ಸತ್ತೇ ಹೋದ್ರಾ ಮುಖ್ಯ ಪಾತ್ರಧಾರಿ ಗೀತಾ..!? ಇದು ಭಾನುಮತಿಯ ಕನಸು ಎನ್ನುತ್ತಿರುವ ಪ್ರೇಕ್ಷಕ ವರ್ಗ..!
ಗೀತಾ ಧಾರಾವಾಹಿಯಲ್ಲಿ ಈಗ ಭಾನುಮತಿ ಗೀತಾಳನ್ನ ಅಪಹರಣ ಮಾಡಿಸಿ ಸಾಯಿಸಿದ್ದಾರೆ. ಇದು ಎಲ್ಲರಲ್ಲೂ ಒಂದು ರೀತಿಯಲ್ಲಿ ಕುತೂಹಲವನ್ನು ಹುಟ್ಟಿ ಹಾಕಿದೆ. ಯಾಕೆಂದರೆ ಗೀತಾ ಸತ್ತು ಹೋಗಿದ್ದು ಅವಳನ್ನು ಸುಟ್ಟು ಹಾಕಲಾಗಿದೆ. ಆದರೆ, ಸುಮ್ಮನೆ ಧಾರಾವಾಹಿಯಲ್ಲಿ ಮುಖ್ಯ ಪಾತ್ರಧಾರಿಯನ್ನ ಸಾಯಿಸುವುದಿಲ್ಲ. ಹಾಗಾದರೆ ಸೀರಿಯಲ್ ಮುಗಿದು ಹೋಗುತ್ತಾ ಎಂದು ಪ್ರೇಕ್ಷಕರು ಕೇಳುತ್ತಿದ್ದಾರೆ.
ಗೀತಾ ಧಾರಾವಾಹಿ 945 ಸಂಚಿಕೆಗಳನ್ನು ಮುಗಿಸಿ ಮುನ್ನುಗುತ್ತಿದೆ. ಇದೆಲ್ಲದರ ನಡುವೆ ಭಾನುಮತಿ ರೌಡಿಗಳನ್ನು ಬಿಟ್ಟು ಗೀತಾಳನ್ನಾಗಿ ಕಿಡ್ನಾಪ್ ಮಾಡಿಸಿ ಸಾಯಿಸಿದ್ದಾಳೆ. ವಿಜಯ್ ಗೀತಾಳನ್ನು ಕಳೆದುಕೊಂಡು ಕಣ್ಣೀರನ್ನು ಹಾಕುತ್ತಿದ್ದಾನೆ. ಸುಧಾರಾಣಿ ಹಾಗೂ ಚಂದ್ರಿಕಾ ಇಬ್ಬರು ಸಹ ಭಾನುಮತಿಯ ಮೇಲೆ ಸೇಡು ತೀರಿಸಿಕೊಳ್ಳಬೇಕು ಎನ್ನುತ್ತಿದ್ದಾರೆ. ಪ್ರೇಕ್ಷಕ ವರ್ಗ ಸಹ ಗೀತಾಳ ಕ್ಯಾರೆಕ್ಟರ್ ಮುಗಿದು ಹೋಯ್ತಾ ಎಂದೆಲ್ಲಾ ಪ್ರಶ್ನೆ ಮಾಡುತ್ತಿದ್ದಾರೆ.

ಒಂದು ವೇಳೆ ಗೀತಾ ಕ್ಯಾರೆಕ್ಟರ್ ಮುಗಿದು ಹೋದರೆ ಧಾರಾವಾಹಿಯೇ ಮುಗಿದಂತೆ. ಹಾಗಾದರೆ ಧಾರಾವಾಹಿ ಕೊನೆಯಾಗುತ್ತಾ ಎಂದು ಕೇಳುತ್ತಿದ್ದಾರೆ. ಒಂದು ವೇಳೆ ಗೀತಾ ಧಾರವಾಹಿ ಮುಗಿದರೆ ಒಳ್ಳೆಯದೇ. ಯಾಕೆಂದರೆ ಎಷ್ಟು ದಿನ ಅಂತ ಧಾರಾವಾಹಿಯ ಕಥೆಯನ್ನ ಹೇಳಿದುಕೊಂಡು ಹೋಗುತ್ತೀರಾ ಎಂದೆಲ್ಲಾ ಕಾಮೆಂಟ್ ಮಾಡುತ್ತಿದ್ದಾರೆ.
ಭವ್ಯಗೌಡ ಹಾಕಿದ ಪೋಸ್ಟ್ ಏನು? ದಿ ಎಂಡ್ ಆಫ್ ಗೀತಾ ಎಂದಿದ್ಯಾಕೆ?
ಗೀತಾ ಧಾರಾವಾಹಿಯ ಮುಖ್ಯ ಪಾತ್ರಧಾರಿಯಾಗಿ ಅಭಿನಯಿಸುತ್ತಿರುವ ಭವ್ಯ ಗೌಡ ಅವರು ಸಾಮಾಜಿಕ ಜಾಲತಾಣದಲ್ಲಿ ದಿ ಎಂಡ್ ಆಫ್ ಗೀತಾ ಎಂದು ಫೋಟೋವನ್ನ ಹಾಕಿ ಹಾರ್ಟ್ ಬ್ರೋಕನ್ ಆಗಿರುವ ಇಮೋಜಿಯನ್ನ ಹಾಕಿದ್ದಾರೆ. ಹಾಗಾದ್ರೆ ಗೀತಾ ಪಾತ್ರಧಾರಿ ಅವರ ಅಭಿನಯ ಮುಗಿದೇ ಹೋಯ್ತಾ ಎಂದು ಕೆಲವರು ಪ್ರಶ್ನೆ ಮಾಡುತ್ತಿದ್ದಾರೆ. ಇನ್ಮುಂದೆ ಗೀತಾ ಅವರು ಗೀತಾ ಧಾರಾವಾಹಿಯಲ್ಲಿ ಅಭಿನಯಿಸೋದೆ ಇಲ್ವಾ? ಇಷ್ಟಕ್ಕೆ ಅವರ ಕ್ಯಾರೆಕ್ಟರ್ ಮುಗಿದು ಹೋಯ್ತಾ? ಏನೇನೋ ಕಂಡುಹಿಡಿಯಬೇಕು ಎಂದುಕೊಂಡಿದ್ದರು, ಇಷ್ಟೇಕ್ಕೆ ಮುಗಿತಾ ಎಂದು ಪ್ರಶ್ನಿಸಿದ್ದಾರೆ.

