Bhargavi LLB: ಭಾರ್ಗವಿ ಧಾರಾವಾಹಿಯಲ್ಲಿ ಏನ್ ಟ್ವಿಸ್ಟ್ ಗುರು; ಶತ್ರುವಿನ ಇಬ್ಬರು ಮಕ್ಕಳಿಗೆ ಅವಳ ಮೇಲೆ ಲವ್!
ಕೆಲವೊಂದು ಗುಣಗಳೇ ಹಾಗೇ ಎಷ್ಟೋ ಜನರನ್ನ ಇಂಪ್ರೆಸ್ ಮಾಡಿ ಬಿಡುತ್ತದೆ. ಆ ಗುಣ ಹಲವು ಹೃದಯಗಳನ್ನ ಕದ್ದು ಬಿಡುತ್ತದೆ. ಈಗ ಭಾರ್ಗವಿಯ ಗುಣವೂ ಹಾಗೇ ಮಾಡುತ್ತಿದೆ. ಭಾರ್ಗವಿ ಖಡಕ್ ಮಾತು, ನೇರ ನುಡಿ ಶತ್ರು ಮಕ್ಕಳನ್ನ ಇಂಪ್ರೆಸ್ ಮಾಡಿದೆ. ಇಬ್ಬರು ಒಬ್ಳನ್ನೇ ಲವ್ ಮಾಡ್ತಾ ಇದಾರೆ. ಭಾರ್ಗವಿ ಯಾರಿಗೆ ಒಲಿಯಲಿದ್ದಾಳೆ ಅನ್ನೋದೆ ಕುತೂಹಲ.
ಭಾರ್ಗವಿ ಹಿಂದೆ ಬಿದ್ದಿರೋ ಅರ್ಜುನ್ ಆಗಲಿ ತನ್ನ ಅಕ್ಕನ ಗಂಡ ಚರಣ್ ಆಗಲಿ ಯಾರ ಮಕ್ಕಳು ಅನ್ನೋದು ಇನ್ನು ಭಾರ್ಗವಿಗೆ ಗೊತ್ತೆ ಇಲ್ಲ. ಅತ್ತ ಬೃಂದಾ ಯಾರ ಮಗಳು ಅನ್ನೋದು ಜೆಪಿ ಪಾಟೀಲ್ ಗೂ ಗೊತ್ತಿಲ್ಲ. ಗೊತ್ತಾದ ದಿನ ಸಂಬಂಧಗಳು ಯಾವ ರೀತಿ ಇರಲಿವೆ ಎಂಬ ಕುತೂಹಲವೂ ಎಲ್ಕರನ್ನ ಕಾಡುತ್ತಿದೆ.

ವೀಕ್ಷಕರೇ ಶಾಕ್ ಆಗುವ ಟ್ವಿಸ್ಟ್
ಭಾರ್ಗವಿ ಧಾರಾವಾಹಿ ತಂದೆಯ ಯಶಸ್ಸು, ಮಗಳ ಕನಸು, ಶತ್ರುವಿನ ವಿರುದ್ಧ ಹೋರಾಟ ಹೀಗೆ ಸಾಗುತ್ತಾ ಇತ್ತು. ಆದರೆ ಇಂದು ಇದ್ದಕ್ಕಿದ್ದ ಹಾಗೇ ಊಹೆಗೆ ನಿಲುಕದ ಟ್ವಿಸ್ಟ್ ಕೊಟ್ಟಿದೆ. ಅದುವೆ ಬೃಂದಾ ಬದುಕಲ್ಲಿ ಬಿರುಗಾಳಿಯ ಸೂಚನೆ, ಚರಣ್ ಮನಸ್ಸು ಅಕ್ಕನನ್ನ ಬಿಟ್ಟು ತಂಗಿ ಕಡೆಗೆ ವಾಲಿರೋದು. ಬೃಂದಾ ಹಾಗೂ ಚರಣ್ ಪ್ರೀತಿಸಿ ಮದುವೆಯಾಗಿದ್ದಾರೆಂದುಕೊಂಡರೆ ಒಂದೇ ಒಂದು ಫೋನ್ ಕರೆಯಿಂದ ಅದೆಲ್ಲವೂ ಉಲ್ಟಾ ಆಗಿದೆ. ಅದೇ ಭಾರ್ಗವಿ ಕರೆ.
