮಾತನಾಡಿದ್ದಾನೆ. ಆ ಮಾತುಗಳನ್ನೆಲ್ಲಾ ಕೇಳಿಸಿಕೊಂಡ ಕುಸುಮಾ, ಮನೆಯಲ್ಲಿ ಸೊಸೆಗೆ ಉಳಿಗಾಲವಿಲ್ಲದ್ದನ್ನು ನೆನೆದು ಟೆನ್ಶನ್ ಆಗಿದ್ದಾಳೆ. ಅದೇ ಟೆನ್ಶನ್‌ನಲ್ಲಿ ತಲೆ ಸುತ್ತಿ ಬಿದ್ದಿದ್ದಾಳೆ.
ಬರೀ ಗೈನಲ್ಲಿ ಬಂದ ಭಾಗ್ಯಾ
ಫೈವ್ ಸ್ಟಾರ್ ಹೊಟೇಲ್‌ನಲ್ಲಿ ದರ್ಶಿನಿ ಹೊಟೇಲ್‌ನ ಒತ್ತು ಶಾವಿಗೆಗೆ ಫುಲ್ ಡಿಮ್ಯಾಂಡ್ ಇದೆ. ಈಗ ಬರ್ತಾ ಇರುವ ಗೆಸ್ಟ್‌ಗೂ ಅಲ್ಲಿಂದಾನೇ ಒತ್ತು ಶಾವಿಗೆ ಆರ್ಡರ್ ಮಾಡಿದ್ದಾರೆ. ಆದರೆ ಅದನ್ನು ಮಾಡುವಾಗಲೇ ಕುಸುಮಾ ತಲೆ ಸುತ್ತಿ ಬಿದ್ದಿದ್ದಾರೆ. ಒತ್ತು ಶಾವಿಗೆ ತರುವುದಕ್ಕೆ ಹೋದಂತ ಭಾಗ್ಯಾ ಬರೀ ಗೈನಲ್ಲಿ ಬಂದಿದ್ದಾಳೆ. ಇದನ್ನು ಕಂಡ ಮ್ಯಾನೇಜರ್ ಶಾಕ್ ಆಗಿದ್ದಾನೆ. ಯಾಕ್ರೀ ಅಂತ ಕೇಳಿದರೇ ಅವರು ಕೊಡುವುದಕ್ಕೆ ಆಗಲ್ಲವಂತೆ ಎಂದಿದ್ದಾಳೆ. ಇದನ್ನು ಕೇಳಿದ ಮ್ಯಾನೇಜರ್‌ಗೆ ಮತ್ತಷ್ಟು ಆತಂಕವಾಗಿದೆ.
ಭಯ ಪಟ್ಟ ಹೊಟೇಲ್‌ನವರು
ಹೊಟೇಲ್‌ಗೆ ಬರುತ್ತಿರುವ ಅತಿಥಿ ಬಗ್ಗೆ ಮಾಲೀಕರಿಗೆ ಆತಂಕವಿದೆ. ಯಾಕಂದ್ರೆ ಅವರು ತಿನ್ನುವಾಗ ಯಾವುದೇ ರಿಯಾಕ್ಷನ್ ಕೊಡುವುದಿಲ್ಲ. ಅವರು ತಿಂದು ಹೋದ ಮರುದಿನ ಅದರ ರಿವ್ಯೂ ಕೊಡುತ್ತಾರೆ. ಆ ವ್ಯಕ್ತಿ ಕೊಟ್ಟ ರಿವ್ಯೂ ಹೊಟೇಲ್ ಮುಚ್ಚಲುಬಹುದು. ಹೀಗಾಗಿ ಅವರಿಗೆ ನೀಡುವ ಆತಿಥ್ಯ ಬಹಳ ಮುಖ್ಯವಾಗಿದೆ. ಅದನ್ನೇ ಹೊಟೇಲ್ ಮಾಲೀಕರು ಮ್ಯಾನೇಜರ್ ಬಳಿ ಹೇಳಿದ್ದಾರೆ.

ಅತಿಥಿಯಾಗಿ ಬರ್ತಿದ್ದಾರೆ ಗೌರೀಶ್ ಅಕ್ಕಿ
ಬಿಗ್ ಬಾಸ್‌ನಲ್ಲಿ ಸ್ಪರ್ಧಿಯಾಗಿದ್ದ ಗೌರೀಶ್ ಅಕ್ಕಿ ಅವರು ಅತಿಥಿಯಾಗಿ ಬರ್ತಿದ್ದಾರೆ. ಈ ಅತಿಥಿಯನ್ನು ಸತ್ಕಾರ ಮಾಡಬೇಕಾದದ್ದು ಫೈವ್ ಸ್ಟಾರ್ ಹೊಟೇಲ್‌ನ ಜವಬ್ದಾರಿಯಾಗಿದೆ. ಆದರೆ ಅವರಿಗೆ ಇಷ್ಟವಾಗುವಂತ ಒತ್ತು ಶಾವಿಗೆಯೇ ಸಿಕ್ಕಿಲ್ಲ. ಅದನ್ನ ಫೈವ್ ಸ್ಟಾರ್ ಹೊಟೇಲ್‌ನವರು ಇಷ್ಟುದ್ದ ಹೆಸರೇಳಿ ತರುವುದಕ್ಕೆ ಹೇಳಿದ್ದಾರೆ. ಹೀಗಾಗಿ ಅದು ಯಾವ ತರದ ತಿಂಡಿ ಎಂಬುದು ಭಾಗ್ಯಾಗೆ ಅರ್ಥವಾಗಿಲ್ಲ. ಒಂದು ವೇಳೆ ಅದು ಒತ್ತು ಶಾವಿಗೆ, ಕಯಾಲು ಎಂಬುದು ಗೊತ್ತಾದರೆ ಭಾಗ್ಯಾ ತನಗೊಂದು ಅವಕಾಶ ಕೇಳಿಯೇ ಕೇಳುತ್ತಾಳೆ. ಅದು ಸಿಕ್ಕರೆ, ಒತ್ತು ಶಾವಿಗೆ ಗೌರೀಶ್ ಅಕ್ಕಿಗೆ ಇಷ್ಟವಾದರೆ ಭಾಗ್ಯಾಳ ಕೆಲಸಕ್ಕೆ ಇನ್ನು ಡಿಮ್ಯಾಂಡ್ ಬರಲಿದೆ.


Click it and Unblock the Notifications











