Bhagyalakshmi: ತಾಂಡವ್‌ನ ಉರಿಸುವುದು ಅಂದ್ರೆ ಹೀಗೆ: ಭಾಗ್ಯಾ ಪಾಸಾಗಿದ್ದನ್ನ ಸಹಿಸೋಕೆ ಆಗ್ತಿಲ್ಲ!
ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಮನಸ್ತಾಪಗಳು ಶುರುವಾಗಿದ್ದೆ ಭಾಗ್ಯಾಳ ಓದು ಮುಂದುವರೆಸಬೇಕು ಎಂಬ ವಿಚಾರಕ್ಕೆ. ತಾಂಡವ್ ಯಾವಾಗಲೂ ಭಾಗ್ಯಾಳನ್ನ ಶತ ದಡ್ಡಿ ಶತ ದಡ್ಡಿ ಎಂದೇ ಆಡಿಕೊಳ್ಳುತ್ತಿದ್ದ, ನಿಂದಿಸುತ್ತಿದ್ದ. ಆದರೆ ಭಾಗ್ಯಾ ಕುಸುಮಾ ತಂದಿರುವ ಸೊಸೆ. ಹಾಗೆಲ್ಲಾ ನಿಂದಿಸಿದರೆ ಕುಸಿಮಾಗೆ ಮರ್ಯಾದೆ ಪ್ರಶ್ನೆ. ಅಂದೇ ನಿರ್ಧರಿದಳು ಕುಸುಮಾ. ಭಾಗ್ಯಾಳನ್ನು ಎಸ್ಎಸ್ಎಲ್‌ಸಿ ಪಾಸ್ ಮಾಡಿಸಲೇಬೇಕೆಂದು.
ದಾರಿ ಏನು ಸುಲಭವಾಗಿರಲಿಲ್ಲ. ಗಂಡನ ಕೋಪ ಎದುರಾಯ್ತು, ಮಗಳ ಮುನಿಸು ಜೋರಾಯ್ತು. ಆದರೆ ಇದೆಲ್ಲದರ ನಡುವೆ ಅತ್ತೆಯ ಬೆಂಬಲ ಸ್ಟ್ರಾಂಗ್ ಆಯ್ತು. ಕಡೆಗೂ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಭಾಗ್ಯಾ ಬರೆದಳು. ಅಷ್ಟರಲ್ಲಿ ಅಮ್ಮನ ಬೆಲೆ ತನ್ವಿಗೆ ಗೊತ್ತಾಗಿತ್ತು. ಅಪ್ಪನ ದುರ್ಬುದ್ದಿಗೆ ವಿರೋಧ ವ್ಯಕ್ತಪಡಿಸಿದ್ದಳು. ಈಗ ಅಮ್ಮ ಮಗಳಿಬ್ಬರು ಪಾಸಾಗಿದ್ದಾರೆ. ತಾಂಡವ್ ಗೆ ಹೊಟ್ಟೆ ಉರಿತಿದೆ.

