Bhagyalakshmi: ಇಂಟರ್‌ವ್ಯೂಗೆ ಒಂದೇ ಕಡೆ ಅತ್ತೆ - ಸೊಸೆ; ಸೂರ್ಯವಂಶ ಸಿನಿಮಾ ನೆನಪಾಯ್ತು!

By ಎಸ್ ಸುಮಂತ್

ತಾಂಡವ್ ಹುಚ್ಚಾಟದಿಂದಾಗಿ ಮನೆಯಲ್ಲಿ ಇರುವ ಸಮಸ್ಯೆ ಒಂದೆರಡಲ್ಲ. ತಾಂಡವ್‌ಗೆ ಭಾಗ್ಯಾ ತೊಂದರೆಯಲ್ಲಿ ಸಿಲುಕಿಕೊಂಡರೆ ಖುಷಿ. ಆದರೆ ಅವನ ಸ್ವಾರ್ಥದಿಂದ ಮನೆಯವರೆಲ್ಲರೂ ತೊಂದರೆಯಲ್ಲಿ ಸಿಲುಕಿಕೊಂಡರು ತಲೆಯನ್ನೇ ಕೆಡಿಸಿಕೊಂಡಿಲ್ಲ. ಹಾಗಂತ ಮನೆಯಲ್ಲಿರುವವರ್ಯಾರು ಸ್ವಾಭಿಮಾನ ಬಿಟ್ಟು ಬದುಕುವುದಿಲ್ಲ. ಬದಲಿಗೆ ಸಮಸ್ಯೆಗೊಂದಿಷ್ಟು ಪರಿಹಾರಗಳನ್ನು ಹುಡುಕುತ್ತಾರೆ.

ಸದ್ಯಕ್ಕೆ ಮನೆಯಲ್ಲಿ ದುಡಿಯುವವರು ಯಾರು ಇಲ್ಲ. ಬರ್ತಿದ್ದಂತ ಪೆನ್ಶನ್ ಹಣದಿಂದಾನೇ ಎಲ್ಲರೂ ಹಾಗೋ ಹೀಗೋ ಜೀವನ ಮಾಡುತ್ತಿದ್ದರು‌. ಆದರೆ ಈಗ ಶ್ರೇಷ್ಠಾ ಬಂದು ಸೊಸೆಯ ತಲೆ‌ ಮೇಲೆ ಕೂತಿದ್ದಾಳೆ. ಅವಳದ್ದೇ ಎರಡು ಲಕ್ಷ ಕದ್ದು ಅವಳಿಗೇನೆ ನೀಡಿದ್ದ ಹಣ ಬೇಕು ಅಂತಿದ್ದಾಳೆ‌. ಈ ವಿಚಾರ ಹೊರ ಬಂದ ಕೂಡಲೇ ಅತ್ತೆ-ಸೊಸೆಯ ನಡುವೆ ಜಗಳ ಬರುತ್ತೆ ಎಂದುಕೊಂಡಿದ್ದ ತಾಂಡವ್‌ಗೆ ಮುಖಭಂಗವಾಗಿದೆ. ಸೊಸೆಗಾಗಿ ಅತ್ತೆ ಕೆಲಸಕ್ಕೇನೆ ಹೊರಟಿದ್ದಾರೆ‌.

