Lakshana: ಚಂದ್ರಶೇಖರ್ ಮನೆಯ ಖುಷಿ ನೋಡಿ ಭಾರ್ಗವಿಗೆ ಹೊಟ್ಟೆ ಕಿಚ್ಚು
ಇವರೆಗೆ 'ಲಕ್ಷಣ' ಧಾರಾವಾಹಿಯಲ್ಲಿ ಚಂದ್ರಶೇಖರ್‌ನನ್ನು ಭೂಪತಿ ಮಾವ ಎಂದು ಒಪ್ಪಿಕೊಂಡಿದ್ದಾನೆ. ಇವರಿಬ್ಬರು ಸಹ ಖುಷಿಯಿಂದ ದೇವಸ್ಥಾನದಿಂದ ಮನೆಗೆ ಹೊರಟಿದ್ದಾರೆ. ಮನೆಯಲ್ಲಿ ಶಿವರಾತ್ರಿ ಹಬ್ಬದ ಸಂಭ್ರಮ ಮನೆ ಮಾಡಿದೆ.
ಈ ಕಡೆ ಶ್ವೇತಾ ತನ್ನ ಅಪ್ಪನಿಗೆ ಫೋನ್ ಮಾಡಿ ನಕ್ಷತ್ರ ಹಾಗೂ ಭೂಪತಿ, ಸಿಎಸ್ ಮನೆಗೆ ಹಬ್ಬಕ್ಕೆ ಹೋಗಿದ್ದಾರೆ ಎಂದು ಹೇಳುತ್ತಿದ್ದಾಳೆ. ಹೌದು ಹಬ್ಬಕ್ಕೆ ಕರೆದಿದ್ದಾರೆ ಎಂದು ಶ್ವೇತಾ ಅಪ್ಪ ಹೇಳಿದ್ದಾರೆ. ಅದಕ್ಕೆ ನೀವು ಸಹ ಅವರ ಮನೆಗೆ ಜಯಮ್ಮನನ್ನು ಕರೆದುಕೊಂಡು ಹಬ್ಬಕ್ಕೆ ಹೋಗಿ ಎಂದು ಸೀಕ್ರೆಟ್ ಆಗಿ ಶ್ವೇತಾ ಹೇಳಿದ್ದಾಳೆ. ಇದಕ್ಕೆ ಓಕೆ ಎಂದು ಶ್ವೇತಾ ಅಪ್ಪ ಹೇಳಿ ಜಯಮ್ಮನನ್ನು ಮೊದಲು ಸಿಎಸ್ ಮನೆಗೆ ಕಳುಹಿಸಿದ್ದಾನೆ.
ಭೂಪತಿ ಮತ್ತು ಚಂದ್ರಶೇಖರ್‌ನನ್ನು ನೋಡಿ ಭಾರ್ಗವಿಗೆ ಶಾಕ್ ಆಗಿದೆ. ಅಳಿಯ ಮತ್ತು ಮಾವನನ್ನು ಒಟ್ಟೊಟ್ಟಿಗೆ ನೋಡಿ ನಕ್ಷತ್ರ ಮತ್ತು ಆರತಿ ನೋಡಿ ಖುಷಿಯಿಂದ ಇದ್ದರೆ, ಭಾರ್ಗವಿ ಮಾತ್ರ ಚಂದ್ರಶೇಖರ್ ಮತ್ತು ಭೂಪತಿ ನೋಡಿ ಬೇಜಾರ್ ಮಾಡಿಕೊಂಡಿದ್ದಾಳೆ.

ಭೂಪತಿ- ಸಿಎಸ್ ನೋಡಿ ಭಾರ್ಗವಿಗೆ ಶಾಕ್
ಇವರಿಬ್ಬರು ಯಾಕೆ ಹೀಗೆ ಖುಷಿಯಿಂದ ಇದ್ದಾರೆ ಚಂದ್ರಶೇಖರ್‌ನನ್ನು ಭೂಪತಿ ಕ್ಷಮಿಸಿ ಬಿಟ್ಟನಾ ಎಂದು ಭಾರ್ಗವಿ ಶಾಕ್‌ಗೆ ಒಳಗಾಗಿದ್ದಾಳೆ. ಭಾರ್ಗವಿಗೆ ಶ್ವೇತಾ ನಿಮಗೆ ಒಂದು ಸರ್ಪ್ರೈಸ್ ಕಾದಿದೆ ಎಂದು ಮೆಸೇಜ್ ಕಳಿಸಿದ್ದಾಳೆ. ಇನ್ನು ಅಲ್ಲಿಗೆ ಬಂದ ಜಯಮ್ಮನನ್ನು ನೋಡಿದ ಭಾರ್ಗವಿಗೆ ಇದೇ ಸರ್ಪ್ರೈಸ್ ಇರಬೇಕು ಎಂದು ಅಂದುಕೊಂಡಿದ್ದಾಳೆ. ಲಕ್ಷಣ ಕೂಡ ತುಂಬಾ ಖುಷಿಯಿಂದ ಇದ್ದಾಳೆ. ಈ ಕಡೆ ಭಾರ್ಗವಿಗೆ ಮಿಲ್ಲಿ ಫೋನ್ ಮಾಡಿ ಅಮ್ಮ ನಾನು ಸಹ ಅಲ್ಲಿಗೆ ಬರುತ್ತೇನೆ ನಿನ್ನ ಜೊತೆ ಹಬ್ಬವನ್ನು ಮಾಡಬೇಕು ಎಂದು ಹೇಳಿದ್ದಾಳೆ.

