Lakshana serial : ಲಕ್ಷಣ ಹಾಗೂ ಭೂಪತಿಯನ್ನು ಒಟ್ಟಿಗೆ ನೋಡಿ ಹೊಟ್ಟೆಕಿಚ್ಚುಪಟ್ಟ ಶ್ವೇತಾ
ಈವರೆಗೆ ಲಕ್ಷಣ ಧಾರಾವಾಹಿಯಲ್ಲಿ ದೇವಿ ಬಳಿ ಶ್ವೇತಾ ನನಗೆ ಭೂಪತಿ ಬೇಕೇ ಬೇಕು ಎಂದು ಕೇಳುತ್ತಿದ್ದಾಳೆ. ಇದನ್ನು ನೀನು ಮಾಡಲು ಸಾಧ್ಯವಾಗದಿದ್ದರೆ ಈ ವಿಡಿಯೋ ಚಂದ್ರಶೇಖರ್ ಮತ್ತು ಭೂಪತಿಯ ಮೊಬೈಲ್ನಲ್ಲಿ ಇರುತ್ತದೆ ಎಂದು ಹೆದರಿಸಿದ್ದಾಳೆ. ಶ್ವೇತ ಹೇಳಿದ ಮಾತಿಗೆ ಡೆವಿಲ್ ಕಟ್ಟು ಬಿದ್ದಿದ್ದಾಳೆ.
ಭೂಪತಿ ಮನೆಯಲ್ಲಿ ಶಿವರಾತ್ರಿ ಪೂಜೆಗೆ ಎಲ್ಲವನ್ನು ತಯಾರು ಮಾಡಲಾಗುತ್ತಿದೆ. ಈ ಕಡೆ ನಕ್ಷತ್ರ ಪೂಜೆಗೆ ತಯಾರಿಯನ್ನ ಮಾಡುತ್ತಿದ್ದಾಳೆ. ಮಯೂರಿ ನಿನಗೆ ಆಯಾಸ ಆಗುತ್ತದೆ ಉಪವಾಸ ಇದ್ದೀಯ ಎಂದು ಹೇಳಿದರೂ ಸಹ ಉಪವಾಸ ಇದ್ದು ಪೂಜೆ ಮಾಡಿದರೆ ಬಹಳ ಶ್ರೇಷ್ಠ ಎಂದು ನಕ್ಷತ್ರ ಹೇಳಿದ್ದಾಳೆ. ಭೂಪತಿ ಸ್ನಾನದ ಮನೆಯಿಂದ ಕೂಗಿಕೊಂಡಿದ್ದಾನೆ. ಅಲ್ಲಿಗೆ ಹೋದ ನಕ್ಷತ್ರ ಭೂಪತಿಗೆ ಟವಲ್ ಅನ್ನು ಕೊಟ್ಟಿದ್ದಾಳೆ. ನಕ್ಷತ್ರ ಬರುವಷ್ಟರಲ್ಲಿ ಶ್ವೇತಾ ಭೂಪತಿಗೆ ಟವಲ್ ನೀಡಲು ರೂಮಿಗೆ ಹೋಗಿದ್ದಾಳೆ. ಇದನ್ನು ನೋಡಿದ ನಕ್ಷತ್ರ ನಾಚಿಕೆ ಆಗಲ್ವಾ ನಿನಗೆ ಮದುವೆಯಾದವರ ರೂಮಿಗೆ ಬರೋದಕ್ಕೆ ಎಂದು ಹೇಳಿ ಬೈದಿದ್ದಾಳೆ.
