Bhagyalakshmi: ಭಗಾಯ ಜಾಗಕ್ಕೆ ಭಾಗ್ಯಾ ಹೋದಳಾ? ಸ್ಟಾರ್ ಹೊಟೇಲ್‌ನಲ್ಲಿ ಕುಸುಮಾ ಸೊಸೆ ಕಂಗಾಲು!
ಭಾಗ್ಯಾಳ ಸ್ವಾಭಿಮಾನವನ್ನು ಕೆಣಕಿದ ತಾಂಡವ್‌ಗೆ ಸರಿಯಾದ ಉತ್ತರವೇ ಸಿಕ್ಕಿದೆ. ಹಣದ ವಿಚಾರ ತೆಗೆದರೆ ಭಾಗ್ಯಾಳ ಕೈಲಿ ನಿಭಾಯಿಸುವುದಕ್ಕೆ ಆಗಲ್ಲ. ಆಗ ಖಂಡಿತ ಸೋಲನ್ನೊಪ್ಪಿಕೊಂಡು ಮನೆ ಬಿಟ್ಟು ಹೋಗುತ್ತಾಳೆ ಎಂಬ ನಂಬಿಕೆ ಆತನದ್ದು. ಅದನ್ನೇ ಪ್ರಯೋಗ ಮಾಡಲು ಹೋದ. ಭಾಗ್ಯ ಅದಕ್ಕೆಲ್ಲಾ ಬಗ್ಗಲಿಲ್ಲ. ಬದಲಿಗೆ ಅರ್ಧ ಹಣ ಕೊಡುತ್ತೇನೆಂದು ಒಪ್ಪಿಕೊಂಡೆ ಬಿಟ್ಟಳು.
ಮನೆ ನಿಭಾಯಿಸಲು ಭಾಗ್ಯಾ ಕೆಲಸಕ್ಕೇನೋ ಸೇರಿದಳು. ಆದರೆ ಸ್ಟಾರ್ ಹೊಟೇಲ್‌ಗೆ ಹೋಗಿದ್ದೇಗೆ ಎಂಬುದೇ ಗೊತ್ತಾಗಿಲ್ಲ. ಬ್ರೋಕರ್ ಕೂಡ ಗೊಂದಲದಲ್ಲಿ ಇದ್ದಾನೆ. ಇತ್ತ ಸ್ಟಾರ್ ಹೋಟೆಲ್‌ನಲ್ಲಿ ಅದೃಷ್ಟ ಎಂಬಂತೆ ಕೆಲಸವೂ ಸಿಕ್ಕಿದೆ. ಆದರೆ ಕೆಲಸ ಏನು? ಇವರೆಲ್ಲಾ ಏನು ಮಾತನಾಡ್ತಿದ್ದಾರೆ ಎಂಬುದೇ ಭಾಗ್ಯಗೆ ಅರ್ಥವಾಗುತ್ತಿಲ್ಲ.

