ಗೀತಾ ಸೀರಿಯಲ್ ಎಳೆಯಬೇಡಿ: ನಿರ್ದೇಶಕರಿಗೆ ಕ್ಲಾಸ್ ತೆಗೆದುಕೊಂಡ ವೀಕ್ಷಕರು
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಗೀತಾ ಧಾರಾವಾಹಿ ಜನವರಿ 6, 2020 ರಿಂದ ಪ್ರಸಾರ ಆರಂಭಿಸಿದೆ. ಧಾರಾವಾಹಿ ಪ್ರಾರಂಭದಲ್ಲಿ ಗೀತಾ ಹಾಗೂ ವಿಜಿಯ ನಡುವೆ ಜಗಳವಾಗಿ ನಂತರ ಅದು ಪ್ರೀತಿಗೆ ತಿರುಗುವ ತನಕವೂ ತುಂಬಾ ಚೆನ್ನಾಗಿ ಇತ್ತು. ಯಾವಾಗ ಗೀತಾ ಹಾಗೂ ವಿಜಿ ಇಬ್ಬರು ಮದುವೆಯಾಗುತ್ತಾರೆ ಎಂಬುದನ್ನು ತೋರಿಸುವ ವೇಳೆ ಧಾರಾವಾಹಿ ಒಂದು ರೀತಿಯಲ್ಲಿ ರೈಲಿನ ಬೋಗಿಯಾಗಿ ಹೋಯಿತು.
ಮೊದಮೊದಲು ಗೀತಾ ಹಾಗೂ ವಿಜಿಯ ಜಗಳ ಎಲ್ಲರನ್ನ ಆಕರ್ಷಿಸುತ್ತಿತ್ತು. ದಿನ ಹೋದಂತೆ ಕಥೆಯಲ್ಲಿ ಸಾರ ಇಲ್ಲ ಎಂದು ಎಷ್ಟು ದಿನ ಧಾರಾವಾಹಿಯನ್ನು ಎಳೆಯುತ್ತೀರಾ ಎಂದು ವೀಕ್ಷಕರು ಹೇಳುತ್ತಿದ್ದಾರೆ. ಇನ್ನೆಷ್ಟು ದಿನ ತೆಗೆದುಕೊಳ್ಳುತ್ತೀರಾ..? ಸೂರ್ಯ ಪ್ರಕಾಶ್ ಕೊಲೆ ಮಾಡಿದ ಕೊಲೆಗಾರರು ಅಲ್ಲಿಯೇ ಇದ್ದರು ಸಹ ಇನ್ನೇನು ಗೊತ್ತಾಗುತ್ತದೆ ಎಂದಾಗ ಅದನ್ನು ಕನಸು ಎಂದು ತೋರಿಸುತ್ತೀರ ಏನಿದರ ಅರ್ಥ. ಯಾಕೆ ಈ ರೀತಿ ಧಾರಾವಾಹಿಯನ್ನು ಎಳೆದುಕೊಂಡು ಹೋಗುತ್ತಿದ್ದೀರಾ ಧಾರಾವಾಹಿ ಮಾಡಲು ಸಿಗುತ್ತಿಲ್ವ ಎಂದು ಕೇಳುತ್ತಿದ್ದಾರೆ.