ಇನ್ನು ನಕ್ಷತ್ರ ಬರುವುದನ್ನು ನೋಡಿದ ಶ್ವೇತ ಆಡು ಆಡು ಎಷ್ಟು ದಿನ ಆಡುತ್ತೀಯ ಭೂಪತಿಯನ್ನೇ ನನ್ನವನನ್ನಾಗಿ ಮಾಡಿಕೊಳ್ಳುತ್ತೇನೆ ಎಂದು ಮನಸ್ಸಿನಲ್ಲಿ ಅಂದುಕೊಂಡಿದ್ದಾಳೆ. ನಂತರ ಪೂಜೆ ನಡೆಯುತ್ತಿರುವ ಸ್ಥಳಕ್ಕೆ ಬಂದಿದ್ದಾಳೆ, ಅದೇ ವೇಳೆ ಭೂಪತಿ ಸಹ ಅಲ್ಲಿಗೆ ಬಂದಿದ್ದಾನೆ. ಶ್ವೇತಾಳನ್ನು ನೋಡಿದ ಭೂಪತಿ ಏನನ್ನು ಮಾತನಾಡುತ್ತಿಲ್ಲ. ನಂತರ ಪೂಜೆ ಸಲ್ಲಿಸಿದ ನಕ್ಷತ್ರ ಮಯೂರಿಗೆ ಆರತಿಯನ್ನು ನೀಡಿದ್ದಾಳೆ. ಇದನ್ನು ನೋಡಿದ ಶ್ವೇತ ಉರಿದುಕೊಂಡಿದ್ದಾಳೆ. ಈ ಮಯೂರಿ ಮೆರೆಯಲು ಕಾರಣವಾಗಿದ್ದಾಳೆ ಇಬ್ಬರೂ ನಾಟಕ ಮಾಡುತ್ತಾರೆ ಎಂದು ಹೇಳಿದ್ದಾಳೆ.

ಒಟ್ಟಿಗೆ ಹೋಗುತ್ತಿರುವುದಕ್ಕೆ ಶ್ವೇತಾಗೆ ಕಣ್ಣುರಿ
ಇನ್ನೇನು ಕೆಲವೇ ದಿನಗಳಲ್ಲಿ ನಾನು ಭೂಪತಿಯನ್ನು ನಿನ್ನಿಂದ ಕಿತ್ತುಕೊಳ್ಳುತ್ತೇನೆ ಅಲ್ಲಿಯವರೆಗೆ ನೀನು ಮೆರೆಯುತ್ತಿರು ಎಂದು ಶ್ವೇತಾ ತನ್ನ ಮನಸ್ಸಿನಲ್ಲೆ ಅಂದುಕೊಂಡಿದ್ದಾಳೆ. ಭೂಪತಿ ಮತ್ತು ನಕ್ಷತ್ರಾಗೆ ಮಯೂರಿ ಒಟ್ಟಿಗೆ ಆರತಿಯನ್ನು ನೀಡಿ ನೀವು ಇಬ್ಬರು ಯಾವಾಗಲೂ ಚೆನ್ನಾಗಿ ಇರಿ ಎಂದು ಹಾರೈಸಿದ್ದಾಳೆ. ಇದನ್ನು ಕೇಳಿಸಿಕೊಂಡ ಶ್ವೇತಾಗೆ ತುಂಬಾನೇ ಬೇಸರವಾಗಿದೆ. ಎಷ್ಟು ದಿನ ಒಟ್ಟಿಗೆ ಇರಲು ಸಾಧ್ಯ ಭೂಪತಿಯನ್ನು ನಾನು ಕಿತ್ತುಕೊಳ್ಳುತ್ತೇನೆ ಎಂದು ಶ್ವೇತಾ ಪದೇಪದೇ ಅಂದುಕೊಳ್ಳುತ್ತಿದ್ದಾಳೆ. ಇವರಿಬ್ಬರು ಒಟ್ಟಿಗೆ ಹೋಗುವುದನ್ನು ನೋಡಲು ತುಂಬಾನೇ ಕಿರಿಕಿರಿಯಾಗುತ್ತಿದೆ ಎಂದು ಶ್ವೇತ ಅಂದುಕೊಂಡಿದ್ದಾಳೆ.

