Bhagyalakshmi: ಭಾಗ್ಯಾ ಸೋತು ತಾಂಡವ್ ಕಾಲು ಹಿಡಿಯಬೇಕೆಂದ ಸುನಂದಾಳ ವಿರುದ್ಧ ವೀಕ್ಷಕರು ಗರಂ

By ಎಸ್ ಸುಮಂತ್

ಮಗಳ ಸಂಸಾರ ಹಾಳಾಗುತ್ತಿರುವುದೇ ಬೀಗಿತ್ತಿಯ ಹಠದಿಂದ ಎಂಬುದಾಗಿ ಸುನಂದಾ ತಪ್ಪಾಗಿ ತಿಳಿದಿದ್ದಾಳೆ‌. ಹೀಗಾಗಿಯೇ ಬೀಗಿತ್ತಿ ಎಂದರೆ ಹೆದರುತ್ತಿದ್ದ ಸುನಂದಾ ಇದೀಗ ಕುಸುಮಾ ವಿರುದ್ಧವೇ ಜೋರು ಜೋರಾಗಿ ಮಾತನಾಡುತ್ತಿದ್ದಾಳೆ. ಆದರೆ ಕುಸುಮಾ ಮಾಡುತ್ತಿರುವುದು ಒಳ್ಳೆಯದು ಎಂಬುದನ್ನು ಅರ್ಥ ಮಾಡಿಕೊಳ್ಳದೆ ಮಗಳ ವಿರುದ್ಧವೇ ನಿಂತಿದ್ದಾಳೆ.

ಮನೆಯಲ್ಲಿ ತಾಂಡವ್ ಒಬ್ಬನಾಗಿದ್ದ. ಭಾಗ್ಯಾ ಪರವಾಗಿ ಕುಸುಮಾ, ಮಕ್ಕಳು, ಸುನಂದಾ, ಪೂಜಾ ಜೊತೆಗೆ ನಿಂತಿದ್ದಾರೆ. ಆದರೆ ಪೂಜಾ ಇನ್ನೇನು ಸೋತು ಬಿಡುತ್ತೀನಿ ಎಂಬ ಸುಳಿವು ಸಿಕ್ಕ ಮೇಲೆ ಮನೆಯಿಂದ ಲಗೇಜು ಸಮೇತ ಹೊರಟಿದ್ದಾಳೆ. ಹೀಗೆ ಬಿಟ್ಟರೆ ಸರಿ ಆಗಲ್ಲ ಅಂತ ನೇರವಾಗಿ ಶ್ರೇಷ್ಠಾ ಮನೆಗೆ ಹೋಗಿ ಠಿಕಾಣಿ ಹೂಡಿದ್ದಾಳೆ. ಇತ್ತ ಸುನಂದಾ ಭಾಗ್ಯಾಳ ಜೊತೆ ಬಿಟ್ಟು ಅಳಿಯ ಅಳಿಯ ಅಂತ ತಾಂಡವ್ ಕಡೆಗೆ ಹೊರಟಿದ್ದಾಳೆ.

colors kannada serial Bhagyalakshmi Written Update on may 3rd episode

ಮಗಳು ಸೋಲಬೇಕು ಎಂದ ಸುನಂದಾ

ಮಗಳ ಸಂಸಾರ ಹಾಳಾಗುತ್ತೆ ಎಂಬ ಚಿಂತೆ ಶುರುವಾಗಿದೆ ಸುನಂದಾಗೆ. ಹೀಗಾಗಿಯೇ ಈಗ ಪಕ್ಷ ಬದಲಾಯಿಸಿದ್ದಾಳೆ. ತಾಂಡವ್ ಕಡೆಗೆ ಹೋಗಿ, ಬಾಯಿಗೆ ಬಂದ ಹಾಗೇ ಮಾತನಾಡುತ್ತಿದ್ದಾಳೆ. ಕುಸುಮಾಳಿಗೆ ಹೇಗೆ ಬೇಕೋ ಹಾಗೇ ಮಾತನಾಡುತ್ತಿದ್ದಾಳೆ. ಆದರೆ ಭಾಗ್ಯಾ ಇದನ್ನೆಲ್ಲಾ ಕೇಳಬೇಕಲ್ಲ. ನಮ್ಮ ಅತ್ತೆಗೆ ಬಾಯಿಗೆ ಬಂದಂಗೆ ಅನ್ನಬೇಡ ಅಮ್ಮ ಅಂತಾನೆ ಹೇಳಿದ್ದಾಳೆ. ಮಕ್ಕಳು ಕೂಡ ಅಜ್ಜಿಯ ನಡೆಯನ್ನು ವಿರೋಧಿಸಿದ್ದಾರೆ. ಆದರೂ ಸುನಂದಾ ಅಳಿಯನ ಪರವಾಗಿಯೇ ನಿಂತಿದ್ದಾಳೆ.

