Lakshana serial : ನಕ್ಷತ್ರಗೆ ಮಾತು ಕೊಟ್ಟ ಭೂಪತಿ: ಭಾರ್ಗವಿಗೆ ಶಾಕ್ ಮೇಲೆ ಶಾಕ್!

By ಶೃತಿ ಹರೀಶ್ ಗೌಡ

'ಲಕ್ಷಣ' ಧಾರಾವಾಹಿಯಲ್ಲಿ ನಕ್ಷತ್ರಳನ್ನು ಹುಡುಕಿಕೊಂಡು ಭೂಪತಿ ದೇವಸ್ಥಾನಕ್ಕೆ ಬಂದಿದ್ದಾನೆ. ಈ ವೇಳೆ ಭೂಪತಿಯ ಅತ್ತಿಗೆ ಸ್ವಲ್ಪ ಆಟ ಆಡಿಸುತ್ತಿದ್ದಾರೆ. ಕೊನೆಗೆ ಭೂಪತಿಯನ್ನು ಕಾಡಿಸಿದ್ದಾರೆ ನಕ್ಷತ್ರ, ಭೂಪತಿ ಇರುವ ಕಡೆ ಬಂದಿದ್ದಾಳೆ.

ನಕ್ಷತ್ರ ಬಳಿ ಬಂದ ತಕ್ಷಣವೇ ಭೂಪತಿಗೆ ತಲೆಯನ್ನ ಒರೆಸಿದ್ದಾಳೆ. ಯಾಕೆ ಮಳೆಯಲ್ಲಿ ನೆನೆದುಕೊಂಡು ಬಂದಿದ್ದೀಯಾ ಎಂದು ಕೇಳಿದ್ದಾಳೆ. ಕಣ್ಣು ತುಂಬಿ ಬಂದಿದೆ. ಕೊನೆಯ ತನಕ ನಿನ್ನ ಜೊತೆ ನಾನಿರುತ್ತೇನೆ ನಿನ್ನ ಕೈ ಬಿಡುವುದಿಲ್ಲ ಎಂದು ಭೂಪತಿ ಪ್ರಾಮಿಸ್ ಮಾಡಿದ್ದಾನೆ. ಭೂಪತಿ ಹೇಳಿದ ಮಾತನ್ನು ಕೇಳಿದ ನಕ್ಷತ್ರ ಗೆ ತುಂಬಾ ಖುಷಿಯಾಗಿದೆ. ಕೊನೆಗೂ ನಾನು ದೇವರ ಬಳಿ ಕೇಳಿಕೊಂಡಿದ್ದು ಫಲಿಸಿದೆ ನನಗೆ ಇಷ್ಟೇ ಸಾಕು ಎಂದು ನಕ್ಷತ್ರ ಅಂದುಕೊಂಡಿದ್ದಾಳೆ. ಈ ಕಡೆ ಭೂಪತಿ ನಕ್ಷತ್ರಗಳನ್ನು ಹೊಗಳುತ್ತಿದ್ದಾನೆ.

ನಾನು ನನ್ನ ಖಾಲಿ ಡಬ್ಬಿಯನ್ನು ಅರ್ಥ ಮಾಡಿಕೊಂಡಿಲ್ಲ. ಅವಳು ಈಗಲೂ ಸಹ ದೇವಸ್ಥಾನದಲ್ಲಿ ನಮ್ಮ ಮನೆಯ ಒಳಿತಿಗಾಗಿ ಪ್ರಾರ್ಥನೆಯನ್ನು ಸಲ್ಲಿಸಿದ್ದಾಳೆ. ಅಷ್ಟು ಒಳ್ಳೆಯ ಮನಸ್ಸು ನನ್ನ ಖಾಲಿ ಡಬ್ಬಿಯದ್ದು ಎಂದು ಭೂಪತಿ ಹೇಳಿದ್ದಾನೆ. ನಿನ್ನ ಜೊತೆಯಾಗಿ ಇರುತ್ತೇನೆ ಎಂದು ಹೇಳಿದ ಮಾತನ್ನು ಕೇಳಿ ನಕ್ಷತ್ರ ತುಂಬಾ ಸಂತೋಷ ಪಟ್ಟಿದ್ದಾಳೆ.‌

