Bhagyalakshmi: ಏನು ಪುಕ್ಕಲು ಗುರು ತಾಂಡವ್: ಭಾಗ್ಯಾ ಪ್ರಶ್ನೆ ಮಾಡಿದರೆ ಶ್ರೇಷ್ಠಾ ಬಗ್ಗೆ ಹೇಳೋ ಧೈರ್ಯವೇ ಬರಲ್ಲ!
ತಾಂಡವ್ ಮತ್ತು ಶ್ರೇಷ್ಠಾಳಿಂದ ಕುಸುಮಾ ಮನೆಯಲ್ಲಿ ಅಲ್ಲೋಲ ಕಲ್ಲೋಲವೇ ಆಗಿ ಹೋಗಿದೆ. ಶ್ರೇಷ್ಠಾಳನ್ನು ಮದುವೆ ಆಗುವುದಕ್ಕೆ ತಾಂಡವ್ ಸರ್ಕಸ್ ಮಾಡುತ್ತಿದ್ದಾನೆ. ಆದರೆ ಇದಕ್ಕೆಲ್ಲಾ ಪೂಜಾ ಬಿಡಬೇಕಲ್ಲ. ಅಕ್ಕನ ಸಂಸಾರ ಚೆನ್ನಾಗಿರಲಿ, ಯಾವುದೇ ರೀತಿಯ ಜಗಳ ಆಡಬಾರದು ಎಂಬ ಕಾರಣಕ್ಕೆ ಬಾವನಿಗೆ ಸಮಾಧಾನವಾಗಿ ಹೇಳಿದಳು. ಶ್ರೇಷ್ಠಾಗೆ ಎಚ್ಚರಿಕೆಯನ್ನು ಕೊಟ್ಟಳು.
ತಾಂಡವ್ ಮತ್ತು ಶ್ರೇಷ್ಠಾ ಅದ್ಯಾಕೋ ಪೂಜಾ ಹೇಳಿದ ಮಾತುಗಳನ್ನ ಕೇಳುವಂತೆ ಕಾಣುತ್ತಿಲ್ಲ. ಮತ್ತೆ ಮತ್ತೆ ಮದುವೆ ಆಗುವತ್ತಲೇ ಮುಂದುವರೆಯುತ್ತಿದ್ದಾರೆ. ಆದರೆ ಪೂಜಾ ಚಾಲಾಕಿ ಅವರಿಬ್ಬರನ್ನು ಬಿಡಬೇಕಲ್ಲ. ಶ್ರೇಷ್ಠಾಳ ಮನೆಗೆ ಬಂದು ಕೂತಿದ್ದಾಳೆ. ಅದೇಗೆ ನನ್ನ ಕಣ್ತಪ್ಪಿಸುತ್ತಿಯೋ ತಪ್ಪಿಸು ಅಂತ ಸವಾಲು ಹಾಕಿದ್ದಾಳೆ. ಆದರೆ ಶ್ರೇಷ್ಠಾ ಮಾತ್ರ ಇದ್ಯಾವುದಕ್ಕೂ ಹೆದರಿಕೊಳ್ಳುವ ಹೆಣ್ಣಲ್ಲ ಎಂಬುದನ್ನು ಪ್ರೂವ್ ಮಾಡಿದ್ದಾಳೆ.

