Bhagyalakshmi: ಅತ್ತೆ-ಸೊಸೆ ಒಂದೇ ಇಂಟರ್‌ವ್ಯೂಗೆ ಬಂದ್ರಾ? ಇಂತ ಮಗ ಇದ್ರೆ ಪೋಷಕರಿಗೆ ಇದೇ ಗತಿ ಎಂದ ವೀಕ್ಷಕರು!

By ಎಸ್ ಸುಮಂತ್

ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ತಾಂಡವ್‌ನನ್ನು ಬೈಕೊಳ್ಳುವ ಮನಸ್ಸುಗಳು ಅದೆಷ್ಟು ಜನರೋ ಏನೋ. ಯಾಕಂದ್ರೆ ಅವನಿಂದ ಹೆತ್ತಮ್ಮನಿಗೂ ನೆಮ್ಮದಿ ಇಲ್ಲ, ಕಟ್ಟಿಕೊಂಡ ಹೆಂಡತಿಗೂ ಸುಖವಿಲ್ಲ. ಹೀಗಾಗಿ ತಾಂಡವ್‌ಗೆ ಹಿಡಿ ಶಾಪ ಹಾಕುವವರ ಸಂಖ್ಯೆಯೇ ಹೆಚ್ಚು.

ಮಗ ಹಿಂಗೆ ಮಾಡಿಬಿಟ್ಟ, ಹಣವನ್ನು ಕೊಡ್ತಿಲ್ಲ, ಮನೆಯನ್ನು ನಿಭಾಯಿಸುತ್ತಿಲ್ಲ ಅಂತ ಕುಸುಮಾ ಏನು ಬೇಜಾರು ಮಾಡಿಕೊಂಡಿಲ್ಲ. ಬದಲಿಗೆ ಇಂಥ ಮಗನನ್ನು ಹೆಚ್ಚು ಬಿಟ್ಟೇವಲ್ಲ ಅಂತ ನೊಂದು, ಕೆಲಸ ಹುಡುಕಲು ಹೊರಟಿದ್ದಾಳೆ.

colors kannada serial Bhagyalakshmi Written Update on may 7th episode

ಮನೆಗೆ ಅರ್ಧ ಖರ್ಚು ಕೊಡುವುದಾಗಿ ಭಾಗ್ಯಾ ಕೂಡ ಒಪ್ಪಿಕೊಂಡು ಆಗಿದೆ. ಹೀಗಾಗಿ ಅದಕ್ಕೆ ಬೇರೆ ದಾರಿಯೇ ಇಲ್ಲದಂತೆ ಆಗಿದ್ದು, ಈಗ ಕೆಲಸಕ್ಕೆ ಹೊರಟಿದ್ದಾಳೆ. ಅತ್ತೆಗೆ ಗೊತ್ತಾಗದಂತೆ ಸೊಸೆ, ಸೊಸೆಗೆ ತಿಳಿಯದಂತೆ ಅತ್ತೆ ಇಬ್ಬರು ಕೆಲಸದ ಹುಡುಕಾಟದಲ್ಲಿದ್ದಾರೆ.

ದೊಡ್ಡ ಹೊಟೇಲ್‌ಗೆ ಬಂದ ಭಾಗ್ಯಾ

ಭಾಗ್ಯಾಳಿಗೆ ಅಡುಗೆ ಮಾಡುವ ಕಲೆ ಚೆನ್ನಾಗಿ ಗೊತ್ತು. ಹೀಗಾಗಿ ಆ ಕೆಲಸವನ್ನೇ ಹುಡುಕಿ ಬಂದಿದ್ದಾಳೆ. ಬ್ರೋಕರ್ ಕೂಡ ಆ ಕೆಲಸವನ್ನೇ ಕೊಡಿಸುತ್ತೀನಿ ಎಂದಿದ್ದಾರೆ. ಆದರೆ ಹೊಟೇಲ್‌ನಲ್ಲಿ ಇಂಟರ್‌ವ್ಯೂ ನಡೆಯುತ್ತಿದ್ದ ವಿಧಾನಕ್ಕೆ ಭಾಗ್ಯಾ ಬೆಚ್ಚಿಬಿದ್ದಿದ್ದಾಳೆ. ಇಂಗ್ಲೀಷ್‌ನಲ್ಲೇ ವೆಲ್ ಕಮ್, ಇಂಗ್ಲಿಷ್‌ನಲ್ಲೇ ಟಾಕಿಂಗ್, ಕೈಯಲ್ಲಿ ಲ್ಯಾಪ್ ಟಾಪ್, ಟಿಪ್ ಟಾಪ್ ಡ್ರೆಸ್ಸಿಂಗ್. ಇದನ್ನೆಲ್ಲಾ ನೋಡಿ ಗಾಬರಿಯಾಗಿದ್ದಾಳೆ.

