Bhagyalakshmi: ತಾಂಡವ್‌ಗೆ ಬುದ್ದಿ ಕಲಿಸ್ತಾಳೆ ಅಂದ್ರೆ ಪೂಜಾ ತಣ್ಣಗಾಗಿಬಿಟ್ಲಾ? ಮುಂದೇನು ಅಂತಿದ್ದಾರೆ ನೆಟ್ಟಿಗರು..?

By ಎಸ್ ಸುಮಂತ್

ಕೆಟ್ಟವರಿಗೆ ಒಳ್ಳೆಯದ್ದೆ ಆಗುತ್ತೆ ಎಂಬ ಲೋಕಾರೂಢಿ ಮಾತೊಂದು ಇದೆ. ತೀರಾ ಒಳ್ಳೆಯವರಾದರೆ ನೋವು ಸದಾ ಬೆನ್ನಿಗಂಟಿದ ಬೇತಾಳದಂತೆ ಬರುವುದು ಗ್ಯಾರಂಟಿ ಎನ್ನಲಾಗುತ್ತದೆ. ಅದಕ್ಕೆ ಪಕ್ಕಾ ಉದಾಹರಣೆಯಾಗಿ ಭಾಗ್ಯಾ ನಿಂತಿದ್ದಾಳೆ. ಅವಳ ಮುಗ್ಧತೆಗೆ, ಒಳ್ಳೆಯತನಕ್ಕೆ ಕೆಟ್ಟದ್ದೇ ಆಗುತ್ತಿದೆ. ದುರಹಂಕಾರದಿಂದ, ಹಣದ ಮದದಿಂದ, ಯಾವುದೋ ಶೋಕಿ ಜೀವನಕ್ಕೆ ಬಿದ್ದಿರುವ ತಾಂಡವ್‌ಗೆ ಸದಾ ಒಳ್ಳೆಯದೇ ಆಗುತ್ತಿದೆ.

ಭಾಗ್ಯಾಳ ಮನೆಯಲ್ಲಿ ಪೂಜಾ ಸಿಕ್ಕಾಪಟ್ಟೆ ಘಾಟಿ ಹೆಣ್ಣು. ಜಗಳಕ್ಕೂ ಮುಂದೆ ಬಂದು ನಿಂತು ಬಿಡುತ್ತಾಳೆ‌. ಅದರಲ್ಲೂ ಅಕ್ಕನ ಸಂಸಾರ ಹಾಳಾಗುತ್ತದೆ ಎಂದರೆ ಅದನ್ನು ಸಹಿಸುವುದಿಲ್ಲ. ಬಾವ ದಾರಿ ತಪ್ಪಿರುವ ವಿಚಾರ ಪೂಜಾಗೆ ಗೊತ್ತು. ಅದಕ್ಕೆಂದೆ ಶ್ರೇಷ್ಠಾ ಹಾಗೂ ತಾಂಡವ್ ಗೆ ಆಗಾಗ ಎಚ್ಚರಿಕೆಯನ್ನು ನೀಡಿದ್ದಾಳೆ. ಆದರೆ ಅದ್ಯಾಕೋ ಪ್ರಯೋಜನವಾದಂತೆ ಕಾಣುತ್ತಿಲ್ಲ. ಪೂಜಾ ಬರೀ ಮಾತಲ್ಲೇ ಹೇಳುತ್ತಿದ್ದಾಳೆ ವಿನಃ ಕಾರ್ಯ ರೂಪಕ್ಕೆ ತರುವಂತೆ ಕಾಣುತ್ತಿಲ್ಲ.

Colors kannada serial Bhagyalakshmi Written Update on may 1st episode

ಬಾವನಿಗೆ ಮತ್ತೆ ಎಚ್ಚರಿಕೆ

ಮನೆಯಲ್ಲಿ ಯಾರಿಗೂ ನೆಮ್ಮದಿಯಿಲ್ಲ, ಸುಖವಿಲ್ಲ, ಹಣವಿಲ್ಲ. ಆದರೆ ತಾಂಡವ್ ತನ್ನ ಪ್ರೇಯಸಿ ಶ್ರೇಷ್ಠಾಗೆ ಮಾತ್ರ ಡೈಮೆಂಡ್ ಕೊಡುವಷ್ಟು ಶ್ರೀಮಂತ. ಈ ವಿಚಾರ ಸುಂದ್ರಿಯಿಂದಾಗಿ ಪೂಜಾ ಕಿವಿಗೆ ಬಿದ್ದಿದೆ. ತಾಂಡವ್ ಮನೆಗೆ ಬರುತ್ತಿದ್ದಂತೆ ಆ ವಿಚಾರ ತೆಗೆದಿದ್ದಾಳೆ. ಬಾವ ಮತ್ತೆ ಅವಳ ಸಹವಾಸ ಮಾಡ್ತಾ ಇದ್ದೀರಾ. ಇದು ಸರಿ ಇರಲ್ಲ. ಡೈಮೆಂಡ್ ಕೊಟ್ಟು ಸುಸ್ತಾಗಿರಬೇಕು ಅಲ್ವಾ ಎಂದಾಗ ತಾಂಡವ್ ಮೊದಲಿನಂತೆ ಹೆದರಿಲ್ಲ. ಪೂಜಾಗೆ ಧಮ್ಕಿ ಹಾಕಿದ್ದಾನೆ.