colors kannada serial Bhagyalakshmi Written Update on may 6th episode

ಸೊಸೆ ಬಳಿ ನಂಬರ್ ಪಡೆದ ಕುಸುಮಾ

ಭಾಗ್ಯಾಗೆ ಮನೆಯ ಕಷ್ಟವನ್ನು ಹೇಗಾದರೂ ಮಾಡಿ ನಿಭಾಯಿಸಬೇಕು ಎಂಬ ಹಂಬಲ. ತಾಂಡವ್ ಮುಂದೆ ಸೋಲಬಾರದು ಎಂಬುದು ಭಾಗ್ಯಾಗೆ ಹಠ. ಹೀಗಾಗಿ ಹೇಗಾದರೂ ಮಾಡಿ‌ ಮನೆಯನ್ನು ನಿಭಾಯಿಸಬೇಕೆಂದು ಕೆಲಸಕ್ಕೆ ಸೇರುವುದಕ್ಕೆ ಹೊರಟಿದ್ದಾಳೆ. ಒಮ್ಮೆ ಕೆಲಸಕ್ಕೆ ಸೇರಿ, ಅಲ್ಲಿಂದ ಕೆಟ್ಟ ಅನುಭವ ಪಡೆದು ವಾಪಾಸ್ ಬಂದಿದ್ದಳು. ಆದರೆ ಮನೆ ನಡೆಯಬೇಕಲ್ವಾ. ಅದಕ್ಕೆ ಈಗ ಮತ್ತೆ ಕೆಲಸ ಹುಡುಕುತ್ತಿದ್ದಾರೆ. ಈಗ ಸೊಸೆ ಮಾತ್ರವಲ್ಲ ಅತ್ತೆಯೂ ಕೆಲಸ ಹುಡುಕಲು ಶುರು ಮಾಡಿದ್ದು, ಸೊಸೆ ಬಳಿಯೇ ನಂಬರ್ ಕೇಳುತ್ತಿದ್ದಾಳೆ.

ಇಂಗ್ಲಿಷ್ ಭಾಷೆಗೆ ಹೆದರಿದ ಭಾಗ್ಯಾ

ಭಾಗ್ಯಾ ಮನೆಯಿಂದ ಹೊರಟಿದ್ದಳು. ಅಷ್ಟರಲ್ಲಿಯೇ ಕುಸುಮಾ ಎದುರಾಗಿದ್ದಾಳೆ. ಆ ಬ್ರೋಕರ್ ನಂಬರ್ ಕೊಡು, ಎಲ್ಲಿಗೆ ಹೊರಟೆ ಎಂದಾಗ, ದೇವಸ್ಥಾನಕ್ಕೆ ಎಂದು ಸುಳ್ಳು ಹೇಳಿದ್ದಾಳೆ. ಬಳಿಕ ಬ್ರೋಕರ್ ನಂಬರ್ ತೆಗೆದುಕೊಂಡು ಅವಳನ್ನು ಕಳುಹಿಸಿದ್ದಾಳೆ. ಆದರೆ ಇಂಟರ್ವ್ಯೂಗೆಂದು ಹೋದ ಹೊಟೇಲ್ ನಲ್ಲಿ ಎಲ್ಲರೂ ಇಂಗ್ಲಿಷ್ ನಲ್ಲೆ ಮಾತನಾಡಿದ್ದಾರೆ. ಇದಕ್ಕೆ ಉತ್ತರಿಸಲು ತಡಬಡಾಯಿಸಿದ ಭಾಗ್ಯಾ, ಇಲ್ಲೇನು ಕೆಲಸ ಎಂಬುದು ತಿಳಿಯದೆ ಗೊಂದಲಕ್ಕೀಡಾಗಿದ್ದಾಳೆ.

