Kendasampige: ಮಗನಿಂದಲೇ ಸತ್ಯ ಹೊರ ಹಾಕಿಸಿದ ಕೇಶವ ಪ್ರಸಾದ್.. ಮನೆಯವರೆಲ್ಲಾ ಶಾಕ್..!
ಕೇಶವ ಪ್ರಸಾದ್ ಮನೆಯಲ್ಲಿ ಸಂತಸದ ಸುದ್ದಿಯೊಂದು ಮನೆ ಮಾಡಿದೆ. ಆದರೆ ಅದನ್ನು ಎಲ್ಲರಿಂದಾನೂ ಮುಚ್ಚಿಡಲಾಗಿದೆ. ಸತ್ಯ ಗೊತ್ತಿರುವ ತೀರ್ಥಂಕರ ಹೇಳಿಕೊಳ್ಳುತ್ತಿಲ್ಲ. ಖುಷಿ ಪಡುವ ವಿಚಾರದಲ್ಲೂ ಸಂಕಟ ಪಡುತ್ತಿದ್ದಾನೆ. ಇನ್ನು ಸತ್ಯ ಗೊತ್ತಿರುವ ಮಾವನಿಂದ ಸೊಸೆಯೇ ಮಾತು ತೆಗೆದುಕೊಂಡಿದ್ದಾಳೆ. ಆದರೆ ಬುದ್ದಿವಂತನಾದ ಮಾವ ಬಿಡಬೇಕಲ್ಲ. ಯಾರಿಂದ ಸತ್ಯ ಹೊರಗೆ ಬರಬೇಕೋ ಅವರಿಂದಾನೇ ತೆಗೆಸಿದ್ದಾನೆ.
ಸುಮನಾ ಗಲ್ಲಿಯಿಂದ ಬಂದಿದ್ದಾಳೆ ಎಂಬ ಕಾರಣಕ್ಕೆ ಸಾಧನಾ ಅವಳನ್ನು ತಂಗಿ ಎಂದು ಒಪ್ಪಿಕೊಳ್ಳುವುದಕ್ಕೆ ಸಿದ್ಧವಿಲ್ಲ. ಮನೆಯಿಂದ ಓಡಿಸುವುದಕ್ಕೆ ಪ್ರಯತ್ನ ಪಟ್ಟಳು. ಅದರಲ್ಲೂ ಸಾಧನಾಗೆ ನಾದಿನಿಯ ಸಪೋರ್ಟ್ ಹೆಚ್ಚಾಗಿಯೇ ಇತ್ತು. ಈಗ ನಾದಿನಿಯ ಕಾಟದಿಂದಾನೇ ಸತ್ಯ ಬಯಲಾಗಿದೆ.

ಸುಮನಾ ಮನೆಗೆ ಬಂದಿರುವ ತಂಗಿ
ರಾಜಿ ಮತ್ತು ಸುಮನಾ ತುಂಬಾನೇ ಆತ್ಮೀಯವಾಗಿರುವ ಅಕ್ಕ ತಂಗಿಯರು. ಸುಮನಾಳನ್ನು ನೋಡಲು ರಾಜಿ, ಮನೆಗೆ ಬಂದಿದ್ದಾಳೆ. ಅಕ್ಕನ ಹಾರೈಕೆಯಲ್ಲಿ ತೊಡಗಿಕೊಂಡಿದ್ದಾಳೆ. ರಾಜಿ ಮನೆಯಲ್ಲಿ ಇರುವುದಕ್ಕೆ ಯಾರಿಗೂ ತೊಂದರೆ ಇಲ್ಲ. ಎಲ್ಲರೂ ಪ್ರೀತಿ ಮಾಡುತ್ತಾರೆ. ರಾಜಿಗೆ ಈ ಮನೆ ಕೂಡ ನಿನ್ನದೆ ಎಂಬಂತೆ ಅರ್ಥ ಮಾಡಿಸಿದ್ದಾರೆ. ಆದರೆ, ಜಾಹ್ನವಿಗೆ ರಾಜಿ ಕಂಡರೆ ಆಗುತ್ತಿಲ್ಲ. ಪ್ರತಿದಿನ ರಾಜಿಯನ್ನು ಕಂಡರೆ ಕೆಂಡಕಾರುತ್ತಿದ್ದಾಳೆ. ಅವಳನ್ನು ಮನೆ ಬಿಟ್ಟು ಓಡಿಸುವುದಕ್ಕೆ ಟ್ರೈ ಮಾಡುತ್ತಿದ್ದಾಳೆ. ಒಂದಲ್ಲ ಒಂದು ಕಿರಿಕ್ ತೆಗೆಯುತ್ತಾ ಇರುತ್ತಾಳೆ.
ಸುಮನಾಳನ್ನು ತಳ್ಳಿದ ಜಾಹ್ನವಿ
ಈಗ ಜಾಹ್ನವಿ ಮಿತಿ ಮೀರಿದ್ದಾಳೆ. ರಾಜಿಯನ್ನು ಮನೆಯಿಂದ ಹೊರಗೆ ಹಾಕುವುದಕ್ಕೆ ನಿರ್ಧಾರವನ್ನೇ ಮಾಡಿದ್ದಾಳೆ. ಮೃಗೀಯವಾಗಿ ವರ್ತಿಸುತ್ತಿರುವ ಜಾಹ್ನವಿ, ಕೈಹಿಡಿದು ಧರಧರನೇ ಎಳೆದುಕೊಂಡು ಹೋಗಿದ್ದಾಳೆ. ಆಗಲೇ ಸುಮನಾ ಅಡ್ಡ ಬಂದಿದ್ದಾಳೆ. ಜಾಹ್ನವಿಯನ್ನು ತಡೆಯಲು ಪ್ರಯತ್ನ ಪಟ್ಟಿದ್ದಾಳೆ. ಆದರೆ, ಜಾಹ್ನವಿ ಮಿತಿ ಮೀರಿದ್ದಾಳೆ. ಸುಮನಾಳನ್ನು ಜೋರಾಗಿ ತಳ್ಳಿದ್ದಾಳೆ. ಸುಮನಾಳಿಗೆ ಏನಾಗಿದೆ ಎಂದು ಗೊತ್ತಾಗಿಲ್ಲ. ಜಾಹ್ನವಿ ಅದಕ್ಕೆ ಪಶ್ಚಾತ್ತಾಪವನ್ನು ಪಡಲಿಲ್ಲ.

