For Quick Alerts
  ALLOW NOTIFICATIONS  
  For Daily Alerts

  ಕನ್ನಡತಿ ಹೀರೋ ಮೇಲೆ ಮನಸಿದ್ಯಾ ಅಂತಾ ವರೋದಿನಿ ಕೇಳಿದ್ಯಾಕೆ?

  By ಶೃತಿ ಹರೀಶ್ ಗೌಡ
  |

  ಕನ್ನಡತಿ ಧಾರಾವಾಹಿಯಲ್ಲಿ ಮೊದಲಿನಿಂದಲೂ ಹರ್ಷನ ಮೇಲೆ ವರೂದಿನಿಗೆ ಹುಚ್ಚು ಪ್ರೀತಿ ಅದು ಭುವಿಗೆ ಮದುವೆ ಸಮಯದಲ್ಲಿ ತಿಳಿದಿತ್ತು. ನಂತರ ಅವರಿಬ್ಬರಿಗೂ ತಿಳಿಯದ ಡಿವೋರ್ಸ್‌ಗೂ ಸಹ ಅಪ್ಲೈ ಮಾಡಿದ್ದಳು. ಇದರೆಲ್ಲರ ನಡುವೆ ವರೋದಿನಿ ಭುವಿಯ ಕೈಗೆ ಸಿಕ್ಕಿದ್ದಾಳೆ.

  ಈಗಲೂ ಸಹ ನಿನಗೆ ಹೀರೋ ಮೇಲೆ ಮನಸಿದ್ಯಾ ಎಂದು ಕೇಳಿದ್ದಕ್ಕೆ ವರೂದಿನಿ ವಿಚಲಿತಳಾಗಿ ಇಲ್ಲ ಎಂದು ಹೇಳಿ ಹೋಗಿದ್ದಾಳೆ. ಮುಂದೆ ವರೂಧಿನಿ ಏನು ಮಾಡ್ತಾಳೆ ನೋಡಬೇಕು.

  ಸೌದಿ ಅರೇಬಿಯಾ ಪ್ರವಾಸೋದ್ಯಮ ಪ್ರಾಧಿಕಾರದಿಂದ ಆಹ್ವಾನ ಪಡೆದ ಮೊದಲ ಕನ್ನಡತಿ ನಟಿ ಶ್ವೇತಾ ಪ್ರಸಾದ್! ಸೌದಿ ಅರೇಬಿಯಾ ಪ್ರವಾಸೋದ್ಯಮ ಪ್ರಾಧಿಕಾರದಿಂದ ಆಹ್ವಾನ ಪಡೆದ ಮೊದಲ ಕನ್ನಡತಿ ನಟಿ ಶ್ವೇತಾ ಪ್ರಸಾದ್!

  ಹರ್ಷ ಭುವಿ ಆಫೀಸ್‌ನಲ್ಲಿ ಇಲ್ಲದ್ದನ್ನು ಕಂಡು ಯೋಚನೆಗೊಳಗಾಗಿದ್ದ ಹರ್ಷ ಅಷ್ಟರಲ್ಲಿ ವರೂದಿನಿಯನ್ನು ಕೇಳಿದ್ದರು ಆಗಲೇ ಭುವಿ ಹೊರಟು ಹೋದಳು ಎಂದು ತಿಳಿಸಿದ್ದಾಳೆ.

  ಇದು ಹರ್ಷನ ಟೆನ್ಷನ್ ಹೆಚ್ಚಾಗಲು ಕಾರಣವಾಗಿದೆ. ಭುವಿಯ ಕೊಲೆಯ ಪ್ರಯತ್ನ ನಡೆದಾಗಿನಿಂದಲೂ ಸೆಕ್ಯೂರಿಟಿ ಇಡಲಾಗಿತ್ತು. ಆದರೆ ಭುವಿ ಕೊಲೆಗಾರನನ್ನು ಹಿಡಿಯಲು ಬಂದ ಪ್ರಾಣಕ್ಕೆ ಅಪಾಯತಂದು ಕೊಂಡಿದ್ದಾಳೆ.

