Lakshana : ಫಲಿಸಿತು ನಕ್ಷತ್ರಾಳ ಹರಕೆ: ನಕ್ಷತ್ರ ಪ್ರೀತಿಗೆ ಭೂಪತಿ ಶರಣು

By ಶೃತಿ ಹರೀಶ್ ಗೌಡ

'ಲಕ್ಷಣ' ಧಾರಾವಾಹಿಯಲ್ಲಿ ಮೌರ್ಯ, ಭೂಪತಿಗೆ ಎಲ್ಲಾ ಸತ್ಯವನ್ನ ತಿಳಿಸಿದ್ದಾನೆ. ನಕ್ಷತ್ರಾ ನೋಡಲು ಭೂಪತಿ ಕಾತರದಿಂದ ಇದ್ದಾನೆ. ಮಳೆಯಲ್ಲಿ ಕಾರನ್ನು ಚಲಾಯಿಸಿಕೊಂಡು ಮನೆಗೆ ಹೊರಟಿದ್ದಾನೆ.

ಮನೆಗೆ ಬಂದ ಭೂಪತಿ, ನಕ್ಷತ್ರ ಎಲ್ಲಿ ಎಂದು ಕೇಳಿದ್ದಾನೆ. ಮನೆಯಲ್ಲಿ ದೇವಸ್ಥಾನಕ್ಕೆ ಹೋಗಿದ್ದಾರೆ ಎಂದು ಹೇಳಿದಾಗ ಯಾವುದಕ್ಕೂ ಕಾಯದೇ ಭೂಪತಿ ದೇವಸ್ಥಾನಕ್ಕೆ ಹೊರಟು ನಿಂತಿದ್ದಾನೆ. ದಾರಿ ಮಧ್ಯದಲ್ಲಿ ಬರುವಾಗ ಕಾರ್ ಪಂಕ್ಚರ್ ಆಗಿದೆ. ಈಗಲೇ ಕಾರು ಪಂಕ್ಚರ್ ಆಗಬೇಕಿತ್ತಾ ಎಂದು ಶಪಿಸಿಕೊಂಡಿದ್ದಾನೆ. ಯಾವುದಾದರೂ ವೆಹಿಕಲ್ ಸಿಗುತ್ತಾ ಎಂದು ನೋಡಿದ್ದಾನೆ. ಕೊನೆಗೆ ಆಟೋವನ್ನು ಹಿಡಿದು ದೇವಸ್ಥಾನಕ್ಕೆ ಹೋಗಿದ್ದಾನೆ.‌

ಭಾರ್ಗವಿಗೆ ಟಾರ್ಚರ್ ನೀಡಲು ಶ್ವೇತಾ ಸಿದ್ದಳಾಗಿದ್ದಾಳೆ. ಆಕೆಗೆ ಫೋನ್ ಮಾಡಿದ ಶ್ವೇತ, ನಾನು ಹೇಳುವ ಜಾಗಕ್ಕೆ ನಿನ್ನ ಮಗಳು ಮಿಲ್ಲಿಯನ್ನು ಕರೆದುಕೊಂಡು ಬಾ ಎಂದು ತಿಳಿಸಿದ್ದಾಳೆ. ಅದನ್ನು ಫೋನ್ನಲ್ಲಿ ಹೇಳಿದರೆ ಆಗೋದಿಲ್ವಾ ಯಾಕೆ ನಾವು ಬರಬೇಕು ಎಂದು ಕೇಳಿದ್ದಕ್ಕೆ ನಾನು ಹೇಳುವ ವಿಷಯವನ್ನು ಕೇಳಿ ನಿನ್ನ ಮುಖ ಹೇಗಾಗುತ್ತದೆ ಎಂಬುದನ್ನ ನಾನು ನೋಡಬಾರದಾ ಎಂದು ಶ್ವೇತಾ ಹೇಳಿದ್ದಾಳೆ. ಇದನ್ನು ಕೇಳಿದ ಭಾರ್ಗವಿಗೆ ಶ್ವೇತಾ ಮೇಲೆ ತುಂಬಾ ಕೋಪ ಬಂದಿದೆ.

