ಭಾರ್ಗವಿ LLBನಲ್ಲಿ ಚೈತ್ರಾ ರಾವ್ ಕಂಡು ಖುಷಿಪಟ್ಟ ವೀಕ್ಷಕರು; ಕಮೆಂಟ್‌ಗಳ ಸುರಿಮಳೆ
ಕಲರ್ಸ್ ಕನ್ನಡದಲ್ಲಿ ಶುರುವಾಗಿರೋ 'ಭಾರ್ಗವಿ ಎಲ್ಎಲ್‌ಬಿ' ಧಾರಾವಾಹಿಗೆ ಎಲ್ಲರಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಭಾರ್ಗವಿ ಪಾತ್ರದಲ್ಲಿ ಮಾಡಿರುವ ರಾಧಾರನ್ನ ವೀಜ್ಷಕರು ನೋಡಿದ್ದು ಸಿಕ್ಕಾಪಟ್ಟೆ ಸಾಫ್ಟ್ ಕ್ಯಾರೆಕ್ಟರ್ ನಲ್ಲಿ. ಆದರೆ ಈಗ ನೋಡಿದ್ರೆ ನ್ಯಾಯದ ಪರ ಹೋರಾಡುವುದಲ್ಲದೆ, ತಪ್ಪು ಮಾಡಿದವನಿಗೆ ಹಿಗ್ಗಾಮುಗ್ಗಾ ಜಾಡಿಸುವುದನ್ನು ಕಲಿತಿದಿದ್ದಾಳೆ. ಮಲ್ಲಿಯನ್ನ ನೋಡಿದವರಿಗೆ ಫೈಟ್ ಮಾಡೋ ಭಾರ್ಗವಿಯನ್ನು ನೋಡಿದಂತಾಯ್ತು.
ಸದ್ಯ ಭಾರ್ಗವಿ ಎಲ್ಎಲ್‌ಬಿ ಒಂದು ವಾರ ಪೂರೈಸಿದೆ. ಪಾಟೀಲ್ ವಿರುದ್ಧ ಭಾರ್ಗವಿ ಹೋರಾಟಕ್ಕೆ ಜಯ ಸಿಗಲಿ ಎಂದೇ ವೀಕ್ಷಕರು ಬಯಸುತ್ತಿದ್ದಾರೆ. ಜೊತೆಗೆ ಭಾರ್ಗವಿಯ ಅಪ್ಪ ಅಮ್ಮ ಅದೆಷ್ಟು ಪ್ರೀತಿ ಮಾಡ್ತಾರೆ ಎಂಬುದನ್ನಷ್ಟೇ ನೋಡಿದ್ವಿ, ಭಾರ್ಗವಿ ಒಬ್ಬಳೆ ಮಗಳು ಅಂತಾನೂ ತಿಳಿದುಕೊಂಡಿದ್ವಿ. ಆದ್ರೆ ಈಗ ಇನ್ನೊಬ್ಬಳ ಮಗಳ ಪರಿಚಯವೂ ಆಗಿದೆ. ಅವಳು ಪಕ್ಕಾ ದುಷ್ಮನ್ ಮನೆಗೆ ಸೊಸೆಯಾಗಿ ಹೋಗಿದ್ದಾಳೆ.

ಭಾರ್ಗವಿಯಲ್ಲಿ ಚೈತ್ರಾ ಮಿಂಚಿಂಗ್
'ಜೋಡಿ ಹಕ್ಕಿ' ಧಾರಾವಾಹಿ ಸಮಯದಲ್ಲಿ ಕೂಡ ಚೈತ್ರಾ ರಾವ್ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ. ಇದೀಗ ಕಮ್ ಬ್ಯಾಕ್ ಮಾಡಿರುವ ಚೈತ್ರಾ, ಸಖತ್ ಬ್ಯೂಟಿಫುಲ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಭಾರ್ಗವಿ ಧಾರಾವಾಹಿಯಲ್ಲಿ ಈಗ ದೊಡ್ಮನೆಯ ಸೊಸೆ, ರವಿಂದ್ರ ದುಷ್ಮನ್ ಮನೆಗೆ ಸೇರಿದ್ದಾರೆ. ಇದು ಯಾವ ರೀತಿ ಟರ್ನ್ ತೆಗೆದುಕೊಳ್ಳುತ್ತೆ ಎಂಬುದನ್ನ ನೋಡಬೇಕಿದೆ.
ಬೃಂದಾಳ ಹಿನ್ನೆಲೆ ಗೊತ್ತಾದ್ರೆ ಜೆಪಿಗೆ
ರವೀಂದ್ರಗೆ ಭಾರ್ಗವಿ ಮಾತ್ರವಲ್ಲ ಬೃಂದಾ ಎಂಬ ಮಗಳು ಇದ್ದಳು. ರವಿಂದ್ರ ಲೈಫ್ ನಲ್ಲಿ ಶತ್ರು ಎಂದರೆ ಅದು ಜೆಪಿ ಪಾಟೀಲ್. ಈಗ ನೋಡಿದ್ರೆ ಅದೇ ಜೆಪಿ ಮನೆಗೆ ಬೃಂದಾ ಸೊಸೆಯಾಗಿ ಹೋಗಿದ್ದಾಳೆ. ಯಾರ ಮನೆಗೆ ಸೊಸೆಯಾಗಿ ಹೋಗಿದ್ದಾಳೆಂಬುದು ಸ್ವತಃ ರವೀಂದ್ರ ಅವರ ಮನೆಯವರಿಗೂ ಗೊತ್ತಿಲ್ಲ. ಅತ್ತ ಜೆಪಿಗೂ ಗೊತ್ತಿಲ್ಲ ಎನಿಸುತ್ತದೆ. ಅದು ಗೊತ್ತಾದ ದಿನ ಎರಡು ಕಡೆಯಲ್ಲೂ ಕಂಟಕ ಎದುರಾಗಬಹುದು.

