Lakshana serial : ಭಾರ್ಗವಿಗೆ ಟೆನ್ಶನ್ ಕೊಡುತ್ತಿರುವ ಶ್ವೇತಾ

By ಶೃತಿ ಹರೀಶ್ ಗೌಡ

'ಲಕ್ಷಣ' ಧಾರಾವಾಹಿಯಲ್ಲಿ ಚಂದ್ರಶೇಖರ್ ಮತ್ತು ಆರತಿ ದಂಪತಿ ಮನೆಯಲ್ಲಿ ಶಿವರಾತ್ರಿ ಹಬ್ಬ ಮಾಡಲಾಗುತ್ತಿದೆ. ಎಲ್ಲರೂ ಸಹ ಶಿವನ ಪೂಜೆಯನ್ನ ಮಾಡಿ ಆಶೀರ್ವಾದವನ್ನು ಬೇಡಿದ್ದಾರೆ. ಭಾರ್ಗವಿ ಮಾತ್ರ ಅಣ್ಣನ ಮನೆಯಲ್ಲಿರುವ ಖುಷಿ ನೋಡಿ ಹೊಟ್ಟೆಕಿಚ್ಚು ಪಟ್ಟುಕೊಂಡಿದ್ದಾಳೆ.

ಚಂದ್ರಶೇಖರ್ ಮನೆಗೆ ಶ್ವೇತಾಳ ಅಪ್ಪ ಬರುತ್ತಿದ್ದಾರೆ. ಇದೇ ವೇಳೆ ಶ್ವೇತಾ ತನ್ನ ಅಪ್ಪನಿಗೆ ಫೋನ್ ಮಾಡಿ ನಾನು ಕೊಟ್ಟಿರುವ ಎನ್ವಲಪ್ ಕವರ್ ತುಂಬಾ ಹುಷಾರಾಗಿದೆ ತಾನೇ ಎಂದು ಕೇಳುತ್ತಿದ್ದಾಳೆ. ಅದಕ್ಕೆ ಅವರು ಹೌದು ಎಂದು ಉತ್ತರಿಸುತ್ತಿದ್ದಾನೆ. ಅದನ್ನು ಭಾರ್ಗವಿಯ ಕೈಗೆ ನೀನು ತಲುಪಿಸು ಎಂದು ಹೇಳಿದ್ದಾಳೆ. ಏನಿದೆ ಎಂದು ಸಹಜವಾಗಿ ಕೇಳಿದ್ದಕ್ಕೆ ನಿನಗೆ ಯಾಕೆ ಎಂದು ಕೇಳಿದ್ದಾಳೆ. ನಾನು ಹೇಳಿದಷ್ಟನ್ನು ಮಾಡಿ ಎಂದು ಹೇಳಿ ಫೋನ್ ಕಟ್ ಮಾಡಿ ತುಂಬಾ ಖುಷಿಯಲ್ಲಿ ಇದ್ದಾಳೆ.

ಚಂದ್ರಶೇಖರ್ ಮತ್ತು ಆರತಿ ಮನೆಗೆ ಶ್ವೇತಾಳ ಅಪ್ಪ ಹಾಗೂ ಅಜ್ಜಿ ಬಂದಿದ್ದು ಆರತಿಗೆ ತುಂಬಾ ಖುಷಿಯನ್ನ ತಂದಿದೆ. ಅವರನ್ನು ಸ್ವಾಗತವನ್ನು ಮಾಡಿದ್ದಾರೆ. ನೀವು ಬಂದಿದ್ದು ತುಂಬಾ ಸಂತೋಷವನ್ನ ತಂದಿದೆ. ಎಲ್ಲರೂ ಸೇರಿ ಒಟ್ಟಿಗೆ ಹಬ್ಬ ಮಾಡೋಣ ಎಂದು ಆರತಿ ಹೇಳಿದ್ದಾರೆ. ಈ ಕಡೆ ಶ್ವೇತಾ ಅಪ್ಪ, ಭಾರ್ಗವಿಗೆ ಎನ್ವಲಪ್ ಕವರನ್ನ ಕೊಟ್ಟಿದ್ದಾನೆ. ತಾಯಿ ಕವರನ್ನು ನಿಮಗೆ ಕೊಡಲು ಹೇಳಿದಳು ಎಂದು ಭಾರ್ಗವಿಗೆ ಕೊಟ್ಟಿದ್ದಾನೆ. ಭಾರ್ಗವಿ ಕವರ್ ನೋಡಿ ಶಾಕ್ ಆಗಿದ್ದಾಳೆ.