ಶ್ವೇತ ಮಾತು ಕೇಳಿ ಭಾರ್ಗವಿಗೆ ಶಾಕ್

ಶ್ವೇತ ಮಾತು ಕೇಳಿ ಭಾರ್ಗವಿಗೆ ಶಾಕ್

ಈ ಕಡೆ ಶ್ವೇತಾ, ಭಾರ್ಗವಿಗೆ ಕಾಟ ಕೊಡಲು ಶುರು ಮಾಡಿದ್ದಾಳೆ. ಇನ್ನೂ ಭಾರ್ಗವಿ ಶ್ವೇತಾಗೆ ಹೆದರಿಸಲು ಬಂದು ತಾನು ತೋಡಿದ ಹಳ್ಳಕ್ಕೆ ತಾನೇ ಬಿದ್ದಿದ್ದಾಳೆ. ಈ ಕಡೆ ಶ್ವೇತಾಗೆ ಭಾರ್ಗವಿ ವಾರ್ನಿಂಗ್ ಮಾಡುತ್ತಿದ್ದಾಳೆ. ಆ ವೀಡಿಯೋಸ್ ಅನ್ನು ಕೊಟ್ಟುಬಿಡು ಎಂದು ಹೇಳಿದ್ದಾಳೆ. ಆಗ ಶ್ವೇತಾ ನಾನು ಸುಮ್ಮನೆ ಈ ಜಾಗಕ್ಕೆ ಕರೆಸಿಲ್ಲ. ಇಲ್ಲಿ ಸುತ್ತಲೂ ಸಿಸಿಟಿವಿ ಇದೆ ಎಂದು ಹೇಳಿದ್ದಾಳೆ. ಆಗ ಭಾರ್ಗವಿ ನಗಲು ಶುರು ಮಾಡಿದ್ದಾಳೆ. ಇಷ್ಟೆಲ್ಲಾ ಮಾಡಿದವಳಿಗೆ ಸಿಸಿಟಿವಿ ಫುಟೇಜ್ ಡಿಲೀಟ್ ಮಾಡಿಸುವುದು ಕಷ್ಟ ಅಲ್ಲ ಎಂದು ಹೇಳಿದ್ದಾಳೆ. ಈ ವೇಳೆ ಶ್ವೇತಾ ಶಾಕ್ ಆದವಳಂತೆ ನಟಿಸಿದ್ದಾಳೆ.

ಭಾರ್ಗವಿ ಲೆಕ್ಕಾಚಾರ ಉಲ್ಟಾಪಲ್ಟಾ

ಭಾರ್ಗವಿ ಲೆಕ್ಕಾಚಾರ ಉಲ್ಟಾಪಲ್ಟಾ

ಭಾರ್ಗವಿಗೆ ಶ್ವೇತಾ ಸರಿಯಾದ ರೀತಿಯಲ್ಲಿ ಶಾಕ್ ಕೊಟ್ಟಿದ್ದಾಳೆ. ನಿನ್ನನ್ನು ಇಲ್ಲಿ ಸಾಯಿಸುತ್ತೇನೆ ಎಂದು ಹೇಳಿದ್ದ ಭಾರ್ಗವಿಗೆ ಕೊನೆಗೆ ಶ್ವೇತಾ ಶಾಕ್ ನೀಡಿದ್ದಾಳೆ. ನೀನು ನನ್ನ ಸಾಯಿಸಿದರೆ ಏನು ಆಗೋದಿಲ್ಲ ಈ ವಿಡಿಯೋಗಳನ್ನು ಆಗಲೇ ನನ್ನ ಫ್ರೆಂಡ್ಸ್‌ ಇಬ್ಬರಿಗೆ ಕಳುಹಿಸಿದ್ದೇನೆ. ನಾನು ಇಲ್ಲಿಂದ ಕೊಂಚ ತಡವಾಗಿ ಹೋದರು, ಆ ವಿಡಿಯೋಗಳು ಚಂದ್ರಶೇಖರ್ ಮತ್ತು ಭೂಪತಿಗೆ ತಲುಪಲಿದೆ ಎಂದು ಹೇಳಿದ್ದಾಳೆ. ಈ ಮಾತನ್ನು ಕೇಳಿದ ಭಾರ್ಗವಿಗೆ ಒಮ್ಮೆ ಕುಸಿದಂತೆ ಆಗಿದೆ. ಇನ್ನು ಈ ವಿಡಿಯೋಗಳನ್ನು ಇಂಟರ್ನೆಟ್‌ಗೆ ಅಪ್ಲೋಡ್ ಮಾಡಿರುವುದಾಗಿ ಶ್ವೇತಾ. ಭಾರ್ಗವಿಗೆ ತಿಳಿಸಿದ್ದಾಳೆ. ಇದನ್ನು ಕೇಳಿದ ಮಿಲ್ಲಿ ಮತ್ತು ಭಾರ್ಗವಿಗೆ ತುಂಬಾ ಶಾಕ್ ಆಗಿದೆ.

