ಗೀತಾ: ಹುಚ್ಚನ ಕೈಗೆ ಸಿಕ್ತು ಚಂದ್ರಿಕಾ ಕೊಟ್ಟ ಫೋಟೋ

By ಶೃತಿ ಹರೀಶ್ ಗೌಡ

ಗೀತಾ‌ ಚಂದ್ರಿಕಾಳನ್ನು ನಂಬಿ ಪೋಟೋ ಕೊಡ್ತಾಳೆ ಇತ್ತ ಗೀತಾ ಜೋಪಾನ ಮಾಡಬೇಕಾದ ಫೋಟೋ ಕೈತಪ್ಪಿ ಹೋಗುತ್ತದೆ. ಮನೆಯ ಹತ್ತಿರ ಬಂದ ಹುಚ್ಚನೊಬ್ಬ ನನ್ನ ಚಿನ್ನು ಸಿಕ್ಕಿದಳು ಅಂತಾ ಹುಚ್ಚ ಫೋಟೋ ತಗೆದುಕೊಂಡು ಹೋಗ್ತಾನೆ.

ವಿಜಿಗೆ ಸೂರ್ಯಪ್ರಕಾಶ್ ಅವರನ್ನು ಯಾರು ಕೊಂದರು ಎಂಬ ಸತ್ಯವನ್ನು ಹುಡುಕೋಕೆ ಹೇಳಿದ್ದೆ ಎಂದು ಗೀತಾಗೆ ಹೇಳ್ತಾನೆ. ಇದರಿಂದ ಕೊಂಚ ಕೋಪ ಮಾಡಿಕೊಂಡ ಗೀತಾ ಏನಿವತ್ತು ಸಾಹೇಬ್ರು ಮನೆಗೆ ಹೋಗ್ತಿನಿ ಅಂತಾ ಇದ್ಯಾ ಏನು ಸಮಾಚಾರ ಅಂತಾ ಕೇಳ್ತಾಳೆ.

ಜೈಲಿನಲ್ಲೂ ಸಹ ಅದಕ್ಕೆ ವಿಜಿ ಅಪ್ಪನ ಕೊಲೆ ಮಾಡಿದವರು ಯಾರು ಅಂತಾ ಹುಡುಕೋಕೆ ಹೇಳಿದ್ದೆ ಅಂತಾ‌ ವಿಜಿ ಹೇಳ್ತಾನೆ.‌ ಮಾವನಿಗೆ ಯಾರು ಆ ಥರ ಶತ್ರುಗಳು ಇದ್ದಾರೆ‌ ಅಂತಾ ಗೀತಾ ಕೇಳೋವಾಗ ಅಪ್ಪನ ಬೆಸ್ಟ್ ಫ್ರೆಂಡ್ ಒಬ್ರು ಜೊತೆಗೆ ಮಾತಾಡೋದು ಇದೆ ಅಂತಾನೆ. ಅಪ್ಪ ಮಾಡೋ ಒಳ್ಳೆಯ ಕೆಲಸಕ್ಕೆ ಶತ್ರುಗಳು ಇದ್ರು ಆದರೆ ಕೊಲೆ ಮಾಡೋ ಮಟ್ಟಕ್ಕೆ ಯಾರು ಇಳಿದಿರಲಿಲ್ಲ ಅಂತಾ ಹೇಳ್ತಾ‌ನೆ.

ಗೀತಾ ಚಂದ್ರಿಕಾಳ ವಿಷಯವನ್ನು ವಿಜಿ ಕೇಳಿದಾಗ ವಿಜಿ ಮುಂದೆ ಬಾಯಿ ಬಿಡುವುದಿಲ್

ಗೀತಾ ಚಂದ್ರಿಕಾಳ ವಿಷಯವನ್ನು ವಿಜಿ ಕೇಳಿದಾಗ ವಿಜಿ ಮುಂದೆ ಬಾಯಿ ಬಿಡುವುದಿಲ್

ಗೀತಾ ಚಂದ್ರಿಕಾಳ ವಿಷಯವನ್ನು ವಿಜಿ ಕೇಳಿದಾಗ ವಿಜಿ ಮುಂದೆ ಬಾಯಿ ಬಿಡುವುದಿಲ್ಲ. ನಾನು ಪ್ರತಿಸಲ ನಿನ್ನ ಜೊತೆ ಜೈಲಿಗೆ ಬಂದಾಗ ನೀನು ಒಂದು ವಿಷಯ ನಿನಗೆ ತಿಳಿಸಬೇಕು ಎಂದು ಹೇಳ್ತೀಯಾ. ಆದರೆ ನಾನು ಬ್ಯುಸಿಯಾಗಿ ಅದನ್ನು ಮರೆತೇಬಿಡ್ತೀನಿ ಏನು ಹೇಳು ಗೀತಾ ಎಂದು ವಿಜಿ ಒತ್ತಾಯಿಸುತ್ತಾನೆ.