ಸುನಂದಾಳ ನಡೆಗೆ ವೀಕ್ಷಕರು ಬೇಸರ

ತಾಂಡವ್ ಈ ಬೆಳವಣಿಗೆಯನ್ನು ನಂಬಿಲ್ಲ. ಊಟ ಬಡಿಸುವಾಗಲೂ ಅದನ್ನೇ ಕೇಳಿದ್ದಾನೆ. ನೀವ್ಯಾಕೆ ನನ್ನ ಕಡೆ ಬರಬೇಕು. ನಿಮ್ಮನ್ನ ನಂಬುವುದು ಹೇಗೆ ಎಂದಿದ್ದಾನೆ. ಅದಕ್ಕೆ ಸುನಂದಾ, ನಂಗೆ ನನ್ನ ಮಗಳ ಸಂಸಾರ ಸರಿ ಆಗಬೇಕು. ಅದಕ್ಕೆ ನಿಮ್ಮ ಜೊತೆಗೆ ನಿಂತಿದ್ದೀನಿ. ಅವಳು ಸೋಲಬೇಕು ಆ ರೀತಿ ಮಾಡ್ತೀನಿ. ನಿಮ್ಮ ಕಾಲಿಗೆ ಬೀಳುವಂತೆ ಮಾಡ್ತೀನಿ. ಸಂಸಾರ ಸರಿ ಆಗಬೇಕು ಅಷ್ಟೇ ಎಂದಿದ್ದಾಳೆ. ಸುನಂದಾಳ ಈ ಮಾತಿಗೆ ಪ್ರೇಕ್ಷಕರು ಗರಂ ಆಗಿದ್ದಾರೆ. ಮಗಳೆಲ್ಲಿ ಮನೆ ಬಿಟ್ಟು ಬರ್ತಾಳೋ ಅಂತ ಭಯ ಇರಬೇಕು ಅದಕ್ಕೆ ಸುನಂದಾ ಹಿಂಗೆ ಆಡುತ್ತಿದ್ದಾಳೆ ಎಂದಿದ್ದಾರೆ.

colors kannada serial Bhagyalakshmi Written Update on may 3rd episode

ಶ್ರೇಷ್ಠಾ ಮನೆಯಲ್ಲಿಯೇ ಪೂಜಾ ಠಿಕಾಣಿ

ಪೂಜಾಳ ಕೈಲಿ ಇನ್ನು ಏನು ಆಗಲ್ಲ. ಪೂಜಾ ಸೋತು ಹೋದಳು ಎಂದೆಲ್ಲಾ ನೋಡಿದವರು ಅಂದುಕೊಂಡಿದ್ದರು. ಆದರೆ ಪೂಜಾ, ತಾನೇ ಹೇಳಿಕೊಳ್ಳುವಂತೆ ಛತ್ರಿ ಬುದ್ದಿ ತೋರಿಸಿದ್ದಾಳೆ. ನೇರವಾಗಿ ಶ್ರೇಷ್ಠಾಳ ಮನೆಗೆ ಹೋಗಿದ್ದಾಳೆ. ಲಗೇಜು ಸಮೇತ ಹೋಗಿ ಕೂತಿದ್ದಾಳೆ. ಅದಕ್ಕೆ ಸುಂದ್ರಿಯ ಸಪೋರ್ಟ್ ಕೂಡ ಇದೆ. ಶ್ರೇಷ್ಠಾಳನ್ನು ತಬ್ಬಿಬ್ಬು ಮಾಡಿ ಪೂಜಾಗೆ ಸಪೋರ್ಟ್ ಮಾಡಿದ್ದಾಳೆ.

ಕೆಲಸಕ್ಕೆ ಹೋಗಲು ನಿರ್ಧರಿಸಿದ ಕುಸುಮಾ

ಇತ್ತ ಮನೆಯ ಪರಿಸ್ಥಿತಿ ಸರಿ ಆಗುತ್ತಿಲ್ಲ. ಸಾಲ ಸಿಗುತ್ತಿಲ್ಲ. ಇದಕ್ಕೆ ನೊಂದ ಕುಸುಮಾ ತಾನೇ ಕೆಲಸಕ್ಕೆ ಹೋಗಲು ನಿರ್ಧರಿಸಿದ್ದಾಳೆ. ಮನೆಯ ಸೊಸೆ ಭಾಗ್ಯಾ ಮಹಾಲಕ್ಷ್ಮಿ ಇದ್ದಂತೆ. ಅವಳಿಗೆ ಎಲ್ಲಾ ಕೆಲಸ ಕಲಿಸಿಕೊಟ್ಟಿದ್ದೇನೆ. ಇನ್ನೇನು ಮಾಡೋದಿದೆ ನಾನು. ಕೆಲಸಕ್ಕೆ ಹೋಗೋಣಾ ಎಂದು ನಿರ್ಧರಿಸಿದ್ದಾಳೆ. ಅಮ್ಮನನ್ನು ಮಹಾರಾಣಿಯಂತೆ ನೋಡಿಕೊಳ್ಳಬೇಕು ಎಂದು ಕನಸು ಕಂಡವನು ತಾಂಡವ್. ಶ್ರೇಷ್ಠಾಳಿಂದಾಗಿ ಭಾಗ್ಯಾಳನ್ನ ದ್ವೇಷಿಸುವುದಕ್ಕೆ ಶುರು ಮಾಡಿ, ಅಮ್ಮನನ್ನು ಸುಖವಾಗಿ ನೋಡಿಕೊಳ್ಳುತ್ತಿಲ್ಲ. ಇನ್ಮೇಲಾದ್ರು ಬದಲಾಗ್ತಾನಾ ನೋಡಬೇಕಿದೆ.

More from Filmibeat

English summary
Bhagyalakshmi kannada serial today episode. Here is the details about Audience who took class to Sunanda;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X