ಮೊದಲ ದಿನ ಕೆಲಸಕ್ಕೆ ಬಂದ ಖುಷಿ
ಭಾಗ್ಯಾಳ ಎಸ್ಎಸ್ಎಲ್‌ಸಿ ರಿಸಲ್ಟ್ ಬರ್ತಿದ್ದಂತೆ ಮನೆಯಲ್ಲಿ ಅತ್ತೆ, ಮಾವ, ಮಕ್ಕಳ ಖುಷಿಗೆ ಪಾರವೇ ಇಲ್ಲ. ಅಷ್ಟೇ ಯಾಕೆ ಭಾಗ್ಯಾಳಿಗೂ ಪಾಸ್ ಆದ ವಿಚಾರ ದೊಡ್ಡಮಟ್ಟದಲ್ಲಿಯೇ ಖುಷಿ ಕೊಟ್ಟಿದೆ. ಅದೇ ಖುಷಿಯಲ್ಲಿ ಮೊದಲ ದಿನ ಕೆಲಸಕ್ಕೆ ಬಂದಿದ್ದಾಳೆ. ಕೊಂಚ ತಡವಾದರೂ ಕೆಲಸದಲ್ಲಿ ಮುಂದುವರೆದಿದ್ದಾಳೆ.
ಸೂಟು,ಬೂಟು ಕೊಟ್ಟ ಸಿಬ್ಬಂದಿ
ಅದು ಹೇಳಿ ಕೇಳಿ ಫೈವ್ ಸ್ಟಾರ್ ಹೊಟೇಲ್. ಇಂಟರ್ ವ್ಯೂ ಮಾಡಿಯೇ ಕೆಲಸಕ್ಕೆ ತೆಗೆದುಕೊಂಡಿದ್ದಾರೆ. ಒಂದಷ್ಟು ರೂಲ್ಸ್, ರೆಗ್ಯುಲೇಷನ್ಸ್ ಇದೆ. ಅದೇ ರೀತಿ ಎಲ್ಲರಿಗೂ ಡ್ರೆಸ್ ಕೋಡ್ ಕೂಡ ಇದೆ. ಅದರಂತೆ ಹೊಸದಾಗಿ ಜಾಯಿನ್ ಆದವರಿಗೆಲ್ಲಾ ಡ್ರೆಸ್ ಕೋಡ್ ನೀಡಲಾಗಿದೆ. ಅದರಲ್ಲಿ ಭಾಗ್ಯಾಳಿಗೂ ಬ್ಲೇಜರ್ ಸೆಟ್ ನೀಡಲಾಗಿದೆ. ಆದರೆ ಭಾಗ್ಯಾಳಿಗೆ ಡ್ರೆಸ್ ನೋಡಿನೇ ಶಾಕ್ ಆಗಿದ್ದಾಳೆ. ಈ ಡ್ರೆಸ್ ತೊಡಬೇಕಾ ಎಂದೇ ಪ್ರಶ್ನೆ ಮಾಡಿಕೊಂಡಿದ್ದಾಳೆ. ಅಷ್ಟರಲ್ಲಿ ಸಂದರ್ಶನದ ವೇಳೆ ಪರಿಚಯವಾಗಿದ್ದ ಗೆಳತಿ ಸಿಕ್ಕಿದ್ದು, ಮತ್ತಷ್ಟು ಗೊಂದಲ ಮಾಡಿದ್ದಾಳೆ. ವಿಧಿ ಇಲ್ಲದೇ ಡ್ರೆಸ್ ಹಾಕಿಕೊಳ್ಳಲು ರೂಮಿಗೆ ಹೋಗಿದ್ದಾಳೆ.
ಭಗಾಯಳನ್ನು ಹೊಗಳಿದ ಸಹಪಾಠಿ
ಸಂದರ್ಶನದ ವೇಳೆ ಭಾಗ್ಯಾಳ ಹೆಸರನ್ನು ಭಗಾಯ ಎಂದೇ ಕರೆಯಲಾಗಿದೆ. ಭಾಗ್ಯಾಳ ಕೆಲಸದ ವಿಚಾರಕ್ಕೆ ಇಲ್ಲೇ ಇರೋದು ಟ್ವಿಸ್ಟ್ ಎನಿಸುತ್ತಿದೆ. ಯಾಕಂದ್ರೆ ಕೆಲಸಕ್ಕೆ ಹೇಳಿದ್ದ ಬ್ರೋಕರ್‌ಗೂ ಗೊತ್ತಿಲ್ಲ ಭಾಗ್ಯಾಗೆ ಕೆಲಸ ಸಿಕ್ಕಿರುವುದು. ಕುಸುಮಾಳನ್ನು ತಾನೇ ಕರೆದುಕೊಂಡು ಹೋಗಿದ್ದಾನೆ. ಹೀಗಾಗಿ ಭಾಗ್ಯಾ ಇನ್ಯಾರದ್ದೋ ರಿಪ್ಲೇಸ್ಮೆಂಟ್ ಇರಬಹುದು ಎಂಬ ಅನುಮಾನ ಕಾಡುತ್ತಿದೆ. ಯಾಕಂದ್ರೆ ಅಲ್ಲಿಯೇ ಕೆಲಸಕ್ಕೆ ಬಂದವಳಿಗೆ ಇದೇ ಭಗಾಯ ಆಕೆಯ ಕಾಲೇಜಿನಲ್ಲಿಯೇ ಸೀನಿಯರ್ ಸ್ಟುಡೆಂಟ್. ಈಗ ತಾನೇ ಎಸ್ಎಸ್ಎಲ್‌ಸಿ ಮುಗಿಸಿರುವ ಭಾಗ್ಯಗೆ ಇದೇ ಗೊಂದಲವಾಗಿರುವುದು.

ಭಾಗ್ಯಾಳ ಅದೃಷ್ಟ ಕೈ ಹಿಡಿಯುತ್ತಾ?
ಡ್ರೆಸ್ ಹಾಕಿಕೊಳ್ಳಲೇಬೇಕು ಎಂದರು, ಹಾಕಿಕೊಂಡಳು. ಭಾಗ್ಯಾಗೆ ತಾನು ಕೆಲಸ ಕೇಳಿರುವುದು ಅಡುಗೆ ಮಾಡುವ ಕೆಲಸಕ್ಕೆ ಆದರೆ ಡ್ರೆಸ್ ಕೋಡ್ ಯಾಕೆ ಎಂಬ ಪ್ರಶ್ನೆ. ಯಾರಿಂದಾನೂ ಉತ್ತರ ಮಾತ್ರ ಸಿಗುತ್ತಿಲ್ಲ. ಏನು ಮಾಡಬೇಕೆಂಬುದು ಅರ್ಥವಾಗದೆ ಮುನ್ನಡೆಯುತ್ತಿದ್ದಾಳೆ. ಅಲ್ಲಿ ಬೇರೆ ಬೇಗ ಬನ್ನಿ ಬೇಗ ಬನ್ನಿ ಅಂತ ಉಳಿದ ಸಿಬ್ಬಂದಿಗಳು ಕರೆಯುತ್ತಿದ್ದಾರೆ. ಈಗೇನಿದ್ದರೂ ಭಾಗ್ಯಾಳಿಗೆ ಅವತ್ತು ಸಂದರ್ಶನದಲ್ಲಿ ಅದೃಷ್ಟ ಕೈ ಹಿಡಿದಂತೆ ಈಗ ಕೆಲಸದಲ್ಲೂ ಕೈ ಹಿಡಿಯಬೇಕಾಗಿದೆ.


Click it and Unblock the Notifications











