Bhagyalakshmi: ತಾಂಡವ್‌ನಂಥ ಗಂಡನಿಗಾಗಿ ಬದಲಾಗಬೇಕಿಲ್ಲ; ಭಾಗ್ಯಾ ಪರ ಫ್ಯಾನ್ಸ್

By ಎಸ್ ಸುಮಂತ್

ಕುಸುಮಾ ನೋಡಿದ ಸೊಸೆ ಭಾಗ್ಯಾ. ಒಂದು ತುಂಬಿದ ಸಂಸಾರಕ್ಕೆ ಹೇಗಿರಬೇಕೋ ಆ ಎಲ್ಲಾ ಗುಣಗಳು ಭಾಗ್ಯಾಳಲ್ಲಿದೆ. ಗಂಡನ ಮೇಲೆ ಗೌರವ, ಅಭಿಮಾನ, ಪ್ರೀತಿ, ಮಕ್ಕಳ ಬಗೆಗಿನ ಕಾಳಜಿ, ಅತ್ತೆ ಮಾವನ ಆರೋಗ್ಯದ ಕಡೆಗೆ ಗಮನ, ಮನೆಯನ್ನು ನಿಭಾಯಿಸುವ ಶಕ್ತಿ. ಈ ಎಲ್ಲವೂ ಭಾಗ್ಯಾ ಎಂಬ ಗಟ್ಟಿಗಿತ್ತಿ ಬಳಿ ಇದೆ. ಏನು ಬೇಕಾದರೂ ಸಾಧಿಸಬಹುದು ಎಂಬ ಛಲವು ಅವಳಲ್ಲಿದೆ. ಅದು ತಾಂಡವ್ ಗೂ ಗೊತ್ತಾಗಿದೆ. ಆದರೆ ಅದ್ಯಾವುದನ್ನು ಒಪ್ಪಿಕೊಳ್ಳುವ ಮನಸ್ಸು ಅವನದ್ದಲ್ಲ.

ಯಾಕಂದ್ರೆ ತಾಂಡವ್ ಮನಸ್ಸು ಈಗಾಗಲೇ ಶ್ರೇಷ್ಠಾಳ ಕಡೆಗೆ ವಾಲಿದೆ. ಮದುವೆಯಾಗಿ, ಮಗಳು ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುವಂತೆ ಆಗಿದ್ದಾರೆ. ಆದರೆ ಈಗ ತಾಂಡವ್ ಗೆ ಹೆಂಡತಿ ಚೆನ್ನಾಗಿ ಕಾಣಿಸುತ್ತಿಲ್ಲ. ಮನಸ್ಸು ಅವಳೆಡೆಗೆ ಸೆಳೆಯುತ್ತಿಲ್ಲ, ಸುಂದರವಾಗಂತು ಮೊದಲೇ ಇಲ್ಲ. ಇದನ್ನ ಕಂಡು ನೋಡುಗರಿಗೆ ತಾಂಡವ್ ನ ಮನಸ್ಥಿತಿಯಂರು ಅರ್ಥವಾಗಿದೆ. ಅದು ಕುಸುಮಾಗೆ ಅರ್ಥವಾಗಬೇಕಷ್ಟೇ.

Colors kannada serial Bhagyalakshmi Written Update on October 18th episode

ಡಿಫ್ರೆಂಟ್ ಲುಕ್‌ನಲ್ಲಿ ಭಾಗ್ಯಾ

ಕುಸುಮಾಗೆ ಇರುವ ಸಮಯ ಬಹಳ ಕಡಿಮೆ. ಒಂದು ತಿಂಗಳಲ್ಲಿ ಭಾಗ್ಯಾ ನಿನಗೆ ಇಷ್ಟವಾಗುವಂತೆ ಮಾಡುತ್ತೀನಿ ಎಂದಿದ್ದಳು. ಇಷ್ಟವಾಗದೆ ಇದ್ದರೆ ಡಿವೋರ್ಸ್ ಕೊಡಿಸಬೇಕೆಂದು ತಾಂಡವ್ ಸವಾಲು ಹಾಕಿದ್ದ. ಈಗ ಅರ್ಧ ಸಮಯ ಕಳೆದಿದೆ. ಇನ್ನುಳಿದ 15 ದಿನದಲ್ಲಿ ಭಾಗ್ಯಾಳನ್ನು ಬದಲು ಮಾಡುವ ಪ್ರಯತ್ನ ಮಾಡಿದ್ದಾಳೆ. ಅದಕ್ಕೆ ಕುಸುಮಾ ಪೂಜಾ ಸೇರಿ ಅಲಂಕಾರ ಮಾಡಿದ್ದಾರೆ.

