Lakshana Serial : ಕೊನೆಗೂ ಭೂಪತಿಗೆ ತಿಳಿಯಿತು ಸತ್ಯ

By ಶೃತಿ ಹರೀಶ್ ಗೌಡ

ಇವರೆಗೆ 'ಲಕ್ಷಣ' ಧಾರಾವಾಹಿಯಲ್ಲಿ ಡೇವಿಲ್ ಸತ್ಯ ಗೊತ್ತಾಗಿದೆ. ಅದನ್ನೇ ಶ್ವೇತಾ ಬಂಡವಾಳ ಮಾಡಿಕೊಂಡಿದ್ದಾಳೆ. ಈ ಕಡೆ ಮೌರ್ಯ, ಭೂಪತಿಗೆ ಸತ್ಯ ಹೇಳುತ್ತಿದ್ದಾನೆ.

ಶ್ವೇತ, ಭಾರ್ಗು ಈಗ ನೀನು ಟ್ರ್ಯಾಕಿಗೆ ಬಂದೆ ಎಂದು ಹೇಳಿದ್ದಾಳೆ. ನಾನು ಹೇಳುವ ಸ್ಥಳಕ್ಕೆ ಬಾ ನನಗೆ ಏನು ಬೇಕು ಎಂದು ನಾನು ಹೇಳುತ್ತೇನೆ ಎಂದು ಅಲ್ಲಿಂದ ಹೊರಡಲು ಸಿದ್ದರಾಗಿದ್ದಾಳೆ. ಅಷ್ಟರಲ್ಲಿ ಶ್ವೇತ ಇರುವ ಜಾಗಕ್ಕೆ ಚಂದ್ರಶೇಖರ್ ಹಾಗೂ ಆರತಿ ಬಂದಿದ್ದಾರೆ ಏನೋ ತಿಳಿಯುತ್ತಿಲ್ಲ ಎಂದು ಸುಮ್ಮನೆ ಅಂದುಕೊಂಡು ಹೋಗಿದ್ದಾರೆ.

ಮೌರ್ಯ ಭೂಪತಿಯನ್ನು ಕನ್ವಿನ್ಸ್ ಮಾಡಲು ಪ್ರಯತ್ನಿಸುತ್ತಿದ್ದಾನೆ ಆದರೆ ಭೂಪತಿ ಮೌರ್ಯನ ಮಾತನ್ನು ಕೇಳಲು ಒಪ್ಪುತ್ತಿಲ್ಲ. ಕೊನೆಗೆ ಭೂಪತಿಗೆ ಕನ್ವಿನ್ಸ್ ಮಾಡಲು ಮೌರ್ಯ ಹೇಗೋ ಒಪ್ಪಿಸಿದ್ದಾನೆ. ನನ್ನನ್ನು ಬದಲಾಯಿಸಿದ ನನ್ನ ಅತ್ತಿಗೆ ನನಗೆ ಸುಳ್ಳು ಹೇಳುತ್ತಾರಾ? ನೀನೇ ಯೋಚನೆ ಮಾಡು ಎಂದು ಮೌರ್ಯ, ಭೂಪತಿಗೆ ಹೇಳಿದ್ದಾನೆ. ಇದನ್ನು ಕೇಳಿದ ಭೂಪತಿ ಒಂದು ಕ್ಷಣ ಅಲ್ಲೇ ನಿಂತುಕೊಂಡಿದ್ದಾನೆ. ಅಣ್ಣ ಕಾರಣ ಏನು ಎಂದು ತಿಳಿದುಕೊಳ್ಳುವ ಕುತೂಹಲ ನಿನಗೆ ಇಲ್ವಾ? ಮನೆಯಲ್ಲಿ ಯಾರು ನನ್ನನ್ನು ನಂಬುವುದಿಲ್ಲ ಎಂದು ತಿಳಿದಾಗಲು ನಾನು ಸುಳ್ಳು ಹೇಳುತ್ತೇನಾ? ನನಗೆ ತಲೆ ಕೆಟ್ಟಿದ್ಯಾ ಎಂದು ಭೂಪತಿಗೆ ಮೌರ್ಯ ಪ್ರಶ್ನೆ ಮಾಡಿದ್ದಾನೆ.