ಶ್ವೇತಾ ಹೇಳಿದ ಮಾತಿಗೆ ಭಾರ್ಗವಿ ತತ್ತರ

ಶ್ವೇತಾ ಹೇಳಿದ ಮಾತಿಗೆ ಭಾರ್ಗವಿ ತತ್ತರ

ಇನ್ನು ಶ್ವೇತಾ, ಭಾರ್ಗವಿ ಬಳಿ ಒಂದು ಡಿಮ್ಯಾಂಡನ್ನು ಇಟ್ಟಿದ್ದಾಳೆ. ನನ್ನನ್ನು ಭೂಪತಿಗೆ ಮದುವೆ ಮಾಡಿಸು ಎಂದಿದ್ದಾಳೆ. ಇಲ್ಲದಿದ್ದರೆ ವಿಡಿಯೋಗಳನ್ನು ನಾನು ಅವರಿಗೆ ನೀಡುತ್ತೇನೆ. ನೀನೇ ಡೆವಿಲ್ ಎಂದು ಹೇಳುತ್ತೇನೆ ಎಂದು ಹೇಳಿದ್ದಾಳೆ. ಇನ್ನೂ ಈ ಮಾತನ್ನು ಕೇಳಿದ ಭಾರ್ಗವಿಗೆ ಒಮ್ಮೆ ಭೂಮಿಯೇ ಬಾಯಿಬಿಟ್ಟಂತೆ ಆಗಿದೆ.

ಭಾರ್ಗವಿ ಮುಂದಿನ ನಡೆಯೇನು?

ಭಾರ್ಗವಿ ಮುಂದಿನ ನಡೆಯೇನು?

ನನ್ನ ಗರಡಿಯಲ್ಲೇ ಬೆಳೆದ ಇವಳು ನನಗೆ ಬ್ಲಾಕ್ ಮೇಲ್ ಮಾಡುತ್ತಿದ್ದಾಳೆ ಎಂದು ಭಾರ್ಗವಿ ಒಮ್ಮೆಲೇ ಬೇಸರವಾಗಿದೆ. ಈ ಕಡೆ ತಾನು ಏನನ್ನೋ ಮಾಡಲು ಬಂದು ತಾನೇ ಸಿಕ್ಕಿಹಾಕಿಕೊಂಡಿದ್ದು ಒಂದು ತರ ನುಂಗಲಾಗದ ತುತ್ತಾಗಿ ಪರಿಣಮಿಸಿದೆ. ಇನ್ನು ಭಾರ್ಗವಿ ಯಾವ ರೀತಿ ಪ್ಲ್ಯಾನ್ ಮಾಡಿ ಒಂದಾಗಿರುವ ಭೂಪತಿ ಹಾಗು ನಕ್ಷತ್ರ ಇಬ್ಬರನ್ನು ಬೇರೆ ಮಾಡುತ್ತಾಳೆ ಎಂಬುದೇ ಕುತೂಹಲವಾಗಿದೆ.

More from Filmibeat

English summary
Colors Kannada serial Lakshana Written Update on February 16th episode. Here is the details about bhupati promise to nakshtra.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X