ಶ್ವೇತಾ ಮೇಲೆ ಕಣ್ಣಿಟ್ಟ ಭಾರ್ಗವಿ

ಶ್ವೇತಾ ಮೇಲೆ ಕಣ್ಣಿಟ್ಟ ಭಾರ್ಗವಿ

ಮಿಲ್ಲಿಗೆ ಫೋನ್ ಮಾಡಿದ ಭಾರ್ಗವಿ ನೀನೊಬ್ಬಳು, ನಿನ್ನಿಂದ ಎಲ್ಲಾ ಗೊತ್ತಾಗುವ ಹಾಗೆ ಆಯಿತು ಎಂದು ಮಿಲ್ಲಿಗೆ ಬೈಯುತ್ತಿದ್ದಾಳೆ. ಅಮ್ಮ ಎಂದು ಚಿಕ್ಕ ಮಕ್ಕಳ ರೀತಿ ಆಡುತ್ತೀಯಾ, ಶ್ವೇತಾಳನ್ನು ನೋಡು ಮಿಲ್ಲಿಗೆ ಭಾರ್ಗವಿ ಬೈದಿದ್ದಾಳೆ. ಇನ್ನು ಮಿಲ್ಲಿ, ಶ್ವೇತಾ ಹೇಳಿದ ಜಾಗಕ್ಕೆ ಬಂದಿದ್ದಾಳೆ. ಭಾರ್ಗವಿ ಶ್ವೇತಾಗೆ ಏನಾದರೂ ಮಾಡಬೇಕು ಎಂದು ಕಾಯುತ್ತಿದ್ದಾಳೆ. ಶ್ವೇತಾಗೆ ಆಟವಾದರೆ ಮಿಲ್ಲಿ ಹಾಗೂ ಭಾರ್ಗವಿಗೆ ಪ್ರಾಣ ಸಂಕಟವಾಗಿದೆ. ಶ್ವೇತಾಗೆ ಮಿಲ್ಲಿ ಫೋನ್ ಮಾಡಿದ್ದಾಳೆ ನೀನು ಹೇಳುವ ಜಾಗಕ್ಕೆ ಬಂದಿದ್ದೇವೆ, ಆದರೆ ನೀನು ಅಲ್ಲಿ ಇಲ್ಲ ಎಂದಿದ್ದಾಳೆ. ಈಗ ನಾನು ಬೇರೆ ಜಾಗದಲ್ಲಿ ಇದ್ದೇನೆ ಅಲ್ಲಿಗೆ ಬಾ ಎಂದು ಹೇಳಿದ್ದಾಳೆ. ನಂತರ ಶ್ವೇತಾ ಹೇಳಿದ ಜಾಗಕ್ಕೆ ಅಮ್ಮ ಮಗಳು ಇಬ್ಬರು ಬಂದಿದ್ದಾರೆ ಅಲ್ಲೂ ಸಹ ಶ್ವೇತಾ ಸಿಗಲಿಲ್ಲ.

ನಿಮ್ಮ ರೆಕ್ಕೆ ಮುರಿದಿದೆ ಎಂದ ಶ್ವೇತಾ

ನಿಮ್ಮ ರೆಕ್ಕೆ ಮುರಿದಿದೆ ಎಂದ ಶ್ವೇತಾ

ಶ್ವೇತಾ ಸಿಗದಿದ್ದಕ್ಕೆ ಮಿಲ್ಲಿ ಮತ್ತೆ ಫೋನ್ ಮಾಡಿದ್ದಾಳೆ. ನೀನು ಎಲ್ಲಿದ್ದೀಯಾ ಎಂದು ಕೇಳಿದ್ದಾಳೆ. ಸ್ಪೀಕರ್ ಆನ್ ಮಾಡಿದಾಗ ಭಾರ್ಗವಿ ಕಿತ್ತುಕೊಂಡು ಶ್ವೇತಾ ಇದು ನಿನಗೆ ಒಳ್ಳೆಯದಲ್ಲ ಎಂದು ಹೇಳಿದ್ದಾಳೆ. ಆಗ ಶ್ವೇತಾ ಈಗ ಬರದಿದ್ದರೆ ನಾನು ಬೇರೆ ಕಡೆ ಹೋಗಬೇಕಾಗುತ್ತದೆ ಎಂದಿದ್ದಾಳೆ. ಇದನ್ನು ಕೇಳಿಸಿಕೊಂಡ ಭಾರ್ಗವಿ ನೀನು ಹಚ್ಚಿರುವುದು ದೀಪವೋ ಇಲ್ಲ ಬೆಂಕಿಯೋ ಎಂದು ಹೇಳಿದ್ದಾಳೆ. ಸದ್ಯಕ್ಕೆ ದೀಪ ಎಂದು ಶ್ವೇತಾ ಹೇಳಿದ್ದಾಳೆ. ಇದಕ್ಕೆ ಹಾರಾಡುವ ಚಿಟ್ಟೆಗೆ ದೀಪದ ಬೆಳಕೇ ಸಾಕು ರೆಕ್ಕೆ ಮುರಿಯಲು ಎಂದು ಹೇಳಿದ್ದಕ್ಕೆ, ಶ್ವೇತಾ ಈಗ ರೆಕ್ಕೆ ಮುರಿದಿರುವುದು ನನ್ನದಲ್ಲ ನಿಮ್ಮದು ಎಂದಿದ್ದಾಳೆ.

