Lakshana Seria: ಶ್ವೇತಾಗೆ ಎಚ್ಚರಿಕೆ ಕೊಟ್ಟ ಭೂಪತಿ, ನಕ್ಷತ್ರ ಜೊತೆ ಚೆಲ್ಲಾಟ

By ಶೃತಿ ಹರೀಶ್ ಗೌಡ

ಭೂಪತಿಗೆ ನಕ್ಷತ್ರ ಮೇಲೆ ಸ್ವಲ್ಪ ಸ್ವಲ್ಪವೇ ಪ್ರೀತಿ ಹುಟ್ಟುತ್ತಿದೆ ಇದಕ್ಕಾಗಿ ನಕ್ಷತ್ರಳನ್ನು ತುಂಬಾ ಚೆನ್ನಾಗಿ ಮಾತನಾಡಿಸುತ್ತಿದ್ದಾನೆ. ಮಹಡಿ ಇಳಿದು ಬರುತ್ತಿರುವ ಭೂಪತಿಗೆ ನಕ್ಷತ್ರಗಳ ಕೋಪವನ್ನು ಕಂಡು ನಗು ಬಂದಿದೆ. ಇಷ್ಟು ಹೊತ್ತು ಏನು ಮಾತಾಡ್ತಿದ್ದೆ ಎಂದು ಕೇಳಿದ್ದಕ್ಕೆ ಕೆಲವೊಂದು ವಿಷಯಗಳನ್ನು ಅರ್ಥ ಮಾಡಿಸಬೇಕಿತ್ತು ಅದಕ್ಕಾಗಿ ಮಾತನಾಡುತ್ತಿದ್ದೆ ಎಂದು ಭೂಪತಿ ಹೇಳಿದ್ದಾನೆ ನಕ್ಷತ್ರ ಅದೇನು ಎಂದು ಕೇಳಿದಾಗ ಸುಮ್ಮನೆ ಇರು ಎಂದು ಹೇಳಿದ್ದಾನೆ.

ಇನ್ನು ನಕ್ಷತ್ರ ತನಗೆ ನೀಡಿದ ಸರ್ಪ್ರೈಸ್ ಬಗ್ಗೆ ಕೇಳುತ್ತಿದ್ದಾಳೆ ಇದನ್ನೆಲ್ಲ ಪ್ರೀತಿಯಿಂದಲೇ ಮಾಡಿದ್ದಾ? ಎಂದು ಕೇಳುತ್ತಿದ್ದಾಳೆ ಅದಕ್ಕೆ ಭೂಪತಿ ನಾನು ಕಾಟಾಚಾರಕ್ಕೆ ಯಾವುದನ್ನು ಮಾಡುವುದಿಲ್ಲ ಎಂದು ಹೇಳಿದ್ದಾನೆ. ಆಗ ನಕ್ಷತ್ರ ನಿನಗೆ ಆರ್.ಜೆ. ಸಖಿ ಪ್ರೋಗ್ರಾಮ್ ಎಂದರೆ ಅಷ್ಟು ಇಷ್ಟನಾ? ಆರ್.ಜೆ.ಸಖಿ ಮಾತು ಎಂದರೆ ಅಷ್ಟು ಇಷ್ಟಾನಾ ಎಂದು ಕೇಳಿದ್ದಾಳೆ ಅದಕ್ಕೆ ಭೂಪತಿ ಹೌದು ಎಂದಿದ್ದಾನೆ. ಇದೇ ವೇಳೆ ನಾನು ಇಷ್ಟನಾ ಎಂದು‌ ಕೇಳಿದಾಗ ಭೂಪತಿ ನಕ್ಷತ್ರಾಳನ್ನು ನೋಡಿಕೊಂಡು ಯಾವ ಬಾಯಲ್ಲಿ‌ ಇಷ್ಟ ಇಲ್ಲ ಎಂದು ಹೇಳಲಿ‌ ಆದರೆ ಮದುವೆ ಸಂದರ್ಭದಲ್ಲಿ ಆದ ಮೋಸ‌ ಕಣ್ಮುಂದೆ ಬರುತ್ತದೆ ಎಂದು ಮನಸಿನಲ್ಲಿ ಅಂದು ಕೊಂಡು ಅಲ್ಲಿಂದ ಹೊರಟು ಹೋಗಿದ್ದಾನೆ.

