Bhagyalakshmi: ಹೊಟೇಲ್‌ನಲ್ಲಿ ಭಾಗ್ಯಾಗೆ ಹೊಸ ಸಂಕಷ್ಟ; ಆಕೆಯನ್ನು ಗೆಲ್ಲಿಸುವಂತೆ ಫ್ಯಾನ್ಸ್ ಮನವಿ

By ಎಸ್ ಸುಮಂತ್

ಹೆಣ್ಮಕ್ಳೆ ಸ್ಟ್ರಾಂಗು ಗುರು ಎಂಬ ಮಾತಿದೆ. ಆದರೆ ಭಾಗ್ಯಾ ಸಿಕ್ಕಾಪಟ್ಟೆ ವೀಕ್ ಆದವಳಂತೆ, ಹೆದರಿದವಳಂತೆ ಕಾಣುತ್ತಿದ್ದಾಳೆ. ನಿಜ ಜೀವನದಲ್ಲಿ ಆ ರೀತಿ ಅನಾಹುತ ಸಂಭವಿಸಿದಾಗ, ಭಾಷೆ ಬರದ ಹುಡುಗಿ ಹೆದರಬಹುದು. ಆದರೆ ಇದು ಸೀರಿಯಲ್ ಆಗಿರುವ ಕಾರಣ ಅಷ್ಟೊಂದು ವೀಕ್ ಮೈಂಡೆಡ್ ರೀತಿ ತೋರಿಸಬೇಡಿ ಎಂದು ಮನವಿ ಮಾಡುತ್ತಿದ್ದಾರೆ. ಧಾರಾವಾಹಿ ಮೂಲಕ ಸ್ಟ್ರಾಂಗ್ ಆದಂತ ಸಂದೇಶ ಹೋಗಲಿ ಎಂದು ರಿಕ್ವೆಸ್ಟ್ ಮಾಡುತ್ತಿದ್ದಾರೆ.

ಯಾವ ಹೂವು ಯಾರ ಮುಡಿಗೋ ಎಂಬ ಮಾತಿದೆ. ಅದರಂತೆ ಭಾಗ್ಯಾ ಲೈಫ್ ನಲ್ಲೂ ನಡೆದಿದೆ. ಯಾರೋ ಹೋಗಬೇಕಾದ ಇಂಟರ್ ವ್ಯೂಗೆ ಭಾಗ್ಯಾ ಹೋಗಿ, ಕೆಲಸ ಗಿಟ್ಟಿಸಿಕೊಂಡಿದ್ದಾಳೆ. ಆದರೆ ಈಗ ಭಾಗ್ಯಾಗೆ ಕೆಲಸವೇ ದೊಡ್ಡ ತಲೆನೋವಾಗಿದೆ. ಏನು ಮಾಡಬೇಕೆಂಬುದು ತಿಳಿಯದೆ ಗೊಂದಲದಲ್ಲಿದ್ದಾಳೆ. ಆದರೆ ಈ ಹೊಟೇಲ್ ಮ್ಯಾನೇಜ್ಮೆಂಟ್ ವರ್ಕ್ ನಲ್ಲಿ ಭಾಗ್ಯಾಳನ್ನು ಗೆಲ್ಲಿಸಿ ಎನ್ನುತ್ತಿದ್ದಾರೆ ಫ್ಯಾನ್ಸ್.

Colors kannada serial Bhagyalakshmi Written Update on may 22nd episode

ಸರ್ವ್ ಮಾಡಲು ಯೋಚಿಸಿದ ಭಾಗ್ಯಾ

ಫೈವ್ ಸ್ಟಾರ್ ಹೊಟೇಲ್‌ನಲ್ಲಿ ತನ್ನ ಮುಗ್ಧತೆಯಿಂದಾನೇ ಕೆಲಸ ಗಿಟ್ಟಿಸಿಕೊಂಡ ಭಾಗ್ಯಾ, ಮೊದಲ ದಿನ ಕೆಲಸಕ್ಕೆ ಬಂದಿದ್ದಾಳೆ. ಆ ಡ್ರೆಸ್ ಕೋಡ್ ನೋಡಿಯೇ ಗಾಬರಿಯಾಗಿದ್ದಾಳೆ. ಈ ರೀತಿಯಾದ ಡ್ರೆಸ್ ಹಾಕಿಕೊಳ್ಳಬೇಕಾ ಎಂದು. ಆಮೇಲೆ ಗಟ್ಟಿ‌ಮನಸ್ಸು ಮಾಡಿ ಆ ಡ್ರೆಸ್ ಹಾಕಿದ್ದಾಳೆ. ಆದರೆ ಎಲ್ಲರೂ ಅವರವರ ಟೇಬಲ್ ಅಟೆಂಡ್ ಮಾಡುತ್ತಿದ್ದರೆ, ಭಾಗ್ಯಾಗೆ ಗಾಬರಿಯಾಗಿದೆ. ಅಲ್ಲಿ ಹೋಗಿ ಕೇಳಬೇಕು ಎಂದು ಯೋಚಿಸಿದ್ದಾಳೆ.