ಅಡುಗೆ ಮಾಡಿದ ಮಾವ - ಅಳಿಯ
ಅಡುಗೆ ತಯಾರಿ ಮಾಡಲು ಹೆಂಗಸರು ಮಾತನಾಡುತ್ತಿರುವಾಗ ಅಲ್ಲಿಗೆ ಬಂದ ಭೂಪತಿ ನಾನೇ ಅಡುಗೆ ಮಾಡುತ್ತೇನೆ ಎಂದು ಹೇಳಿದ್ದಾನೆ. ಇದನ್ನು ಕೇಳಿ ಮನೆಯವರಿಗೆಲ್ಲರಿಗೂ ಸಹ ಖುಷಿಯಾಗಿದೆ. ಇನ್ನು ಚಂದ್ರಶೇಖರ್ ಸಹ ಅಳಿಯನಿಗೆ ಸಾಥ್ ಕೊಟ್ಟಿದ್ದಾನೆ. ನಾನು ಸಹ ನಿಮಗೆ ಹೆಲ್ಪ್ ಮಾಡುತ್ತೇನೆ ಎಂದು ಅಳಿಯ ಮತ್ತು ಮಾವ ಇಬ್ಬರು ಅಡುಗೆ ಮನೆಗೆ ಹೋಗಿದ್ದಾರೆ.

ಭಾರ್ಗವಿಗೆ ಹೊಟ್ಟೆಉರಿ
ಭೂಪತಿ ಮತ್ತು ಚಂದ್ರಶೇಖರ್ ಇಬ್ಬರೂ ಅಡುಗೆ ಮಾಡುತ್ತಿರುವುದನ್ನು ನೋಡಿ ಜಯಮ್ಮ, ಆರತಿ ಹಾಗೂ ನಕ್ಷತ್ರ ಖುಷಿ ಪಟ್ಟಿದ್ದಾರೆ. ಅಲ್ಲಿಗೆ ಬಂದ ಭಾರ್ಗವಿ ಸಹ ಮಾವ ಮತ್ತು ಅಳಿಯ ಖುಷಿಯಾಗಿ ಅಡುಗೆ ಮಾಡುವುದನ್ನು ನೋಡಿ ಹೊಟ್ಟೆ ಉರಿ ಪಟ್ಟುಕೊಂಡಿದ್ದಾಳೆ. ಎಲ್ಲವೂ ಸಹ ಸರಿಯಾಗಿದ್ದು ಎಷ್ಟು ಖುಷಿಯಿಂದ ಇದ್ದಾರೆ ನೋಡು ಎಂದು ಅಂದುಕೊಂಡಿದ್ದಾಳೆ.

ಶ್ವೇತಾಳ ಅಪ್ಪನ ಪ್ಲ್ಯಾನ್ ಏನು?
ಜಯಮ್ಮ ಎಲ್ಲರಿಗೂ ಆರತಿಯನ್ನ ನೀಡಿದ್ದಾರೆ. ಎಲ್ಲರೂ ಆರತಿಯನ್ನು ತೆಗೆದುಕೊಂಡು ಒಬ್ಬೊಬ್ಬರೇ ಪೂಜೆಯನ್ನು ಸಲ್ಲಿಸುತ್ತಿದ್ದಾರೆ. ಇನ್ನು ಅಲ್ಲಿಗೆ ಬಂದ ಭೂಪತಿ ಅವಲಕ್ಕಿಯನ್ನು ತಂದಿದ್ದಾನೆ. ನಿಮ್ಮೆಲ್ಲರ ಹೊಟ್ಟೆಯನ್ನು ತಣಿಸುವ ಭಾಗ್ಯ ನನ್ನದಾಯಿತು ಎಂದು ಭೂಪತಿ ಹೇಳಿದಾಗ ಎಲ್ಲರೂ ನಕ್ಕಿದ್ದಾರೆ. ಅಲ್ಲಿಗೆ ಬಂದ ಚಂದ್ರಶೇಖರ್ ಸಹ ನನಗೂ ಸಹ ಅವಲಕ್ಕಿ ಸಿಗುತ್ತದಾ ಎಂದು ಜೋಕ್ ಮಾಡಿದ್ದಾರೆ. ಆಗ ಭೂಪತಿ ಬನ್ನಿ ಎಂದು ಕರೆದಿದ್ದಾನೆ. ಚಂದ್ರಶೇಖರ್ ಮನೆಗೆ ಬರುವ ಶ್ವೇತಾಳ ಅಪ್ಪ ಯಾವ ರೀತಿ ಪ್ಲ್ಯಾನ್ ಮಾಡಿದ್ದಾನೆ ಎಂಬುದೇ ಕುತೂಹಲವಾಗಿದೆ.


Click it and Unblock the Notifications











