Karimani: ಕಡೆಗೂ ಸಿಕ್ಕನಲ್ಲ 'ಕರಿಮಣಿ ಮಾಲೀಕ': ಅದು ರಾವುಲ್ಲಾ ಅಲ್ಲಾ.. ಕರ್ಣ..!

By ಎಸ್ ಸುಮಂತ್

ಇದು ಸೋಷಿಯಲ್ ಮೀಡಿಯಾ ಜಮಾನ. ಅದರಲ್ಲೂ ರೀಲ್ಸ್ ಜಮಾನ. ಯಾವುದು ಯಾವಾಗ ವೈರಲ್ ಆಗುತ್ತೆ ಎಂಬುದೇ ಯಾರಿಗೂ ಗೊತ್ತಾಗಲ್ಲ. ಹಳೇ ಸಾಂಗ್ಸ್ ರೀಲ್ಸ್ ಜಾಸ್ತಿ ಆದ ಮೇಲೆ ವೈರಲ್ ಆಗಿರುವ ಉದಾಹರಣೆಗಳು ಇದೆ.

ಈಗ ಕೆಲ ದಿನಗಳಿಂದ ಸೋಷಿಯಲ್ ಮೀಡಿಯಾ ಓಪನ್ ಮಾಡಿದ್ರೆ ಸಾಕು 'ಓ.. ನಲ್ಲ.. ನೀನಲ್ಲ.. ಕರಿಮಣಿ ಮಾಲೀಕ ನೀ..ನಲ್ಲ' ಎಂಬ ಹಾಡೇ ಬರುತ್ತಿದೆ. ಅದರಲ್ಲೂ ಟಪ್ಪಾಂಗುಚ್ವಿ ಸ್ಟೆಪ್ಟ್ ಹಾಕುವಂತ ಮ್ಯೂಸಿಕ್ ಬೇರೆ ನಡುವೆ ಸೇರಿಸಲಾಗಿದೆ.

colors kannada serial karimani new promo Written Update

ರೀಲ್ಸ್‌ನಲ್ಲಿ ಈ ಹಾಡಿಗೆ ಡ್ಯಾನ್ಸ್ ನೋಡಿದವರು ನಮ್ಮದು ಒಂದಿರಲಿ ಅಂತ ಕುಣಿದು ಕುಣಿದು ಪೋಸ್ಟ್ ಮಾಡುತ್ತಿದ್ದಾರೆ. ರೀಲ್ಸ್‌ನಿಂದಾಗಿ ರಿಯಲ್ ಹಾಡು ಮಿಲಿಯನ್‌ಗಟ್ಟಲೇ ವೀವ್ಸ್ ಆಗುತ್ತಿದೆ. ಈಗ ವಿಕಿಪೀಡಿಯಾ ಬೇರೆ ಕರಿಮಣಿ ಮಾಲೀಕನನ್ನ ಡಿಫ್ರೆಂಟ್ ಆಗಿ ತೋರಿಸಿದ್ದಾರೆ.

ಕಲರ್ಸ್ ಕನ್ನಡ ಹೊಸ ಕಥೆ

ಸದ್ಯ ಕಲರ್ಸ್ ಕನ್ನಡದಲ್ಲಿ‌ಮೂರುವರೆ ತಿಂಗಳುಗಳ ಕಾಲ ಬಿಗ್ ಬಾಸ್-10 ಜನರನ್ನು ಹಿಡಿದಿಟ್ಟುಕೊಂಡಿತ್ತು. ಸದ್ಯ ಬಿಗ್ ಬಾಸ್ ಮುಗಿದಿದೆ. ಹೊರಗಡೆ ಅದರ ಫೀವರ್ ಇನ್ನು ಇದ್ದರೂ ಕೂಡ, ಚಾನೆಲ್‌ನಲ್ಲಿ ಬಿಗ್ ಬಾಸ್ ಬರುತ್ತಿದ್ದಂತ ಸಮಯಕ್ಕೆ ಧಾರಾವಾಹಿಗಳು ಶುರುವಾಗಲೇಬೇಕಿದೆ. ಇದೀಗ ಹೊಸ ಧಾರಾವಾಹಿಗಳು ಅನೌನ್ಸ್ ಆಗಿವೆ. ಆಗಲೇ 'ಶ್ರೀಗೌರಿ' ಧಾರಾವಾಹಿ ಎಲ್ಲರನ್ನು ಮನರಂಜಿಸುತ್ತಿದೆ. ಇದೀಗ ಮತ್ತೊಂದು ಹೊಸ ಧಾರಾವಾಹಿ ಫೆ.19 ರಿಂದ ಶುರುವಾಗುತ್ತಿದೆ.