ಬೇರೆಯವರಿಗೆ ಒಳಿತು ಬಯಸುವ ಭಾಗ್ಯಾ

ಎಲ್ಲವನ್ನು ನೋಡಿ ಭಯಗೊಂಡ ಭಾಗ್ಯಾ ಹಾಗೇ ಬಂದು ಸೋಫಾ ಮೇಲೆ ಕುಳಿತಳು. ಆಗ ಹಿತ ಎಂಬ ಹುಡುಗಿಯ ಪರಿಚಯವಾಗಿದೆ. ಅವಳು ಕೇಳುವ ಕೋರ್ಸ್ ಬಗ್ಗೆಯೂ ಭಾಗ್ಯಾಗೆ ಗೊತ್ತಿಲ್ಲ. ಇಲ್ಲಿ ಕೆಲಸ ಸಿಗುತ್ತಾ ಎಂಬ ಭಯವೂ ಶುರುವಾಯ್ತು. ಹಿತಾ ತನ್ನ ಕಷ್ಟವನ್ನೆಲ್ಲಾ ಭಾಗ್ಯಾಳ ಬಳಿ ಹೇಳಿಕೊಂಡು ಈ ಕೆಲಸದ ಅನಿವಾರ್ಯತೆ ಇದೆ ಎಂದಳು. ಆಗ ಭಾಗ್ಯಾ ತನಗೆ ಇಷ್ಟವಿದ್ದರು ಹಿತಾಳಿಗೆ ಆಲ್ ದಿ ಬೆಸ್ಟ್ ಹೇಳಿ, ನಿಮಗೆ ಖಂಡಿತ ಕೆಲಸ ಸಿಗುತ್ತೆ ಎಂದು ಹೇಳಿ ಕಳುಹಿಸಿದಳು‌.

colors kannada serial Bhagyalakshmi Written Update on may 7th episode

ಕೆಲಸಕ್ಕಾಗಿ ಬಂದೇ ಬಿಟ್ಟಳು ಕುಸುಮಾ

ಅತ್ತ ಭಾಗ್ಯಾಳ ಅತ್ತೆ ಕೂಡ ಕೆಲಸವನ್ನು ಹುಡುಕುತ್ತಿದ್ದಾಳೆ. ಭಾಗ್ಯಾಳ ಮೊಬೈಲ್‌ನಿಂದಾನೇ ನಂಬರ್ ತೆಗೆದುಕೊಂಡು ಬ್ರೋಕರ್‌ಗೆ ಕರೆ ಮಾಡಿದಳು. ಬ್ರೋಕರ್ ಕೂಡ ಬರುವುದಕ್ಕೆ ಹೇಳಿದ್ದ. ಅದರಂತೆ ಹೇಳಿದ್ದ ಲೊಕೇಷನ್‌ಗೆ ಕುಸುಮಾ ಕೂಡ ಬಂದಳು. ಬ್ರೋಕರ್‌ನ ಭೇಟಿ ಕೂಡ ಮಾಡಿದಳು.

ಕುಸುಮಾಗೆ ಶಾಕ್ ಕೊಟ್ಟ ಬ್ರೋಕರ್

ಇಲ್ಲಿ ತನ್ನೊಬ್ಬಳಿಗೆ ಕೆಲಸ ಕೊಡಿಸುವುದು ಅಂತ ಕುಸುಮಾ ತಿಳಿದುಕೊಂಡಿದ್ದಳು ಎನಿಸುತ್ತೆ. ಅದಕ್ಕೆ ಖುಷಿಯಾಗಿ ಬಂದಳು. ಬ್ರೋಕರ್ ಅದ್ಯಾವಾಗ ಸ್ವಲ್ಪ ಸಮಯ ಇರಿ, ಇನ್ನೊಬ್ಬರು ಬರಬೇಕಿದೆ, ಒಟ್ಟಿಗೆ ಹೋಗೋಣ ಎಂದು ಹೇಳಿದ್ದಾನೆ. ಇದನ್ನು ಕೇಳಿಸಿಕೊಂಡ ಕುಸುಮಾಗೆ ಶಾಕ್ ಆಗಿದೆ.

ವೀಕ್ಷಕರ ಬೇಸರ

ಇನ್ನೊಬ್ವರು ಬರುತ್ತಾರೆ ಎಂದರೆ ಇಲ್ಲಿಯೂ ಕಾಂಪಿಟೇಷನ್ ಶುರುವಾದರೆ ಎಂಬ ಬೇಸರದಲ್ಲಿ ಇದ್ದಾಳೆ. ಆ ಇನ್ನೊಬ್ಬ ಹೆಣ್ಣು ಮಗು ಭಾಗ್ಯಾನೇ ಆಗಿದ್ದರೆ ಎಂಬ ಪ್ರಶ್ನೆ ವೀಕ್ಷಕರಿಗೆ ಕಾಡುತ್ತಿದೆ. ಇದರ ಜೊತೆಗೆ ತಾಂಡವ್ ನನ್ನಂತು ಸಿಕ್ಕಾಪಟ್ಟೆ ಬೈದುಕೊಳ್ಳುತ್ತಿದ್ದಾರೆ. ಇಂಥ ಮಗ ಹುಟ್ಟಿದರೆ ಪೋಷಕರು ಹಿಂಗೆ ಬೀದಿಗೆ ಬರಬೇಕಾಗುತ್ತೆ ಎಂದು ಕೋಪ ಹೊರಗೆ ಹಾಕುತ್ತಿದ್ದಾರೆ.

More from Filmibeat

English summary
Bhagyalakshmi kannada serial today episode. Here is the details about Kusuma meet the broker;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X