Brundavana: ಅತ್ತಿಗೆ ಒತ್ತಡಕ್ಕೆ ಮದುವೆಗೆ ಒಪ್ಪುತ್ತಾಳ ಪುಷ್ಪಾ?: ಅಜ್ಜಿ ಮಾತು ಕೇಳಿ ಆಕಾಶ್ ಫುಲ್ ಖುಷ್

By Poorva

ಬೃಂದಾವನ ಧಾರಾವಾಹಿಯಲ್ಲಿ ಆಕಾಶ ಹಾಗೂ ಪುಷ್ಪಾ ಒಂದಾಗುವ ಹಂತಕ್ಕೆ ಬಂದಿದ್ದಾರೆ. ಇದೀಗ ಆಕಾಶ್ ಮನೆಯಲ್ಲಿ ಪುಷ್ಪಾಳನ್ನು ಒಪ್ಪಿಕೊಂಡಿದ್ದರೂ, ಗಿರಿಜಾ ಆಕೆಯನ್ನು ನೋಡಲು ಎರಡನೇ ಸಂಬಂಧವನ್ನು ಕರೆದಿದ್ದಾಳೆ. ಇದೆಲ್ಲ ಹಣಕ್ಕಾಗಿ ಗಿರಿಜಾ ಮಾಡುತ್ತಿರುವ ತಂತ್ರ. ಇದೀಗ ಎರಡನೇ ಸಂಬಂಧಕ್ಕೆ ಗಿರಿಜಾ ಅಸ್ತು ಎಂದಿದ್ದಾಳೆ.

ಆದರೆ, ಪುಷ್ಪಾಳನ್ನು ನೋಡಲು ಬಂದ ಗಂಡಿಗೆ ತಂದೆಯ ವಯಸ್ಸಾಗಿದ್ದರು, ಈ ಗಂಡು ತುಂಬಾ ಒಳ್ಳೆಯವರು. ಇವರ ಮನೆಯಲ್ಲಿ ಇವರ ಮಗ ಮತ್ತೆ ಇವರು ಮಾತ್ರ ಇರುತ್ತಾರೆ. ಉಳಿದವರೆಲ್ಲ ಆಳುಗಳು ಇರುತ್ತಾರೆ. ಹಾಗೆಯೇ ಗಂಡಿನ ಮನೆಯಲ್ಲಿ ಬಹಳ ಸಿರಿವಂತರಿದ್ದಾರೆ. ಹಾಗೆಯೇ ನೀನು ಬಾಣಂತನಕೆಂದು ಮನೆಗೆ ಬಂದಾಗ ಹಾಗೆ ಹಬ್ಬ ಹರಿದಿನಕ್ಕೆ ಮನೆಗೆ ಬಂದಾಗ ನಿನಗೆ ಉತ್ತಮವಾದ ದಿನಗಳನ್ನು ಕಳೆಯಬಹುದು ಎಂದೆಲ್ಲ ಹೇಳಿ ಪುಷ್ಪಾ ಮನಸನ್ನು ಕೆಡಿಸುತ್ತಾಳೆ.

colors-kannada-serial-brundavana

ಹಾಗೆಯೇ ನಾನು ನಿನ್ನ ಸೇವೆಯನ್ನ ಬಹಳ ಚೆನ್ನಾಗಿ ಮಾಡುತ್ತೇನೆ ತವರು ಮನೆ ಯಾವತ್ತೂ ನಿನ್ನ ಬೆನ್ನಿಗಿರುತ್ತದೆ ಪುಷ್ಪಾ ಎಂದು ಹೇಳಿ ಈ ಮದುವೆಗೆ ಒಪ್ಪಿಕೋ ಎಂದು ಹೇಳುತ್ತಾಳೆ. ಆದರೆ ಅತ್ತಿಗೆಯ ಮಾತು ಕೇಳಿದ ಪುಷ್ಪಾಗೆ ಬಹಳ ಬೇಸರವಾಗುತ್ತದೆ. ನಾನು ಏನು ತಪ್ಪು ಮಾಡಿದೆ ನನಗೆ ಯಾಕೆ ಇಷ್ಟೆಲ್ಲ ಕಷ್ಟ . ನಾನು ಹೇಗೆ ನನ್ನ ತಂದೆಯ ವಯಸ್ಸಿನವರನ್ನ ಮದುವೆಯಾಗಲಿ ಎಂದು ಯೋಚನೆ ಮಾಡುತ್ತಿರುತ್ತಾಳೆ.

