Lakshana: ನಕ್ಷತ್ರ ಕೈ ಸೇರಿದ ಪೆನ್ ಡ್ರೈವ್: ಭಾರ್ಗವಿ ಸಿಕ್ಕಿ ಬೀಳುವ ಸಮಯ ಬಂತಾ?
ಇವರೆಗೆ 'ಲಕ್ಷಣ' ಧಾರಾವಾಹಿಯಲ್ಲಿ ನಕ್ಷತ್ರ ಲ್ಯಾಪ್‌ಟಾಪ್ ಅನ್ನು ಭಾರ್ಗವಿ ರೂಮಿನಲ್ಲಿ ಹುಡುಕುತ್ತಿದ್ದಳು. ಮಿಲ್ಲಿ ಲ್ಯಾಪ್‌ಟಾಪ್ ಅದನ್ನು ಹಾಸಿಗೆಯ ದಿಂಬಿನ ಕೆಳಗೆ ಮುಚ್ಚಿಟ್ಟಿದ್ದಳು. ಅದು ನಕ್ಷತ್ರ ಕಣ್ಣಿಗೆ ಬಿದ್ದು ಅದನ್ನು ನಕ್ಷತ್ರ ಮನೆಯ ಹಾಲ್‌ಗೆ ತಂದಿದ್ದಾಳೆ.
ಎಲ್ಲರ ಚಿತ್ತ ಪೆನ್ ಡ್ರೈವ್‌ನಲ್ಲಿ ಏನಿದೆ ಎನ್ನುವುದು. ಪೆನ್ ಡ್ರೈವ್ ಅನ್ನು ಲ್ಯಾಪ್‌ಟಾಪ್‌ಗೆ ಕನೆಕ್ಟ್ ಮಾಡಲಾಗಿದೆ. ಭೂಪತಿ ಹಾಗೂ ಚಂದ್ರಶೇಖರ್ ಇಬ್ಬರೂ ಲ್ಯಾಪ್‌ಟಾಪ್ ಅನ್ನು ಮುಂದೆ ಇಟ್ಟುಕೊಂಡು ಲ್ಯಾಪ್‌ಟಾಪ್‌ಗೆ ಪೆನ್ ಡ್ರೈವ್ ಕನೆಕ್ಟ್ ಮಾಡುವುದನ್ನು ಮನೆಯವರೆಲ್ಲರೂ ನೋಡುತ್ತಿದ್ದಾರೆ. ಕಡೆ ಮಿಲ್ಲಿ ಹಾಗೂ ಭಾರ್ಗವಿ ತುಂಬಾ ಟೆನ್ಶನ್‌ನಲ್ಲಿ ಇದ್ದಾರೆ. ನಮ್ಮ ನಾಟಕ ಬಯಲಾದರೆ ಏನು ಗತಿ ಎಂಬ ಕೋಪದಲ್ಲಿ ಭಾರ್ಗವಿ ಇದ್ದಾಳೆ.
ಪೆನ್‌ಡ್ರೈವ್ ಕಳಿಸಿರುವ ಶ್ವೇತಾ ಮೇಲೆ ಭಾರ್ಗವಿಗೆ ಎಲ್ಲಿಲ್ಲದ ಕೋಪ ಬಂದಿದೆ. ಅವಳು ಕೈಗೆ ಸಿಕ್ಕರೆ ಸಾಯಿಸಿ ಬಿಡಬೇಕು ಎನ್ನುವಷ್ಟು ಕೋಪ. ಈ ಕಡೆ ಏನು ಮಾಡಲಾಗದ ಪರಿಸ್ಥಿತಿ ಮಿಲ್ಲಿ ಹಾಗೂ ಭಾರ್ಗವಿಯನ್ನು ಕಾಡುತ್ತಿದೆ. ಭೂಪತಿ ಪೆನ್ ಡ್ರೈವ್ ಅನ್ನು ಲ್ಯಾಪ್‌ಟಾಪ್‌ಗೆ ಕನೆಕ್ಟ್ ಮಾಡಿದ್ದಾನೆ.

ಲ್ಯಾಪ್‌ಟಾಪ್‌ನಲ್ಲಿ ಇರೋದು ಬರೀ ಆಡಿಯೋ
ಪೆನ್ ಡ್ರೈವ್ ಅನ್ನು ಲ್ಯಾಪ್‌ಟಾಪ್‌ಗೆ ಕನೆಕ್ಟ್ ಮಾಡಿದವರಿಗೆ ಶಾಕ್ ಆಗಿದೆ. ಯಾಕೆಂದರೆ ಅದರಲ್ಲಿ ವಿಡಿಯೋ ಇದೆ ಎಂದುಕೊಂಡರೆ ಬರಿ ಆಡಿಯೋ ಮಾತ್ರ ಲಭ್ಯವಾಗಿದೆ. ಇದರಿಂದಾಗಿ ಮನೆಯವರಿಗೆ ಭಾರೀ ನಿರಾಸೆಯಾಗಿದೆ. ಸದ್ಯಕ್ಕೆ ಭಾರ್ಗವಿ ನಿರಾಳವಾಗಿ ಉಸಿರಾಡುವಂತೆ ಆಗಿದೆ. ಚಂದ್ರಶೇಖರ್ ಈ ಆಡಿಯೋವನ್ನು ಕಳಿಸಿ ನಮ್ಮ ರಿಯಾಕ್ಷನ್ ಹೇಗಿತ್ತು ಎಂದು ನೋಡುವುದು ಡೆವಿಲ್‌ಗೆ ಏಕೆ ಗೊತ್ತಾಗುತ್ತದೆ ಎಂದು ಪ್ರಶ್ನೆಯನ್ನ ಮಾಡಿಕೊಂಡಿದ್ದಾರೆ.