ಅಳಿಯ ಮಗಳು ಬರುವುದನ್ನೇ ಕಾದ ಮನೆಯವರು
ಮೊದಲ ಬಾರಿ ಮಾವನ ಮನೆಗೆ ಭೂಪತಿ ಹೊರಟಿದ್ದಾನೆ. ಮನೆಗೆ ಅಳಿಯ ಬರುವುದನ್ನೇ ಚಂದ್ರಶೇಖರ್ ಹಾಗೂ ಆರತಿ ಕಾದು ಕುಳಿತಿದ್ದಾರೆ. ಮನೆಗೆ ಹೋದಾಗ ಅಳಿಯನಿಗೆ ಹಾಗೂ ಮಗಳಿಗೆ ಸ್ವಾಗತವನ್ನು ಕೋರಿದ್ದಾರೆ. ಆದರೆ ಭೂಪತಿ ಮಾತ್ರ ಸ್ವಲ್ಪ ಬೇಸರದಲ್ಲಿ ಇದ್ಮಾತನಾಡದಿಯ ಕೂತ ಕಡೆಗೆ ಬಂದ ಚಂದ್ರಶೇಖರ್ ನನ್ನ ಮಗಳು ಕಷ್ಟ ಪಡುವುದನ್ನು ನೋಡುತ್ತಿದ್ದರೆ ಬೇಸರವಾಗುತ್ತಿತ್ತು ನಾನೇ ನನ್ನ ಮಗಳನ್ನು ಈ ರೀತಿ ಕಷ್ಟಕ್ಕೆ ದೂಡಿದೆ ಎನಿಸುತ್ತಿತ್ತು ಎಂದು ಭೂಪತಿಯ ಬಳಿ ಹೇಳಿದ್ದಾನೆ. ನನ್ನ ಮಗಳದ್ದು ಯಾವುದೇ ತಪ್ಪಿಲ್ಲ ಎಂದುಕೊಂಡು ಕೇಳಿ ಬಹಳ ಖುಷಿಯಾಗಿದೆ ನೀವಿಬ್ಬರು ಒಟ್ಟಿಗೆ ಇರುವುದನ್ನು ನೋಡಲು ಸಂತೋಷವಾಗುತ್ತದೆ ಎಂದು ಹೇಳಿದಾಗ ಭೂಪತಿ ಮಾವನ ಜೊತೆ ಯಾವುದೇ ಮಾತನಾಡದೆ ಅಲ್ಲಿಂದ ಎದ್ದು ಹೋಗಿದ್ದಾನೆ.

ಸಮಾಧಾನದ ನಾಟಕ ಆಡಿದ ಭಾರ್ಗವಿ
ಇನ್ನು ಅದನ್ನೆಲ್ಲ ಕೇಳಿಸಿಕೊಂಡ ಭಾರ್ಗವಿಗೆ ತುಂಬಾನೆ ಖುಷಿಯಾಗಿದೆ. ಆಗ ಅಲ್ಲಿಗೆ ಬಂದ ಭಾರ್ಗವಿ ತನ್ನ ಅಣ್ಣನನ್ನು ಸಮಾಧಾನ ಮಾಡುವ ನಾಟಕ ಆಡಿದ್ದಾಳೆ. ನೀನು ಈ ರೀತಿ ಮಾಡಬಾರದು ನಿನ್ನ ಸ್ವಾಭಿಮಾನವನ್ನು ಬಿಟ್ಟು ಅವನನ್ನು ಮೇಲೆ ಬಿದ್ದು ಮಾತನಾಡಿಸಬೇಡ ಅವನ ಕಣ್ಣಿಗೆ ಕಾಣಿಸದಂತೆ ಇರು ಎಂದು ಹೇಳಿದ್ದಾಳೆ. ಆದರೆ ನಾನು ಮಗಳಿಗಾಗಿ ನನ್ನ ಸ್ವಾಭಿಮಾನವನ್ನು ಬದಿಗೆ ಇಡುತ್ತೇನೆ ಎಂದು ಚಂದ್ರಶೇಖರ್ ಹೇಳಿದ್ದಾರೆ. ಇದು ಒಂದು ರೀತಿಯಲ್ಲಿ ಭಾರ್ಗವಿಗೆ ಪ್ಲಸ್ ಪಾಯಿಂಟ್ ಆಗಿದೆ. ಮುಂದೆ ಭಾರ್ಗವಿ ಏನು ಮಾಡುತ್ತಾಳೆ ಎಂಬುದೇ ಕುತೂಹಲವಾಗಿದೆ.


Click it and Unblock the Notifications