ಮುಖ್ಯ ಪಾತ್ರಧಾರಿ ಸತ್ತು ಹೋದ ಮೇಲೆ ಇನ್ಯಾವ ರೀತಿ ಧಾರಾವಾಹಿ ಸಾಗುತ್ತದೆ. ಹಾಗಾದರೆ ಧಾರಾವಾಹಿಯನ್ನು ಬೇಗನೇ ಮುಗಿಸಲಾಗುತ್ತದೆ ಎಂದು ಅಭಿಮಾನಿಗಳು ಹೇಳಿದ್ದಾರೆ. ಇನ್ನು ಕೆಲವರಂತೂ ರಿಪ್ ಗೀತಾ ಎಂದು ಎಮೋಷನಲ್ ಕಾಮೆಂಟ್ ಮಾಡುತ್ತಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಗೀತಾ ಅವರು ತಮ್ಮ ಅಭಿನಯದ ಮೂಲಕ ಎಲ್ಲರನ್ನು ಸೆಳೆದಿದ್ದರೂ ಮುಖ್ಯ ಪಾತ್ರಧಾರಿಯಾಗಿ ಉತ್ತಮ ರೀತಿಯಲ್ಲಿ ಅಭಿನಯಿಸಿದ್ದರು. ಪಾತ್ರ ಮುಗಿದಿದ್ದರೆ ಈ ರೀತಿ ಟ್ರಾಜಿಡಿಯಾಗಿ ತೋರಿಸಬಾರದಿತ್ತು ಎಂದು ತಿಳಿಸಿದ್ದಾರೆ.
ಇದು ಕನಸು..ಗೀತಾ ಬದುಕಿ ಬರ್ತಾಳೆ.. ಇದು ಸೀರಿಯಲ್ ಅಂತೆ!
ಗೀತಾ ಸತ್ತಿಲ್ಲ.. ಅವಳು ಬದುಕಿ ಬರ್ತಾಳೆ ಎಂದು ಪ್ರೇಕ್ಷಕ ವರ್ಗ ಹೇಳುತ್ತಿದೆ. ಯಾಕೆಂದರೆ ಇದು ಸೀರಿಯಲ್. ಇಲ್ಲಿ ಏನು ಬೇಕಾದರೂ ಆಗಬಹುದು ನೋಡುತ್ತಾ ಇರಿ ಎಂದೆಲ್ಲ ಒಬ್ಬರಿಗೊಬ್ಬರು ಕಾಮೆಂಟ್ ಮಾಡುತ್ತಾ ಇದ್ದಾರೆ. ಭಾನುಮತಿ ಗೀತಾ ಸತ್ತು ಹೋಗಿರುವಾ ರೀತಿ ಕನಸನ್ನ ಕಾಣುತ್ತಾ ಇರುತ್ತಾಳೆ. ಭಾನುಮತಿ ಮಾಡುವ ಯಾವ ಪ್ಲಾನ್ ಕೂಡ ಸಕ್ಸಸ್ ಆಗೋದಿಲ್ಲ ಎಂದೆಲ್ಲಾ ಪ್ರೇಕ್ಷಕರೇ ಗೀತಾ ಧಾರಾವಾಹಿಯ ಕಥೆಯನ್ನು ಊಹೆ ಮಾಡಿಕೊಂಡು ಹೇಳುತ್ತಿದ್ದಾರೆ.
ಯಾವುದೇ ಧಾರವಾಹಿಯಲ್ಲಿ ಮುಖ್ಯ ಪಾತ್ರದಾರಿಯನ್ನ ಸಾಯಿಸುವುದಿಲ್ಲ. ಮುಖ್ಯ ಪಾತ್ರಧಾರಿಯೇ ಎಲ್ಲದಕ್ಕೂ ಸೂತ್ರಧಾರರಾಗಿದ್ದು ಇಲ್ಲೂ ಕೂಡ ಅದೇ ರೀತಿ ಆಗುತ್ತದೆ. ಭಾನುಮತಿ ಕನಸನ್ನ ಕಾಣುತ್ತಾ ಇದ್ದಾಳೆ ಎಂದು ಹೇಳುತ್ತಿದ್ದಾರೆ. ಆದರೆ, ಭವ್ಯ ಗೌಡ ಮಾತ್ರ ತಮ್ಮ ಸಾಮಾಜಿಕ ಜಾಲತಾಣದಲ್ಲಿ ದಿ ಎಂಡ್ ಆಫ್ ಗೀತಾ ಎಂದು ಬರೆದು ಕೊಂಡಿರುವುದು ಕುತೂಹಲವನ್ನು ಹುಟ್ಟು ಹಾಕಿದೆ.


Click it and Unblock the Notifications