ಮನೆಯಲ್ಲಿ ಡಬ್ಬಲ್ ಸಂಭ್ರಮ
ಇವತ್ತು ಕುಸುಮಾ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಕುಸಿಮಾ ಗಟ್ಟಿ ನಿರ್ಧಾರಗಳು ಇಂದು ಸಾರ್ಥಕವಾಗಿದೆ. ಅತ್ತೆಯ ಪರಿಶ್ರಮಕ್ಕೆ ಭಾಗ್ಯಾಳಿಂದ ಬೆಸ್ಟ್ ಗಿಫ್ಟ್ ಸಿಕ್ಕಿದೆ. ತನ್ವಿ ಹಾಗೂ ಭಾಗ್ಯಾ ಇಬ್ಬರು ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದಿದ್ದಾರೆ. ಅದರಲ್ಲೂ ಯಾವ ಪರೀಕ್ಷೆಯಲ್ಲೂ ಸರಿಯಾದ ಮಾರ್ಕ್ಸ್ ತೆಗೆಯದ ತನ್ವಿ, ಈ ಬಾರಿ ಅಮ್ಮನ ಹಠಕ್ಕೆ ಓದಿ ಒಳ್ಳೆ ಅಂಕವನ್ನೇ ಪಡೆದಿದ್ದಾಳೆ. ಭಾಗ್ಯಾ ಫಸ್ಟ್ ಕ್ಲಾಸ್ ಬಂದ್ರೆ ತನ್ವಿ ಶಾಲೆಗೆ ಫಸ್ಟ್ ಕ್ಲಾಸ್ ಬಂದಿದ್ದಾಳೆ.
ಅತ್ತೆಗೆ ಕ್ರೆಡಿಟ್ ಕೊಟ್ಟ ಭಾಗ್ಯಾ
ಭಾಗ್ಯಾಳನ್ನು ಓದಿಸಲೇಬೇಕೆಂದು ಹಠ ಮಾಡಿದ್ದು ಕುಸುಮಾ. ಸೊಸೆಯನ್ನು ವಿದ್ಯಾವಂತಳನ್ನಾಗಿ ಮಾಡುತ್ತೇನೆಂದು ಪಣ ತೊಟ್ಟಿದಳು. ಆ ಹಠ ಇಂದು ವರ್ಕೌಟ್ ಆಗಿದೆ. ಕುಸುಮಾ ಮನೆಯವರಿಗೆಲ್ಲಾ ಸಿಹಿ ಕೊಡಲು ಹೇಳಿದ್ದಾಳೆ. ಅದರಲ್ಲೂ ತಾಂಡವ್‌ಗೂ ಸಿಹಿ ಕೊಡಲು ಹೇಳಿದ್ದಾಳೆ. ಆಗ ಭಾಗ್ಯಾ, ತಾಂಡವ್‌ನ ಕಡೆಗಣಿಸಿದ್ದಾಳೆ ಇದಕ್ಕೆಲ್ಲ ಕಾರಣ ನನ್ನ ಅತ್ತೆ. ಹೀಗಾಗಿ ನನ್ನ ಅತ್ತೆಗೆ ಈ ಕ್ರೆಡಿಟ್ ಎಲ್ಲಾ ಹೋಗಬೇಕು ಅಂತ, ಅತ್ತೆಗೆ ಸಿಹಿ ತಿನ್ನಿಸಿ, ಆಶೀರ್ವಾದ ಪಡೆದಿದ್ದಾಳೆ. ಇದು ಕುಸುಮಾಳಿಗೆ ಮತ್ತಷ್ಟು ಖುಷಿ ಕೊಟ್ಟಿದೆ.
ಮತ್ತೆ ಸಿಡಿದೆದ್ದ ಪೂಜಾ
ಅತ್ತ ಪೂಜಾಗೆ ಮನಶಾಂತಿ ಇಲ್ಲ. ಅಕ್ಕನಿಗೆ ಅನ್ಯಾಯ ಮಾಡಿ, ಶ್ರೇಷ್ಠಾಗೆ ದಾರಿ ಮಾಡಿ ಕೊಟ್ಟುಬಿಟ್ಟೆ ಎಂಬ ಪಶ್ಚಾತ್ತಾಪದಲ್ಲಿ ದಿನ ಕಳೆಯುತ್ತಿದ್ದಾಳೆ. ಇದಕ್ಕೆ ಹೇಗಾದರೂ ಮಾಡಿ ಶ್ರೇಷ್ಠಾಗೆ ಬುದ್ದಿ ಕಲಿಸಬೇಕೆಂದು ಶಪಥ ಮಾಡಿದ್ದಾಳೆ. ಇದೇ ಸಮಯಕ್ಕೆ ಕರೆ ಮಾಡಿದ ಭಾಗ್ಯಾ, ಸಂತಸದ ವಿಚಾರವನ್ನು ಹಂಚಿಕೊಂಡಿದ್ದಾಳೆ. ಎಸ್ಎಸ್ಎಲ್ಸಿಯಲ್ಲಿ ಫಸ್ಟ್ ಕ್ಲಾಸ್ ಎಂಬುದನ್ನು ಹೇಳಿದ್ದಾಳೆ. ಇದನ್ನು ಕೇಳಿದ ಪೂಜಾ, ಇನ್ಮೇಲೆ ಎಲ್ಲವೂ ಒಳ್ಳೆಯದ್ದೇ ಆಗುತ್ತೆ ಅಕ್ಕ ಅಂತ ಮತ್ತೆ ಶಪಥ ಮಾಡಿದ್ದಾಳೆ.

ತಾಂಡವ್ ಬದಲಾಗುವ ಮನುಷ್ಯನಲ್ಲ
ಭಾಗ್ಯಾ ಎಲ್ಲಾ ಸಬ್ಜೆಕ್ಟ್‌ನಲ್ಲೂ ಫೇಲ್ ಆಗಿಯೇ ಆಗುತ್ತಾಳೆ ಎಂಬ ನಂಬಿಕೆಯಲ್ಲಿಯೇ ಇದ್ದವನು ತಾಂಡವ್. ರಿಸಲ್ಟ್ ಎಂದಾಗಲೂ ಕೊಂಕು ಆಡಿದ್ದ. ಆದರೆ ಬಳಿಕ ನೋಡಿದ ಕೂಡಲೇ ದಂಗು ಬಡಿದೋದಾ. ಭಾಗ್ಯಾ ಪಾಸ್ ಆಗಿ ಬಿಟ್ಟಳಾ ಎಂದು ಬೇಸರ ಮಾಡಿಕೊಂಡ. ಅಷ್ಟೇ ಅಲ್ಲ ಇವಳಿಗೆ ಸರಿಯಾಗಿ ಬುದ್ದಿ ಕಲಿಸುತ್ತೀನಿ ಅಂತ ಮತ್ತೆ ಕೆಟ್ಟ ಯೋಚನೆಗೆ ಬಿದ್ದಿದ್ದಾನೆ. ಇದರ ಮಧ್ಯೆ ಆ ಮದುವೆ ಕಾರ್ಡ್ ಬೇರೆ ಟೆನ್ಷನ್ ಕೊಟ್ಟಿದೆ.


Click it and Unblock the Notifications