ವ್ಯಂಗ್ಯ ಮಾಡಿದ ತಾಂಡವ್

ತಾಂಡವ್, ಭಾಗ್ಯಾಳ ಹೊಸ ಲುಕ್ ಕಂಡು ಸ್ಟನ್ ಆಗಿ ನಿಂತು ಬಿಟ್ಟ. ಆದರೆ ಆ ಸತ್ಯ ಒಪ್ಪಿಕೊಂಡರೆ ಸೋತು ಬಿಡುವ ಭಯ. ತನ್ನ ಹನಿಯನ್ನು ಕಳೆದುಕೊಳ್ಳುವ ಆತಂಕ. ಮತ್ತೆ ತನ್ನ ಹಳೆ ಮಾತುಗಳನ್ನೇ ಮುಂದುವರೆಸಿದ. ಏನೇ ಅಲಂಕಾರ ಮಾಡಿಕೊಂಡರು ಗೂಬೆ ಗೂಬೆನೆ. ಹೌದು ಯಾಕೆ ಈ ಶೋಕಿ ಎಲ್ಲಾ. ಒಂದು ಏಪ್ರಾನ್ ಹಾಕೊಂಡು ಕೆಲಸ ಮಾಡೋಕೆ ಇಷ್ಟೆಲ್ಲಾ ಬಿಲ್ಡಪ್ ಬೇಕಾ ಎಂದಿದ್ದಾನೆ. ಇದು ಭಾಗ್ಯಾಳ ಮನಸ್ಸಿಗೆ ತುಂಬಾನೇ ನೋವು ಕೊಟ್ಟಿದೆ.

ಭಾಗ್ಯಾ ಮನಸ್ಸಲ್ಲಿ ಬೇಸರ

ತಾಂಡವ್ ಆಡಿದ ಮಾತುಗಳು ಭಾಗ್ಯಾಳ ಖುಷಿಯನ್ನೇ ಕಿತ್ತುಕೊಂಡಿದೆ. ಈ ಐಡಿಯಾ ಯಾರದ್ದು ಎಂದು ಕೇಳಿದಾಗ ಪೂಜಾ, ನನ್ನದೆ ಎಂದಿದ್ದಾಳೆ. ಆಯ್ತಾ..? ಸಾಕಾ ನೋಡಿದ್ದು ಎಂದು ಅವಳ ಮನಸ್ಸಿನ ನೋವನ್ನ ಮಾತಲ್ಲೇ ತೋರಿಸಿದ್ದಾಳೆ. ತಾಂಡವ್ ಆಡಿದ ಮಾತುಗಳು ಭಾಗ್ಯಾ ಮಾತ್ರವಲ್ಲ ಮನೆಯವರಿಗೂ ನೋವು ಕೊಟ್ಟಿದೆ. ಕುಸುಮಾಗೆ ಮಗ ಸೊಸೆಯ ಸಂಸಾರ ಉಳಿಯಬೇಕು ಎಂಬ ಹಂಬಲ. ಈ ಮೊದಲೆಲ್ಲಾ ಅಮ್ಮನಿಗೆ ಹೆದರುತ್ತಿದ್ದ ತಾಂಡವ್, ಸತ್ಯ ಗೊತ್ತಾದ ಮೇಲೆ ಹೆದರುವುದಕ್ಕೂ ಹೋಗ್ತಿಲ್ಲ.

Colors kannada serial Bhagyalakshmi Written Update on October 18th episode

ಬದಲಾವಣೆ ಬೇಡ ಎಂದ ವೀಕ್ಷಕರು

ಭಾಗ್ಯಾ ಬದಲಾದರೆ ತಾಂಡವ್ ಇಷ್ಟಪಡುತ್ತಾನೆ, ಸಂಸಾರ ಸರಿ ಹೋಗುತ್ತೆ ಅಂತ ಕುಸುಮಾ ಭಾವಿಸಿದ್ದಾಳೆ‌. ಆದರೆ ತಾಂಡವ್ ಮನಸ್ಸು ಬದಲಾಗುವುದಕ್ಕೆ ಅಸಾಧ್ಯವಾಗಿದೆ. ಶ್ರೇಷ್ಠಾಳ ಕಡೆಗೆ ಒಲವು ತೋರಿಸಿರುವ ತಾಂಡವ್ ಬದಲಾಗುವುದಕ್ಕೆ ಸಾಧ್ಯವಾ ಎಂದು ಹಲವರು ಪ್ರಶ್ನೆ ಮಾಡುತ್ತಿದ್ದಾರೆ. ಇದರ ನಡುವೆ ರಿಯಲ್ ಲೈಫ್‌ ಕಂಪೇರ್ ಮಾಡಿಕೊಂಡು, ಇಂಥ ಗಂಡ ರಿಯಲ್ ಲೈಫ್‌ನಲ್ಲಿದ್ರೆ ಯಾವ ಹೆಣ್ಣು ಬದಲಾಗುವ ಅವಶ್ಯಕತೆ ಇಲ್ಲ. ಬದಲಾಗುತ್ತಾ ಹೋದರೆ ತಮ್ಮತನವನ್ನೇ ತೊರೆಯಬೇಕಾಗುತ್ತದೆ ಎಂದೇ ಭಾಗ್ಯಾಳಿಗೆ ಸಲಹೆ ನೀಡಿದ್ದಾರೆ.

More from Filmibeat

English summary
Colors kannada serial Bhagyalakshmi Written Update on October 18th episode. Here is the details about Don't change for husband like Tandav;
Read more about: tv sumanth serial
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X