ಶ್ವೇತಾ ಈಗ ನಿರಾಳ
ಈ ಕಡೆ ನಕ್ಷತ್ರ ವಿಡಿಯೋದಲ್ಲಿ ಬರೀ ಧ್ವನಿ ಮಾತ್ರ ಕೇಳಿಸುತ್ತಿದೆ. ಈ ಧ್ವನಿ ಡೇವಿಲ್‌ದು ಇರಬಹುದಾ ಎಂಬ ಅನುಮಾನವನ್ನು ಹೊರ ಹಾಕಿದ್ದಾಳೆ. ಎಲ್ಲರೂ ಸಹ ಬಹಳ ಚಿಂತೆಯಲ್ಲಿ ಇದ್ದಾರೆ. ಇದು ಯಾರ ಧ್ವನಿ ಎಂಬ ಅನುಮಾನ ಎಲ್ಲರನ್ನು ಕಾಡುತ್ತಿದೆ. ಶ್ವೇತಾ ಮಾತ್ರ ತಾನು ಮಾಡುವ ಕೆಲಸ ಮಾಡಿ ನಿರಾಳವಾಗಿ ಇದ್ದಾಳೆ.

ಶ್ವೇತಾಗೆ ಫೋನ್ ಮಾಡಿದ ಭಾರ್ಗವಿ
ಭಾರ್ಗವಿಗೆ ಶ್ವೇತಾ ಟೆನ್ಶನ್ ಮೇಲೆ ಟೆನ್ಶನ್ ಕೊಡುತ್ತಿದ್ದಾಳೆ. ಇದರಿಂದಾಗಿ ರೂಂಗೆ ಬಂದ ಭಾರ್ಗವಿ ಶ್ವೇತಾಗೆ ಫೋನ್ ಮಾಡಿ ಬೈಯುತ್ತಿದ್ದಾಳೆ. ಶ್ವೇತಾ ಡೇವಿಲ್‌ಗೆ ಆಟವಾಡಿಸುತ್ತಿದ್ದಾಳೆ. ಹೇಗಿದ್ದೀರಾ ಡೆವಿಲ್ ಮೇಡಂ ಟೆನ್ಶನ್‌ಗೆ ಉಸಿರು ಸಿಕ್ಕಿಹಾಕಿಕೊಂಡಿಲ್ಲ ತಾನೇ ಎಂದು ತಮಾಷೆ ಮಾಡಿದ್ದಾಳೆ . ಇದಕ್ಕೆ ಭಾರ್ಗವಿ ಇದು ಒಳ್ಳೆಯದಕ್ಕಲ್ಲ ನೀನು ಅತಿಯಾಗಿ ಆಡುತ್ತಿದ್ದೀಯಾ ಎಂದು ಹೇಳುತ್ತಿದ್ದಾಳೆ. ನಿನ್ನ ಜೊತೆ ನಾನು ಮಾತನಾಡಬೇಕು ಎಂದು ಭಾರ್ಗವಿಗೆ ಹೇಳಿದ್ದಾಳೆ. ಹ್ಞೂ ನನ್ನ ಮೇಲೆ ಒತ್ತಡ ತರಲು ಅದನ್ನು ಕಳಿಸಿದ್ದೀಯಾ ಎಂದು ಭಾರ್ಗವಿ ಶ್ವೇತಾಗೆ ಕೇಳಿದ್ದಾಳೆ. ಇದಕ್ಕೆ ಶ್ವೇತಾ ಅಯ್ಯೋ ಡೆವಿಲ್ ನಾನು ಏಕೆ ಹೀಗೆ ಮಾಡಲಿ ಎಂದಿದ್ದಾಳೆ.

ಅಲ್ಲೇ ನಿಂತಿದ್ದ ಮಿಲ್ಲಿಗೆ ತುಂಬಾನೆ ಶಾಕ್
ಪೆನ್ ಡ್ರೈವ್ ಬಗ್ಗೆ ಮನೆಯವರು ಮಾತನಾಡುತ್ತಿದ್ದಾಗ ಅಲ್ಲಿ ನಿಂತಿದ್ದ ಶ್ವೇತಾ ಅಪ್ಪ ಇದು ಭಾರ್ಗವಿಗೆ ಚೆನ್ನಾಗಿ ಗೊತ್ತಿದೆ ಎಂದು ಹೇಳಿದ್ದಾನೆ. ಮಿಲ್ಲಿ ಇದನ್ನೆಲ್ಲಾ ಕೇಳಿಸಿಕೊಂಡು ತುಂಬಾ ಶಾಕ್ ಆಗಿದ್ದಾಳೆ. ಏನು ಭಾರ್ಗವಿಗೆ ಗೊತ್ತಾ ಎಂದು ಕೇಳಿದ್ದಕ್ಕೆ ಹೌದು ಎಂದು ಶ್ವೇತಾ ಅಪ್ಪ ಹೇಳಿದ್ದಾನೆ. ಇದರ ಬಗ್ಗೆ ನನ್ನ ಬಳಿ ಹೇಗೆ ಹೇಳಿದರೂ ಪೆನ್ ಡ್ರೈವ್ ಬಂತಾ ಪೆನ್ ಡ್ರೈವ್ ಬಂತಾ ಎಂದು ಹೇಳಿದಾಗ ಮನೆಯವರೆಲ್ಲರಿಗೂ ಕೂಡ ಶಾಕ್ ಆಗಿದೆ. ಭಾರ್ಗವಿ ಸಿಕ್ಕಿ ಬಿಳ್ತಾಳಾ ಅಥವಾ ಬಚಾವ್ ಆಗುತ್ತಾಳಾ ನೋಡಬೇಕಿದೆ.


Click it and Unblock the Notifications