ಗೀತಾ ಹಾಗೂ ವಿಜಿ ಜೊತೆಗೆ ಭಾನುಮತಿಯ ಪಾತ್ರವನ್ನು ಕೂಡ ಎಳೆಯುತ್ತಿದ್ದೀರಾ. ಒಂದಕ್ಕೆ ಇನ್ನೊಂದರಂತೆ ಸೇರಿಸಿ ಏನಾದರೂ ಒಂದು ಮಾಡಿ ಧಾರಾವಾಹಿಯನ್ನು ಸುತ್ತಿಸುತ್ತಿದ್ದೀರಾ ಎಂದು ಪ್ರೇಕ್ಷಕರು ಕೇಳುತ್ತಿದ್ದಾರೆ. ಆದಷ್ಟು ಬೇಕಾದ ಧಾರಾವಾಹಿಯನ್ನು ಮುಗಿಸಿ ಈಗಲೇ ಮೂರುವರೆ ವರ್ಷವಾಗಿದೆ. ಧಾರಾವಾಹಿ ಬಂದು ಅಲ್ಲಲ್ಲೇ ಮಂಗಳಗೌರಿ ಮದುವೆಯಂತೆ ಈ ಧಾರಾವಾಹಿಯನ್ನು ಸುತ್ತಿಸಬೇಡಿ ಎಂದು ಪ್ರಶ್ನೆ ಕೇಳುತ್ತಾ ಇದ್ದಾರೆ.
ಏನಿದು ರಾಮ್‌ಜಿ ಹಳೆ ಬುದ್ದಿ ಬಿಡೋದಿಲ್ವ? ಎಲ್ಲ ಕಥೆ ಒಂದೇ ತರ ಮಾಡ್ತಿರಲ್ಲ..?
ಗೀತಾ ಧಾರಾವಾಹಿಯಲ್ಲಿ ಗೀತಾಳನ್ನು ಸಾಯಿಸಿದ ರೀತಿಯಲ್ಲಿ ತೋರಿಸಲಾಗಿತ್ತು. ಅಷ್ಟೇ ಅಲ್ಲದೆ ಈಗಲೂ ಸಹ ಗೀತಾ ಸತ್ತು ಹೋಗಿದ್ದಾಳೆ ಎಂದು ತೋರಿಸಿದರು. ಮುಂದೆ ನಡೆದ ಎಪಿಸೋಡ್‌ಗಳಲ್ಲಿ ಗೀತಾ ಬದುಕಿರುವುದು ಪ್ರೇಕ್ಷಕರಿಗೆ ಗೊತ್ತಾಗಿದೆ. ಏನು ರಾಮ್ ಜಿ ನೀವು ಹಳೆಯ ಧಾರಾವಾಹಿಗಳಾದ ಮಂಗಳ ಗೌರಿ ಮದುವೆಯಲ್ಲಿ ಪೊಲೀಸಪ್ಪನಿಗೆ ಹಳೆಯದೆನ್ನೆಲ್ಲಾ ನೆನಪಿಗೆ ಬಾರದಂತೆ ಮಾಡಿದ್ರಲ್ಲ. ಹಾಗೆ ಇದರಲ್ಲೂ ಮಾಡಿ ಧಾರಾವಾಹಿಯನ್ನು ಮುಂದುವರೆಸ್ತೀರಾ ಎಂದೆಲ್ಲ ಪ್ರಶ್ನೆ ಮಾಡಿದ್ದಾರೆ.
ನೀವು ಒಂದೇ ರೀತಿ ಧಾರಾವಾಹಿಯ ಕಥೆಯನ್ನು ಎಳೆದುಕೊಂಡು ಹೋದರೆ ಯಾರು ಧಾರಾವಾಹಿಯನ್ನು ನೋಡಲು ಇಷ್ಟಪಡುವುದಿಲ್ಲ. ಹೊಸ ಹೊಸ ಕಥೆಗಳನ್ನು ಬರೆಯಲು ಹಾಗೂ ನಿರ್ದೇಶನ ಮಾಡಿ ಎಂದು ಪ್ರೇಕ್ಷಕರು ರಾಮ್‌ಜಿಗೆ ಹೇಳಿದ್ದಾರೆ. ಅವರು ಮಾಡುತ್ತಿರುವ ಕಥೆಯಲ್ಲಿ ಹೀರೋ ಹೀರೋಯಿನ್‌ಗಳು ಎಷ್ಟು ಬಾರಿ ಸಾಯ್ತಾರೋ ಅಥವಾ ಎಷ್ಟು ಬಾರಿ ಬದುಕಿ ಬರ್ತಾರೋ ಗೊತ್ತಾಗುವುದಿಲ್ಲ ಎಂದು ವೀಕ್ಷಕರು ಟೀಕೆ ಮಾಡಿದ್ದಾರೆ. ಪ್ರೇಕ್ಷಕರ ಮನವಿಗೆ ರಾಮ್‌ಜಿ ಯಾವ ರೀತಿ ಸ್ಪಂದಿಸುತ್ತಾರೆ ಎಂದು ನೋಡಬೇಕಾಗಿದೆ.

ಪ್ರೇಕ್ಷಕರು ಅಂದುಕೊಂಡಿದ್ದೆ ಕರೆಕ್ಟ್, ಬದುಕಿ ಬಂದೇ ಬಿಟ್ಲು ಗೀತಾ
ಈ ಮೊದಲು ಪ್ರೇಕ್ಷಕರು ಗೀತಾ ಸತ್ತಿಲ್ಲ ಅವಳು ಬದುಕಿದ್ದಾಳೆ . ಆಮೇಲೆ ಅದನ್ನ ತೋರಿಸಲಾಗುತ್ತದೆ ಎಂದು ಮೊದಲೇ ಹೇಳಿದ್ದರು. ವೀಕ್ಷಕರು ಹೇಳಿದಂತೆ ಗೀತಾ ಬದುಕಿ ಬಂದಿದ್ದಾಳೆ. ಎಲ್ಲೋ ಒಂದು ಕಾಡಿನ ಬಳಿ ಗೀತಾ ಅಜ್ಜಿ ತಾತನಿಗೆ ಸಿಕ್ಕಿದ್ದು ಅವರು ಗೀತಾಳಿಗೆ ಆರೈಕೆ ಮಾಡಿದ್ದಾರೆ. ಇನ್ನು ವಿಜಿ ಹೋಗುತ್ತಿರುವಾಗಲೇ ಗೀತಾ ಇರುವ ಸುಳಿವು ಸಿಕ್ಕಿದ್ದು ಇವಳು ನನ್ನ ಹೆಂಡತಿ ಗೀತಾ ಎಂದಿದ್ದಾನೆ.
ಗೀತಾ ಬದುಕಿರುವ ವಿಷಯವನ್ನು ಮೊದಲು ಸುಧಾರಾಣಿಗೆ ಹಾಗೂ ಚಂದ್ರಿಕಾಗೆ ತಿಳಿಸಿದ್ದಾನೆ. ಇದರಿಂದಾಗಿ ಚಂದ್ರಿಕಾ ಹಾಗೂ ಸುಧಾರಣೆಗೆ ತುಂಬಾ ಖುಷಿಯಾಗಿದೆ. ಭಾನುಮತಿ ಹಾಗೂ ಸಿತಾರಾಗೆ ಗೀತಾ ಬದುಕಿರುವ ವಿಷಯ ಗೊತ್ತಿಲ್ಲ. ಅದರ ಬಗ್ಗೆ ರೌಡಿಗಳು ಏನು ಹೇಳಿಲ್ಲ. ಗೀತಾಳನ್ನು ಸುಟ್ಟು ಹಾಕಲಾಗಿದೆ ಎಂದು ಭಾನುಮತಿ ಹಾಗೂ ಸಿತಾರಾ ತಿಳಿದುಕೊಂಡಿದ್ದಾರೆ.


Click it and Unblock the Notifications