ಭಾರ್ಗವಿ ಗುಣಕ್ಕೆ ಮಾರು ಹೋದ ಚರಣ್
ಚರಣ್‌ಗೆ ಇಷ್ಟ ಇರೋದು ಬೃಂದಾ ಅಲ್ಲ ಭಾರ್ಗವಿ. ಬೃಂದಾ ಏನೋ ಮಾಡಿ ಚರಣ್ ನ ಲಾಕ್ ಮಾಡಿದ್ದಾಳೆ. ಅವನೇ ಬೇಡ ಎಂದರೂ ತಬ್ಬಿಕೊಂಡು, ನೀನೇ ಬೇಕು ಎನ್ನುತ್ತಿದ್ದಾಳೆ. ಅದೇ ಸಮಯಕ್ಕೆ ಬಂದ ಭಾರ್ಗವಿಯ ಕಾಲ್ ರಿಸೀವ್ ಮಾಡಿದ್ದಾನೆ. ಚರಣ್ ಎಂಬ ಹೆಸರನ್ನಷ್ಟೇ ಹೇಳಿದಾತ, ತುಂಬಾನೇ ಸಾಫ್ಟ್ ಆಗಿ ಮಾತನಾಡಿದ್ದಾನೆ. ಇದನ್ನ ಬೃಂದಾಗೆ ಸಹಿಸೋದಕ್ಕೆ ಆಗಿಲ್ಲ. ಫೋನ್ ಕಿತ್ತುಕೊಂಡು ಮಾತಾಡಿದಾಗ, ಅಮ್ಮನಿಗೆ ಆದ ಅವಮಾನಕ್ಕೆ ಅಕ್ಕನಿಗೆ ಕ್ಲಾಸ್ ತೆಗೆದುಕೊಂಡಿದ್ದಾಳೆ. ಆಗ ಚರಣ್ ನೇರವಾಗಿಯೇ ಹೇಳಿದ್ದಾನೆ. ನನಗೆ ನಿನ್ನ ಮೇಲೆ ಯಾವುದೇ ಪ್ರೀತಿ ಇಲ್ಲ. ನಾನು ಪ್ರೀತಿಸ್ತಾ ಇರೋದು ಭಾರ್ಗವಿಯನ್ನ ಅಂತ.
ಪ್ರೀತಿ ಹೇಳಿಕೊಳ್ಳಲು ಒದ್ದಾಟ
ಇತ್ತ ಅರ್ಜುನ್ ಪಾಟೀಲ್ ಕೂಡ ಇದೇ ಭಾರ್ಗವಿಯನ್ನ ಲವ್ ಮಾಡ್ತಾ ಇದ್ದಾನೆ. ಮೊದಲ ನೋಟದಲ್ಲಿಯೇ ಭಾರ್ಗವಿಯ ಮೇಲೆ ಲವ್ವಾಗಿದೆ. ಅವಳ ಫೈಟ್ ನೋಡಿ ಕಳೆದೇ ಹೋಗಿದ್ದಾನೆ. ಈಗಂತೂ ಅವಳದ್ದೇ ಚಿಂತೆಯಲ್ಲಿರ್ತಾನೆ, ಪ್ರೀತಿಯ ಲೋಕದಲ್ಲಿ ತೇಲಾಡ್ತಾ ಇದ್ದಾನೆ. ಅರ್ಜುನ್ ಕೂಡ ಜೆಪಿ ಪಾಟೀಲ್ ಮಗ. ಚರಣ್ ಹಾಗೂ ಅರ್ಜುನ್ ಅಣ್ಣ ತಮ್ಮಂದಿರು. ಹೇಗೆ ನೋಡಿದ್ರು ಇಬ್ಬರು ಹೆಣ್ಣು ಮಕ್ಕಳು ತಮ್ಮ ಶತ್ರುವಿನ ಮನೆಗೆ ಸೊಸೆಯಾಗಿ ಬರೋದು ಪಕ್ಕ ಆಗಿದೆ.
ಭಾರ್ಗವಿಗೆ ಶತ್ರುವಿನ ಮಕ್ಕಳೆ
ಸೀರಿಯಲ್‌ನಲ್ಲಿ ಈಗಲೇ ಇಷ್ಟೊಂದು ಟ್ವಿಸ್ಟ್ ಇದೆ. ಇನ್ನು ಮದುವೆಯಾದ ಮೇಲೆ ಏನೆಲ್ಲಾ ಆಗಬಹುದು ಎಂಬ ಕುತೂಹಲ ಸಹಜವಾಗಿಯೇ ಕಾಡುತ್ತದೆ. ಯಾಕಂದ್ರೆ ತಮ್ಮನನ್ನು ಮದುವೆಯಾಗಿ ಬಂದರೆ ಅಣ್ಣ ಹೇಗೆ ಸಹಿಸಿಕೊಳ್ಳುತ್ತಾನೆ ಅನ್ನೋ ಪ್ರಶ್ನೆ ಒಂದಾದರೆ ಜೆಪಿ ತನ್ನ ತಂದೆಯ ಶತ್ರು. ಅವರ ಮನೆಗೆ ಸೊಸೆಯಾಗಿ ಹೋದರೆ ಹೇಗಿರಲಿದೆ ಆಡಳಿತ ಎಂಬೆಲ್ಲಾ ಕುತೂಹಲ ಮೂಡಿದೆ.


Click it and Unblock the Notifications