ಮಕ್ಕಳಿಗೆ ಸತ್ಯ ಅನಾವರಣ

ಮಕ್ಕಳಿಗೆ ಅಮ್ಮನ ನಡವಳಿಕೆ ಬಗ್ಗೆ ಅನುಮಾನ ಬಂದಿತ್ತು. ಅದಕ್ಕೆಂದೆ ಇಬ್ಬರು ಮಕ್ಕಳು ಆಟೋದಲ್ಲಿ ಅಮ್ಮನನ್ನು ಹಿಂಬಾಲಿಸಿಕೊಂಡು ಹೊರಟಿದ್ದಾಗ ಸತ್ಯದ ಮುಖ ಪರಿಚಯವಾಗಿದೆ. ಆದರೆ ಸರಿಯಾಗಿ ತಿಳಿಯದ ಮಕ್ಕಳು, ಬೇಸರದಲ್ಲಿ ವಾಪಾಸ್ ಆಗಿದ್ದಾರೆ. ಅಮ್ಮ ಏನೋ ಸಮಸ್ಯೆಯಲ್ಲಿ ಸಿಲುಕಿದ್ದಾಳೆ ಎಂಬುದಂತು ಮಕ್ಕಳಿಗೆ ಅರ್ಥವಾಗಿದೆ. ಅಪ್ಪನ ಬುದ್ದಿ ಕಂಡು, ಅಮ್ಮನ ಪರವಾಗಿ ನಿಂತಿರುವ ಮಕ್ಕಳು, ಅಮ್ಮನಿಗೆ ಕಷ್ಟವಾಗಬಾರದು ಎಂದು ಏನನ್ನು ಕೇಳುತ್ತಿಲ್ಲ. ಇರುವುದರಲ್ಲಿಯೇ ಅಡ್ಜೆಸ್ಟ್ ಮಾಡಿಕೊಂಡು ಹೋಗುತ್ತಿದ್ದಾರೆ. ಆದರೆ ಅಮ್ಮನಿಗೆ ಏನೋ ಸಮಸ್ಯೆ ಇದೆ ಎಂಬುದನ್ನು ಅರ್ಥ ಮಾಡಿಕೊಂಡಿದ್ದಾರೆ.

ಸತ್ಯ ಹೇಳದೇ ಹೊರಟ ಕುಸುಮಾ

ಅಮ್ಮನ ಸ್ಥಿತಿ ಕಂಡು ಬೇಸರದಲ್ಲಿ ಮನೆಗೆ ಬಂದರೇ ಇಲ್ಲಿ ಅಜ್ಜಿಯೂ ಅದೇ ಹಾದಿ ಹಿಡಿದಿದ್ದಾರೆ. ಮೊಮ್ಮಕ್ಕಳಿಗೆ, ಸೊಸೆಗೆ ಕಷ್ಟವಾಗಬಾರದು ಅಂತ ಬ್ರೋಕರ್‌ಗೆ ಕರೆ ಮಾಡಿ ಕೆಲಸ ಕೇಳಿದ್ದಾರೆ ಕುಸುಮಾ. ಮಕ್ಕಳು ಆಟೋ ಇಳಿಯುತ್ತಿದ್ದಂತೆ ಕುಸುಮಾ ಹೊರಗೆ ಹೊರಟಿದ್ದಾಳೆ‌‌. ಮಕ್ಕಳು ಎಲ್ಲಿಗೆ ಅಂತ ಕೇಳಿದರೆ ಹೊರಗೆ ಹೋಗ್ತಿದ್ದೀನಿ. ಯಾರಾದ್ರೂ ಕೇಳಿದ್ರೆ ಹೀಗೆ ಹೇಳಿ ಎಂದಿದ್ದಾರೆ. ಈ ದೃಶ್ಯ ನೋಡಿದಾಗ ತಕ್ಷಣ 'ಸೂರ್ಯವಂಶ' ಸಿನಿಮಾ ನೆನಪಾಗುತ್ತದೆ. ಆ ಸಿ‌ನಿಮಾದಲ್ಲಿ ಮಗನ ಆಸ್ಪತ್ರೆಯ ಉದ್ಘಾಟನೆಗೆ ಹೊರಟಾಗ ಎಲ್ಲರೂ ಒಂದೇ ಸುಳ್ಳನ್ನು ಹೇಳಿ ಹೋಗುತ್ತಾರೆ. ಇಲ್ಲಿ ಅತ್ತೆ ಸೊಸೆಯದ್ದು ಹಂಗೆ ಆಯ್ತು.

More from Filmibeat

English summary
Bhagyalakshmi kannada serial todaye episode. Here is the details about Bhagya and kusuma who went to the interview on the same side;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X