ಆದರೆ ಗೀತಾ ನೀನು ಮೊದಲು ಮಾವನನ್ನು ಕೊಲೆ ಮಾಡಿದವರನ್ನು ಕಂಡುಹಿಡಿ ಎಂದು ಹೇಳುತ್ತಾಳೆ. ಅದಕ್ಕೂ ಇದಕ್ಕೂ ಏನು ಸಂಬಂಧ ಎಂದು ವಿಜಿ ಪ್ರಶ್ನೆ ಮಾಡುತ್ತಾನೆ ಅದಕ್ಕೆ ಗೀತಾ ಮೊದಲು ನೀನು ಕಂಡುಹಿಡಿ ಅನಂತರ ಎನ್ನುತ್ತಾಳೆ. ಸಂಬಂಧವಿದೆ ಗಾಢವಾದ ಸಂಬಂಧ ಇದ್ದು ನನ್ನ ಮತ್ತು ನಿನ್ನ ಬೆಸೆಯುವ ಕೊಂಡಿಯದು ಎಂದು ಹೇಳುತ್ತಾಳೆ. ಇದಕ್ಕೆ ಪ್ರತಿಯಾಗಿ ವಿಜಿ ಅದು ಯಾವ ಹೊಸ ಸಂಬಂಧ ನನ್ನ ಮತ್ತು ನಿನ್ನನ್ನು ಬೆಸೆಯುವುದು ಅದು ಸಹ ಜೈಲಲ್ಲಿ ಎಂದು ಕೇಳುತ್ತಾನೆ.

ಇತ್ತ ಗೀತಾ ಮತ್ತು ವಿಜಿಯ ಮಾತನ್ನು ಕೇಳುತ್ತಿದ್ದ ವಿಜಿಗೆ ಶಾಕ್ ಆಗುತ್ತದೆ. ನಂತರ ಜೈಲಿನಲ್ಲಿರುವ ಚಂದ್ರಿಕಾಳನ್ನು ನೆನೆಸಿಕೊಂಡು ಸುಶೀಲಾಗೆ ಕೊರವಂಜಿ ಹೇಳಿದ ಮಾತು ನೆನಪಾಗುತ್ತೆ. ನಿನ್ನ ಗೂಡಿನಲ್ಲಿರುವ ಹಕ್ಕಿ ವಾಸಸ್ಥಳ ಬಿಟ್ಟು ಅವಳ ವಾಸ ಸ್ಥಳಕ್ಕೆ ಹೋಗ್ತಾಳೆ ಎಂಬುದನ್ನ ಕೇಳಿ ಶಾಕ್ ಆಗ್ತಾಳೆ. ಇನ್ನೂ ಗೀತಾಗೆ ಎಲ್ಲ ವಿಷಯ ಗೊತ್ತಾಗಿ ಹೋಯ್ತ ಎಂದು ಕಣ್ಣೀರು ಹಾಕ್ತಾಳೆ. ಚಂದ್ರಿಕಾಳ ಹೆಸರು ಕೇಳಿದಾಗ ಸುಶೀಲಾಗೆ ಶಾಕ್ ಆಗುತ್ತದೆ.

ಚಂದ್ರಿಕಾ ಕೊಟ್ಟ ಫೋಟೋ ಹುಡುಕಾಡಿದ ಗೀತಾ

ಚಂದ್ರಿಕಾ ಕೊಟ್ಟ ಫೋಟೋ ಹುಡುಕಾಡಿದ ಗೀತಾ

ಇತ್ತ ಚಂದ್ರಿಕಾ ಜೈಲಿನಲ್ಲಿ ಕೊಟ್ಟ ಫೋಟೋವನ್ನು ಗೀತಾ ವಿಜಿಗೆ ತೋರಿಸಲು ಹೋಗ್ತಾಳೆ . ಆದರೆ ಫೋಟೋ ಎಲ್ಲೂ ಸಿಗೋದಿಲ್ಲ ಇದರಿಂದ ಗೀತಾ ಟೆನ್ಷನ್ ಆಗ್ತಾಳೆ. ನಂತರ ಗೀತಾಗೆ ವಿಜಿಗೆ ಯಾಕೆ ಟೆನ್ಷನ್ ಆಗಿ ಇದ್ದೀಯಾ ಅಂತಾ ಕೇಳಿದಾಗ, ಗೀತಾ ಚಂದ್ರಿಕಾ ಅವರು ಮಗಳು ಫೋಟೋ ಕೊಟ್ಟ ಸುದ್ದಿ ಹೇಳ್ತಾಳೆ. ಇದನ್ನು ಕೇಳಿದ ಸುಶೀಲಾಗೆ ತನ್ನ ಜಂಗಬಲವೇ ಅಡಗಿ ಹೋದಂತೆ ಆಗುತ್ತದೆ.

