Lakshana: ನಕ್ಷತ್ರ ಕೈ ಸೇರಿದ ಪೆನ್ ಡ್ರೈವ್: ಭಾರ್ಗವಿ ಬಣ್ಣ ಬಯಲಾಗುತ್ತಾ?

By ಶೃತಿ ಹರೀಶ್ ಗೌಡ

ಇವರೆಗೆ 'ಲಕ್ಷಣ' ಧಾರಾವಾಹಿಯಲ್ಲಿ ಹಬ್ಬದಲ್ಲಿ ಆಟವನ್ನು ಎಲ್ಲರೂ ಎಂಜಾಯ್ ಮಾಡುತ್ತಾ ಇದ್ದಾರೆ. ಈ ಕಡೆ ಭಾರ್ಗವಿ ತುಂಬಾ ಟೆನ್ಷನ್‌ನಲ್ಲಿ ಇದ್ದಾಳೆ.ಯಾವುದೇ ಆಟದಲ್ಲಿ ಭಾಗವಹಿಸದೇ ಪೆನ್ ಡ್ರೈ ಬರುವುದನ್ನೇ ಕಾಯುತ್ತಾ ಇದ್ದಾಳೆ.

ಮನೆಯ ಡೋರ್ ಬೆಲ್ ಆದ ತಕ್ಷಣ ಭಾರ್ಗವಿ ನಾನೇ ಹೋಗಿ ಡೋರ್ ತೆಗೆಯುತ್ತೇನೆ ಎಂದು ಹೋಗಿದ್ದಾಳೆ. ಹಿಂದೆಯೇ ಆರತಿ‌ ಸಹ ಬಂದಿದ್ದಾಳೆ. ಭಾರ್ಗವಿ ಎನ್ವಲಪ್ ಕವರ್ ಹಿಡಿರೋದನ್ನು ನೋಡಿ ಅವರ ಹೆಸರಲ್ಲಿ ಬಂದಿದೆ ಎಂದು ಕೈಗೆ ತೆಗೆದುಕೊಂಡಿದ್ದಾಳೆ. ಆದರೆ ಅದನ್ನು ವಾಪಸ್ ಭಾರ್ಗವಿ ಕಿತ್ತುಕೊಂಡು ಅತ್ತಿಗೆ ಇವಾಗ ಎಲ್ಲರೂ ಸಹ ಖುಷಿಯಾಗಿ ಇದ್ದೀರಾ ಇವಾಗ ಯಾಕೆ ಅಣ್ಣನಿಗೆ ಕೊಡೋದು ಬೆಳಗ್ಗೆ ಕೊಟ್ಟರೆ ಆಯಿತು ಎಂದು ಹೇಳುತ್ತಿದ್ದಾಳೆ.

ಆರತಿ ಆಫೀಸ್‌ನಿಂದ ಕಳಿಸಿರಬೇಕು ಅದೇನು ಈಗಲೇ ನೋಡಲಿ ಬಿಡು ಏನು ತೊಂದರೆ ಇಲ್ಲ ಎಂದು ಹೇಳುತ್ತಿದ್ದಾಳೆ. ಆದರೂ ಸಹ ಭಾರ್ಗವಿ ಏನು ಬೇಡ ಅತ್ತಿಗೆ ಹೋಗಿ ಆಟವನ್ನು ಎಂಜಾಯ್ ಮಾಡಿ ಎಂದು ಕೈನಲ್ಲಿದ್ದ ಎನ್ವಲಪ್ ಕವರ್ ಕಿತ್ತುಕೊಂಡು ಹೋಗಿದ್ದಾಳೆ. ಭಾರ್ಗವಿಯ ಈ ವರ್ತನೆ ಆರತಿಗೆ ಶಾಕ್ ಆಗುವಂತೆ ಮಾಡಿದೆ. ಯಾವತ್ತು ಈ ರೀತಿ ಆಡದ ಭಾರ್ಗವಿ ಇವತ್ತು ಯಾಕೆ ಹೀಗೆ ಆಡುತ್ತಿದ್ದಾಳೆ ಎಂದು ಹಾಗೇ ನಿಂತ ಕಡೆಯೇ ನಿಂತಿದ್ದಾಳೆ.