ಸತ್ಯವನ್ನು ಹೇಳುತ್ತಿರುವ ಮೌರ್ಯ

ಸತ್ಯವನ್ನು ಹೇಳುತ್ತಿರುವ ಮೌರ್ಯ

ಈ ಕಡೆ ಮೌರ್ಯ ತನ್ನ ತಲೆ ಮೇಲಿದ್ದ ಟೋಪಿಯನ್ನು ತೆಗೆದು ಒಂದೂರಲ್ಲಿ ಒಬ್ಬ ರಾಜಕುಮಾರಿ ಇರುತ್ತಾಳೆ. ಅವಳು ಒಬ್ಬ ರಾಜಕುಮಾರನನ್ನು ಇಷ್ಟ ಪಡ್ತಾಳೆ. ಆದರೆ ಅದನ್ನ ಹೇಳಿಕೊಳ್ಳುವಷ್ಟರಲ್ಲಿ ಆ ರಾಜಕುಮಾರ ದೊಡ್ಡ ಶ್ರೀಮಂತ ಎಂದು ಗೊತ್ತಾಗುತ್ತದೆ. ಇದರಿಂದಾಗಿ ಆಕೆ ನನ್ನ ಪ್ರೀತಿಯನ್ನು ತ್ಯಾಗ ಮಾಡುತ್ತಾಳೆ ಎಂದು ಹೇಳುತ್ತಿರುತ್ತಾನೆ. ಇದನ್ನೆಲ್ಲಾ ಕೇಳಿದ ಭೂಪತಿ ತನ್ನ ಹಳೆಯದನ್ನೆಲ್ಲ ನೆನಪಿಸಿಕೊಳ್ಳುತ್ತಿರುತ್ತಾನೆ. ಇದೆಲ್ಲ ಗೊತ್ತಿರುವ ವಿಷಯ ಮುಂದೆ ಏನು ಹೇಳು ಎಂದು ಸಿಟ್ಟಿನಿಂದ ಭೂಪತಿ ಮಾತನಾಡುತ್ತಾನೆ.

ಕೊನೆ ಕ್ಷಣದಲ್ಲಿ ಮದುವೆ

ಕೊನೆ ಕ್ಷಣದಲ್ಲಿ ಮದುವೆ

ಇನ್ನು ಮುಂದುವರೆದ ಮೌರ್ಯ ಮದುವೆಯಲ್ಲಿ ಆದಂತಹ ಕೆಲವೊಂದು ವಿಷಯಗಳನ್ನ ಭೂಪತಿಯ ಬಳಿ ಹೇಳುತ್ತಾನೆ. ಅತ್ತಿಗೆಗೆ ನಿನ್ನನ್ನು ಮದುವೆ ಮಾಡುತ್ತಿದ್ದಾರೆ ಎಂದು ಗೊತ್ತಿಲ್ಲ. ಅವರ ತಂದೆ ಚಂದ್ರಶೇಖರ್‌ಗೆ ತನ್ನ ಮಗಳು ಕಾಲದಿಂದಲೂ ಕಷ್ಟಪಟ್ಟಿದ್ದಾಳೆ. ಅವಳು ಬಯಸಿದ ಇದೊಂದಾದರೂ ಸಿಗಲಿ ಎಂದುಕೊಂಡು ಕೊನೆಯ ಕ್ಷಣದಲ್ಲಿ ಶ್ವೇತಾಳನ ಮೇಲೆ ಏಳಿಸಿ ನಕ್ಷತ್ರಗಳನ್ನು ಕೂರಿಸಿ ನಿನಗೆ ಮದುವೆ ಮಾಡಿದ್ದಾರೆ ಎಂದು ಮೌರ್ಯ ಹೇಳಿದ್ದಾನೆ.