ಇನ್ನು ಗಿರಿಜಾ ಗಂಡನಿಗೆ ಮಾತ್ರ ಗಿರಿಜಾ ಮೇಲೆ ಬಹಳ ಕೋಪ ಬರುತ್ತದೆ. ಯಾಕೆಂದರೆ ತನ್ನ ತಂಗಿ ಬಹಳ ಉತ್ತಮ ಮನೆಗೆ ಹೋಗಬೇಕು, ಆಕೆಗೆ ಯಾರು ಕಷ್ಟವನ್ನು ಕೊಡಬಾರದು ಚಿಕ್ಕ ವಯಸ್ಸಿನಿಂದಲೂ ಬಹಳ ಕಷ್ಟದಿಂದ ಬೆಳೆದ ತಂಗಿ ನನ್ನ ಪುಷ್ಪಾ, ಬೇರೆ ಮನೆಗೆ ಬೆಳಕಾಗಿ ಹೋಗುವಾಗ ಅವಳು ಬಹಳ ಖುಷಿಯಿಂದ ಹೋಗಬೇಕು ಎನ್ನುವುದು ಪುಷ್ಪಾ ಅಣ್ಣನ ಬಯಕೆ.

ಗಿರಿಜಾ ಮೇಲೆ ಕೋಪಿಸಿಕೊಂಡ ಪುಷ್ಪಾ!

ಪುಷ್ಪಾ ಅತ್ತಿಗೆ ಮಾತ್ರ 10 ಲಕ್ಷದ ಹಣಕ್ಕೋಸ್ಕರ ಇದೀಗ ಪುಷ್ಪಾಳನೇ ಮಾರಾಟ ಮಾಡಲು ಹೋಗುತ್ತಿದ್ದಾಳೆ. ಇನ್ನೂ ಪುಷ್ಪಾ ಬಹಳ ದೊಡ್ಡ ಧರ್ಮ ಸಂಕಟದಲ್ಲಿ ಸಿಲುಕಿದ್ದಾರೆ. ಪುಷ್ಪಾಳನ್ನು ಕಳೆದುಕೊಂಡ ಆಕಾಶ್ ಬಹಳ ನೋವು ಅನುಭವಿಸುತ್ತಿದ್ದಾನೆ. ಆಕಾಶನಿಗೆ ಪುಷ್ಪಾ ಎಂದರೆ ಬಲು ಪ್ರೀತಿ. ಆದರೆ ಪುಷ್ಪಾ ನನ್ನ ನಿಮ್ಮ ಸಂಬಂಧ ಆಗಿ ಬರುವುದಿಲ್ಲ ಎಂದು ಹೇಳಿದಾಗ ಆಕಾಶ್‌ಗೆ ಆಕಾಶವೇ ಕಳಚಿ ಬಿದ್ದಂತೆ ಆಗುತ್ತದೆ.