ನಕ್ಷತ್ರ ಕೈ ಸೇರಿದ ಪೆನ್‌ಡ್ರೈವ್

ನಕ್ಷತ್ರ ಕೈ ಸೇರಿದ ಪೆನ್‌ಡ್ರೈವ್

ಆರತಿ ಬಳಿ ಬಂದ ನಕ್ಷತ್ರ ಎಲ್ಲಿ ಕೊರಿಯರ್ ಬಂತು ಎಂದು ಕೇಳಿದಾಗ ಅದನ್ನು ಭಾರ್ಗವಿ ತಗೆದುಕೊಂಡು ಹೋದಳು ಎಂದು ಆರತಿ ಹೇಳಿದ್ದಾರೆ. ನಕ್ಷತ್ರ, ಭಾರ್ಗವಿ ರೂಮ್‌ಗೆ ಹೋಗಿ ಅದೇನು ಎಂದು ಕೇಳಿದ್ದಾಳೆ. ಅದಕ್ಕೆ ಏನಿಲ್ಲ ಎಂದು ಹೇಳುವಾಗ ಡೆವಿಲ್ ಎಂಬ ಹೆಸರಿನ ಪೆನ್‌ಡ್ರೈವ್ ನಕ್ಷತ್ರ ಕಣ್ಣಿಗೆ ಬಿದ್ದಿದೆ. ಅದನ್ನು ಈಗಲೇ ನೋಡಬೇಕು ಡೆವಿಲ್ ಏನು ಕಳಿಸಿದ್ದಾಳೆ ಎಂದು ನಕ್ಷತ್ರ ಪೆನ್ ಡ್ರೈವ್ ತಗೆದುಕೊಂಡು ಅಪ್ಪ ಹಾಗೂ ಗಂಡನ ಬಳಿ ಓಡಿ ಹೋಗಿದ್ದಾಳೆ.

ಮಿಲ್ಲಿಗೆ ಭಾರ್ಗವಿ ಕ್ಲಾಸ್

ಮಿಲ್ಲಿಗೆ ಭಾರ್ಗವಿ ಕ್ಲಾಸ್

ಚಂದ್ರಶೇಖರ್ ಹಾಗೂ ಭೂಪತಿ ಆ ಪೆನ್ ಡ್ರೈವ್ ಹಿಡಿದು ಇದರಲ್ಲಿ ಏನಿದೆ ಎಂಬುದನ್ನು ನೋಡಬೇಕು ಅಂದುಕೊಳ್ಳುವಾಗ ಮಿಲ್ಲಿಗೆ ಭಾರ್ಗವಿ ಬೈಯುತ್ತಿದ್ದಾಳೆ. ಆ ಶ್ವೇತಾ ನನಗೆ ಒಂದು ಪೆನ್ ಡ್ರೈವ್ ಕಳಿಸಿದ್ದಳು.‌ ಈಗ ಚಂದ್ರಶೇಖರ್ ಹಾಗೂ ಭೂಪತಿಗೆ ಗೊತ್ತಾಗಲಿ ಎಂದು ಇನ್ನೊಂದು ಪೆನ್ ಡ್ರೈವ್ ಕಳಿಸಿದ್ದಾಳೆ. ನಿನಗೆ ಇದನ್ನು ಹೇಳೋಣ‌ ಎಂದು ಕರೆದರೆ ನೀನೋ ಆಟ ಆಡುತ್ತಾ ಅವರ ಜೊತೆ ಮಜಾ ಮಾಡುತ್ತಿದ್ದೆ, ನೀನು ಏನು ನನ್ನ ಮಗಳ ಎಂದು ಮಿಲ್ಲಿಗೆ ಭಾರ್ಗವಿ ಕ್ಲಾಸ್ ತೆಗೆದುಕೊಂಡಿದ್ದಾಳೆ. ಈ ಕಡೆ ಪೆನ್ ಡ್ರೈನ್ ಹಿಡಿದು ಭೂಪತಿ ಟಿವಿಗೆ ಕನೆಕ್ಟ್ ಮಾಡಲು ಬರುತ್ತಿದ್ದಾನೆ. ಟಿವಿಗೆ ಕನೆಕ್ಟ್ ಮಾಡಿದ ತಕ್ಷಣವೇ ಭಾರ್ಗವಿ ಮೈನ್ ಸ್ವಿಚ್‌ ಆಫ್ ಮಾಡಿದ್ದಾಳೆ.