ಮತ್ತೊಮ್ಮೆ ಶ್ವೇತಾಗೆ ವಾರ್ನಿಂಗ್ ಕೊಟ್ಟ ಭೂಪತಿ

ಮತ್ತೊಮ್ಮೆ ಶ್ವೇತಾಗೆ ವಾರ್ನಿಂಗ್ ಕೊಟ್ಟ ಭೂಪತಿ

ಭೂಪತಿ ತನ್ನ ರೂಮಿನಲ್ಲಿ ಕೆಲಸ ಮಾಡುತ್ತಾ ಕುಳಿತಿದ್ದಾನೆ ಅಲ್ಲಿಗೆ ಬಂದ ಶ್ವೇತಾ, ಭೂಪತಿಯನ್ನು ಕನ್ವಿನ್ಸ್ ಮಾಡಲು ಬಂದಿದ್ದಾಳೆ. ನೀನು ನಮ್ಮ ಮನೆಯ ಗೆಸ್ಟ್ ಅಷ್ಟೇ ಅಮ್ಮ ಕರೆದಿದ್ದಾರೆ ಎಂಬ ಒಂದು ಕಾರಣಕ್ಕೆ ನೀನು ಈ ಮನೆಯಲ್ಲಿ ಉಳಿದುಕೊಳ್ಳಬಹುದು ಎಂದು ಭೂಪತಿ ಹೇಳಿದ ಮಾತು ಪದೇ-ಪದೇ ಶ್ವೇತಾಳನ್ನು ಕಾಡುತ್ತಿದೆ. ಹೇಗಾದರೂ ಮಾಡಿ ಭೂಪತಿಯ ಮನಸ್ಸನ್ನು ಬದಲಿಸಬೇಕು ಎಂದು ಶ್ವೇತ ನಿರ್ಧಾರ ಮಾಡಿದ್ದಾಳೆ.

ಶ್ವೇತಾಳ ಬಾಯಿ ಮುಚ್ಚಿಸಿದ ಭೂಪತಿ

ಶ್ವೇತಾಳ ಬಾಯಿ ಮುಚ್ಚಿಸಿದ ಭೂಪತಿ

ಭೂಪತಿ ರೂಮಿಗೆ ಬಂದ ಶ್ವೇತಾ ಭೂಪತಿಯ ಬಳಿ ಮಾತನಾಡುತ್ತಿದ್ದಾಳೆ. ಆದರೆ ಇದೆಲ್ಲವನ್ನು ಕೇಳಿಸಿಕೊಂಡು ಭೂಪತಿ ಶ್ವೇತಾ ಸಾಕು ನಿಲ್ಲಿಸಿ ಇವಾಗ ಹೇಳುವುದಕ್ಕೂ ಕೇಳುವುದಕ್ಕೂ ಸಮಯ ಎಲ್ಲ ಇಲ್ಲ ಇನ್ನೆಷ್ಟು ಸುಳ್ಳು ಹೇಳುತ್ತೀರಾ ಎಂದು ಬಾಯಿ ಮುಚ್ಚಿಸಿದ್ದಾನೆ. ನನಗೆ ಮೋಸ ಎಂದರೆ ಆಗುವುದಿಲ್ಲ ನಾನು ಜೀವಕ್ಕೆ ಜೀವವಾಗಿದ್ದ ನಕ್ಷತ್ರ ಒಪ್ಪಿಕೊಂಡಿಲ್ಲ ಇನ್ನು ನಿಮ್ಮನ್ನು ಒಪ್ಪಿಕೊಳ್ಳುತ್ತೇನೆ ಎಂದು ಯಾವ ಆಧಾರದ ಮೇಲೆ ಬಂದು ನಿಂತು ಮಾತನಾಡುತ್ತಿದ್ದೀರಾ ಇನ್ನೊಮ್ಮೆ ಮಾತನಾಡಲು ಬಂದರೆ ಚೆನ್ನಾಗಿ ಇರಲ್ಲ ಎಂದು ಖಡಕ್ಕಾಗಿ ಶ್ವೇತಾಗೆ ವಾರ್ನಿಂಗ್ ಕೊಟ್ಟಿದ್ದಾನೆ.