ದೇವಸ್ಥಾನಕ್ಕೆ ಬಂದ ತಾಂಡವ್ - ಶ್ರೇಷ್ಠಾ
ಮನೆಯಲ್ಲಿ ರಾದ್ಧಾಂತ ಶುರುವಾದ ಮೇಲೆ, ಮನೆಯವರೆಲ್ಲಾ ಬೇರೆ ಬೇರೆ ಆದ ಮೇಲೆ ತಾಂಡವ್ ಹಾಗೂ ಶ್ರೇಷ್ಠಾ ದಾರಿ ಸುಲಭವಾಗಿದೆ. ಎಂಗೇಜ್ಮೆಂಟ್ ಆದವರು, ಈಗ ಸುಲಭವಾಗಿ ಮದುವೆಯಾಗುವುದಕ್ಕೆ ಹೊರಟಿದ್ದಾರೆ. ಅದರ ಮುಂದುವರೆದ ಭಾಗವೇ ಇದೀಗ ಲಗ್ನ ಪತ್ರಿಕೆಯನ್ನು ಪೂಜೆ ಮಾಡಿಸಲು ಬಂದಿದ್ದಾರೆ. ಶ್ರೇಷ್ಠಾ ಜೊತೆಗೆ ತಾಂಡವ್ ಕೂಡ ದೇವಸ್ಥಾನಕ್ಕೆ ಬಂದಿದ್ದಾನೆ.
ಭಾಗ್ಯಾಳಿಗೆ ಸಿಕ್ತು ಮದುವೆ ಪತ್ರಿಕೆ
ಭಾಗ್ಯಾಳಿಗೆ ಕೆಲಸ ಸಿಕ್ಕಿದ ಖುಷಿಯಲ್ಲಿ ದೇವರಿಗೆ ನಮಸ್ಕಾರ ಹಾಕಲು ಅದೇ ದೇವಸ್ಥಾನಕ್ಕೆ ಬಂದಿದ್ದಾಳೆ. ದೇವರಿಗೆ ನಮಸ್ಕಾರ ಮಾಡಿ, ಅರಳಿಕಟ್ಟೆಯನ್ನು ಸುತ್ತು ಹಾಕುತ್ತಿದ್ದಳು. ಇದೇ ವೇಳೆ ಶ್ರೇಷ್ಠಾಳ ಲಗ್ನ ಪತ್ರಿಕೆಯನ್ನು ಅರ್ಚಕರಿಂದ ಭಾಗ್ಯಾ ತೆಗೆದುಕೊಂಡು ಹೋಗಿದ್ದಾಳೆ ಎನ್ನಲಾಗಿದೆ. ಅದು ಭಾಗ್ಯಾನಾ ಅಥವಾ ಬೇರೆ ಯಾರು ಗೊತ್ತಿಲ್ಲ. ಆದರೆ ಅರ್ಚಕರು ಹೇಳಿದ್ದಕ್ಕೆ, ಶ್ರೇಷ್ಠಾ ಅದು ಭಾಗ್ಯಾ ಎಂದೇ ನಂಬಿದ್ದಾಳೆ.
ಭಾಗ್ಯಾಳ ಮುಂದೆ ಇಬ್ಬರು ಗಡಗಡ
ಭಾಗ್ಯಾ ಹಾಕಿದ್ದ ಕಲರ್ ಸೀರೆ ನೋಡಿ, ಹೋಯ್ ಮೆರುನ್ ಕಲರ್ ಸೀರೆ ಉಟ್ಟವರೆ, ಸಾಕು ಪ್ರದಕ್ಷಿಣೆ ಹಾಕಿದ್ದು ಬನ್ನಿ ಎಂದಿದ್ದಾಳೆ. ಶ್ರೇಷ್ಠಾ ಕರೆದ ರೀತಿಗೆ ಭಾಗ್ಯಾ ತಿರುಗಿ ನೋಡಿದರೆ ಶ್ರೇಷ್ಠಾ ಹಾಗೂ ತಾಂಡವ್ ಕಣ್ಣಿಗೆ ಬಿದ್ದಿದ್ದಾರೆ. ಭಾಗ್ಯಾಗೆ ಅದನ್ನು ನೋಡಿ ಶಾಕ್ ಆಗಿದೆ. ಏನು