 ವಿಡಿಯೋ ನೋಡಿ ಶಾಕ್ ಆದ ಡೆವಿಲ್

ವಿಡಿಯೋ ನೋಡಿ ಶಾಕ್ ಆದ ಡೆವಿಲ್

ಭಾರ್ಗವಿಗೆ ಶ್ವೇತ ಕಳಿಸಿರುವ ಎನ್ವಲಪ್ ನೋಡಿ ಶಾಕ್ ಆಗಿದೆ. ಅದರಲ್ಲಿದ್ದ ಪೆನ್ ಡ್ರೈವ್ ತೆಗೆದುಕೊಂಡು ಲ್ಯಾಪ್‌ಟಾಪ್‌ಗೆ ಭಾರ್ಗವಿ ಕನೆಕ್ಟ್ ಮಾಡಿಕೊಂಡು ವಿಡಿಯೋವನ್ನು ನೋಡುತ್ತಿದ್ದಾಳೆ. ಈ ಕಡೆ ತಾನು ಮಾತನಾಡಿರುವ ವಿಡಿಯೋವನ್ನು ನೋಡಿ ಭಾರ್ಗವಿಗೆ ಶಾಕ್ ಆಗಿದೆ. ಭಾರ್ಗವಿಗೆ ಫೋನ್ ಮಾಡಿದ ಶ್ವೇತಾ ಏನು ಶಾಕ್ ಆಗಿದ್ದೀಯಾ ಎಂದು ಕೇಳಿದ್ದಾಳೆ.

ಭಾರ್ಗವಿಗೆ ಶ್ವೇತಾ ಬ್ಲಾಕ್‌ಮೇಲ್

ಭಾರ್ಗವಿಗೆ ಶ್ವೇತಾ ಬ್ಲಾಕ್‌ಮೇಲ್

ನೀನು ಏನನ್ನು ಮಾಡಲು ಹೊರಟಿದ್ದೀಯ ನಿನಗೆ ತಲೆ ಇದೆಯಾ ಎಂದು ಭಾರ್ಗವಿ, ಶ್ವೇತಾಗೆ ಬೈದಿದ್ದಾಳೆ. ನಾನು ಹೇಳಿದ ಕೆಲಸವನ್ನ ಮಾಡಲು ನಿನಗೆ ಸಮಯ ಬೇಕು ಎಂದೇ. ಆದರೆ ನನಗೆ ಸಮಯ ಏನು ಬೇಕಾಗಿಲ್ಲ. ಇದನ್ನು ಭೂಪತಿ ಹಾಗೂ ಚಂದ್ರಶೇಖರ್‌ಗೂ ಸಹ ಒಂದೊಂದು ಕಾಪಿ ಕಳುಹಿಸಿದ್ದೇನೆ ಎಂದು ಭಾರ್ಗವಿಗೆ ಶ್ವೇತಾ ಬ್ಲಾಕ್‌ಮೇಲ್‌ ಮಾಡಿದ್ದಾಳೆ.‌ ಶ್ವೇತಾಳ ಅಪ್ಪ ಇರುವ ಸ್ಥಳಕ್ಕೆ ಬಂದ ಭಾರ್ಗವಿ ಅವನ ಹತ್ತಿರ ಇನ್ನೊಂದು ಕಾಪಿ ಎಲ್ಲಿದೆ ಎಂದು ಕೇಳಿದ್ದಾಳೆ. ಅದಕ್ಕೆ ಆತ ನನಗೆ ಅವಳು ಕೊಟ್ಟಿದ್ದು ಒಂದೇ ಒಂದು ಕವರ್ ಎಂದು ಹೇಳಿದ್ದಾನೆ. ನಂತರ ಅಲ್ಲಿಂದ ಭಾರ್ಗವಿ ಹೊರಟಿದ್ದಾಳೆ.