ಬೇಸರ ಮಾಡಿಕೊಳ್ಳುವ ಗೀತಾ

ಬೇಸರ ಮಾಡಿಕೊಳ್ಳುವ ಗೀತಾ

ಅದು ಇಲ್ಲಿ ಎಲ್ಲು ಕಾಣಿಸ್ತಾ ಇಲ್ಲ ಎಂದು ಹೇಳಿದಾಗ ವಿಜಿ ಹೊರಗೆ ಎಲ್ಲೋ ಬಿದ್ದಿದೆ ಎಂದು ಹುಡುಕೋಕೆ ಬರ್ತಾಳೆ. ಫೋಟೋ ಯಾವ ಸೈಜಿನದ್ದು ಎಂದು ಹೇಳಿ. ಇಬ್ಬರು ಸಹ ಪೋಟೋ ಹುಡುಕ್ತಾ ಇರ್ತಾರೆ. ಇತ್ತ ಸುಶೀಲ ದೇವರ ಮುಂದೆ ಆ ಫೋಟೋ ಸಿಗದ ಹಾಗೇ ಮಾಡಪ್ಪ, ನನ್ನ ಗೀತಾನ ನಂಗೆ ಉಳಿಸಿಕೊಡಪ್ಪ ಅಂತಾ ಕೇಳ್ತಾಳೆ. ಫೋಟೋ ಸಿಗದ ಕಾರಣ ಗೀತಾ ಎಷ್ಟು ಕೇರ್ ಲೆಸ್ ಆದೇ ತಾನು ಎಂದು ಕಣ್ಣೀರು ಹಾಕ್ತಾಳೆ. ಗೀತಾಳನ್ನು ಸಮಾಧಾನ ಮಾಡಿದ್ದರು ಗೀತಾ ಹಠ ಮಾಡ್ತಾಳೆ. ಸುಶೀಲ ತನಗೆ ಏನು ಗೊತ್ತಿಲ್ಲದ ತರ ನಡೆದ ಕಥೆ ಹೇಳ್ತಾನೆ. ಫೋಟೋ ಎಲ್ಲೂ ಸಿಗಲಿಲ್ಲ ಎಂದಾಗ ಸುಶೀಲ ಬಚಾವ್ ಆದೆ ಎನ್ನುತ್ತಾಳೆ. ನಂತರ ಸುಶೀಲ‌ನ ತಬ್ಬಿಕೊಂಡು ಅಳ್ತಾಳೆ. ಗೀತಾ ವಿಜಿ ತೊಡೆ ಮೇಲೆ ಮಲಗಿ ಬಿಡ್ತಾಳೆ.

ಭಾನುಮತಿಗೆ ಕಸಿವಿಸಿ ಶುರುವಾಯಿತು

ಭಾನುಮತಿಗೆ ಕಸಿವಿಸಿ ಶುರುವಾಯಿತು

ರಾತ್ರಿ ವಿಜಿ‌ ಮನೆಗೆ ಬರದಿದ್ದಕ್ಕೆ ಭಾನುಮತಿಗೆ ಕಸಿವಿಸಿ ಶುರುವಾಗುತ್ತದೆ. ಸಿತಾರಾ ಹತ್ತಿರ ಬಂದು ಕೇಳ್ತಾ ಇರ್ತಾಳೆ. ಅವನು ಆ ಗೀತಾ ಜೊತೆಗೆ ಸೇರಿ ಸಿಐಡಿ ಕೆಲಸ ಶುರುಮಾಡಿದ್ದಾನೆ ಅದನ್ನು ನೆನೆಸಿಕೊಂಡರೆ ಮೈಎಲ್ಲಾ ಉರಿದು ಹೋಗುತ್ತದೆ ಅಂತಾಳೆ. ಅಷ್ಟರಲ್ಲಿ‌ ಶೃತಿ ಅಲ್ಲಿಗೆ ಬಂದು ತನ್ನ ಮನಸಿನಲ್ಲಿ ವಿಷಯನೆಲ್ಲ ಹೇಳ್ಕೊಬೇಕು ಅಂತಾಳೆ. ಆದರೆ ಹೇಗೆ ವರುಣ್ ಕೊಡೋ ಟಾರ್ಚರ್ ಹೇಳೋದು ಅಂತಾ ಶೃತಿಗೆ ಗೊತ್ತಾಗೊದಿಲ್ಲ. ಭಾನುಮತಿ ಮಗಳ ಗೊಂದಲ ನೋಡಿ ನೀನು ನನ್ನ ಹತ್ರ ಹೇಳೋದಕ್ಕೆ ಆಗಿಲ್ಲ ಅಂದರೆ ಸಿತಾರಾ ಅಂಕಲ್ ಹತ್ರ ಹೇಳು ಅಂತಾಳೆ. ಆದರೆ ಅವಳು ಗೊಂದಲದಲ್ಲೇ ಇರ್ತಾಳೆ. ಇತ್ತ ವಿಜಿ ಅಪ್ಪನನ್ನು ಕೊಂದವರನ್ನು ಹುಡುಕ್ತಾ ಇದ್ರೆ, ತಂಗಿ ವರುಣ್ ಟಾರ್ಚರ್‌ಗೆ ತತ್ತರಿಸಿ ಹೋಗಿದ್ದಾಳೆ.

More from Filmibeat

English summary
Colors Kannada serial Geetha Written Update on January 4rd episode. Here is the details about satya murty murder mystery.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X