ದೇವಸ್ಥಾನಕ್ಕೆ ಬಂದ ಭೂಪತಿ

ದೇವಸ್ಥಾನಕ್ಕೆ ಬಂದ ಭೂಪತಿ

ಭಾರ್ಗವಿ ಬಂದಿರುವ ಅವತಾರವನ್ನು ನೋಡಿ ಶ್ವೇತಾ ಶಾಕ್ ಆಗಿದ್ದಾಳೆ, ಭಾರ್ಗವಿ ಸೀರೆ, ಕೈಗೆ ಹಾಕಿರುವ ಉಂಗುರ, ಅವಳ ಹೇರ್ ಸ್ಟೈಲ್ ಹಣೆಗೆ ಇಟ್ಟಿರುವ ಕುಂಕುಮ ಇದೆಲ್ಲವನ್ನು ನೋಡಿ ಇದೇನಪ್ಪ ನನ್ನ ಬಾರ್ಗೂನಾ, ಇದು ಎಂದು ಶಾಕ್ ಆಗಿದ್ದಾಳೆ. ಈ ಕಡೆ ಭೂಪತಿ ನಕ್ಷತ್ರಗಳನ್ನು ಹುಡುಕಿಕೊಂಡು ದೇವಸ್ಥಾನಕ್ಕೆ ಬಂದಿದ್ದಾನೆ.

ನಕ್ಷತ್ರ ನೋಡಿ ಖುಷಿಯಾದ ಭೂಪತಿ

ನಕ್ಷತ್ರ ನೋಡಿ ಖುಷಿಯಾದ ಭೂಪತಿ

ಭೂಪತಿಯನ್ನು ನೋಡಿದ ಮಯೂರಿ ಭೂಪತಿಗೆ ಕಾಲ್ ಮಾಡಿದ್ದಾರೆ. ಇನ್ನು ಮಯೂರಿ ಇರುವ ಜಾಗಕ್ಕೆ ಬಂದ ಭೂಪತಿ, ನಕ್ಷತ್ರ ಎಲ್ಲಿ ಎಂದು ಕೇಳಿದ್ದಾನೆ. ನಕ್ಷತ್ರ ನನ್ನ ಜೊತೆ ಬರಲಿಲ್ಲ ಎಂದು ಹೇಳಿದಾಗ ಇಲ್ಲ, ಅತ್ತಿಗೆ ನಿಮ್ಮ ಜೊತೆ ನಕ್ಷತ್ರ ಬಂದಿರುವುದು ಹೇಳಿ ಎಂದು ಹೇಳಿದ್ದಾನೆ. ಅದಕ್ಕೆ ಮಯೂರಿ ಇಲ್ಲ ಎಂದು ಆಟವಾಡಿಸಿದ್ದಾಳೆ. ಅಷ್ಟರಲ್ಲಿ ನಕ್ಷತ್ರ ಮೆಟ್ಟಿಲು ಇಳಿದುಕೊಂಡು ಬರುತ್ತಿದ್ದಾಳೆ. ಇದನ್ನು ನೋಡಿದ ಭೂಪತಿ ಖುಷಿಯಾಗಿದ್ದಾನೆ.

More from Filmibeat

English summary
Colors Kannada serial Lakshana Written Update on February 15th episode. Here is the details about sweetha blackmail to devil bargavi
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X