Chukki thare: ಮತ್ತೊಂದು ಹೊಸ ಕಥೆ: 'ಚುಕ್ಕಿತಾರೆ' ಜೊತೆ ಬರ್ತಿದ್ದಾರೆ ನವೀನ್ ಸಜ್ಜು
ಕಲರ್ಸ್ ಕನ್ನಡದಲ್ಲಿ ಮೂರೂವರೆ ತಿಂಗಳು ಬಿಗ್ ಬಾಸ್ ಫೀವರ್ ಇತ್ತು. ರಾತ್ರಿ 9.30 ಗಂಟೆಯಿಂದ 11 ಗಂಟೆಯವರೆಗೂ ಬಿಗ್ ಬಾಸ್ ಜನರನ್ನು ಚೆನ್ನಾಗಿಯೇ ಹಿಡಿದಿಟ್ಟುಕೊಂಡಿತ್ತು. ಅದಕ್ಕೆ ತಕ್ಕಂತೆ ಟಿಆರ್‌ಪಿ ಕೂಡ ಬಂದಿತ್ತು. ಈಗ ಆ ಸಮಯದಲ್ಲಿ ಗಳಿಸಿದ್ದ ವೀಕ್ಷಕರನ್ನು ಕಲರ್ಸ್ ಕನ್ನಡ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಅದಕ್ಕಾಗಿ ಹೊಸ ಹೊಸ ಪ್ರಯೋಗ ಮಾಡುತ್ತಲೇ ಇದೆ.
ಈಗಾಗಲೇ ವಾಹಿನಿಯಲ್ಲಿ ಹೊಸ ಧಾರಾವಾಹಿಗಳು ರಾರಾಜಿಸುತ್ತಿವೆ. ಅದ್ದೂರಿಯಾಗಿಯೇ ಧಾರಾವಾಹಿಗಳ ನಿರ್ಮಾಣವಾಗಿದೆ. 'ಶ್ರೀಗೌರಿ' ಧಾರಾವಾಹಿ ಮೂಡಿಬರುತ್ತಿದೆ. ಅದರ ಜೊತೆಗೆ ರಿಯಾಲಿಟಿ ಶೋಗಳಾದ 'ನನ್ನಮ್ಮ ಸೂಪರ್ ಸ್ಟಾರ್ ಸೀಸನ್-3', 'ಗಿಚ್ಚಿಗಿಲಿ ಗಿಲಿ ಸೀಸನ್ -3' ಕೂಡ ಹೊಸ ಹೊಸ ಸ್ಪರ್ಧಿಗಳೊಂದಿಗೆ ರಂಜಿಸುತ್ತಿವೆ. ಇದೀಗ ಹೊಸ ಧಾರಾವಾಹಿಗಳು ಇದೀಗ ಅನೌನ್ಸ್ ಆಗಿವೆ.