colors-kannada-serial-brundavana

ಪುಷ್ಪಾಳನ್ನು ನೆನೆದು ಬಿಕ್ಕಳಿಸಿದ ಆಕಾಶ್

ಆತ ರಾತ್ರಿ ಬಹಳ ಜೋರಾಗಿ ಆತನ ಗೆಳೆಯನೊಂದಿಗೆ ತನ್ನ ಮನದಲ್ಲಿರುವ ನೋವನ್ನು ಹೇಳಿ ಜೋರಾಗಿ ಅಳುತ್ತಾನೆ. ಇದನ್ನೆಲ್ಲ ನೋಡಿದ ಆತನ ಗೆಳೆಯನಿಗೂ ಸಹಿಸಲಾರದಷ್ಟು ನೋವು ಆಗುತ್ತದೆ. ಇನ್ನು ಆಕಾಶನಿಗೆ ಮರುದಿನ ಬೆಳಗ್ಗೆ ಆತನ ಅಜ್ಜಿ ವಿಡಿಯೋ ಕಾಲ್ ಮಾಡುತ್ತಾರೆ. ಎಂದು ಹೇಳಿದಾಗ, ಅಜ್ಜಿಯ ಬಳಿ ಹೇಗೆ, ನಾನು ಮಾತನಾಡಲಿ ಎಂದು ಯೋಚನೆ ಮಾಡುತ್ತಿರುತ್ತಾರೆ . ಆ ಬಳಿಕ ಕಣ್ಣಲ್ಲಿ ಬರುವ ನೀರನ್ನು ನಿಯಂತ್ರಿಸಿಕೊಂಡು ವಿಡಿಯೋ ಕಾಲ್ ಮಾಡುತ್ತಾನೆ . ಆಗ ಮನೆ ಮಂದಿಯಲ್ಲ ಕುಳಿತಿರುತ್ತಾರೆ. ಬಳಿಕ ಆಕಾಶನ ಅಜ್ಜಿ ಹೇಳುತ್ತಾರೆ ಯಾಕೆ ನೀನು ಬಹಳ ಸಪ್ಪಾಗೆ ಆಗಿದ್ದೀಯಾ .. ಏನಾಯ್ತು ಎಂದು ಪ್ರಶ್ನೆ ಮಾಡಿದಾಗ ಆತ ಏನಿಲ್ಲ ನೀವೇ ಎಲ್ಲರೂ ಸಪ್ಪಗಾಗಿದ್ದೀರಿ ಎಂದು ಹೇಳುತ್ತಾನೆ.

ಆಕಾಶ್ ಬಳಿ ಸುಳ್ಳು ಹೇಳಿದ ಅಜ್ಜಿ

ಬಳಿಕ ಆಕಾಶ್ ಬಳಿ ಅಜ್ಜಿ ಹೇಳುತ್ತಾರೆ. ಪುಷ್ಪಾಳ ಈ ಮನೆಯ ಸೊಸೆ. ಹಾಗೆಯೆ ನಿನ್ನ ಹೆಂಡತಿ ಆಗುತ್ತಾಳೆ. ನಾನು ಸುಮ್ಮನೆ ಈ ಬಗ್ಗೆ ಹೇಳಿದೆ. ನೀನೇನು ಬೇಸರ ಮಾಡಿಕೊಳ್ಳಬೇಡ. ಆಕೆ ನಮ್ಮ ಈ ಪುಟ್ಟ ಪ್ರಪಂಚಕ್ಕೆ ಬರುತ್ತಾಳೆ ಎಂದು ಹೇಳುತ್ತಾ.ಳೆ ಇದನ್ನು ಕೇಳಿದ ಆಕಾಶ್ ಹಾಗೂ ಆತನ ಗೆಳೆಯ ಬಹಳ ಖುಷಿ ಪಡುತ್ತಾರೆ . ನನ್ನ ಜೀವನದಲ್ಲಿ ಬಹಳ ಇಷ್ಟ ಪಟ್ಟಿದ್ದು ಎಂದರೆ ಪುಷ್ಪಾಳನೇ ಆದರೆ ಮೊದಲು ನೀವು ಆಕೆಯನ್ನು ಮರೆತುಬಿಡಿ ಎಂದು ಹೇಳಿದಾಗ ನನಗೆ ಬಹಳ ಬೇಸರವಾಗಿತ್ತು. ಆದರೆ ಇದೀಗ ನೀವು ಸುಳ್ಳು ಹೇಳಿದಿರಿ ನನಗೆ ನನ್ನ ಪುಷ್ಪಾ ಸಿಗುತ್ತಾಳೆ ಎಂದು ಮನದಲ್ಲೇ ಅಂದುಕೊಂಡು ಬಹಳ ಖುಷಿಯಲ್ಲಿ ಇರುತ್ತಾನೆ ಆಕಾಶ್. ಆದರೆ ಅಜ್ಜಿಯ ಒಂದು ಸುಳ್ಳಿನ ಮಾತಿಗೆ ಆಕಾಶ್ ಮಾತ್ರ ಬಹಳ ಖುಷಿ ಪಟ್ಟಿದ್ದಾರೆ.

More from Filmibeat

English summary
Brundavana serial 10th November written update.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X