ನೀವಿಬ್ಬರು ದೇವಸ್ಥಾನದಲ್ಲಿ. ಅದರಲ್ಲೂ ಶ್ರೇಷ್ಠಾ ಅವರ ಜೊತೆಗೆ ಎಂದಾಗ ಇಬ್ಬರಿಗೂ ಭಯ ಆಗಿದೆ. ತಾಂಡವ್ ತಡಬಡಾಯಿಸಿದಾಗ, ಶ್ರೇಷ್ಠಾ ಸುಳ್ಳು ಹೇಳಿದ್ದಾಳೆ. ನನ್ನ ಕಾರು ಕೆಟ್ಟು ಹೋಯ್ತು ಅದಕ್ಕೆ ತಾಂಡವ್ ಸರ್ ಜೊತೆಗೆ ಡ್ರಾಪ್ ತೆಗೆದುಕೊಂಡೆ ಎಂದಿದ್ದಾಳೆ. ತಕ್ಷಣ ಮಾತು ಮರೆಸುವುದಕ್ಕೆ 2 ಲಕ್ಷ ಹಣದ ಬಗ್ಗೆ ನೆನಪಿಸಿದ್ದಾಳೆ. ಅದಕ್ಕೆ ಉತ್ತರ ಕೊಟ್ಟು ಭಾಗ್ಯಾ ಮುಂದೆ ನಡೆದಿದ್ದಾಳೆ.

ಭಾಗ್ಯಾಳನ್ನು ಡ್ರಾಪ್ ಮಾಡಲು ಬಂದ ತಾಂಡವ್
ಭಾಗ್ಯಾ ಆ ರೀತಿ ಹೋಗಿದ್ದಕ್ಕೆ ಶ್ರೇಷ್ಠಾ ಖುಷಿಯಾಗಿದ್ದಾಳೆ. ಆದರೆ ತಾಂಡವ್‌ಗೆ ಟೆನ್ಷನ್. ದುಡ್ಡಿನ ಮನೆ ಹಾಳಾಗ. ಅವಳ ಬ್ಯಾಗ್‌ನಲ್ಲಿ ಇನ್ವಿಟೇಷನ್ ಇದೆ. ಅದರ ಮೇಲೆ ನಮ್ಮಿಬ್ಬರ ಫೋಟೋ ಬೇರೆ ಅಂಟಿಸಿದ್ದೀಯ ಎಂದು ಬೈದಿದ್ದಾನೆ. ಹೇಗಾದರೂ ಮಾಡಿ ಆ ಲಗ್ನ ಪತ್ರಿಕೆ ತೆಗೆದುಕೊಳ್ಳಬೇಕೆಂದು ಡ್ರಾಪ್ ಮಾಡುವ ನೆಪದಲ್ಲಿ ಮಾತನಾಡಿಸಿದ್ದಾನೆ.
ಶಾಕ್ ಆದ ತಾಂಡವ್
ಭಾಗ್ಯಾಗೆ ತಾಂಡವ್ ನಾಟಕ ಗೊತ್ತಾಗಿದೆ. ಆದರೂ ಸಂಸಾರ ಕೂಡ ಸರಿ ಆಗಬೇಕಲ್ಲ, ತಾಂಡವ್ ಮಾತಿಗೆ ಓಕೆ ಎಂದಿದ್ದಾಳೆ. ಬಳಿಕ ತಾಂಡವ್ ಅವಳ ಬ್ಯಾಗ್ ತೆಗೆದುಕೊಂಡು ಕಾರ್ಡ್ ಹುಡುಕುತ್ತಿದ್ದ. ಅವನಿಗೆ ತಕ್ಷಣಕ್ಕೆ ಸಿಕ್ಕಿಲ್ಲ. ತಕ್ಷಣ ಭಾಗ್ಯಾ ಅದನ್ನು ನೋಡಿ, ಪ್ರಶ್ನೆ ಮಾಡಿದ್ದಾಳೆ. ತಾಂಡವ್ ಶಾಕ್ ಆಗಿದ್ದಾನೆ.


Click it and Unblock the Notifications











