Bhagyalakshmi: ಹಳ್ಳ ಹಿಡಿಯುತ್ತಿರುವ ಮಗಳ ಸಂಸಾರ, ಬಿಗಿತ್ತಿಯ ಹಠ, ಪುಷ್ಪಾಳ ತಾಳ್ಮೆ ಕೆಡಿಸಿದೆ!
ಭಾಗ್ಯಲಕ್ಷ್ಮೀ ಧಾರಾವಾಹಿಯನ್ನು ನೋಡುವ ಅದೆಷ್ಟೋ ಹೆಣ್ಣು ಮಕ್ಕಳು, ಇದ್ದರೆ ಇಂಥ ಅತ್ತೆ ಇರಬೇಕುಅಂತ ಬಯಸುತ್ತಿದ್ದಾರೆ. ಆದರೆ ಅದು ರಿಯಲ್ ಲೈಫ್‌ನಲ್ಲಿ ಎಷ್ಟು ಸಾಧ್ಯವೋ ಇಲ್ವೋ ಗೊತ್ತಿಲ್ಲ. ಈ ಸತ್ಯ ಕೂಡ ಹಲವರಿಗೆ ಗೊತ್ತು. ತನ್ನ ಸೊಸೆಯನ್ನ ಮಗ ನಿಂದಿಸುತ್ತಿದ್ದಾನೆ ಎಂದು ಗೊತ್ತಾದ ಕೂಡಲೇ ಕುಸುಮಾ ಮೊದಲು ಮಾಡಿದ್ದು, ಅವಳಿಗೆ ಶಿಕ್ಷಣ ಕೊಡಿಸುವ ಕೆಲಸ. ಆದರೆ ಇದೇ ವಿಚಾರ ತಾಂಡವ್‌ನನ್ನು ಕೋಪಕ್ಕೆ ದೂಡಿತ್ತು. ಅಂದಿನಿಂದ ಮನೆಯಲ್ಲಿ ನೆಮ್ಮದಿ ಇಲ್ಲ.
ಭಾಗ್ಯಾ, ಅತ್ತೆಯ ಮಾತನ್ನು ಯಾವತ್ತಿಗೂ ಮೀರುವುದಿಲ್ಲ. ಅತ್ತೆ-ಮಾವನನ್ನು ದೇವರಿಗೆ ಸಮಾನವಾಗಿ ನೋಡುತ್ತಾಳೆ. ಹೀಗಾಗಿಯೇ ಅತ್ತೆ ಏನೇ ಹೇಳಿದರು ಭಾಗ್ಯಾ ಅದನ್ನು ಮಾಡುತ್ತಾಳೆ. ಹಾಗಂತ ಶಿಕ್ಷಣ ಪಡೆಯುವುದು ತಪ್ಪೇನಿಲ್ಲ ಅಲ್ವಾ ಅದೊಂದು ಆತ್ಮ ಸ್ಥೈರ್ಯವನ್ನು ಹೆಚ್ಚಿಸುವಂತದ್ದು. ಆದರೆ ಈಗ ಭಾಗ್ಯಾಳ ತಾಯಿ ಅದನ್ನೇ ತಪ್ಪು ಎನ್ನುತ್ತಿದ್ದಾಳೆ.

ಭಾಗ್ಯಾಳ ಸಾಲಕ್ಕೆ ಅತ್ತೆ-ಮಾವ ಚಿಂತೆ
ಭಾಗ್ಯಾ ತಪ್ಪು ಮಾಡಿ ಬಿಟ್ಟಿದ್ದಾಳೆ. ಶ್ರೇಷ್ಠಾಳಿಂದ ಹಣ ತೆಗೆದುಕೊಂಡಿದ್ದನ್ನು ಹೇಳಿಲ್ಲ. ಹೀಗಾಗಿ ಅತ್ತೆ, ಸೊಸೆ ನಡುವೆ ಜಗಳವಾಗುತ್ತದೆ ಎಂದೇ ತಾಂಡವ್ ಭಾವಿಸಿದ್ದ. ಆದರೆ ಅದೆಲ್ಲವೂ ಉಲ್ಟಾ ಆಗಿತ್ತು. ಅತ್ತೆ, ಸೊಸೆ ಮಾಮೂಲಿಯಂತೆಯೇ ಇದ್ದರು. ಈಗ ಸೊಸೆಯ ಕಷ್ಟಕ್ಕೆ ಹೇಗೆ ಆಗುವುದು ಎಂಬುದನ್ನು ಯೋಚನೆ ಮಾಡುತ್ತಿದ್ದಾರೆ.
ಬೀಗಿತ್ತಿಗೆ ಜೋರು ಮಾಡಿದ ಪುಷ್ಪಾ
ಮೊದಲೇ ಭಾಗ್ಯಾಳ ಸಂಸಾರ ಹಾಳಾಗುತ್ತಿದೆ ಎಂದು ಪುಷ್ಪಾ ಕೊರಗುತ್ತಿದ್ದಾಳೆ. ಭಾಗ್ಯಾಳಿಗೆ ಈ ರೀತಿ ಹಠ ಯಾಕೆ ಎಂದು ಪ್ರಶ್ನೆ ಮಾಡಿಕೊಳ್ಳುತ್ತಿದ್ದಾಳೆ. ಇದೆಲ್ಲಾ ಆಗುತ್ತಿರುವುದು ಬೀಗಿತ್ತಿ ಕುಸುಮಾಳ ಹಠದಿಂದಾನೇ ಎಂದು ಕೋಪ ಮಾಡಿಕೊಂಡ ಪುಷ್ಪಾ, ನೇರವಾಗಿ ಆಕ್ರೋಶ ಹೊರ ಹಾಕಿದ್ದಾಳೆ. ಬೀಗ್ತಿ ಅಮ್ಮ ನೀವೂ ಹಠ ಮಾಡುತ್ತಿರುವುದಕ್ಕೆ ಇಂದು ನನ್ನ ಮಗಳ ಸಂಸಾರ ಹಾಳಾಗುತ್ತಿರುವುದು. ಈ ಓದು ಗೀದು ಎಲ್ಲಾ ಬಿಟ್ಟು ಸಂಸಾರ ಮಾಡಿಕೊಂಡು ಹೋಗಬಹುದಲ್ವಾ ಎಂದಿದ್ದಾಳೆ. ಇದು ಕುಸುಮಾಗ್ಯಾಕೋ ಸರಿ ಕಾಣಲಿಲ್ಲ.