ಪಾರ್ಟಿಗೆ ಬಂದ ಅಮ್ಮನಿಗೆ ಅವಮಾನ
ಮಗಳು ವರ್ಷವಾದ ಮೇಲೆ ತನ್ನನ್ನ ಕರೆದಿದ್ದಾಳೆ ಅಂತ ಅಮ್ಮ ಎಲ್ಲಾ ಸಿಹಿ ತಿಂಡಿಯನ್ನು ಪ್ಯಾಕ್ ಮಾಡಿಕೊಂಡು ಮಗಳ ಮದುವೆ ವಾರ್ಷಿಕೋತ್ಸವಕ್ಕೆ ಬಂದಿದ್ದಾಳೆ. ಆದರೆ ಅಲ್ಲಿ ದೊಡ್ಡ ಅವಮಾನವೇ ಆಗಿದೆ. ಆ ಪಾರ್ಟಿ ನೋಡಿದ್ರೆ ಸಿಕ್ಕಾಪಟ್ಟೆ ದೊಡ್ಡ ಮಟ್ಟದಲ್ಲಿ ಅರೇಂಜ್ ಆಗಿತ್ತು. ಆದರೆ ಬೃಂದಾಳ ಅಮ್ಮ ತುಂಬಾ ಸಿಂಪಲ್ ಆಗಿ ಬಂದಿದ್ದಳು. ಬೃಂದಾಳ ಗಂಡನ ಮನೆಯವರು ಅವಳನ್ನ ತಿನ್ನೋಕು ಗತಿ ಇಲ್ಲದವರು ಎಂಬಂತೆ ಅವಮಾನ ಮಾಡಿದ್ದಾರೆ. ಇದು ಬೃಂದಾಳ ತಾಯಿ ಮನಸ್ಸುಗೆ ಗಾಸಿ ಮಾಡಿದೆ.
ಇದನ್ನ ಕಂಡರೆ ಭಾರ್ಗವಿ ಸುಮ್ನಿರ್ತಾಳಾ?
ಭಾರ್ಗವಿ ಅಪ್ಪನ ಮಗಳೇ ಆಗಿರಬಹುದು. ಆದರೆ ಅಮ್ಮನಿಗೆ ಅವಮಾನವಾದರೆ ಸಹಿಸುವುದಕ್ಕೆ ಸಾಧ್ಯವೇ ಇಲ್ಲ. ಊರವರ ಸಹಾಯಕ್ಕೆ ನಿಲ್ಲುವ ಭಾರ್ಗವಿ ತನ್ನಮ್ಮನ ನ್ಯಾಯಕ್ಕೆ ನಿಲ್ಲೋದಿಲ್ವಾ. ಮನೆಯಲ್ಲಿಯೇ ಈ ಕಾರ್ಯಕ್ರಮಕ್ಕೆ ಹೋಗೋದು ಬೇಡ ಅಂತ ಹೇಳಿದ್ದಳು. ಆದ್ರೆ ಅದನ್ನು ಕೇಳದ ತಾಯಿ, ಮಗಳ ಸಂಭ್ರಮವನ್ನು ಕಣ್ಣು ತುಂಬಿಕೊಳ್ಳಲು ಬಂದು ಅವಮಾನ ಮಾಡಿಸಿಕೊಂಡಿದ್ದಾಳೆ. ಭಾರ್ಗವಿಗೂ ಅಕ್ಕ ಯಾರ ಮನೆಗೆ ಸೊಸೆಯಾಗಿ ಹೋಗಿದ್ದಾಳೆಂದು ತಿಳಿದರೆ ಶಾಕ್ ಆಗದೆ ಇರುವುದಿಲ್ಲ.


Click it and Unblock the Notifications