ಅಮ್ಮನಿಗೆ ಸತ್ಯ ಹೇಳಲು ಪ್ರಯತ್ನಿಸುತ್ತಿರುವ ಮೌರ್ಯ

ಅಮ್ಮನಿಗೆ ಸತ್ಯ ಹೇಳಲು ಪ್ರಯತ್ನಿಸುತ್ತಿರುವ ಮೌರ್ಯ

ಶಾಕುಂತಲ ದೇವಿ ತಮ್ಮ ಫ್ಯಾಮಿಲಿ ಫೋಟೋವನ್ನು ನೋಡುತ್ತಾ ಬೇಜಾರು ಮಾಡಿಕೊಳ್ಳುತ್ತಿದ್ದಾರೆ ನನ್ನ ಮಕ್ಕಳು ನನ್ನ ಮಾತನ್ನು ಕೇಳದೆ ನನ್ನನ್ನೇ ಧಿಕ್ಕರಿಸಿ ಹೋಗುತ್ತಿದ್ದಾರೆ ಎಂದು ಬೇಸರದಲ್ಲಿ ಇದ್ದಾರೆ. ಅಷ್ಟರಲ್ಲಿ ಶಾಕುಂತಲ ದೇವಿಗೆ ಮೌರ್ಯ ಫೋನ್ ಮಾಡಿದ್ದಾನೆ. ಅಮ್ಮ ನಿಮಗೆ ಒಂದು ಸತ್ಯ ಹೇಳಬೇಕಿತ್ತು ನಕ್ಷತ್ರ ಅತ್ತಿಗೆಯ ಬಗ್ಗೆ ಸತ್ಯ ಹೇಳಬೇಕು ಎಂದು ಹೇಳಿದ್ದಾನೆ. ನೀನು ಯಾವುದನ್ನು ತಲೆಲಿಟ್ಟುಕೊಂಡು ಮಾತನಾಡುತ್ತಿದ್ದೀಯ ಎಂದು ಶಕುಂತಲಾ ದೇವಿ ಹೇಳಿದ್ದಾರೆ. ನಿಮಗೆ ವಿಷಯ ಗೊತ್ತಾದರೆ ಎಂತಹ ಬಂಗಾರದಂತ ಸೊಸೆ ಸಿಕ್ಕಿದ್ದಾಳೆ ಎನ್ನುತ್ತೀರಾ ಎಂದು ಮೌರ್ಯ ಹೇಳಿದ್ದಾನೆ. ಇದಕ್ಕೆ ಅವಳಿಂದಲೇ ಮನೆ ಇಷ್ಟೊಂದು ಹಾಳಾಗಿರುವುದು ಎಂದು ಮೌರ್ಯನಿಗೆ ಬೈದು ಶಾಕುಂತಲಾ ದೇವಿ ಮತ್ತೊಮ್ಮೆ ಮನೆ ಕಡೆ ಬರಬೇಡ ಫೋನು ಮಾಡಬೇಡ ಎಂದು ಫೋನ್ ಕಟ್ ಮಾಡಿದ್ದಾರೆ.

ಭೂಪತಿಯನ್ನು ಆಟವಾಡಿಸುತ್ತಿರುವ ನಕ್ಷತ್ರ

ಭೂಪತಿಯನ್ನು ಆಟವಾಡಿಸುತ್ತಿರುವ ನಕ್ಷತ್ರ

ಈ ಕಡೆ ನಕ್ಷತ್ರ, ಭೂಪತಿಯನ್ನ ಆಟವಾಡಿಸುತ್ತಿದ್ದಾಳೆ ನೀನಂದ್ರೆ ಇಷ್ಟ ಎಂದು ಹೇಳು ಎಂದು ಬೆನ್ನು ಬಿದ್ದಿದ್ದಾಳೆ ಇದು ಭೂಪತಿಗೆ ಸಾಕಷ್ಟು ಕಿರಿಕಿರಿಯನ್ನು ಉಂಟು ಮಾಡುತ್ತಿದೆ. ಭೂಪತಿಯ ಫೋನನ್ನು ನಕ್ಷತ್ರ ಭೂಪತಿಗೆ ಎದುರಿಸುತ್ತಿದ್ದಾಳೆ. ಎಲ್ಲಿ ಫೋನನ್ನು ಫಸ್ಟ್ ಏನ್ ನಕ್ಷತ್ರ ಹಾಕುತ್ತಾಳೆ ಎಂದು ಹೆದರಿದ ಭೂಪತಿ ನೀನಂದ್ರೆ ನಂಗೆ ಇಷ್ಟ ಎಂದು ಈಗ ತಪ್ಪಿಸಿಕೊಂಡಿದ್ದಾನೆ. ನಕ್ಷತ್ರ ಮೇಲೆ ಭೂಪತಿಗೆ ಈಗೀಗ ಪ್ರೀತಿ ಬರುತ್ತಿದೆ ಮುಂದೆ ಮೌರ್ಯ ಸತ್ಯ ಹೇಳುತ್ತಾನೆ ಎಂಬುದೇ ಕುತೂಹಲವಾಗಿದೆ.

More from Filmibeat

English summary
colors Kannada serial Lakshana Written Update on February 2nd episode. Here is the details about afraid of losing Bhupati tries to explain her side of the story, but he dismisses her lies
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X