ನಟನೆ ಮೇಲಿನ ಆಸೆಯಿಂದ ಸರ್ಕಾರಿ ನೌಕರಿಯನ್ನೇ ತೊರೆದು ಬಂದ ನಟಿ: ಯಾರಿವರು?
ಬಣ್ಣದ ಜಗತ್ತು ಎಂಥವರನ್ನೇ ಆಗಲಿ ಬಹಳ ಬೇಗ ಸೆಳೆದುಬಿಡುತ್ತದೆ. ದೂರದ ಬೆಟ್ಟ ನುಣ್ಣಗೆ ಎಂಬ ಮಾತಿದೆ. ನಟನಾ ಕ್ಷೇತ್ರ ನೂರಕ್ಕೆ ನೂರರಷ್ಟು ಆ ಗಾದೆ ಮಾತಿಗೆ ಹತ್ತಿರವಾಗಿದೆ. ಪ್ರತಿಭೆ ಒಂದಿದ್ದರೆ ಸಾಕು ಎನ್ನುವಂತೆ ಇಲ್ಲ, ಅದೃಷ್ಟ ಇರಲೇಬೇಕು. ಲಕ್ ಕೈ ಕೊಡ್ತು ಅಂದರೆ ಎಷ್ಟೇ ತಿಪ್ಪರಲಾಗ ಹಾಕಿ, ನಟನೆಯ ಕೌಶಲ್ಯ ತೋರಿಸಿದರು ಸಕ್ಸಸ್‌ನ ಪಡೆಯುವುದು ಬಹಳ ಕಷ್ಟವಾಗುತ್ತದೆ. ಸಾಕಷ್ಟು ಪ್ರಯತ್ನ ಪಟ್ಟು, ಒಂದಷ್ಟು ತಯಾರಿಗಳೊಂದಿಗೆ ಕಾವ್ಯಾ ಕಿರುತೆರೆಗೆ ಹೆಜ್ಜೆ ಇಟ್ಟಿದ್ದಾರೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ 'ಕೆಂಡಸಂಪಿಗೆ' ಧಾರಾವಾಹಿ ಮೂಡಿ ಬರುತ್ತಿದೆ. ಇದರಲ್ಲಿ ಘಟಾನುಘಟಿಗಳೇ ನಟಿಸುತ್ತಿದ್ದಾರೆ. ಹಿರಿಯ ಕಲಾವಿದರಾದ ದೊಡ್ಡಣ್ಣ, ಜ್ಯೋತಿ ರೈ ಇದ್ದಾರೆ. ಈಗಾಗಲೇ ಖ್ಯಾತಿ ಪಡೆದಿರುವ ಅಮೃತಾ, ಸಾಧನಾ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ಸುಮನಾ ಪಾತ್ರ ಬಹಳ ಮುಖ್ಯವಾದ ಪಾತ್ರವಾಗಿದೆ. ಸುಮನಾ ಪಾತ್ರ ನಿರ್ವಹಿಸಿರುವ ಕಾವ್ಯಾ, ತಮ್ಮ ಜೀವನದ ಅನುಭವಗಳನ್ನು ಕನ್ನಡ ಮೋಜೋ ಜೊತೆಗೆ ಹಂಚಿಕೊಂಡಿದ್ದಾರೆ.