ನಕ್ಷತ್ರಾಗೆ ಏನು ತಿಳಿದಿಲ್ಲ ಎಂದ ಮೌರ್ಯ

ನಕ್ಷತ್ರಾಗೆ ಏನು ತಿಳಿದಿಲ್ಲ ಎಂದ ಮೌರ್ಯ

ಇದೆಲ್ಲವನ್ನು ಕೇಳಿದ ಭೂಪತಿ, ಮೌರ್ಯನನ್ನು ಪ್ರಶ್ನೆ ಮಾಡಿದ್ದಾನೆ. ಅಪ್ಪ ಮಗಳು ಮಾತನಾಡುತ್ತಿದ್ದುದ್ದನ್ನು ನಾನೇ ಕಣ್ಣಾರ ನೋಡಿದ್ದೇನೆ. ಯಾವುದೇ ಅಪ ತನ್ನ ಮಗಳಿಗೆ ನೀನು ಚೆನ್ನಾಗಿ ಇದ್ದೀಯ ಎಂದು ಕೇಳಿದರೆ ಯಾವ ಮಗಳು ತಾನೆ ನಾನು ಚೆನ್ನಾಗಿಲ್ಲ ಎಂದು ಹೇಳುತ್ತಾಳೆ ಎಂದು ಮೌರ್ಯ ಹೇಳಿದ್ದಾನೆ. ನಕ್ಷತ್ರ ಅತ್ತಿಗೆ ಪ್ರತಿ ಸಾರಿ ಮಾತನಾಡುವಾಗಲೂ ನಾವು ನಾಟಕ ಮಾಡುತ್ತಿದ್ದಾರೆ ಎಂದುಕೊಂಡಿದ್ದವು. ಆದರೆ ಅವರು ನಾಟಕ ಮಾಡುತ್ತಿರಲಿಲ್ಲ ಎಂದು ಮೌರ್ಯ, ಭೂಪತಿಗೆ ತಿಳಿಸಿದ್ದಾನೆ.

ಕಣ್ಣೀರು ಹಾಕಿದ ಭೂಪತಿ

ಕಣ್ಣೀರು ಹಾಕಿದ ಭೂಪತಿ

ಮದುವೆ ಯಾವ ರೀತಿ ಆಗುತ್ತಿದೆ ಎಂಬುದು ಕೂಡ ನಕ್ಷತ್ರಗೆ ಗೊತ್ತಿರಲಿಲ್ಲ ಎಂದಾಗ ಭೂಪತಿಯ ಬಳಿ ನಕ್ಷತ್ರ ಮಾತನಾಡಿದ್ದನ್ನು ಭೂಪತಿ ನೆನಸಿಕೊಳ್ಳುತ್ತಿದ್ದಾನೆ. ನಂತರ ಭೂಪತಿಗೆ ತಾನು ಮಾಡಿದ ತಪ್ಪಿನ ಅರಿವಾಗಿದೆ. ನಾನು ನಕ್ಷತ್ರಗಳನ್ನು ಅರ್ಥಮಾಡಿಕೊಳ್ಳಲಿಲ್ಲ ಎಂದು ಕಣ್ಣೀರನ್ನ ಹಾಕಿದ್ದಾನೆ. ಈಗಲೇ ನಾನು ನನ್ನ ಖಾಲಿ ಡಬ್ಬಿಯನ್ನು ನೋಡಲು ಹೋಗಬೇಕು ಎಂದು ಹಾತೊರೆಯುತ್ತಿದ್ದಾನೆ. ಇದನ್ನು ನೋಡಿದ ಮೌರ್ಯನಿಗೆ ತುಂಬಾ ಖುಷಿಯಾಗಿದೆ. ನಾನು ನನ್ನ ಅತ್ತಿಗೆಯ ಜೀವನವನ್ನು ಸರಿ ಮಾಡಿದೆ ಎಂದು ಖುಷಿಯಿಂದ ಇದ್ದಾನೆ.

More from Filmibeat

English summary
Colors Kannada serial Lakshana Written Update on February 14th episode. Here is the details about Bhupati knows the Truth
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X