ಯುಪಿಎಸ್‌ ವೈರ್ ಕಟ್

ಯುಪಿಎಸ್‌ ವೈರ್ ಕಟ್

ಮಿಲ್ಲಿ ಹೋಗಿ ಯುಪಿಎಸ್‌ನ ವೈಯರ್‌ ಕಟ್ ಮಾಡಿದ್ದಾಳೆ. ಈ ಕಡೆ ಭೂಪತಿ ಯುಪಿಎಸ್ ಬಳಿ ಬಂದು ನೋಡುತ್ತಿದ್ದಾನೆ .ಯುಪಿಎಸ್ ವೈರ್ ಕಟ್ ಮಾಡಿರೋದು ನೋಡಿ ಶಾಕ್ ಆಗಿದ್ದಾನೆ.‌ ಅಲ್ಲಿಗೆ ಬಂದ ಚಂದ್ರಶೇಖರ್‌ಗೆ ಯಾರೋ ಯುಪಿಎಸ್ ವೈರ್ ಕಟ್ ಮಾಡಿದ್ದಾರೆಂದು ತಿಳಿಸಿದ್ದಾನೆ. ನಂತರ ಹೊರಗೆ ಹೋಗಿ ನೋಡಿದರೆ ಎಲ್ಲರ ಮನೆಯಲ್ಲಿ ಪವರ್ ಇರುವುದು ಗೊತ್ತಾಗಿದೆ. ನಂತರ ಇದನ್ನು ಯಾರೋ ಬೇಕು ಅಂತ ಮಾಡಿದ್ದಾರೆ ಒಳಗೆ ಹೋಗಿ ನೋಡೋಣ ಬನ್ನಿ ಇವತ್ತು ಅವರನ್ನು ಸುಮ್ಮನೆ ಬಿಡಬಾರದು ಎಂದು ಹೇಳಿ ಒಳಗೆ ಹೋಗಿದ್ದಾರೆ.

ಕೊನೆಗೂ ಸಿಕ್ಕಿದ ಲ್ಯಾಪ್‌ಟಾಪ್

ಕೊನೆಗೂ ಸಿಕ್ಕಿದ ಲ್ಯಾಪ್‌ಟಾಪ್

ಪೆನ್‌ಡ್ರೈವ್‌ನಲ್ಲಿ‌ ಏನಿದೆ ಎಂಬುದನ್ನು ತಿಳಿಯುವ ಕುತೂಹಲ ಎಲ್ಲರಲ್ಲಿಯೂ ಇದ್ದು, ಅದನ್ನು ನೋಡಬೇಕು ಎಂದು ನಕ್ಷತ್ರ ಹಾಗೂ ಚಂದ್ರಶೇಖರ್ ಇಬ್ಬರು ಸಹ ಲ್ಯಾಪ್‌ಟಾಪ್ ಹುಡುಕುತ್ತಾ ಇದ್ದಾರೆ. ಈ ಕಡೆ ಭಾರ್ಗವಿ, ಚಂದ್ರಶೇಖರ್ ರೂಮ್‌ನಲ್ಲಿದ್ದ ಲ್ಯಾಪ್‌ಟಾಪ್‌ನ್ನು ಕಾಣದಂತೆ‌ ಇಟ್ಟಿದ್ದಾಳೆ. ನಂತರ ಮಿಲ್ಲಿಗೆ ಫೋನ್ ಮಾಡಿ ನನ್ನ ರೂಮ್‌ನಲ್ಲಿರುವ ಲ್ಯಾಪ್‌ಟಾಪ್ ಕಾಣದಂತೆ ಎತ್ತಿಡು ಎಂದಿದ್ದಾರೆ. ಅಷ್ಟರಲ್ಲಿ ಅಲ್ಲಿಗೆ ಬಂದ‌ ನಕ್ಷತ್ರ ನಾನು ಹುಡುಕುತ್ತೇನೆ ಎಂದು ಅಲ್ಲಿ ಹುಡುಕುತ್ತಾ ಇದ್ದಾಳೆ. ಸದ್ಯಕ್ಕೆ ನಕ್ಷತ್ರ ಕೈಗೆ ಲ್ಯಾಪ್‌ಟಾಪ್ ಸಿಕ್ಕಿದೆ ಭಾರ್ಗವಿ ಬಣ್ಣ ಬಯಲಾಗುತ್ತಾ ನೋಡಬೇಕಿದೆ.

More from Filmibeat

English summary
Colors Kannada serial Lakshana Written Update on February 27th episode. Here is the details about bargavi shock sweetha rocks.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X