ಸರ್ ನೇಮ್ ಬಗ್ಗೆ ಕಾವ್ಯಾ ಹೇಳಿದ್ದು ಏನು..?
ಸೆಲೆಬ್ರೇಟಿಗಳ ಹೆಸರಿನ ಮುಂದೆ ಅಲ್ಮೋಸ್ಟ್ ಒಂದು ಸರ್ ನೇಮ್ ಇರುತ್ತೆ. ಅದು ತಂದೆ, ಗಂಡ ಅಥವಾ ಕುಟುಂಬದ ಹೆಸರಾಗಿರುತ್ತದೆ. ಕೆಂಡಸಂಪಿಗೆ ಧಾರಾವಾಹಿಯ ನಟಿ ಕಾವ್ಯಾ ಜೊತೆಗೂ ಶೈವ ಎಂಬ ಸರ್ ನೇಮ್ ಇದೆ. ಅದು ಬಂದಿದ್ದು ಹೇಗೆ ಎಂಬುದನ್ನು ತಿಳಿಸಿದ್ದಾರೆ. 'ಮನೆಯಲ್ಲಿ ಕಾವ್ಯಾ ಅಂತಾನೇ ಹೆಸರಿಟ್ಟಿದ್ದು. ಕಾಲೇಜು ಟೈಮ್ ನಲ್ಲಿ ಸೋಷಿಯಲ್ ಮೀಡಿಯಾ ಕ್ರಿಯೇಟ್ ಮಾಡುವಾಗ ಕಾವ್ಯಾ ಪಕ್ಕ ಏನು ಇಡುವುದು ಅಂತ ಯೋಚನೆ ಮಾಡುತ್ತಾ ಇದ್ದೆ. ನಾವೂ ವೀರಶೈವ. ನನ್ನ ಸಂಬಂಧಿಕರೆಲ್ಲಾ ಶೈವ ಅಂತ ಇಟ್ಟುಕೊಂಡಿದ್ದರು. ಹೀಗಾಗಿ ಅದನ್ನೆ ಇಟ್ಟೆ' ಎಂದಿದ್ದಾರೆ.
ಕಾವ್ಯಾಗೆ ಯಾವ ಪಾತ್ರ ಇಷ್ಟ ಇತ್ತು ಗೊತ್ತಾ..?
"ನಾನು ನಟನೆಯನ್ನು ಪ್ರೊಫೆಷನಲ್ ಆಗಿ ತೆಗೆದುಕೊಳ್ಳಬೇಕು ಅಂತ ಅಂದುಕೊಂಡಿರಲಿಲ್ಲ. ಪ್ರಯತ್ನ ಪಡಬೇಕು, ಆನ್ ಸ್ಕ್ರೀನ್ ಬರಬೇಕು ಅಂತ ಅಂದುಕೊಂಡಿದ್ದೆ. ಅದೊಂದು ಆಸೆ ಇತ್ತು. ಹೀರೋಯಿನ್ ಆಗಬೇಕು, ಲೀಡ್ ಕ್ಯಾರೆಕ್ಟರ್ ಮಾಡಬೇಕು ಎಂಬ ಆಸೆಯೂ ಆ ಸಮಯದಲ್ಲಿ ಇರಲಿಲ್ಲ ನಂಗೆ. 'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ತಂಗಿ ಪಾತ್ರ ಇತ್ತಲ್ಲ, ಅಂಥ ಪಾತ್ರ ಮಾಡಬೇಕು ಎಂಬ ಆಸೆ ಇತ್ತು. ಆಡಿಷನ್ ಕೊಟ್ಟೆ ಮೂರನೇ ಸಲ ನಂಗೆ ಲೀಡ್ ರೋಲ್ ಸಿಕ್ಕಿದ್ದು" ಎಂದಿದ್ದಾರೆ.

ಬಯಸಿದ್ದು ಕಾವ್ಯಾಗೆ ಸುಲಭದಲ್ಲಿ ಸಿಕ್ಕಿದ್ಯಾ..?
"ಬೇರೆಯವರಿಗೆ ಹೋಲಿಕೆ ಮಾಡಿದರೆ ನಾನು ತುಂಬಾ ಸ್ಟ್ರಗಲ್ ಮಾಡಿಲ್ಲ. ನಮ್ಮ ಮಾಮ ಕೂಡ ಅದನ್ನೇ ಹೇಳುತ್ತಾರೆ. ಡೈರೆಕ್ಟ್ ಲೀಡ್ ರೋಲ್ ಸಿಗಲಿಲ್ಲ ಅಷ್ಟೆ. ಸಪೋರ್ಟಿಂಗ್ ಕ್ಯಾರೆಕ್ಟರ್ ಸಿಕ್ಕಾಗ ನಾನು ಗೊಂದಲದಲ್ಲಿದ್ದೆ. ಇದನ್ನ ಕಂಟಿನ್ಯೂ ಮಾಡಬೇಕಾ ಬೇಡವಾ ಅಂತ. ಆದರೆ, ತುಂಬಾ ಸ್ಟ್ರಗಲ್ ಆಗಿಲ್ಲ" ಎಂದಿದ್ದಾರೆ.
ನಟನೆಗಾಗಿ ಸರ್ಕಾರಿ ನೌಕರಿ ಬಿಟ್ಟ ಕಾವ್ಯಾ
"ನಾನು ಡಿಪ್ಲೋಮಾ ಮಾಡಿದ್ದೆ. ಸೆಂಟ್ರಲ್ ಗವರ್ನಮೆಂಟ್ ನಲ್ಲಿ ಕೆಲಸ ಆಗಿತ್ತು. ಮನೆಯಲ್ಲಿ ನಟನೆ ಬೇಡ, ಕೆಲಸಕ್ಕೆ ಹೋಗಿ ಬಿಡು ಅಂತ ಬುದ್ದಿ ಹೇಳಿದರು. ನಾನು ಎರಡು ವರ್ಷ ಸಮಯ ಕೊಡಿ. ಏನಾದರೂ ಸಾಧಿಸುತ್ತೀನಿ. ಆಗದೆ ಇದ್ದರೆ ನೀವೂ ಹೇಳಿದಂತೆ ಕೇಳುತ್ತೇನೆ ಎಂದಿದ್ದೆ. ಆಮೇಲೆ ಮನೆಯವರು ಓಕೆ ಇದ್ದರು. ಆದರೆ ನನಗೆ ಭಯ ಇತ್ತು" ಎಂದಿದ್ದಾರೆ.


Click it and Unblock the Notifications