colors kannada serial karimani new promo Written Update

'ಕರಿಮಣಿ' ಧಾರಾವಾಹಿ ಪ್ರಾರಂಭ

ಈ ಕರಿಮಣಿ ಮಾಂಗಲ್ಯ ಎಂಬುದು ಸಿಕ್ಕಾಪಟ್ಟೆ ಟ್ರೆಂಡಿಂಗ್ ಆಗಿದೆ. ರೀಲ್ಸ್ ಪ್ರಿಯರ ಪ್ರೊಫೈಲ್‌ನಲ್ಲಿ ಈ ಕರಿಮಣಿ ಮಾಲೀಕನ ಹಾಡೊಂದು ಇದ್ದೇ ಇರುತ್ತದೆ. 'ಉಪೇಂದ್ರ' ಸಿನಿಮಾದ ಈ ಹಾಡು ಅಂದಿಗಿಂತ ಇಂದು ಸಿಕ್ಕಾಪಟ್ಟೆ ಫೇಮಸ್ ಆಗಿದೆ. ಎಲ್ಲರೂ ಯಾರಪ್ಪ ಕರಿಮಣಿ ಮಾಲೀಕ ಅಂತ ಹುಡುಕುತ್ತಿರುವ ಟ್ರೆಂಡಿಂಗ್ ಟೈಮ್‌ನಲ್ಲೇ ಶುರುವಾಗಿದೆ ಧಾರಾವಾಹಿ.

ಕಡೆಗೂ ಸಿಕ್ಕ 'ಕರಿಮಣಿ ಮಾಲೀಕ'!

ಕಲರ್ಸ್ ಕನ್ನಡ ಈ ಹಾಡು ಟ್ರೆಂಡಿಂಗ್ ಆಗುವುದಕ್ಕೂ ಮುನ್ನವೇ ಈ ಧಾರಾವಾಹಿಯನ್ನು ಅನೌನ್ಸ್ ಮಾಡಿದ್ದರು. ಈಗ ಸರಿಯಾದ ಸಮಯಕ್ಕೆ ಧಾರಾವಾಹಿ ಶುರುವಾಗುತ್ತಿದೆ. 'ಸೌಜನ್ಯ ಬದುಕಲ್ಲಿ ಕರಿಮಣಿ ಮಾಲೀಕನ ಆಗಮನವಾಗುತ್ತಿತ್ತು. ಆದರೆ ಹೆಲಿಕಾಪ್ಟರ್‌ನಲ್ಲಿ ಬಂದ ಕರ್ಣ, ಉಡುಗೊರೆ ಜೊತೆಗೆ ಆ ಕರಿಮಣಿ ಮಾಲೀಕನೇ ಇಲ್ಲದಂತೆ ಮಾಡಿದ್ದಾನೆ. ಮುಂದೆ ಕರ್ಣನೇ ಅದರ ಮಾಲೀಕನಾಗುವ ಸೂಚನೆ ಇದಾಗಿದೆ'. ಈ ರೀತಿಯ ಕಥೆಯನ್ನ ಕಲರ್ಸ್ ಕನ್ನಡ ತಂದಿದೆ. ಕಡೆಗೂ ಇಡೀ ರೀಲ್ಸ್ ಮಂದಿ ಹುಡುಕುತ್ತಿದ್ದ ಕರಿಮಣಿ ಮಾಲೀಕನನ್ನು ಕಲರ್ಸ್ ಕನ್ನಡ ಪರಿಚಯಿಸಿದೆ ಎಂದು ಕೆಲವರು ಟ್ರೋಲ್ ಮಾಡುತ್ತಿದ್ದಾರೆ.

ಆ ಕರಿಮಣಿ ಮಾಲೀಕ ಕರ್ಣ

ಯಾವುದೇ ಟ್ರೆಂಡಿಂಗ್ ಆದರೂ ಅದರ ಬಗ್ಗೆ ಒಂದು ವಿಡಿಯೋ ಮಾಡುವುದು ವಿಕಾಸ್ ವಿಕಿಪೀಡಿಯಾ ಅಭ್ಯಾಸ. ಇದೀಗ ಕರಿಮಣಿ ಮಾಲೀಕ ಹಾಡಿಗೆ ವಿಭಿನ್ನವಾದ ವಿಡಿಯೋ ಬಿಟ್ಟಿದ್ದಾರೆ. ಅದುವೇ 'ಕರಿಮಣಿ ಮಾಲೀಕ ರಾವುಲ್ಲಾ' ಅಂತ. ಆದರೆ ನೆಟ್ಟಿಗರಿಗೆ ಕನ್ಫರ್ಮ್ ಆಗೋಯ್ತು ಕರಿಮಣಿ ಮಾಲೀಕ ರಾವುಲ್ಲಾ ಅಲ್ಲ ಕರ್ಣ ಅಂತ. ಈ ಹೊಸ ಧಾರಾವಾಹಿಯ ಪ್ರೋಮೋಗೆ ಒಳ್ಳೊಳ್ಳೆ ಕಮೆಂಟ್ಸ್ ಬರುತ್ತಿವೆ. ಪ್ರೇಕ್ಷಕರು ಮಾತ್ರ ಖುಷಿಯಾಗೋಗಿದ್ದಾರೆ.

More from Filmibeat

English summary
colors kannada serial karimani Written Update on new promo. Here is the details about Owner of Karimani who was caught;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X