ತಂಗಿಯನ್ನು ಕ್ಲಾಸ್ ತೆಗೆದುಕೊಂಡ ತೀರ್ಥಂಕರ
ಜಾಹ್ನವಿ ಮಾಡಿದ ತಪ್ಪು ಮನೆಯವರಿಗೆಲ್ಲಾ ಗೊತ್ತಾಯ್ತು. ಸುಮನಾ, ಕಂಬಿಗೆ ಹೊಟ್ಟೆ ಹೊಡೆದುಕೊಳ್ಳುವುದು ಸೆಕೆಂಡ್‌ನಲ್ಲಿ ಬಚಾವ್ ಆದಳು. ಯಾವುದೇ ಸಮಸ್ಯೆ ಆಗಲಿಲ್ಲ. ಮನೆಯಲ್ಲಿದ್ದ ಅತ್ತೆ ಬಹಳ ಬೇಗ ಓಡಿ ಬಂದಿದ್ದಾಳೆ. ಮಾವ ಕೂಡ ಅಲ್ಲಿಗೆ ಬಂದಿದ್ದಾನೆ. ಸುಮನಾಳನ್ನು ತಳ್ಳಿದ್ದನ್ನು ನೋಡಿ ಶಾಕ್ ಆಗಿದ್ದಾನೆ. ಮಗಳ ನಡವಳಿಕೆ ಕಂಡು ಕೇಶವ ಪ್ರಸಾದ್‌ಗೆ ಸಿಟ್ಟು ಬಂದಿದೆ. ಆದರೆ ಏನು ಮಾಡದ ಪರಿಸ್ಥಿತಿಯಲ್ಲಿ ಕೇಶವ ಪ್ರಸಾದ್ ಇದ್ದಾನೆ. ತಂದೆಯ ಸ್ಥಾನದಲ್ಲಿದ್ದರೂ, ಜಾಹ್ನವಿ ಯಾವುದೇ ರೀತಿಯ ಮಾತು ಕೇಳುತ್ತಿಲ್ಲ. ತಪ್ಪು ಮಾಡಿದಾಗೆಲ್ಲಾ ಬುದ್ದಿ ಹೇಳಿದ್ದಾರೆ ಕೇಶವ ಪ್ರಸಾದ್, ಆದರೂ ಜಾಹ್ನವಿ ಮಾತು ಕೇಳುತ್ತಿಲ್ಲ.
ತಂದೆಗೆ - ತಾಯಿಗೆ ಫುಲ್ ಖುಷಿ
ಸುಮನಾಳನ್ನು ತಳ್ಳಿದ ಜಾಹ್ನವಿಯನ್ನು ಕಂಡು ತೀರ್ಥಂಕರ ಕೆಂಡಾಮಂಡಲನಾಗಿದ್ದಾನೆ. ಜಾಹ್ನವಿಗೆ ಕಪಾಳ ಮೋಕ್ಷ ಮಾಡಿದ್ದಾನೆ. ಒಂದ್ಸಲ ಅಲ್ಲ ಎರಡು ಸಲ ಹೊಡೆದಿದ್ದಾನೆ. ತಂದೆಗೆ ಕೋಪ ಬಂದಿದೆ. ಯಾಕೆ ಹೊಡೆದಿದ್ದು ಅಂತ ಕೇಳಿದ್ದಾನೆ. ತೀರ್ಥಂಕರ ಏನೋ ಸ್ಪಷ್ಟನೆ ನೀಡಲು ಹೋಗಿದ್ದಾನೆ. ಆದರೆ ಕೇಶವ ಪ್ರಸಾದ್ ಅಷ್ಟು ಸುಲಭವಾಗಿ ಬಿಡಬೇಕಲ್ವಾ. ಮತ್ತೆ ಮತ್ತೆ ಕೆದಕಿದ್ದಾನೆ. ತೀರ್ಥಂಕರನಿಗೆ ಕೋಪ ಬರಿಸುವಷ್ಟು ಕೆದಕಿದ್ದಾನೆ. ತೀರ್ಥಂಕರನಿಗೆ ಕೋಪ ಹೆಚ್ಚಾಗಿ ಕಡೆಗೂ ಬಾಯಿ ಬಿಟ್ಟಿದ್ದಾನೆ. ಸುಮನಾ ತಾಯಿಯಾಗುತ್ತಿದ್ದಾಳೆ ಎಂದಿದ್ದಾನೆ. ಇದನ್ನು ಕೇಳಿದ ಸಾಧನಾ ಫುಲ್ ಶಾಕ್ ಆಗಿದ್ದಾಳೆ. ಅಮ್ಮ ಮತ್ತು ಅಪ್ಪ ಫುಲ್ ಖುಷಿಯಾಗಿದ್ದಾರೆ.


Click it and Unblock the Notifications