ಭಾಗ್ಯಾ ಕಾಲಿಗೆ ಬೀಳಲಿ ಎಂದ ತಾಂಡವ್
ಸುನಂದಾಗೆ ಮಗಳ ಸಂಸಾರ ಹಾಳಾಗಿ ಹೋದರೆ ಎಂಬ ಭಯ. ಬೀಗ್ತಿಗಂತು ಹೇಳುವುದಕ್ಕೆ ಆಗಲ್ಲ. ಅಟ್ಲಿಸ್ಟ್ ಅಳಿಯನತ್ರ ಆದ್ರೂ ಮಾತನಾಡಿ ಸರಿ ಮಾಡಿಕೊಳ್ಳೋಣಾ ಎಂದು ಹೋಗಿದ್ದಳು. ಆದರೆ ತಾಂಡವ್ ತನ್ನ ಅಹಂಕಾರವನ್ನೆಲ್ಲಿ ಬಿಡುತ್ತಾನೆ. ಮತ್ತೆ ಅದೇ ಮಾತುಗಳನ್ನಾಡಿದ್ದಾನೆ. ಭಾಗ್ಯಾ ನನ್ನ ಕಾಲಿಗೆ ಬೀಳಲಿ, ತಪ್ಪಾಯ್ತು ಅಂತ ಕೇಳಿಕೊಳ್ಳಲಿ. ಆಮೇಲೆ ಯೋಚನೆ ಮಾಡ್ತೀನಿ ಎಂದು ಅಹಂಕಾರದ ಮಾತುಗಳನ್ನಾಡಿದ್ದಾನೆ.
ಪೂಜಾಳ ನಡೆ ಕಂಡು ತಾಂಡವ್ ವ್ಯಂಗ್ಯ
ಪೂಜಾಗೆ ಇದೆಲ್ಲವನ್ನು ನೋಡಿ ಸಾಕಾಗಿದೆ. ಬಾವನನ್ನು ಹೀಗೆ ಬಿಟ್ಟರೆ ಕೈ ಮೀರಿ ಹೋಗುತ್ತಾನೆ ಎಂಬುದು ಗೊತ್ತಾಗಿದೆ. ಯಾಕಂದ್ರೆ ಏನಾದರೂ ಹೇಳಿದರೇ ಹೆದರುತ್ತಿದ್ದ ತಾಂಡವ್ ಇದೀಗ ಏನೇ ಮಾಡಿಕೊಳ್ತೀಯ ಅಂತ ಏಕವಚನದಲ್ಲಿ ಮಾತನಾಡುವುದಕ್ಕೆ ಶುರು ಮಾಡುದ್ದಾನೆ. ಈ ಬೆಳವಣಿಗೆ ಸರಿಯಲ್ಲ ಅಂತ ಪೂಜಾಗೆ ಅನ್ನಿಸಿದೆ. ಇದಕ್ಕೆಲ್ಲಾ ಏನಾದರೂ ಮಾಡಲೇಬೇಕೆಂದು ಲಗೇಜು ಸಮೇತ ಹೊರಟಿದ್ದಾಳೆ.
ಪೂಜಾ ಲೆಕ್ಕಾಚಾರ ಏನು?
ಪೂಜಾಗೆ ಅದೇ ಸಮಯಕ್ಕೆ ತಾಂಡವ್ ಎದುರಾಗಿದ್ದಾನೆ. ಮತ್ತದೇ ವ್ಯಂಗ್ಯ. ತಾಂಡವ್ ಇನ್ಯಾವತ್ತಿಗೂ ಬುದ್ದಿ ಕಲಿಯುವುದಕ್ಕೆ ಸಾಧ್ಯವೇ ಇಲ್ಲ ಎಂಬಂತ ಕ್ರೂರತೆ ತೋರಿಸುತ್ತಿದ್ದಾನೆ. ಆದರೆ ಪೂಜಾ ಅದಕ್ಕೆಲ್ಲಾ ಫುಲ್ ಸ್ಟಾಪ್ ಇಡುವಂತ ಕೆಲಸಕ್ಕೆ ಕೈ ಹಾಕಿದ್ದಾಳೆ.


Click it and Unblock the Notifications