ಜಾಗರಣೆಗಾಗಿ ಮನೆ ಮಂದಿಯ ಆಟ

ಜಾಗರಣೆಗಾಗಿ ಮನೆ ಮಂದಿಯ ಆಟ

ಶಿವರಾತ್ರಿ ಹಬ್ಬದ ಜಾಗರಣೆಗಾಗಿ ಮನೆಯವರೆಲ್ಲ ಖುಷಿಯಿಂದ ಆಟವನ್ನ ಆಡುತ್ತಿದ್ದಾರೆ. ಆದರೆ ಭಾರ್ಗವಿಗೆ ಮಾತ್ರ ಟೆನ್ಶನ್ ಆಗಿದೆ. ಇವಳು ಯಾರೋ ನನಗೆ ಬ್ಲಾಕ್ ಮೇಲ್ ಮಾಡುತ್ತಿದ್ದಾಳೆ ಎಂದು ಶ್ವೇತಾಗೆ ಬೈಯುತ್ತಿದ್ದಾಳೆ. ಮಿಲ್ಲಿ ಮಾತ್ರ ಯಾವುದೇ ಚಿಂತೆ ಇಲ್ಲದೆ ನಿಶ್ಚಿಂತೆಯಾಗಿ ಎಲ್ಲರ ಜೊತೆ ಬೆರೆತು ಆಟವಾಡುತ್ತಿದ್ದಾಳೆ.

ಭಾರ್ಗವಿ ಬಣ್ಣ ಬಯಲಾಗುತ್ತಾ?

ಭಾರ್ಗವಿ ಬಣ್ಣ ಬಯಲಾಗುತ್ತಾ?

ಇದೇ ವೇಳೆ ಶ್ವೇತಾ ಫೋನ್ ಮಾಡಿ ಇನ್ನು ಎರಡು ಕಾಪಿ ಬರುತ್ತಿದೆ. ಅದು ಚಂದ್ರಶೇಖರ ಹಾಗೂ ಭೂಪತಿ ಕೈಗೆ ಸಿಗುತ್ತದೆ ಎಂದು ಭಾರ್ಗವಿಗೆ ಟೆನ್ಶನ್ ಅನ್ನು ಕೊಡುತ್ತಿದ್ದಾಳೆ. ಈ ಕಡೆ ಮಿಲ್ಲಿಗೆ ಕೈಸನ್ನೆಯನ್ನು ಮಾಡಿ ಭಾರ್ಗವಿ ಮೇಲೆ ಬಾ ಎಂದು ಕರೆಯುತ್ತಿದ್ದಾಳೆ. ಆದರೆ ಭಾರ್ಗವಿ ಹೇಳುತ್ತಿರುವ ಮಾತನ್ನು ಮಿಲ್ಲಿ ಗಮನವನ್ನು ಕೊಡುತ್ತಿಲ್ಲ. ಇದರಿಂದ ಭಾರ್ಗವಿಗೆ ತುಂಬಾ ಕೋಪ ಬಂದಿದೆ. ಇಲ್ಲಿ ನಾನು ಟೆನ್ಶನ್‌ನಲ್ಲಿ ಸಾಯುತ್ತಿದ್ದರೆ ನನ್ನ ಮಗಳು ಜಾಲಿಯಾಗಿ ಆಟ ಆಡುತ್ತಿದ್ದಾಳೆ ಎಂದು ಡೇವಿಲ್ ಬೈಯ್ಯುತ್ತಿದ್ದಾಳೆ. ಪೆನ್ ಡ್ರೈ ಭೂಪತಿ ಮತ್ತು ಚಂದ್ರಶೇಖರ್ ಕೈಗೆ ಸಿಕ್ಕಿ ಭಾರ್ಗವಿ ಬಣ್ಣ ಬಯಲಾಗುತ್ತಾ ನೋಡಬೇಕಿದೆ.

More from Filmibeat

English summary
Colors Kannada serial Lakshana Written Update on February 24th episode. Here is the details about bargavi in trouble. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X