  ಯಾರಾದರೂ ಕೊಲೆಗಾರನಿಗೆ ಬುದ್ಧಿ ಹೇಳ್ತಾರ ಅಂತಾ ಅನ್ನೋದು ಉಂಟು. ಇಲ್ಲಿ ಆಟೋದಲ್ಲಿ ಹೋಗುವಾಗ ಕೊಲೆ ಮಾಡಲು ಬಂದವನಿಗೆ ತಾನೇ ಫೋನ್ ಮಾಡಿದ್ದಾಳೆ. ಆತ ವಿಚಲಿತನಾಗಿ ಕರೆಯನ್ನು ತೆಗೆಯೋದಿಲ್ಲ. ಕೊನೆಗೆ ಕರೆಯನ್ನು ಸ್ವೀಕರಿಸಿದಾಗ ಭುವಿ ಮಾತನಾಡಿ ಸಾವಿನ ಬಾಯಿಗೆ ಸಿಲುಕಿದ್ದಾಳೆ. ಕೊಲೆಗಾರ ಆಟೋವನ್ನು ಅಡ್ಡಹಾಕಿ ಭುವಿಯನ್ನು ಹೆದರಿಸಿದ್ದಾನೆ. ಭುವಿ ಈ ಸಮಯದಲ್ಲಿ ಕೊಲ್ಲಲು ಬಂದವರಿಗೆ ಬುದ್ಧಿ ಹೇಳಿದ್ದಾಳೆ. ನಿಮ್ಮನ್ನು ನನ್ನ ಕೊಲೆ ಮಾಡಲು ಕಳುಹಿಸಿದವರು ಯಾರು ಎಂದು ಪದೇ-ಪದೇ ಕೇಳಿದ್ದಾಳೆ. ಆದರೆ ಅದಕ್ಕೆ ಕೊಲೆಗಾರರು ಉತ್ತರಿಸಿಲ್ಲ. ಪ್ರಶ್ನೆಗಳಿಂದ ಬೇಸತ್ತ ಕೊಲೆಗಾರ ಇಲ್ಲಂದ ಸುಮ್ಮನೆ ಹೊರಟು ಹೋಗಿ ಮೇಡಂ ಎಂದಿದ್ದಾನೆ.‌ ಆದರೂ ಸಹ ಭುವಿ ಅಲ್ಲಿಂದ ಹೋಗಲಿಲ್ಲ.

  ಭುವಿಗೆ ಕೊಲೆ ಮಾಡಲು ಬಂದ ವ್ಯಕ್ತಿ ಎಷ್ಟು ಹೇಳಿದರೂ ಹೋಗದ ಕಾರಣ ಮುಸುಕುದಾರಿ ವ್ಯಕ್ತಿ ಭುವಿಗೆ ಚಾಕುವಿನಿಂದ ಇರಿಯಲು ಹೋಗುತ್ತಾನೆ. ಇನ್ನೇನು ಭುವಿಗೆ ಚಾಕು ಹಾಕಬೇಕು ಎನ್ನುವಷ್ಟರಲ್ಲಿ ಮಿಂಚಿನಂತೆ ನಿಲೇಶ್ ಎಂಟ್ರಿ ಕೊಟ್ಟು ಭುವಿಯನ್ನು ಕಾಪಾಡಿದ್ದಾನೆ. ಭುವಿ ಸದ್ಯಕ್ಕೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಇನ್ನೂ ಭುಮಿ ಇರುವ ಸ್ಥಳಕ್ಕೆ ಹರ್ಷ ಸಹ ಬಂದಿದ್ದಾನೆ. ಭುವಿಯನ್ನು ನೋಡಿ ನಿಟ್ಟುಸಿರು ಬಿಟ್ಟಿದ್ದಾನೆ. ಹರ್ಷ ಸಹ ಭುವಿಯನ್ನು ಕಾಪಾಡಿದ್ದಾನೆ. ಹೇಳದೆ ಕೇಳದೆ ಇರುವ ಸೆಕ್ಯುರಿಟಿ ಬಿಟ್ಟು ಈ ರೀತಿ ಹೊರಗೆ ಬಂದಿದ್ಯಾಕೆ ಎಂದು ಭುವಿಗೆ ಕ್ಲಾಸ್ ತಗೆದುಕೊಂಡಿದ್ದಾನೆ. ನೀಲೇಶ್ ಯಾಕೆ ಭುವಿಯನ್ನು ಕಾಪಾಡಿದ , ಭುವಿಯ ಕೊಲೆಯ ಹಿಂದೆ ಯಾರಿದ್ದಾರೆ.ಹರ್ಷ ಭುವಿ ದೂರಾಗ್ತಾರಾ, ಎಂಡಿ ಸ್ಥಾನಕ್ಕೇರಲು ಸಾನಿಯಾ ಎನು ಮಾಡ್ತಾಳೆ ಕಾದು ನೋಡಬೇಕಿದೆ.

  English summary
  Zee Kannada serial Katheyondu Shuruvagide Here is the details about Bhuvi murder. Know more about it.
  Wednesday, January 4, 2023, 7:45
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X