ಪೂಜಾಳನ್ನು ಬೈದ ಕುಸುಮಾ

ತಾಂಡವ್ ಬುದ್ದಿ ಕಲಿಯದ ಹೊರತು, ಹೆಂಡತಿಯನ್ನು ಒಪ್ಪಿಕೊಳ್ಳದ ಹೊರತು ಕುಸುಮಾ ಸಹಿಸುವುದಿಲ್ಲ. ಮನೆಯವರ್ಯಾರು ತಾಂಡವ್ ಜೊತೆಗೆ ಮಾತನಾಡುವುದು ಕೂಡ ಇಷ್ಟವಿಲ್ಲ. ಪೂಜಾ, ತಾಂಡವ್ ಜೊತೆಗೆ ಮಾತನಾಡುತ್ತಿದ್ದನ್ನು ಕಂಡು ಕುಸುಮಾ ಬೈದಿದ್ದಾಳೆ. ಪಕ್ಕದ ಮನೆಯವರ ಜೊತೆಗೆ ಏನು ಕೆಲಸ ಎಂದು ಕರೆದುಕೊಂಡು ಹೋಗಿದ್ದಾಳೆ.

ಪೂಜಾಳನ್ನು ಮತ್ತೆ ರೇಗಿಸಿದ ತಾಂಡವ್

ಪೂಜಾ ತಾನೂ ಸಿಕ್ಕಾಪಟ್ಟೆ ಸ್ಟ್ರಾಂಗ್ ಎಂದುಕೊಂಡಿದ್ದಳು. ಯಾಕಂದ್ರೆ ತಾಂಡವ್ ಮೊದಲು ಅವರ ಧಮ್ಕಿಗೆ ಹೆದರುತ್ತಿದ್ದ. ಈಗ ಅವನೇ ಧಮ್ಕಿ ಹಾಕುತ್ತಿದ್ದಾನೆ. ಇದು ಪೂಜಾಳನ್ನು ವೀಕ್ ಮಾಡಿದೆ. ಅಕ್ಕನ ಸಂಸಾರ ಹಾಳಾಗಿ ಬಿಡುತ್ತಲ್ಲ. ಇನ್ನೊಂದು ಸಂಬಂಧ ಇದೆ ಎಂದು ಗೊತ್ತಾದರೆ ಅಕ್ಕ ಬದುಕುತ್ತಾಳಾ. ನಾನು ಯಾವುದೇ ಕಾರಣಕ್ಕೂ ವೀಕ್ ಆಗಬಾರದು. ಇದು ಬಾವನಿಗೆ ಸಿಗುವ ಅವಕಾಶವಾಗಿ ಬಿಡುತ್ತದೆ ಎಂದು ಕಣ್ಣಲ್ಲಿ ನೀರು ಹಾಕುತ್ತಾ ಕುಳಿತಿದ್ದಳು. ಅಷ್ಟರಲ್ಲಿ ಅಲ್ಲಿಗೆ ಬಂದ ತಾಂಡವ್ ಮತ್ತೆ ತನ್ನ ದುರಹಂಕಾರದ ನಡೆ ಪ್ರದರ್ಶಿಸಿದ್ದಾನೆ.

Colors kannada serial Bhagyalakshmi Written Update on may 1st episode

ಶ್ರೇಷ್ಠಾಳಿಂದ ದಾರಿ ತಪ್ಪಿದ ತಾಂಡವ್

ತಾಂಡವ್ ಈ ಮೊದಲು ಪೂಜಾಳ ಮಾತಿಗೆ ಹೆದರುತ್ತಿದ್ದ. ಆದರೆ ಶ್ರೇಷ್ಠಾ ಯಾರ ಮಾತಿಗೂ ಹೆದರಲ್ಲ. ಪೂಜಾಗೆ ಸತ್ಯವನ್ನೇ ಹೇಳಿದ್ದಾಳೆ. ಏನೇ ಮಾಡಿಕೊಳ್ಳುತ್ತೀಯಾ ಎಂದು ಪ್ರಶ್ನೆ ಮಾಡಿದ್ದಾಳೆ. ಈಗ ತಾಂಡವ್ ತಿರುಗಿ ಬೀಳುವಂತೆ ಹೇಳಿದ್ದಾಳೆ. ಶ್ರೇಷ್ಠಾಳ ಮಾತನ್ನು ಭಕ್ತಿ ಭಾವದಿಂದ ಪಾಲನೆ ಮಾಡುವ ತಾಂಡವ್ ತನ್ನ ಇನ್ನೊಂದು ಕ್ರೂರ ಮುಖ ತೋರಿಸುತ್ತಿದ್ದಾನೆ. ಎಲ್ಲಾ ಹೇಳ್ತೀನಿ ಅಂತಿದ್ದೆ. ಯಾಕೆ ಅಮ್ಮ ಹತ್ರ ಏನು ಹೇಳಿಲ್ಲ. ಧೈರ್ಯ ಸಾಕಾಗಿಲ್ವಾ?ಏನು ಸೋತು ಹೋಗಿ ಬಿಟ್ಟೆ ಅಂತ ಟೆರೆಸ್ ಮೇಲಿಂದ ಬೀಳಲು ಬಂದ್ಯಾ ಅಂತೆಲ್ಲಾ ಪೂಜಾಳಿಗೆ ಮತ್ತಷ್ಟು ಕಿಡಿ ಹತ್ತಿಸಿದ್ದಾನೆ.

More from Filmibeat

English summary
Bhagyalakshmi kannada serial today episode. Here is the details about Pooja lost to Tandav;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X