ಅಡುಗೆ ಕೆಲಸ ಕೊಡಲು ಕೇಳಿದ ಭಾಗ್ಯಾ

ಭಾಗ್ಯಾಗೆ ಈಗಾಗಲೇ ಹೊಟೇಲ್ ವಾತಾವರಣ ಕೊಂಚ ಭಯ ತರಿಸಿದೆ. ಎಲ್ಲರೂ ಇಂಗ್ಲೀಷ್‌ನಲ್ಲೇ ಮಾತನಾಡುತ್ತಾರೆ. ಈಗ ಬಂದವರಿಗೆ ಏನು ಬೇಕು ಎಂದು ಕೇಳಿದರೆ ಹೇಗೆ ಹ್ಯಾಂಡಲ್ ಮಾಡುವುದು ಎಂದು ತಿಳಿಯುತ್ತಿಲ್ಲ. ಎಲ್ಲರೂ ಇಂಗ್ಲೀಷ್‌ನಲ್ಲೇ ಮಾತನಾಡಿದರೆ ಏನು ಮಾಡುವುದು ಎಂದು ತಿಳಿಯದೆ, ಈ ಕೆಲಸ ಬಿಟ್ಟು ಅಡುಗೆ ಕೆಲಸ ಕೇಳುವ ನಿರ್ಧಾರಕ್ಕೆ ಬಂದಿದ್ದಾಳೆ. ಅದೇ ಧೈರ್ಯವಾಗಿ ಮ್ಯಾನೇಜರ್ ಬಳಿ ಹೋಗಿದ್ದಾಳೆ.

ಭಾಗ್ಯಾಳಿಗೆ ರೇಗಿದ ಮ್ಯಾನೇಜರ್

ಮ್ಯಾನೇಜರ್ ಮೊದಲೇ ಕೋಪದಲ್ಲಿ ನಿಂತಿದ್ದ. ಆತನ ಬಳಿ ಹೋಗಿ, ನನಗೆ ಅಡುಗೆ ಮಾಡುವ ಕೆಲಸವಿದ್ದರೆ ಕೊಡಿ ಎಂದು ಭಾಗ್ಯಾ ಭಯದಿಂದಾನೇ ಕೇಳಿದ್ದಾಳೆ. ಆದರೆ ಆ ಮ್ಯಾನೇಜರ್ ಗದರಿದ್ದಾನೆ. ಇಲ್ಲಿ ನೀವೂ ಹೇಳಿದಂತೆಲ್ಲಾ ಕೆಲಸ ಕೊಡುವುದಕ್ಕೆ ಆಗಲ್ಲ, ಕೊಟ್ಟ ಕೆಲಸವನ್ನು ಮಾಡಿ, ಮೊದಲು ನಿಮ್ಮ ಟೇಬಲ್‌ನಲ್ಲಿರುವ ಗ್ರಾಹಕರನ್ನು ಅಟೆಂಡ್ ಮಾಡಿ ಎಂದು ಗದರಿದ್ದಾನೆ.

Colors kannada serial Bhagyalakshmi Written Update on may 22nd episode

ಭಾಗ್ಯಾಳನ್ನು ಗೆಲ್ಲಿಸಲೇಬೇಕು ಡೈರೆಕ್ಟರ್

ಮ್ಯಾನೇಜರ್ ಬೈಗುಳದಿಂದ ಭಾಗ್ಯಾ ಕಂಗಾಲಾಗಿದ್ದಾಳೆ. ಆದರೆ ಇದು ವೀಕ್ಷಕರಿಗೆ ಕೊಂಚವೂ ಇಷ್ಟವಿಲ್ಲ. ಭಾಗ್ಯಾಳನ್ನು ಸ್ಟ್ರಾಂಗ್ ಆಗಿ ತೋರಿಸಬೇಕು ಎಂಬುದೇ ವೀಕ್ಷಕರ ಒತ್ತಾಯವಾಗಿದೆ. ಅದೇ ಹೊಟೇಲ್‌ನಲ್ಲಿ ಕೆಲಸ ಉಳಿಸಿಕೊಳ್ಳಬೇಕು, ಕಷ್ಟಪಟ್ಟು ಇಂಗ್ಲೀಷ್ ಕಲಿತು, ಸರ್ವೈವ್ ಆಗಬೇಕು. ಒಂದು ದಿನ ಅದೇ ಹೊಟೇಲ್‌ಗೆ ಬಂದ ತಾಂಡವ್‌ಗೂ ಅದೇ ಕಾನ್ಫಿಡೆನ್ಸ್‌ನಿಂದ ಸರ್ವ್ ಮಾಡಿ, ಅವನಿಗೆ ಶಾಕ್ ನೀಡಬೇಕು. ಈ ರೀತಿಯೆಲ್ಲಾ ಭಾಗ್ಯಾ ಬಗ್ಗೆ ವೀಕ್ಷಕರು ಯೋಚಿಸುತ್ತಿದ್ದಾರೆ. ಇದು ನೆರವೇರುತ್ತಾ? ಹೇಗೆ ಎಂಬುದನ್ನು ನೋಡಬೇಕಿದೆ.

More from Filmibeat

English summary
Bhagyalakshmi kannada serial Written Update on may 22nd episode. Here is the details about audience who appealed to the director off Bhagyalakshmi;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X