'ಕರಿಮಣಿ' ಜೊತೆಗೆ 'ಚುಕ್ಕಿ ತಾರೆ'
ಕಲರ್ಸ್ ಕನ್ನಡದಲ್ಲಿ ಇದೀಗ ಒಂದೊಂದೆ ಧಾರಾವಾಹಿಗಳ ಆಗಮನವಾಗುತ್ತಿದೆ. ವಿಭಿನ್ನ ಕಥೆಗಳನ್ನು ಹೊಂದಿರುತ್ತದೆ. ಹೆಚ್ಚು ಧಾರಾವಾಹಿಗಳನ್ನೇ ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೇ ಟ್ರೆಂಡಿಂಗ್‌ನಲ್ಲಿರುವ ಹೆಸರಿನಲ್ಲೇ ಧಾರಾವಾಹಿಯೊಂದು ಸಿದ್ಧವಾಗಿದೆ. 'ಕರಿಮಣಿ' ಧಾರಾವಾಹಿ ಪ್ರೋಮೋದಲ್ಲಿಯೇ ಕುತೂಹಲವನ್ನು ಬಿತ್ತಿದೆ. ಈಗ ಮತ್ತೊಂದು ಹೊಸ ಧಾರಾವಾಹಿ ಅನೌನ್ಸ್ ಆಗಿದ್ದು, 'ಚುಕ್ಕಿ ತಾರೆ' ಪ್ರೋಮೋ ಬಿಡಲಾಗಿದೆ.
ಧಾರಾವಾಹಿಗೆ ನವೀನ್ ಸಜ್ಜು
'ಚುಕ್ಕಿ ತಾರೆ' ಧಾರಾವಾಹಿಯ ಪ್ರೋಮೋದಲ್ಲಿ, 'ಅದೊಂದು ಹಳೆ ಕಾರು. ಧೂಳು ಹಿಡಿದು ನಿಂತಿದೆ. ಕಾರೊಂದರ ಮುಂದೆ ನಿಂತ ಇಬ್ಬರು ಹುಡುಗಿಯರು ನಿಂತು, ತಮ್ಮಿಷ್ಟದ ಹೆಸರುಗಳನ್ನು ಬರೆದಿದ್ದಾರೆ. ಸಂತೋಷವಾಗಿ ಕುಣಿದಿದ್ದಾರೆ. ಅದೇ ಸಮಯಕ್ಕೆ ನವೀನ್ ಸಜ್ಜು ಕಲರ್ ಫುಲ್ ಬಲೂನ್‌ಗಳನ್ನು ತಂದಿದ್ದಾರೆ. ಮಕ್ಕಳು ಅಲ್ಲಿಂದ ಓಡಿದ್ದಾರೆ, ನವೀನ್ ಸಜ್ಜು ಕಾರಿನ ಮೇಲೆ 'ಚುಕ್ಕಿತಾರೆ' ಎಂಬ ಪದವನ್ನು ಬರೆದು, ನಗುತ್ತಾ ಮುಂದೆ ಸಾಗಿದ್ದಾರೆ'. ಇದು ಧಾರಾವಾಹಿಯ ಪ್ರೋಮೋದಲ್ಲಿ ಕಂಡಂತ ದೃಶ್ಯವಾಗಿದೆ.
'ಅಕ್ಕ-ತಂಗಿ'ಯರ ಬಾಂಧವ್ಯದ ಕಥೆ
ಈ ಪ್ರೋಮೋ ನೋಡಿದಾಗ ಇದೊಂದು ಅಕ್ಕ-ತಂಗಿಯರ ಬಂಧವನ್ನು ಬೆಸೆಯುವಂತ ಧಾರಾವಾಹಿ ಎಂಬುದು ಅರ್ಥವಾಗಿದೆ. ನವೀನ್ ಸಜ್ಜು ಅವರು ಕಾಣಿಸಿಕೊಂಡಿರುವ ಕಾರಣ, ಮತ್ತಷ್ಟು ಕುತೂಹಲವನ್ನು ಹೆಚ್ಚಿಸಿದೆ. ಅವರ ಪಾತ್ರ ಯಾವ ಥರದ್ದು ಇರಬಹುದು ಎಂಬ ಕ್ಯೂರಿಯಾಸಿಟಿ ಎಲ್ಲರನ್ನು ಕಾಡಿದೆ. ಇದರ ನಡುವೆ ನೆಟ್ಟಿಗರದ್ದು ಒಂದು ದೊಡ್ಡ ಪ್ರಶ್ನೆಯಾಗಿದೆ. ಚುಕ್ಕಿ ಹಾಗೂ ತಾರೆ ಎರಡು ಪದ ಒಂದೇ ಅಲ್ಲವಾ ಎಂದು ಕೇಳುತ್ತಿದ್ದಾರೆ. ಕಥೆಗಾರರಿಗೂ ಈ ಎರಡು ಪದ ಒಂದೇ ಎನಿಸದೇ ಇರಲು ಸಾಧ್ಯವೇ ಇಲ್ಲ. ಆ ಒಂದೇ ಪದದಲ್ಲೂ ಏನೋ ಕಥೆಯನ್ನು ಎಣೆದಿರಬಹುದು. ಹೀಗಾಗಿ ಎಪಿಸೋಡ್ ನೋಡುವ ತನಕ ಆ ಕೂತುಹಲಕ್ಕೆ ಬ್ರೇಕ್ ಸಿಗದು, ಪ್ರಶ್ನೆಗಳಿಗೆ ಉತ್ತರ ಸಿಗದು.

ಪ್ರೇಕ್ಷಕರ ಡಿಮ್ಯಾಂಡ್ ಏನು..?
ಹೊಸ ಧಾರಾವಾಹಿಗಳ ಪ್ರೋಮೋಗಳನ್ನು ನೋಡಿ ನೋಡುಗರು ಶಾಕ್ ಆಗಿದ್ದಾರೆ. ಅಟ್ ಎ ಟೈಮ್ ಧಾರಾವಾಹಿಗಳ ಪರ್ವವನ್ನೇ ಶುರು ಮಾಡಿಬಿಟ್ಟಿದ್ದೀರಾ? ಎಂದು ಪ್ರಶ್ನೆಗಳನ್ನು ಕೇಳಿದ್ದಾರೆ. ಅದರ ಜೊತೆಗೆ ಒಂದಷ್ಟು ಡಿಮ್ಯಾಂಡ್ ಇಟ್ಟಿದ್ದಾರೆ. ಈ ಹೊಸ ಧಾರಾವಾಹಿಯನ್ನು ರಾತ್ರಿ 8 ಗಂಟೆಗೆ ಹಾಕಿ ಎಂದಿದ್ದಾರೆ. 'ಕರಿಮಣಿ' ಧಾರಾವಾಹಿಗೂ ಇದೇ ಡಿಮ್ಯಾಂಡ್ ಇಟ್ಟಿದ್ದರು. ನೋಡುಗರ ಅಪೇಕ್ಷೆ ಮೇರೆಗೆ ಕಲರ್ಸ್ ಕನ್ನಡ ಸಮಯ ಬದಲಾವಣೆ ಮಾಡುತ್ತಾ ನೋಡಬೇಕು.


Click it and Unblock the Notifications











